Saturday, November 27, 2021

ದರೋಡೆ ಕೋರರು ಸಿಕ್ಕರೂ ಚಿನ್ನ ಸಿಗದೆ ಕಂಗಾಲಾದ ಬಡಪಾಯಿ ದಂಪತಿ..!

ಮಂಗಳೂರು: ಮಂಗಳೂರಿನ ಹೊರವಲಯದ ಸುರತ್ಕಲ್ ನ ಮಧ್ಯ ದೇವಸ್ಥಾನದ ಬಳಿ ಬಾಬು ದೇವಾಡಿಗರ ಮನೆಗೆ ನುಗ್ಗಿದ್ದ ಆಗಂತುಕರು  ಬಾಬು ದೇವಾಡಿಗರ 14ವರ್ಷದ ಭರತ್ ಎಂಬ ಹುಡುಗನಿಗೆ ಚೂರಿ ತೋರಿಸಿ ಬೆದರಿಸಿ 15ಪವನ್ ಚಿನ್ನ ದೋಚಿದ ಘಟನೆ ನಡೆದಿತ್ತು. ದನ ಮೇಯಿಸಲು ಹೋದ ಸಂದರ್ಭ ಭರತ್ನನ್ನು ಒತ್ತಾಯ ಪೂರ್ವಕವಾಗಿ ನದಿ ಬದಿ ಕರೆದುಕೊಂಡು ಹೋದ ಗಾಂಜಾ ವ್ಯಸನಿಗಳಾದ ರಂಜಿತ್ ಮತ್ತು ಮಂಜುನಾಥ ಎಂಬಿಬ್ಬರು ನೀನು ನಿನ್ನ ಮನೆಯಿಂದ ಚಿನ್ನ ತಂದು ಕೊಡಬೇಕು ಇಲ್ಲದಿದ್ದಲ್ಲಿ ನಿನ್ನನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುವುದಾಗಿ ಬೆದರಿಸಿದ್ದಾರೆ.ಇದರಿಂದ ಹೆದರಿದ ಭರತ್ ಮನೆಗೆ ಬಂದು ಮನೆಯಲ್ಲಿ ತಂದೆ ತಾಯಿ ಇಲ್ಲದ ಸಮಯದಲ್ಲಿ ಚಿನ್ನ ತೆಗೆದುಕೊಂಡು ಹೋಗಿ ಅವರಿಗೆ ಕೊಟ್ಟಿರುವುದಾಗಿ ತಿಳಿದು ಬಂದಿದ್ದು ಸುದ್ದಿ ಪ್ರಚಾರಪಡಿಸಿದರೆ ಕೊಲ್ಲುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.

ಆ ಬಳಿಕ ಮತ್ತೆ 70ಸಾವಿರದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಇದನ್ನು ಭರತ್ ಮನೆಯವರ ಬಳಿ ತಿಳಿಸಿದಾಗ ಆತನ ತಂದೆ ಬಾಬು ದೇವಾಡಿಗ ಸುರತ್ಕಲ್ ಪೊಲೀಸ್ ಠಾಣೆಗೆ ದೂರಿತ್ತಿದ್ದರು.

ವಿಷಯ ತಿಳಿದ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ, ಯುವಕರನ್ನು ಬಂಧಿಸಿ, ತನಿಖೆ ನಡೆಸಿದ್ದಾರೆ. ಈ ವೇಳೆ ಚಿನ್ನವನ್ನು ಕುಳಾಯಿ ಮಂಗಳೂರು ಫೈನಾನ್ಸ್ ನಲ್ಲಿ ಅಡವಿಟ್ಟು ಆ ಹಣದಲ್ಲಿ ಮೋಜು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ ಇದೀಗ ಆರೋಪಿಗಳು ಠಾಣೆಯಿಂದ ಹೊರ ಬಂದು ಸುತ್ತಾಡುತ್ತಿದ್ದು ಬಡಪಾಯಿ ಬಾಬು ದೇವಾಡಿಗ ದಂಪತಿಗಳ ಚಿನ್ನ ಮಾತ್ರ ಈವರೆಗೂ ಸಿಗದೆ ಬಡಪಾಯಿ ದಂಪತಿ ಬದುಕಿಗಾಧಾರವಾಗಿರುವ ಚಿನ್ನ ತೆಗೆಸಿಕೊಡುವಂತೆ ಅಳಲು ತೋಡಿಕೊಂಡಿದ್ದಾರೆ.

ಮಾದಕ ವ್ಯಸನಿ ಆರೋಪಿಗಳಿಂದ ಚಿನ್ನ ತೆಗೆಸಿಕೊಡುವಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರೂ ಆಗ್ರಹಿಸಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...