Connect with us

    FILM

    ಬಿಗ್ ಬಾಸ್ ಮನೆಗೆ ಎಲಿಮಿನೇಟ್ ಸ್ಪರ್ಧಿಗಳ ಆಗಮನ-ನಮೃತಾಗೆ ಕೈ ಮುಗಿದ ಸ್ನೇಹಿತ್

    Published

    on

    ಬಿಗ್ ಬಾಸ್ 10: ಬಿಗ್ ಬಾಸ್ 10ರ ಮನೆಗೆ ಎಲಿಮಿನೆಟ್ ಆದ ಸ್ಪರ್ಧಿಗಳ ರೀ ಎಂಟ್ರಿಯಾಗಿದೆ. ಬಿಗ್​ಬಾಸ್ ಮನೆಮಂದಿಗೆ ಒಂದು ಸರ್ಪೈಸ್ ಕೊಟ್ಟಿದ್ದಾರೆ. ಎರಡು ಗಿಫ್ಟ್ ಬಾಕ್ಸ್​ಗಳನ್ನು ಇಟ್ಟು ಮನೆಮಂದಿಗೆ ರಿಯಲ್ ಸರ್ಪೈಸ್ ಕೊಟ್ಟಿದ್ದಾರೆ. ಗಾರ್ಡನ್ ಏರಿಯಾಗೆ ಬಂದ ಕಂಟೆಸ್ಟೆಂಟ್ಸ್​ಗೆ ಅಚ್ಚರಿ ಮೂಡಿಸಿದ್ದಾರೆ.

    ನಿಮಗಾಗಿ ಒಂದು ಸರ್ಪೈಸ್ ಕಾದಿದೆ. ಗಾರ್ಡನ್ ಏರಿಯಾಗೆ ಹೋಗಿ ಎಂದು ಬಿಗ್​ಬಾಸ್ ಸ್ಪರ್ಧಿಗಳಿಗೆ ಹೇಳಿದ್ದಾರೆ. ಬಿಗ್​ಬಾಸ್ ಮನೆಯ ಸ್ಪರ್ಧಿಗಳು ಮನೆಗೆ ಬಂದಿರುವುದನ್ನು ನೋಡಿ ಸದ್ಯ ಮನೆಯಲ್ಲಿರುವ ಸ್ಪರ್ಧಿಗಳು ಸಖತ್ ಶಾಕ್ ಆಗಿದ್ದಾರೆ.ಸ್ಪರ್ಧಿಗಳ ರೀಯೂನಿಯನ್ ನಲ್ಲಿ ಸ್ನೇಹಿತ್ ಕೂಡ ದೊಡ್ಮನೆಗೆ ಬಂದಿದ್ದಾರೆ. ನಮ್ರತಾಗೆ ಸ್ನೇಹಿತ್ ಕೈ ಮುಗಿದಿದ್ದಾರೆ. ಮುಂದೆ ಏನಾಗುತ್ತೆ ಅನ್ನೋದನ್ನು ಇಂದಿನ ಬಿಗ್ ಬಾಸ್ ಎಪಿಸೋಡ್ ನಲ್ಲಿ ನೋಡ್ಬೇಕಾಗುತ್ತೆ.

    Click to comment

    Leave a Reply

    Your email address will not be published. Required fields are marked *

    FILM

    ಅನಂತ್ ಅಂಬಾನಿ ಮದುವೆಗೆ ನಟ ಅಕ್ಷಯ್ ಕುಮಾರ್ ಗೈರು; ಕಾರಣ ಇಲ್ಲಿದೆ

    Published

    on

    ಬೆಂಗಳೂರು : ನಟ ಅಕ್ಷಯ್ ಕುಮಾರ್ ಅವರು ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಜುಲೈ 12 ರಂದು ನಡೆಯಲಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭಕ್ಕೆ ಗೈರಾಗುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿತ್ತು. ಇದೀಗ ಕಳೆದ ಎರಡು ದಿನಗಳಿಂದ ಅಕ್ಷಯ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದ್ದು, ಅಭಿಮಾನಿಗಳಿಗೆ ಆತಂಕವಾಗಿದೆ. ಹೌದು, ಅಕ್ಷಯ್‌ ಕುಮಾರ್‌ಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.


    ಸದ್ಯ ನಟ ಇತ್ತೀಚಿಗೆ ಬಿಡುಗಡೆಯಾದ ‘ಸರ್ಫಿರಾ’ ಪ್ರಚಾರದಲ್ಲಿ ಬಿಝಿಯಾಗಿದ್ದಾರೆ. ಹೀಗಾಗಿ ನಟ ಸ್ವತಃ ಪರೀಕ್ಷೆಗೆ ಒಳಗಾಗಿದ್ದು, ಅವರಿಗೆ ಕೋವಿಡ್‌ 19 ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಅಕ್ಕಿ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದಾರೆ.

    ಇದನ್ನೂ ಓದಿ : ರಾಕಿಂಗ್​ ಸ್ಟಾರ್​​ ಯಶ್​​ ಕೂದಲಿಗೆ ಕತ್ತರಿ! ರಾವಣ ಅವತಾರ ರಿವೀಲ್​?

    ಅಕ್ಷಯ್ ಕುಮಾರ್ ನಟನೆಯ ‘ಸರ್ಫಿರಾ’ ಜುಲೈ 12 ರಂದು ಬಿಡುಗಡೆಯಾಗಿದೆ. ಈ ಚಲನಚಿತ್ರವು 2020 ರ ತಮಿಳು ಚಲನಚಿತ್ರ ‘ಸೂರರೈ ಪೊಟ್ರು’ ನ ರಿಮೇಕ್‌ ಆಗಿದೆ. ಸುಧಾ ಕೊಂಗರ ನಿರ್ದೇಶಿಸಿದ ಈ ಚಿತ್ರದಲ್ಲಿ ಪರೇಶ್ ರಾವಲ್, ರಾಧಿಕಾ ಮದನ್ ಕಾಣಿಸಿಕೊಂಡಿದ್ದಾರೆ.

    Continue Reading

    FILM

    ರಾಕಿಂಗ್​ ಸ್ಟಾರ್​​ ಯಶ್​​ ಕೂದಲಿಗೆ ಕತ್ತರಿ! ರಾವಣ ಅವತಾರ ರಿವೀಲ್​?

    Published

    on

    ರಾಕಿಂಗ್​ ಸ್ಟಾರ್​​ ಯಶ್ ಸಿನಿಮಾದಿಂದಾಗಿ ಎಷ್ಟು ಜನಪ್ರಿಯತೆ ಪಡೆದಿದ್ದರೋ ಅಷ್ಟೇ ಜನಪ್ರಿಯತೆ ಅವರ ಹೇರ್​ ಸ್ಟೈಲ್​ ಮೂಲಕ​ ಪಡೆದಿದ್ದಾರೆ. ಕೆಜಿಎಫ್​ ಸಿನಿಮಾದಲ್ಲಿ ಉದ್ದನೆಯ ಕೂದಲು, ಉದ್ದನೆಯ ಗಡ್ಡ ಬಿಟ್ಟು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೀಗ ಯಶ್​ ಲುಕ್​ ಇದ್ದಕ್ಕಿದ್ದಂತೆಯೇ ಬದಲಾಗಿದೆ. ರಾಕಿ ಭಾಯ್​ ಉದ್ದ ಕೂದಲಿಗೆ ಕತ್ತರಿ ಪ್ರಯೋಗಿಸಿದ್ದಾರೆ.

    ಕೆಜಿಎಫ್​, ಕೆಜಿಎಫ್ 2 ಸಿನಿಮಾದಲ್ಲಿ ಯಶ್​​ ಉದ್ದ ಕೂದಲು ಮತ್ತು ಗಡ್ಡದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಕೆಜಿಎಫ್​ 3 ಸಿನಿಮಾ ತೆರೆ ಮೇಲೆ ಬರಲು ಬಾಕಿ ಉಳಿದಿದೆ. ಆದರೆ ಇದರ ನಡುವೆ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಕೂಡ ಮಾಡುತ್ತಿದ್ದಾರೆ. ಶೂಟಿಂಗ್​ ಈಗಾಗಲೇ ಕೈಗೆತ್ತಿಕೊಂಡಿದ್ದಾರೆ. ಇದಲ್ಲದೆ ಬಾಲಿವುಡ್​ನಲ್ಲಿ ‘ರಾಮಾಯಣ’ ಸಿನಿಮಾಗೂ ಬಂಡವಾಳ ಹಾಕಿದ್ದು, ಅದರಲ್ಲಿ ‘ರಾವಣ’ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗ ಯಶ್​ ಸಡನ್​ ಆಗಿ ತಮ್ಮ ಕೂದಲಿಗೆ ಕತ್ತರಿ ಪ್ರಯೋಗಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಯಶ್​​ ‘ಟಾಕ್ಸಿಕ್’ ಅಥವಾ ‘ರಾಮಾಯಣ’ ಸಿನಿಮಾದಲ್ಲಿನ ರಾವಣ ಅವತಾರಕ್ಕೆ ಯಶ್​ ಹೊಸ ಅವತಾರ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಅಭಿಮಾನಿಗಳನ್ನು ಕಾಡಿದೆ. ಮತ್ತೊಂದೆಡೆ ರಿಲಯನ್ಸ್​ ಒಡೆತನದ ಮಾಲೀಕ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಮದುವೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇವರ ಜೊತೆಗೆ ರಾಧಿಕಾ ಪಂಡಿತ್​ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ಉದ್ದನೆಯ ಕೂದಲು ಮತ್ತು ಗಡ್ಡವನ್ನು ಕತ್ತರಿಸಿರುವ ಯಶ್​ ಲುಕ್​ ಮಾತ್ರ ಡಿಫರೆಂಟಾಗಿದೆ. ಅನೇಕರು ಇವರ ಲುಕ್​ ನೋಡಿ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಇನ್ನು ಯಶ್​ ತಮ್ಮ ಹಳೆಯ ಲುಕ್​ನಲ್ಲಿ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಉದ್ದನೆಯ ಕೂದಲು ಮತ್ತು ಗಡ್ಡ ಬಿಟ್ಟಿದ್ದ ಯಶ್​​ ‘ಬಿಯರ್ಡ್​​ ಆಯಿಲ್​’ ಕಂಪನಿಗೆ ಜಾಹೀರಾತು ನೀಡಿದ್ದರು. ಇದರ ಮೂಲಕ ಕೋಟಿ ಕೋಟಿ ಎಣಿಸಿದ್ದರು. ಮಾತ್ರವಲ್ಲದೆ, ಇವರ ಲುಕ್​ ನೋಡಿ ಅನೇಕರು ಫಾಲೋ ಮಾಡಿದ್ದಿದೆ. ಆದರೀಗ ಹೊಸ ಲುಕ್​ನಲ್ಲಿ ರಾಕಿಂಗ್​ ಸ್ಟಾರ್​ ಕಾಣಿಸಿಕೊಂಡಿದ್ದಾರೆ.

    Continue Reading

    FILM

    ಅಪ್ರತಿಮ ಕನ್ನಡತಿ ಅಪರ್ಣಾ ಇನ್ನಿಲ್ಲ..!

    Published

    on

    ಮಂಗಳೂರು :  ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅಪರ್ಣಾ ಅವರು ಮೃತರಾಗಿದ್ದಾರೆ. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅವರು ಇಂದು (ಜುಲೈ 11) ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡ ನಿರೂಪಣೆ ಮೂಲಕ ಕರ್ನಾಟಕದ ಅಪ್ಪಟ ಕನ್ನಡತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.  ಜೊತೆಗೆ ನಟನೆ ಮೂಲಕವೂ ಅಪರ್ಣಾ ಅವರು ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದರು.

    ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ಅಪರ್ಣಾ ಅವರು ನಿರೂಪಿಸಿದರು. ನಂತರ ಭಾರತ ಸರ್ಕಾರದ ‘ವಿವಿಧ ಭಾರತಿ’ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಸತತ ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.

    Continue Reading

    LATEST NEWS

    Trending