Friday, July 1, 2022

ವೃದ್ಧ ದಂಪತಿ ಹತ್ಯೆ: ಬಾಂಗ್ಲಾ ಪ್ರಜೆಗಳಿಗೆ ಮರಣದಂಡನೆ ವಿಧಿಸಿದ ಕೇರಳ ಕೋರ್ಟ್

ಅಲಪ್ಪುಳ: ಕೇರಳದ ಅಲಪ್ಪುಳ ಜಿಲ್ಲೆಯ ಚೆಂಗನ್ನೂರ್ ತಾಲೂಕಿನ ವೆನ್ಮೋನಿ ಗ್ರಾಮದಲ್ಲಿ ವೃದ್ಧ ದಂಪತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಜೆಗೆ ಕೇರಳದ ಸೆಷನ್ಸ್ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.


ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆನ್ನೆತ್ ಜಾರ್ಜ್ ಅವರು ಮಂಗಳವಾರ ಮೊದಲ ಆರೋಪಿ ಲ್ಯಾಬ್ಲೂ ಹಸನ್ಗೆ ವಯೋವೃದ್ಧ ದಂಪತಿಗಳ ಹತ್ಯೆ, ದರೋಡೆ ಮತ್ತು ಅತಿಕ್ರಮಣದ ಸಮಯದಲ್ಲಿ ಮಾರಕ ಆಯುಧವನ್ನು ಬಳಸಿ

ಗಾಯಗೊಳಿಸಿದಕ್ಕೆ ಮರಣದಂಡನೆ ವಿಧಿಸಿದ್ದು ಮತ್ತೊಬ್ಬ ಆರೋಪಿ ಬಾಂಗ್ಲಾದೇಶದ ಪ್ರಜೆಯೂ ಆಗಿರುವ ಜುವಲ್ ಹಸನ್ ನನ್ನು ಮರಣದಂಡನೆ ವಿನಾಯಿತಿ ನೀಡಿ ಕೊಲೆಯ ಪ್ರಕರಣದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ದರೋಡೆಯ ಸಮಯದಲ್ಲಿ ಮಾರಣಾಂತಿಕ ಆಯುಧವನ್ನು ಬಳಸಿ ಗಾಯಗೊಳಿಸಿ ಮತ್ತು ಮನೆಯೊಳಗೆ ಅತಿಕ್ರಮಣ ಮಾಡಿದ ಕಾರಣ ಮರಣದಂಡನೆ ಶಿಕ್ಷೆ ನೀಡಲಾಗಿದೆ.

ಅಲ್ಲದೆ, ನ್ಯಾಯಾಲಯವು ತಲಾ 4 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಸೊಲೊಮನ್ ಪಿಟಿಐಗೆ ತಿಳಿಸಿದ್ದಾರೆ.

ಆರೋಪಿಗಳು ಮನೆ ಹುಡುಕುವ ನೆಪದಲ್ಲಿ ಹೋಗಿ ಕಬ್ಬಿಣದ ರಾಡ್ ನಿಂದ ಪತಿಯನ್ನು ಕೊಂದು ನಂತರ ಮನೆಯೊಳಗೆ ಹೋಗಿ ಅಡುಗೆ ಮನೆಯಲ್ಲಿದ್ದ ಪತ್ನಿಯನ್ನು ಕೊಲೆ ಮಾಡಿದ್ದಾರೆ.

ಎಪಿ ಚೆರಿಯನ್ (76) ಮತ್ತು ಅವರ ಪತ್ನಿ ಎಲಿಕುಟ್ಟಿ ಚೆರಿಯನ್ (68) ರವರು ಕೊಲೆಯಾದ ದುರ್ದೈಗಳು.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಬೀದಿ ಬದಿ ಅಂಗಡಿ ತೆರವು ಪ್ರಕರಣದ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಕೊಕ್ಕಡ ಸಂಪರ್ಕಿಸುವ ನಿಡ್ಲೆ ಪಂಚಾಯತ್‌ ವ್ಯಾಪ್ತಿಯ ಪಾರ್ಪಿಕಲ್‌ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು PWD ತೆರವುಗೊಳಿಸಿರುವ ವಿರುದ್ಧ ಬೃಹತ್ ಪ್ರತಿಭಟನೆ ಇಂದು ಬೆಳ್ತಂಗಡಿಯ ಪಿಡಬ್ಲ್ಯೂಡಿ...

ಬಂಟ್ವಾಳ: ಗೋಕಳ್ಳತನ-ದನದ ಮಾಂಸ ಸಹಿತ ಆರೋಪಿಗಳು ವಶಕ್ಕೆ

ಬಂಟ್ವಾಳ: ಕಳ್ಳತನ ಮಾಡಿದ ದನಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ದನದ ಮಾಂಸ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೋಳ್ತಮಜಲು ಎಂಬಲ್ಲಿ...

ಸುಳ್ಯ: ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ-ಸ್ತಬ್ಧರಾದ ಜನ

ಸುಳ್ಯ: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ನಿನ್ನೆ ತಡರಾತ್ರಿ 1.15ಕ್ಕೆ ಭಾರಿ ಶಬ್ದದೊಂದಿಗೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ.ಸುಳ್ಯದ ಸಂಪಾಜೆ, ಚೆಂಬು, ಕಲ್ಲುಗುಂಡಿ ಗಡಿಭಾಗ ಹಾಗೂ ಕೊಡಗಿನ ಗಡಿಭಾಗಗಳು...