ಗೋಮಾಂಸ ತಿಂದು ಸಾಯಿರಿ ನಮಗೇನು? ಸಿದ್ದರಾಮಯ್ಯಗೆ ಟಾಂಗ್ ನೀಡಿದ ಈಶ್ವರಪ್ಪ..!
ಮಂಗಳೂರು: ರಾಜ್ಯದ ಶೇ 90 ರಷ್ಟು ಗೋಹತ್ಯೆ ನಿಷೇಧ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ನಾನು ಗೋಮಾಂಸ ತಿನ್ನುವುದಾಗಿ ಹೇಳುತ್ತಾರೆ.ತಿಂದು ಸಾಯಿರಿ ನಮಗೇನಂತೆ’ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಗೋಮಾಂಸ ತಿನ್ನುತ್ತೇನೆ. ಹನುಮ ಜಯಂತಿ ದಿನ ನಾಟಿಕೋಳಿ ತಿನ್ನುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ.
ಕಾಂಗ್ರೆಸ್ಸಿಗರು ಇದನ್ನು ಖಂಡಿಸುವುದಿಲ್ಲ. ಅದಕ್ಕಾಗಿಯೇ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ ಎಂದರು. ಮುದಿ ಹಸುವನ್ನು ಬಿಜೆಪಿ ಮನೆಯವರ ಮುಂದೆ ಬಿಡ್ತಾರಂತೆ. ಇವರ ತಾಯಿಗೆ ವಯಸ್ಸಾದಾಗ ಹೀಗೆ ಮಾತಾಡ್ತಾರ.
ನಿಮ್ಮ ತಾಯಿಯೂ ನಮಗೆ ತಾಯಿ ಸಮಾನ. ಹೆಣ್ಣನ್ನು ತಾಯಿ ಎಂದು ಕರೆಯುವ ದೇಶ ಭಾರತ ಮಾತ್ರ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.