Connect with us

  DAKSHINA KANNADA

  ದ.ಕ, ಉಡುಪಿ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಸರಕಾರಿ ಬಸ್ ಓಡಾಟಕ್ಕೆ ಡಿವೈಎಫ್ಐ ಒತ್ತಾಯ

  Published

  on

  ಕರ್ನಾಟಕ ರಾಜ್ಯಾದ್ಯಂತ ಜೂ.1 ರಿಂದ ಸರಕಾರಿ ಕೆಎಸ್ಆರ್ ಟಿಸಿ ಬಸ್ಸ್ ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ  ಕಲ್ಪಿಸಿರುವುದು ಸ್ವಾಗತಾರ್ಹ.

  ಮಂಗಳೂರು: ಕರ್ನಾಟಕ ರಾಜ್ಯಾದ್ಯಂತ ಜೂ.1 ರಿಂದ ಸರಕಾರಿ ಕೆಎಸ್ಆರ್ ಟಿಸಿ ಬಸ್ಸ್ ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ  ಕಲ್ಪಿಸಿರುವುದು ಸ್ವಾಗತಾರ್ಹ.

  ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಓಡಾಡುತ್ತಿದ್ದ ಸರಕಾರಿ ಕೆಎಸ್ಆರ್ ಟಿಸಿ ಬಸ್ಸ್ ಕೊರೋನಾ ಕಾಲದ ನಂತರ ತನ್ನ ಸಂಚಾರವನ್ನು ಸ್ಥಗಿತಗೊಳಿಸಿದ ಕಾರಣ ಸೇವೆಯಲ್ಲಿ ಬಹಳಷ್ಟು ವ್ಯತ್ಯಯ ಕಂಡು ಬಂದು ಉಭಯ ಜಿಲ್ಲೆಗಳ ಪ್ರಯಾಣಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.

  ಆದ್ದರಿಂದ ಸರಕಾರದಿಂದ ಮಂಜೂರಾಗಿ ಪರವಾನಿಗೆ ಪಡೆದ ಎಲ್ಲಾ ಕೆಎಸ್ಆರ್ ಟಿಸಿ ಸರಕಾರಿ ಬಸ್ಸು ಸಂಚಾರ ಸೇವೆಯನ್ನು ಮುಂದುವರಿಸಲು ಈ ಕೂಡಲೇ ಕ್ರಮಕೈಗೊಳ್ಳಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕರ್ನಾಟಕ ರಾಜ್ಯ ಸರಕಾರವನ್ನು, ಸಾರಿಗೆ ಸಚಿವರನ್ನು ಒತ್ತಾಯಿಸಿದೆ.

  ನರ್ಮ್ ಯೋಜನೆಯಡಿಯಲ್ಲಿ ಉಡುಪಿಯಲ್ಲಿ ಸುಮಾರು 55 ರಷ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35 ರಷ್ಟು ಸರಕಾರಿ ಕೆಎಸ್ಆರ್ಟಿಸಿ ನಗರ ಸಾರಿಗೆ ಬಸ್ಸುಗಳು ಸಂಚಾರ ಸೇವೆ ಒದಗಿಸಲು ಮಂಜೂರಾಗಿದ್ದವು.

  ಉಡುಪಿಯಲ್ಲಿ 55 ಬಸ್ಸುಗಳು ಮಂಜೂರಾಗಿ ಸೇವೆ ಸಲ್ಲಿಸುವ ಹೊತ್ತಿಗೆ ಖಾಸಗೀ ಬಸ್ಸು ಮಾಲಕರ ವಿರೋಧದ ನಡುವೆಯೂ ಆಶಾದಾಯಕ ಸೇವೆಯನ್ನು ಸಲ್ಲಿಸಿದೆ.

  ಅದೇ ರೀತಿ ಮಂಗಳೂರಿನಲ್ಲಿ ಮಂಜೂರಾದ 35 ಬಸ್ಸುಗಳಲ್ಲಿ 18 ಬಸ್ಸು ನಗರದ ಸ್ಟೇಟ್ ಬ್ಯಾಂಕ್ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು.

  ಬಾಕಿ ಉಳಿದ ಬಸ್ಸು ನಗರದ ಹೊರಭಾಗದಿಂದ ಸೇವೆ ಸಲ್ಲಿಸಲು ಆರ್ ಟಿ ಎ ಪ್ರಾಧಿಕಾರ ಸಭೆ ಒಪ್ಪಿಗೆ‌ ನೀಡಿದ್ದವು.

  ಆ ಸಂದರ್ಭ ಖಾಸಗಿ ಬಸ್ ಮಾಲಕರು ಹೈಕೋರ್ಟ್ ಮೆಟ್ಟಿಲೇರಿ ತಡೆ ಹೇರಿದೆಯಾದರೂ ಮುಂದೆ ನರ್ಮ್ ಸಾರಿಗೆ ಸೇವೆಗೆ ಸಂಬಂಧಿಸಿದ ಹೈಕೋರ್ಟ್ ದೂರನ್ನು ಜಿಲ್ಲಾಧಿಕಾರಿ ಹಂತದಲ್ಲಿ ಇತ್ಯರ್ಥ ಪಡಿಸಲು ನಿರ್ದೇಶನ ನೀಡಿತ್ತು.

  ಒಟ್ಟಾರೆ ಖಾಸಗೀ ಬಸ್ಸು ಮಾಲಕರ ವಿರೋಧದ ನಡುವೆಯೂ ಆಗಿನ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರ ಜನಪರ ಆಡಳಿತ ನಡೆಯಿಂದ ಸರಕಾರಿ ನರ್ಮ್ ನಗರ ಸಾರಿಗೆ‌ ಬಸ್ ತನ್ನ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ.

  ಅದರ ಜೊತೆ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಂತಹ ಗ್ರಾಮೀಣ ಭಾಗಗಳಿಗೂ ಸರಕಾರಿ ಗ್ರಾಮಾಂತರ ಸಾರಿಗೆ ಬಸ್ಸು ನಿರಂತರ ಸೇವೆಯನ್ನು ನೀಡಿದೆ.

  ಆದರೆ ಇತ್ತೀಚೆಗೆ ಕೊರೋನಾ ಕಾಲದಲ್ಲಿ ಸ್ಥಗಿತಗೊಂಡಿರುವ ಸರಕಾರಿ ಬಸ್ ಸಂಚಾರ ಸೇವೆಯು ಮತ್ತೆ ಹಿಂದಿನ ರೀತಿಯಲ್ಲಿ ನೀಡಲೇ ಇಲ್ಲ.

  ಉಭಯ ಜಿಲ್ಲೆಯಲ್ಲೂ ಸರಕಾರಿ ನರ್ಮ್ ನಗರ ಸಾರಿಗೆ ಬಸ್ಸು ಮತ್ತು ಗ್ರಾಮೀಣ ಭಾಗದ ಸರಕಾರಿ ಬಸ್ ಸಂಚಾರ ಸೇವೆಯಲ್ಲಿ ಅರ್ಧಕ್ಕರ್ಧ ವ್ಯತ್ಯಯ ಉಂಟಾಗಿದೆ.

  ಜಿಲ್ಲೆಯಲ್ಲಿ ಖಾಸಗೀ ಬಸ್ಸುಗಳ ಭರಾಟೆಯ ನಡುವೆ ಸರಕಾರಿ ಬಸ್ಸುಗಳು ಮೂಲೆಗುಂಪಾಗ ತೊಡಗಿದೆ. ಇದರಿಂದಾಗಿ ಬಹುತೇಕ ಕಡಿಮೆ ಆದಾಯಕ್ಕೆ ದುಡಿಯುವ ಜನ ಸಾಮಾನ್ಯರು ಸಮಸ್ಯೆಯನ್ನು ಅನುಭವಿಸುವಂತಾಗಿದೆ.

  ಜೂನ್ 1ರಿಂದ ಸರಕಾರ ಫೋಷಿಸಿದ ಕೆಎಸ್ಆರ್ ಟಿಸಿ ಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಹಿಳೆಯರಿಗೂ ಸಿಗುವಂತಾಗಬೇಕು.

  ಉಭಯ ಜಿಲ್ಲೆಯಲ್ಲಿ ಬೀಡಿ ಉದ್ದಿಮೆ ನೆಲಕ್ಕಚ್ಚಿದ ನಂತರ ಈಗ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಸಣ್ಣ ಪುಟ್ಟ ಅಂಗಡಿ ಮುಗ್ಗಟ್ಟುಗಳಲ್ಲಿ, ಬಟ್ಟೆಯಂಗಡಿಗಳಲ್ಲಿ, ಆಸ್ಪತ್ರೆ, ಕಾಲೇಜುಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು ಅಂತ ಮಹಿಳೆಯರಿಗೆ ಸರಕಾರದ ಈ ಯೋಜನೆಯು ಅನುಕೂಲಕರವಾಗಲಿದೆ.

  ಆದ್ದರಿಂದ ದ.ಕ ಮತ್ತು ಉಡುಪಿ ಜಿಲ್ಲಾದ್ಯಂತ ಸ್ಥಗಿತಗೊಂಡಿರುವ ಕೆಎಸ್ಆರ್ ಟಿಸಿ ಸರಕಾರಿ ಬಸ್ಸ್ ತನ್ನ ಸಂಚಾರ ಸೇವೆಯನ್ನು ಈ ಕೂಡಲೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕೆಂದು ಮತ್ತು ಜನರ ಬೇಡಿಕೆಯ ಅನುಗುಣವಾಗಿ ಮಂಜೂರಾಗದೆ ಬಾಕಿ ಇರುವ ಪ್ರದೇಶಗಳಿಗೂ ಶೀಘ್ರವೇ ಬಸ್ ಸಂಚಾರ ಸೇವೆ ಒದಗಿಸಲು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿಯು ಕರ್ನಾಟಕ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.

   

  DAKSHINA KANNADA

  15 ದಿನಗಳಲ್ಲಿ ಉಗುರು ಬೆಳೆಯಬೇಕು ಅಂದ್ರೆ ಈ ಮನೆಮದ್ದು ಬಳಸಿ ನೋಡಿ..!

  Published

  on

  ಮಂಗಳೂರು: ಸುಂದರ, ಉದ್ದ, ನೀಳ ಉಗುರುಗಳು ಕೈಗಳ ಅಂದ ಹೆಚ್ಚಿಸುವುದು ಸುಳ್ಳಲ್ಲ. ಆದರೆ ಇತ್ತೀಜಿನ ದಿನಗಳಲ್ಲಿ ಉಗುರು ಬೇಗನೆ ತುಂಡಾಗುತ್ತದೆ ಎಂದು ದೂರುವವರೇ ಹೆಚ್ಚು.

   

  ತಮ್ಮ ಉಗುರು ಉದ್ದವಾಗಿರಬೇಕು ಎಂದು ಪ್ರತಿ ಹೆಣ್ಣು ಮಕ್ಕಳು ಬಯಸುವುದು ಸಹಜ. ನೇಲ್‌ಪಾಲಿಶ್ ಹಾಗೂ ನೇಲ್ ಆರ್ಟ್‌ ಮೂಲಕ ಉಗುರಿನ ಅಂದ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಉಗುರು ಉದ್ದ ಬರುವುದೇ ಇಲ್ಲ. ನಿಮಗೆ ಉಗುರು ಬೇಗನೇ ಬೆಳೆಯುತ್ತಿಲ್ಲ ಎಂದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇದರಿಂದ ಉಗುರು ಅಂದವಾಗಿ, ಬೇಗವಾಗಿ ಬೆಳೆಯುತ್ತದೆ.

  ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ಉಗುರಿಗೆ ಹಚ್ಚಿ ಚೆನ್ನಾಗಿ ಉಜ್ಜಿ. ರಾತ್ರಿಯಿಡಿ ಈ ಎಣ್ಣೆಯನ್ನು ಹಾಗೇ ಬಿಡಿ. ನಿಂಬೆರಸದಲ್ಲಿ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಉಗುರು ಬೆಚ್ಚಗಾಗಿರಿಸಿ. ಇದರಲ್ಲಿ ಈ ಉಗುರನ್ನು ಅದ್ದಿ, 15 ನಿಮಿಷಗಳ ಕಾಲ ಇರಿಸಿ. ನಂತರ ಬಿಸಿನೀರಿನಿಂದ ತೊಳೆಯಿರಿ.

  ಉಗುರುಗಳ ಮೇಲೆ ಬೆಳ್ಳುಳ್ಳಿಯನ್ನು ಉಜ್ಜುವ ಮೂಲಕವೂ ಉಗುರಿನ ಬೆಳವಣಿಗೆಯನ್ನು ವೃದ್ಧಿಸಬಹುದು. ರಾತ್ರಿ ಉಗುರಿನ ಮೇಲೆ ಬೆಳ್ಳುಳ್ಳಿ ಉಜ್ಜಿ, ಬೆಳಗೆದ್ದು ತೊಳೆಯಿರಿ. ರಾತ್ರಿ ಮಲಗುವ ಮುನ್ನ ಉಗುರುಗಳಿಗೆ ಆಲಿವ್ ಎಣ್ಣೆಯನ್ನು ಹಚ್ಚಬಹುದು. ಇದು ಉಗುರಿನ ಬೆಳವಣಿಗೆಗೆ ನೆರವಾಗುತ್ತದೆ.

  ಕಿತ್ತಳೆ ರಸವನ್ನು ಉಗುರಿಗೆ ಹಚ್ಚಿ. ಇದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಚೆನ್ನಾಗಿ ಒರೆಸಿ ಮಾಯಿಶ್ಚರೈಸರ್ ಹಚ್ಚಿ. ಈ ಉಪಾಯವನ್ನು ಪಾಲಿಸುವ ಜೊತೆಗೆ ಉಗುರನ್ನು ಸ್ವಚ್ಛ ಮಾಡುವುದು ಕೂಡ ಬಹಳ ಮುಖ್ಯ. ಪ್ರತಿದಿನ ಉಗುರನ್ನು ಸ್ವಚ್ಛ ಮಾಡುವತ್ತ ಗಮನ ಹರಿಸಿ.

  Continue Reading

  DAKSHINA KANNADA

  ಕುಕ್ಕೆ ಸುಬ್ರಹ್ಮಣ್ಯಕ್ಕೆ ರೈಲಿನ ಬೇಡಿಕೆ; ನಿಂತ ರೈಲಿನ ಪುನರಾರಂಭಕ್ಕೆ ಸಂಸತ್ ಅಧಿವೇಶನದಲ್ಲಿ ಸಂಸದ ಚೌಟ ಒತ್ತಾಯ

  Published

  on

  ನವ ದೆಹಲಿ: ಸಂಸತ್‌ನ ಮುಂಗಾರು ಅಧಿವೇಶನ ಜು.22 ರಿಂದ ಆರಂಭವಾಗಿದ್ದು, ಇದು ಲೋಕಸಭೆಯ ಎರಡನೇ ಅಧಿವೇಶನವಾಗಿದೆ. ಮೊದಲ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ನಡೆದಿದ್ದರೆ, ಈ ಅಧಿವೇಶನದಲ್ಲಿ ಪ್ರಶ್ನೋತ್ತರದ ಅವಧಿ ನೀಡಲಾಗಿದೆ. ಬಜೆಟ್ ಮೇಲಿನ ಚರ್ಚೆಯೊಂದಿಗೆ ತಮ್ಮ ಕ್ಷೇತ್ರಗಳ ಬೇಡಿಕೆಯನ್ನು ಸಂಸದರು ಸಂಸತ್‌ನಲ್ಲಿ ಮಂಡಿಸಿದ್ದಾರೆ. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಸಂಸದ ಬ್ರಿಜೇಶ್ ಚೌಟ ಅವರು ಸಂಸತ್‌ನಲ್ಲಿ ತಮ್ಮ ಮೊದಲ ಪ್ರಶ್ನೆ ಕೇಳಿದ್ದಾರೆ.

  ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಛೇರಿಯಲ್ಲಿ ವಿದ್ಯುತ್ ಅವ*ಘಡ..!

  ಮಂಗಳೂರು- ಸುಬ್ರಹ್ಮಣ್ಯ ನಡುವಿನ ರೈಲ್ವೆ ಹಳಿಯು ಮೀಟರ್ ಗೇಜ್‌ನಿಂದ ಬ್ರಾಡ್‌ಗೇಜ್ ಪರಿವರ್ತನೆಯಾದ ಬಳಿಕ ನಿಂತು ಹೋದ ರೈಲು ಪುನರಾರಂಭಿಸಲು ಮನವಿ ಮಾಡಿದ್ದಾರೆ. ಮೀಟರ್ ಗೇಜ್ ಇದ್ದ ಸಮಯದಲ್ಲಿ ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ಯಾಸೆಂಜರ್ ರೈಲು ಸೌಲಭ್ಯ ಇದ್ದು, ಸಾಕಷ್ಟು ವಿದ್ಯಾರ್ಥಿಗಳು, ನೌಕರರು, ಈ ರೈಲಿನ ಸದುಪಯೋಗ ಪಡೆದಿದ್ದರು. ಆದ್ರೆ ಬ್ರಾಡ್ ಗೇಜ್ ಆದ ಬಳಿಕ ಈ ರೈಲು ಮಂಗಳೂರು- ಪುತ್ತೂರು ನಡುವೆ ಮಾತ್ರ ಸಂಚರಿಸುತ್ತಿದ್ದು,  ಕುಕ್ಕೆ ಸುಬ್ರಹ್ಮಣ್ಯಕ್ಕೆ ರೈಲು ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಈ ರೈಲನ್ನು ಮತ್ತೆ ಆರಂಭಿಸಿ ಜನರಿಗೆ ರೈಲು ಸೇವೆ ಸಿಗುವಂತೆ ಮಾಡ ಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಅವರು ಈ ಬಗ್ಗೆ ಸಂಸದರ ಜತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

  Continue Reading

  DAKSHINA KANNADA

  ಅಗಲಿದ ಇಬ್ಬರು ಪತ್ರಕರ್ತರಿಗೆ ದ.ಕ. ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ

  Published

  on

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದ ಮಂಗಳೂರಿನ ಹಿರಿಯ ಫೋಟೊ ಜರ್ನಲಿಸ್ಟ್ ಅಲ್ಫ್ರೆಡ್ ಡಿಸೋಜ ಮತ್ತು ಕ್ಯಾಮೆರಾಮ್ಯಾನ್ ಚಿಕ್ಕನರಗುಂದ ನಿವಾಸಿ ವೀರೇಶ್ ಕಡ್ಲಿಕೊಪ್ಪ ಅವರು ಇತ್ತೀಚೆಗೆ ನಿ*ಧನರಾಗಿದ್ದು, ಈ ಬಗ್ಗೆ ಶ್ರದ್ಧಾಂಜಲಿ ಸಭೆ ಇಂದು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಯಿತು.

  ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಮಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಮತ್ತಿತರರು ನುಡಿ ನಮನ ಸಲ್ಲಿಸಿದರು. ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್‌. ಹಾಗೂ ಸಂಘದ ಇತರ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಒಳಗೊಂಡಂತೆ ಉಪಸ್ಥಿತರಿದ್ದ ಎಲ್ಲರೂ ಅಗಲಿದ ಇಬ್ಬರು ಪತ್ರಕರ್ತರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

   

  ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ ಅವರು ಮಾತನಾಡಿ, ಇಬ್ಬರು ಪತ್ರಕರ್ತರ ಅಗ*ಲಿಕೆಯಿಂದ ಜಿಲ್ಲೆಯ ಮಾಧ್ಯಮ ಲೋಕಕ್ಕೆ ಅಪಾರ ನಷ್ಟವಾಗಿದೆ. ಕ್ಯಾಮೆರಾಮ್ಯಾನ್ ವೀರೇಶ್ ತನ್ನ ಊರು ಚಿಕ್ಕ ನರಗುಂದಕ್ಕೆ ಹೋಗಿದ್ದ ವೇಳೆ ಅಲ್ಲಿ ನಿಧ*ನರಾಗಿದ್ದಾರೆ. ಅವರ ಸಾವಿನ ಬಗ್ಗೆ ಅನೇಕ ಸಂಶಯಗಳಿವೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಲಾಗುವುದು. ಸ್ಪೀಕರ್ ಯು.ಟಿ. ಖಾದರ್‌ ಅವರನ್ನು ಭೇಟಿಯಾಗಿ ಈ ಕುರಿತಂತೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

  ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಅವರು ಫೋಟೊ ಜರ್ನಲಿಸ್ಟ್ ಅಲ್ಫ್ರೆಡ್ ಡಿ’ಸೋಜಾ ಆಕಸ್ಮಿಕವಾಗಿ ಹೃದಯಾಘಾ*ತದಿಂದ ನಿಧ*ನರಾಗಿರುವುದನ್ನು ಉಲ್ಲೇಖಿಸಿ, ಎಲ್ಲಾ ಪತ್ರಕರ್ತರು ಆಗಿಂದಾಗ್ಗೆ ಆರೋಗ್ಯ ತಪಾಸಣೆಯನ್ನು ಮಾಡುತ್ತಿರಬೇಕು. ಕೆಲಸದ ಒತ್ತಡದ ನಡುವೆಯೂ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕೆಂದು ಸಲಹೆ ಮಾಡಿದರು.

  Continue Reading

  LATEST NEWS

  Trending