Connect with us

DAKSHINA KANNADA

ಚಿನ್ನ ಅಡವಿರಿಸಿ, ಲಕ್ಷಾಂತರ ರೂ. ದೋಚಿದ ಪುತ್ತೂರಿನ ಗಿರೀಶ ಈಗ ಪೊಲೀಸ್ ಅತಿಥಿ..!

Published

on

ಚಿನ್ನ ಅಡವಿರಿಸಿ, ಲಕ್ಷಾಂತರ ರೂ. ದೋಚಿದ ಪುತ್ತೂರಿನ ಗಿರೀಶ ಈಗ ಪೊಲೀಸ್ ಅತಿಥಿ..!

ಪುತ್ತೂರು : ಗ್ರಾಹಕರ ಸೋಗಿನಲ್ಲಿ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ನಕಲಿ ಚಿನ್ನವನ್ನು ಅಡವಿರಿಸಿ, ಲಕ್ಷಾಂತರ ರೂ. ದೋಚಿದ ಪ್ರಕರಣದ ಆರೋಪಿಯನ್ನು ದಕ್ಷಿಣ ಕನ್ನಡ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಬೇರಿಕೆ ಕಾಯಕ್ಕಾಡ್ ನಿವಾಸಿ ಗಿರೀಶ್ ಕುಮಾರ್ (32) ಬಂಧಿತ ಆರೋಪಿಯಾಗಿದ್ದಾನೆ.

ಕಳೆದೆರಡು ದಿನಗಳ ಹಿಂದೆ ಕೇರಳ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರೊಂದರಲ್ಲಿ ಆಗಮಿಸಿದ್ದ ಈತ ಉಪ್ಪಿನಂಗಡಿ ಯಲ್ಲಿನ ಸಹಕಾರಿ ಹಣಕಾಸು ಸಂಸ್ಥೆಯಲ್ಲಿ ನಕಲಿ ಚಿನ್ನಾಭರಣವನ್ನು ಅಡಮಾನವಿರಿಸಿ ಸಾಲವನ್ನು ಕೇಳಿದ್ದ.

ಈತನಲ್ಲಿದ್ದ ವಸ್ತು ನೈಜ ಚಿನ್ನಾಭರಣ ಎಂದು ತಪ್ಪಾಗಿ ತಿಳಿದ ಸಂಸ್ಥೆಯ ಸಿಬ್ಬಂದಿ ಈತನಿಗೆ ಹಣ ನೀಡಿದ್ದರು.

ಆತ ನೀಡಿದ ಸೊತ್ತು ಅಸಲಿ ಚಿನ್ನಾಭರಣ ಅಲ್ಲ ಎಂದು ಅರಿವಾದ ಸಂದರ್ಭ ಗಿರೀಶ್ ಪರಾರಿಯಾಗಿದ್ದ ಎಂದು ದೂರಲಾಗಿತ್ತು.

ಆತನಿಂದ ವಂಚನೆಯಾಗಿರುವ ಬಗ್ಗೆ ಎರಡು ಸಹಕಾರಿ ಸಂಸ್ಥೆಗಳು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕ ಈರಯ್ಯ ಡಿ.ಎನ್. ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

DAKSHINA KANNADA

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂ*ಬ್ ಬೆದರಿಕೆ! ಇ ಮೇಲ್ ನಲ್ಲಿ ಏನಿದೆ?

Published

on

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂ*ಬ್ ಬೆದರಿಕೆ ಹಾಕಲಾಗಿದೆ. ಹೀಗಾಗಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಸ್ಫೋ*ಟ ಪ್ರಕರಣವೇ ಇನ್ನೂ ಜೀವಂತವಿದೆ. ಅಲ್ಲದೇ, ಶಾಲೆಗಳಿಗೂ ಬೆದರಿಕೆ ಕರೆ ಬಂದಿದ್ದವು. ಇದೀಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದಿದೆ.


ಇ ಮೇಲ್ ಮೂಲಕ ಬಂತು ಬೆದರಿಕೆ :

ಕಳೆದ ಎಪ್ರಿಲ್‌ 29 ರಂದು ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಇ-ಮೇಲ್ ಮೂಲಕ ರವಾನೆಯಾಗಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಅದೇ ದಿನ ಬಾಂಬ್‌ ಬೆದರಿಕೆ ಸಂದೇಶ ಬಂದಿತ್ತು ಎಂದು ತಡವಾಗಿ ಬೆಳಕಿಗೆ ಬಂದಿದೆ.
ಎಪ್ರಿಲ್‌ 29 ರಂದು ಬೆಳಗ್ಗೆ 9.37 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇ – ಮೇಲ್ ಐಡಿ ಗೆ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಇ – ಮೇಲ್‌ ನಿಂದ ‘ವಿಮಾನ ನಿಲ್ದಾಣದಲ್ಲಿ ಮತ್ತು ವಿಮಾನದ ಒಳಗಡೆ ಸ್ಫೋಟಕಗಳನ್ನು ಇರಿಸಿದ್ದು, ಈ ಸ್ಫೋಟಕಗಳನ್ನು ಸ್ಫೋಟಿಸಿ ಜೀವ ಹಾನಿ ಮಾಡುವುದಾಗಿ’ ಬೆದರಿಕೆ ಸಂದೇಶ ಕಳುಹಿಸಿದ್ದನು.

ಇದನ್ನೂ ಓದಿ : ಉಪ್ಪಿನಂಗಡಿ : ಹೃದಯಾ*ಘಾತದಿಂದ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಯುವಕ

ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಭದ್ರತಾ ಅಧಿಕಾರಿ ಮೋನಿಶ ಕೆ.ಜಿ. ಅವರು ನೀಡಿದ ದೂರಿನ ಆಧಾರದಲ್ಲಿ ಬಜಪೆ ಪೊಲೀಸ್‌ ಠಾಣೆಯಲ್ಲಿ ಐಪಿಸಿ 507 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿದೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ತಿಳಿಸಿದ್ದಾರೆ.
ಈ ಕುರಿತು ತನಿಖೆ ನಡೆಸಿದಾಗ ಅಪರಿಚಿತ ವ್ಯಕ್ತಿಯು ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ದೇಶದ 25 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದು ಕಂಡು ಬಂದಿದೆ. ಆರೋಪಿಯ ಪತ್ತೆಗಾಗಿ ಬಜಪೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ವಿವರಿಸಿದ್ದಾರೆ.

ಇ ಮೇಲ್ ನಲ್ಲಿ ಏನಿದೆ ?

ಇ ಮೇಲ್ ನಲ್ಲಿ, ‘ಮಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ಸ್ಪೋಟಕಗಳನ್ನು ಇಡಲಾಗಿದೆ. ಮೂರು ವಿಮಾನದಲ್ಲಿಯೂ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ದೊಡ್ಡಮಟ್ಟದ ರಕ್ತಪಾತ ನಡೆಯಲಿದೆ. ಈ ಕೃತ್ಯದ ಹಿಂದೆ ಟೆರರೈಸರ್ಸ್ 111 ಕೈವಾಡವಿದೆ’ ಎಂದು ಸಂದೇಶದಲ್ಲಿ ಬರೆಯಲಾಗಿದೆ.

Continue Reading

DAKSHINA KANNADA

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಟ್ಟರೆ ಏನಾಗುತ್ತದೆ ನೋಡಿ..!

Published

on

ಮಂಗಳೂರು: ನಾವು ಯಾವುದೇ ಹಿಂದೂ ಧರ್ಮದವರ ಮನೆಗೆ ಹೋದಾಗ ಅಲ್ಲಿ ಏನು ನೋಡುತ್ತೇವೊ ಗೊತ್ತಿಲ್ಲ ಆದರೆ ಮನೆಯ ಎದುರೊಂದು ತುಳಸಿ ಗಿಡ ಇದ್ದೇ ಇರುತ್ತದೆ. ಯಾಕೆಂದರೆ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜನೀಯ ಸ್ಥಾನ ಕೊಡುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಮಹಿಳೆಯರು ದೇವರಿಗೆ ದೀಪ ಇಟ್ಟು ಬಳಿಕ ತುಳಸಿ ಗಿಡಕ್ಕೆ ಕಲಶದಲ್ಲಿ ನೀರನ್ನು ಹಾಕುತ್ತಾರೆ.

ಕೆಲವರ ಮನೆಯಲ್ಲಿ ಒಂದೇ ತುಳಸಿ ಗಿಡವನ್ನು ನೋಡಿದರೆ ಇನ್ನು ಕೆಲವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ಇರುತ್ತದೆ. ಆರೋಗ್ಯದ ಪ್ರಯೋಜನವಾಗಿಯೂ ಇದನ್ನು ಬಳಸುತ್ತಾರೆ. ಆದರೆ ಕೆಲವೊಂದು ನಿಯಮವನ್ನು ಅನುಸರಿಸುವುದು ಮುಖ್ಯವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ತುಳಸಿ ಗಿಡವನ್ನು ಇಟ್ಟು ಕೊಂಡರೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ.

ತುಳಸಿ ಗಿಡ ಬೆಸ ಸಂಖ್ಯೆಯಲ್ಲಿ ಇರಬೇಕು:

ಕೆಲವೊಂದು ಮನೆಯಲ್ಲಿ ತುಳಸಿ ಗಿಡ ಎಲ್ಲಾ ಕಡೆಯಲ್ಲಿ ಬೆಳೆಯುತ್ತದೆ. ಇನ್ನು ಕೆಲವು ಮನೆಯಲ್ಲಿ ನೆಟ್ಟ ಒಂದು ಗಿಡವೂ ಸರಿಯಾಗಿ ಉಳಿಯುವುದು ಕಷ್ಟ. ಆದರೆ ತುಳಸಿ ಗಿಡದ ಸಂಖ್ಯೆ ಬೆಸಸಂಖ್ಯೆಯಲ್ಲಿರಬೇಕು. 1, 3, 5, 7 ಹೀಗೆ ಬೆಸಸಂಖ್ಯೆಯಲ್ಲಿ ತುಳಸಿ ಗಿಡವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಈ ರೀತಿಯಾಗಿ ಇದ್ದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ತುಳಸಿ ಗಿಡವನ್ನು ಹೀಗೆ ನೆಡಬೇಕು:

ತುಳಸಿ ಗಿಡವನ್ನು ನೇರವಾಗಿ ನೆಲದ ಮೇಲೆ ನೆಡಬಾರದು. ಇಂತಹ ತಪ್ಪನ್ನು ಎಂದಿಗೂ ಮಾಡಬಾರದು. ಈ ಸಸಿಯನ್ನು ಕುಂಡದಲ್ಲಿ ಅಥವಾ ತೊಟ್ಟೆಯಲ್ಲಿ ಪ್ರತ್ಯೇಕವಾಗಿ ನೆಡಬೇಕು. ಕುಂಡದಲ್ಲಿ ತುಳಸಿ ಗಿಡವನ್ನು ನೆಟ್ಟರೆ ಯಾವೂದೇ ರೀತಿಯ ಅಶುದ್ಧತೆಗಳು ತುಳಸಿ ಗಿಡವನ್ನು ಮುಟ್ಟುವುದಿಲ್ಲ.

ಈ ದಿನದಂದು ತುಳಸಿಯನ್ನು ಕೀಳಬಾರದು:

ತುಳಸಿ ಗಿಡವನ್ನು ಎಲ್ಲಾ ದಿನ ನೆಡಬಾರದು. ತುಳಸಿಯನ್ನು ಭಾನುವಾರದಂದು ಮತ್ತು ಏಕಾದಶಿಯ ದಿನದಂದು ನೆಡಬಾರದು ಮತ್ತು ಅದರ ಎಲೆಗಳನ್ನು ತೆಗೆಯಬಾರದು. ಈ ಎರಡು ದಿನ ತುಳಸಿಯನ್ನು ಕೀಳುವುದು ಮತ್ತು ಮುಟ್ಟುವುದು ಮಾಡಿದರೆ ಅಶುಭವೆಂದು ಹೇಳುತ್ತಾರೆ.

ತುಳಸಿಯನ್ನು ನಾವು ಮನೆಯಲ್ಲಿ ನೆಡುವಾಗ ಈ ಮೇಲಿನ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನೆಡಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಸಮ ಸಂಖ್ಯೆಯಲ್ಲಿ ತುಳಸಿ ಗಿಡವಿದ್ದರೆ ಯಾವೂದಾದರು ಒಂದನ್ನು ಬೇರೆಯವರಿಗೆ ದಾನ ಮಾಡಿ. ಇದರಿಂದ ಯಾವೂದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ.

Continue Reading

DAKSHINA KANNADA

ಉಪ್ಪಿನಂಗಡಿ : ಹೃದಯಾ*ಘಾತದಿಂದ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಯುವಕ

Published

on

ಉಪ್ಪಿನಂಗಡಿ : ಕೋವಿಶೀಲ್ಡ್‌ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆಯಂತ ಅಡ್ಡ ಪರಿಣಾಮದ ಬಗ್ಗೆ ಒಪ್ಪಿಕೊಂಡಿದ್ದ ಸೀರಂ ಸಂಸ್ಥೆಯಿಂದ ಭಾರತದ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೋವಿಡ್ ಲಸಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಆರೋಗ್ಯವಾಗಿದ್ದ ಯುವಕನೊಬ್ಬ ಹೃದಯಾ*ಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.


ಗಾರೆ ಕೆಲಸ ಮಾಡಿಕೊಂಡು ಆರೋಗ್ಯವಾಗಿದ್ದ 27 ವರ್ಷದ ಜನಾರ್ದನ ಎಂಬ ಯುವಕ ಅಸು ನೀಗಿದ್ದಾನೆ. ಉಪ್ಪಿನಂಗಡಿ ಸಮೀಪದ ನಿನ್ನಿಕಲ್ಲು ನಿವಾಸಿಯಾಗಿದ್ದ ಜನಾರ್ದನ ಮೇಸ್ತ್ರಿಯಾಗಿ ಗಾರೆ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕೆಲಸಕ್ಕೆ ರಜೆ ಹಾಕಿ ಬಂದಿದ್ದ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.ಈ ವೇಳೆ ನಿದ್ರೆಗೆ ಜಾರಿದ ಜನಾರ್ದನ್ ಮತ್ತೆ ಮೇಲೆದ್ದಿಲ್ಲ.

ಇದನ್ನೂ ಓದಿ : ಸಿಡಿಲ ಬಡಿತಕ್ಕೆ ನವವಿವಾಹಿತ ದುರ್ಮರ*ಣ..!10 ದಿನಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ವಿಧಿಯಾಟಕ್ಕೆ ಬ*ಲಿ!!

ಮಗ ಮಲಗಿದ್ದಾನೆ ಅಂತ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು ಸಂಜೆ ಬಂದು ಮಗನನ್ನು ಎಬ್ಬಿಸಿದಾಗಲೇ ವಿಚಾರ ಗೊತ್ತಾಗಿದೆ. ಕರೆದರೂ ಮಗ ಎದ್ದಿಲ್ಲ ಎಂದು ತಾಯಿ ಮಗನನ್ನು ಅಲುಗಾಡಿಸಿ ಎಚ್ಚರಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಆ ವೇಳೆ ಯಾವುದೇ ರೆಸ್ಪಾನ್ಸ್‌ ಇಲ್ಲದ ಕಾರಣ ತಾಯಿಗೆ ಅನುಮಾನ ಬಂದು ಉಸಿರು ಪರಿಶೀಲಿಸಿದಾಗ ಮಗ ಮೃ*ತಪಟ್ಟಿರುವುದು ಆರಿವಾಗಿದೆ.

 

Continue Reading

LATEST NEWS

Trending