Connect with us

LATEST NEWS

ವಿದೇಶದ ನೆಲದಲ್ಲೂ ಅಬ್ಬರಿಸಿದ ಶಿವದೂತೆ ಗುಳಿಗೆ: ಕಿಕ್ಕಿರಿದು ಸೇರಿದ ಜನಸಂದಣಿ ನಡುವೆ ನಾಟಕದ ಅಮೋಘ ಪ್ರದರ್ಶನ..!

Published

on

ತುಳುನಾಡಿನ ರಂಗಭೂಮಿಯಲ್ಲಿ ದಾಖಲೆ ಬರೆದಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಇವರ ನಿರ್ದೇಶನದ ಶಿವದೂತ ಗುಳಿಗೆ ನಾಟಕ ಇಧೇ ಮೊದಲ ಬಾರಿ ವಿದೇಶದ ನೆಲದಲ್ಲೂ ಅಬ್ಬರಿಸಿದೆ.

 ದುಬೈ : ತುಳುನಾಡಿನ ರಂಗಭೂಮಿಯಲ್ಲಿ ದಾಖಲೆ ಬರೆದಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಇವರ ನಿರ್ದೇಶನದ ಶಿವದೂತ ಗುಳಿಗೆ ನಾಟಕ ಇಧೇ ಮೊದಲ ಬಾರಿ ವಿದೇಶದ ನೆಲದಲ್ಲೂ ಅಬ್ಬರಿಸಿದೆ.

ಕಿಕ್ಕಿರಿದ ಪ್ರೇಕ್ಷಕರ ಮಧ್ಯೆ 423 ಮತ್ತು 424ನೇ ಪ್ರದರ್ಶನ ನಿನ್ನೆ ದುಬೈನ ಅಲ್‌ ನಸರ್ ಲಿಸರೆ ಲ್ಯಾಂಡ್‌ನಲ್ಲಿ ಪ್ರದರ್ಶನಗೊಂಡಿತು.

ಒಂದೇ ದಿನ ನಡೆದ ಎರಡು ಪ್ರದರ್ಶನವನ್ನು ಸರಿಸುಮಾರು 5000ಕ್ಕಿಂತಲೂ ಅಧಿಕ ಪ್ರೇಕ್ಷಕರು ವೀಕ್ಷಿಸಿದರು.

 

ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವುದರೊಂದಿಗೆ ನಾಟಕ ಆರಂಭಗೊಂಡಿತು.

ನಾಟಕ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ ಬೈಲ್ ಅವರನ್ನು ತೌಳವ ರಂಗ ಚಾಣಕ್ಯೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರಾವಳಿಯ ದೈವಾರಾಧನೆಯ ಕಥಾ ಹಂದರವನ್ನು ಹೊಂದಿರುವ ಈ ನಾಟಕವು ಅತ್ಯದ್ಭುತ ನಟನೆ, ರೋಮಾಂಚಕ ಸನ್ನಿವೇಶಗಳು, ವಿಭಿನ್ನ ಸೆಟ್ಟಿಂಗ್‌ ಮತ್ತು ಧ್ವನಿ, ಬೆಳಕಿನ ತಾಂತ್ರಿಕತೆಯ ಸಮ್ಮಿಳಿತದೊಂದಿಗೆ ನಾಟಕ ಅದ್ಭುತವಾಗಿ ಮೂಡಿ ಬಂದಿದೆ.

ಪರ್ದಾನದ ಸೊಗಸು, ಗಗ್ಗರ ಧ್ವನಿ, ದೈವದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ, ಶಿವನ ಅಂಶಾವತಾರವಾಗಿರುವ ಗುಳಿಗನ ಮಹಿಮೆಯನ್ನು ಲೋಕಕ್ಕೆ ಸಾರುವ ಅತ್ಯದ್ಭುತ ನಾಟಕ ಇದಾಗಿದೆ ಎಂದು ನಾಟಕ ವೀಕ್ಷಿಸಿದ ಪ್ರೇಕ್ಷಕರು ಶ್ಲಾಘಿಸಿದರು.

ಶಿವದೂತೆ ಗುಳಿಗೆ ನಾಟಕದ ಇಡೀ ತಂಡವು ಪ್ರತಿ ಪಾತ್ರವನ್ನು ತನ್ಮಯತೆಯಿಂದ ಮತ್ತು ನಾಟಕದುದ್ದಕ್ಕೂ ಅದ್ಭುತವಾಗಿ ಪ್ರದರ್ಶಿಸಿದೆ.

ಇದೇ ವೇಳೆ ನಾಟಕ ತಂಡವು ವಿದೇಶದಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಆಯೋಜಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದೆ.

ನಾಟಕ ಕಲಾವಿದರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಮ್ಮ ಕುಡ್ಲದ ನಿರೂಪಕಿ ಡಾ.ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ರಾಜೇಶ್ ಕುತ್ತಾರ್ ಸ್ವಾಗತಿಸಿದರು.

bangalore

ಈ ಬಾರಿ ಬಿಗ್ ಬಾಸ್ ಗೆಲ್ಲೋದು ನಾನೆ…ಎಂದು ಪಟ್ಟು ಹಿಡಿದ ಸ್ಪರ್ಧಿ ಯಾರು ಗೊತ್ತಾ..?

Published

on

Bigboss: ಬಿಗ್ ಬಾಸ್ ಮುಕ್ತಾಯಕ್ಕೆ ಇನ್ನು ಅರ್ಧ ಜರ್ನಿ ಬಾಕಿ ಇದೆ. ಆದರೆ ಇದೀಗ ಬಿಗ್ ಬಾಸ್ ಸ್ಪರ್ಧಿಗಳ ಫೈಟ್ ಜೋರಾಗಿದ್ದು, ಈ ಬಾರಿ ಬಿಗ್ ಬಾಸ್ ಗೆಲ್ಲೋದು ನಾವೇ ಎಂದು ಪಟ್ಟು ಹಿಡಿದ ಸ್ಫರ್ಧಿಗಳು ಗೆಲ್ಲುತ್ತಾರೋ ಅನ್ನೋದು ಕಾದು ನೋಡಬೇಕಿದೆ.

ಈ ವಾರ ದೊಡ್ಮನೆಯಲ್ಲಿ ವಿನಯ್ ಆರ್ಭಟ ಜೋರಾಗಿತ್ತು. ಜೊತೆಗೆ ಟೀಮ್ ನಲ್ಲಿ ಕಿತ್ತಾಟ ನಡೆದರೂ ವಿನಯ್ ಮಾತ್ರ ತಲೆಕೆಡಿಸದೆ ಈ ಬಾರಿ ಬಿಗ್ ಬಾಸ್ ಟೈಟಲ್ ನಾನೇ ಗೆಲ್ಲೋದು ಎಂದು ಹೇಳಿಕೊಂಡಿದ್ದಾರೆ.


ಈಗಾಗಲೇ ಬಿಗ್ ಬಾಸ್ ಜರ್ನಿ ಅರ್ಧ ಮುಗಿದಿದ್ದು, ಇನ್ನು ಅರ್ಧ ಬಾಕಿ ಇದೆ. ಹಾಗಾಗಿ ಇದರಲ್ಲಿ ಯಾರು ಗೆಲ್ಲೋತ್ತಾರೋ ಅನ್ನೊ ಪ್ರಶ್ನೆ ಮತ್ತೇ ಕಾಡಿದೆ. ವಾರದಿಂದ ವಾರಕ್ಕೆ ಎಲಿಮಿನೇಟ್ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಿದ್ದರೆ. ಇತ್ತ ವಿನಯ್ ಯಾರನ್ನೂ ಲೆಕ್ಕಿಸದೇ ತಾವೇ ಈ ಬಾರಿ ಫಿನಾಲೆ ಮೆಟ್ಟಿಲೇರಬೇಕು ಎಂದಾಗ ಸ್ನೇಹಿತ್ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಹಾಗಗಿ ವಿನಯ್ ಗೆ ಮತ್ತಷ್ಟು ಧೈರ್ಯ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ನಮ್ರತಾ, ಸ್ನೇಹಿತ್ ಮತ್ತು ವಿನಯ್ ಅವರದ್ದು ಒಂದು ಗುಂಪು. ಈ ಮೂವರು ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಆಟವಾಡುತ್ತಾ ಬಂದಿದ್ದಾರೆ. ಆದರೆ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ವಿನಯ್ ವಿರುದ್ಧ ನಮ್ರತಾ ಮತ ಚಲಾಯಿಸಿದ್ದಾರೆ. ಹಾಗಾಗಿ ನಮ್ರತಾ ಇವರ ಗುಂಪಿನಿಂದ ಹೊರ ನಡೆದಿದ್ದಾರೆ.


ಆ ಬಳಿಕ ವಿನಯ್ ಹಾಗೂ ಸ್ನೇಹಿತ್ ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ನಾವೇ ಇರಬೇಕು ಅಂತಾರೆ ಸ್ನೇಹಿತ್. ನಾವೇ ಇರಬೇಕು. ಆದರೆ, ನಾನೇ ವಿನ್ ಆಗಬೇಕು ಎಂದು ವಿನಯ್ ನುಡಿಯುತ್ತಾರೆ. ಅದಕ್ಕೆ ಸ್ನೇಹಿತ್ ಖುಷಿಯಿಂದಲೇ, ನಿಜಕ್ಕೂ ಇದಕ್ಕಿಂತ ಸಂತೋಷ ಏನಿದೆ ಎನ್ನುತ್ತಾರೆ.

ಈ ಮಾತು ಕೇಳಿಸಿಕೊಂಡ ಬಿಗ್ ಬಾಸ್ ನೋಡುಗರು, ನಮ್ರತಾಗಿಂತಾನೂ ಸ್ನೇಹಿತ್ ಸಖತ್ ಚಮಚಾ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ವಿನಯ್ ನ ಕನಸು ಈಡೇರುತ್ತಾ..? ಅವರೇ ಬಿಗ ಬಾಸ್ ವಿನ್ನರ್ ಆಗುತ್ತಾರ ಎಂದು ಕಾದು ನೋಡಬೇಕಿದೆ.

Continue Reading

LATEST NEWS

ಪ್ರಧಾನಿ ಮೋದಿ ಜೊತೆ ಸೆಲ್ಫೀ ಕ್ಲಿಕ್ಕಿಸಿದ ಇಟಲಿಯ ಲೇಡಿ ಪಿಎಂ

Published

on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಕ್ಲಿಕ್ಕಿಸಿಕೊಂಡ ಸೆಲ್ಫಿ ಪೊಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಸಿಓಪಿ 28 ಶೃಂಗಸಭೆಯ ನಿಮಿತ್ತ ದುಬೈಗೆ ತೆರಳಿದ್ದ ಪ್ರಧಾನಿ ನರೇಂದ ಮೋದಿ ಅವರ ಜೊತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮಾತುಕತೆ ನಡೆಸಿ ಸೆಲ್ಫೀ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮೋದಿ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ಮೆಲೋನಿ ಅವರು, ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ “ಗುಡ್ ಫ್ರೆಂಡ್ಸ್ ಎಟ್ ಸಿಓಪಿ28 #ಮೆಲೋಡಿ” ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಪೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೆಲೋನಿ ಕಳೆದ ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಶೃಂಗಸಭೆ ವೇಳೆ ಮೋದಿಯವರ ಜೊತೆ ಇಟೆಲಿ ಪ್ರಧಾನಿ ನಿಯೋಗದಿಂದ ಮಾತುಕತೆ ನಡೆದಿತ್ತು. ದುಬೈಗೆ ತೆರಳಿದ್ದ ಮೋದಿಯವರು ಸಿಓಪಿ 28 ಶೃಂಗಸಭೆಯಾಗಿ ಇಂದು ದೆಹಲಿಗೆ ಮರಳಿದ್ದಾರೆ. ದುಬೈ ಭೇಟಿ ಸಂದರ್ಭದಲ್ಲಿ ಮೋದಿಯವರು, ವಿವಿಧ ರಾಷ್ಟ್ರಗಳ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದ್ದಾರೆ.

 

ಮೋದಿಯವರು ಮೆಲೋನಿ ಅವರಲ್ಲದೆ, ಪ್ರಧಾನಿ ಮೋದಿ ಅವರು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಬ್ರೆಜಿಲ್ ಪ್ರಧಾನಿ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಬ್ರಿಟಿಷ್ ವಿದೇಶಾಂಗ ಸಚಿವ ಡೇವಿಡ್ ಕ್ಯಾಮರೂನ್, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರನ್ನು ಭೇಟಿಯಾದರು.

Continue Reading

FILM

ರಶ್ಮಿಕಾ ಮಂದಣ್ಣ ಪರಭಾಷೆ ನಟರಿಗೆ ಲಕ್ಕಿ ಚಾರ್ಮ್

Published

on

Rashmika mandanna : ಕನ್ನಡ ಬೆಡಗಿ ರಶ್ಮಿಕಾ ಮಂದಣ್ಣ ಅಂದ್ರೆ ಕೆಲವರಿಗೆ ಇಷ್ಟ, ಇನ್ನೂ ಕೆಲವರಿಗೆ ಅಷ್ಟಕಷ್ಟೆ.ಆದ್ರೆ ಬೇರೆ ಭಾಷೆಯ ನಟರಿಗೆ ರಶ್ಮಿಕಾ ಅಂದ್ರೆ ತುಂಬಾನೆ ಇಷ್ಟ ಅಂತೆ.
ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ರಶ್ಮಿಕಾ ಸದ್ಯ ಬೇಡಿಕೆಯ ನಟಿ.ಸೌತ್ ಟು ನಾರ್ತ್ ರಶ್ಮಿಕಾ ಅವರಿಗೆ ಸಿನಿಮಾರಂಗದಲ್ಲಿ ಭಾರೀ ಬೇಡಿಕೆ ಇದೆ.


ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಬ್ಲಾಕ್​ ಬಸ್ಟರ್ ಹಿಟ್. ಕನ್ನಡದಲ್ಲಿ ಆ ಬಳಿಕ ಮಾಡಿದ ಚಮಕ್, ಅಂಜನಿಪುತ್ರ, ಪೊಗರು ಸಿನೆಮಾ ಬ್ಲಾಕ್ ಬಸ್ಟರ್ ಚಿತ್ರಗಳು ಎನಿಸಿಕೊಂಡಿವೆ.
ತಮಿಳು, ತೆಲುಗು ಬಾಷೆಯಲ್ಲಿ ಸತತ ಫ್ಲಾಪ್ ಕೊಡುತ್ತಿದ್ದ ಸ್ಟಾರ್ ಹೀರೋಗಳ ಜೊತೆ ಒಂದೊಂದು ಸಿನಿಮಾ ಮಾಡಿ ಅವರಿಗೆ ಬಿಗ್ ಸಕ್ಸಸ್ ಕೊಟ್ಟಿದ್ದಾರೆ.

ವಿಜಯ್, ಅಲ್ಲು ಅರ್ಜುನ್, ರಣಬೀರ್ ಕಪೂರ್​ನಂತ ಸ್ಟಾರ್ ಹೀರೋಗಳು ಸತತವಾಗಿ ಎವರೇಜ್ ಮಟ್ಟದಲ್ಲಿ ಸಿನಿಮಾ ಮಾಡುತ್ತಿದ್ದರು.ಆದ್ರೆ ರಶ್ಮಿಕಾ ಅವರ ಜೊತೆ ನಟಿಸಿ ಅವರಿಗೆ ಗೆಲುವು ತಂದುಕೊಟ್ಟಿದ್ದಾರೆ.

Continue Reading

LATEST NEWS

Trending