Home ಕರ್ನಾಟಕ ವಾರ್ತೆ ಅಮಂತ್ರಣ ಪತ್ರಿಕೆಯೊಳಗೆ ಡ್ರಗ್ ಸಪ್ಲೈ : 5 ಕೋಟಿಯ ಡ್ರಗ್‌ ವಶಕ್ಕೆ ಪಡೆದ ಬೆಂಗಳೂರು ಕಸ್ಟಮ್ಸ್..!

ಅಮಂತ್ರಣ ಪತ್ರಿಕೆಯೊಳಗೆ ಡ್ರಗ್ ಸಪ್ಲೈ : 5 ಕೋಟಿಯ ಡ್ರಗ್‌ ವಶಕ್ಕೆ ಪಡೆದ ಬೆಂಗಳೂರು ಕಸ್ಟಮ್ಸ್..!

ಅಮಂತ್ರಣ ಪತ್ರಿಕೆಯೊಳಗೆ ಡ್ರಗ್ ಸಪ್ಲೈ : 5 ಕೋಟಿಯ ಡ್ರಗ್‌ ವಶಕ್ಕೆ ಪಡೆದ ಬೆಂಗಳೂರು ಕಸ್ಟಮ್ಸ್..!

ಬೆಂಗಳೂರು: ಮಧುರೈನಿಂದ ಆಸ್ಟ್ರೇಲಿಯಾಗೆ ಅಕ್ರಮವಾಗಿ ಸಾಗಿಸುತ್ತಿದ್ದ ಬ್ರಹತ್ ಡ್ರಗ್ ಜಾಲವನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ.

 

ಇದು ವಿಶ್ವದ ಅತ್ಯಂತ ಅಪಾಯಕಾರಿ ಎಫಿಡ್ರಿನ್ ಡ್ರಗ್ಸ್ ಇದಾಗಿದ್ದು, ಕಸ್ಟಮ್ಸ್ ಅಧಿಕಾರಿಗಳ ಪರಿಶೀಲನೆ ವೇಳೆ ಈ ಮಾದಕವಸ್ತು ಪತ್ತೆಯಾಗಿದೆ. 5 ಕೆಜಿಯಷ್ಟು ಈ ಅಪಾಯಕಾರಿ ಡ್ರಗ್ಗನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಧುರೈನಿಂದ ಆಸ್ಟ್ರೇಲಿಯಾಗೆ ಕೊರಿಯರ್ ಮೂಲಕ ಈ ಮಾದಕವಸ್ತುವನ್ನು ಸಾಗಾಟ ಮಾಡಲಾಗುತ್ತಿತ್ತು.

ಕೊರಿಯರ್ನಲ್ಲಿ ಮದುವೆ ಆಮಂತ್ರಣ ಪತ್ರಿಕೆಗಳ ಒಳಗಿಟ್ಟು ಎಫಿಡ್ರಿನ್ ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು. ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 5 ಕೋಟಿ ರೂ. ಮೌಲ್ಯದ ಒಟ್ಟು 5 ಕೆ.ಜಿ. ಡ್ರಗ್ಸ್ ಪತ್ತೆಯಾಗಿದೆ. ಈ ಮಾದಕ ವಸ್ತುವನ್ನು ಹಲವು ದೇಶಗಳು ಈಗಾಗಲೇ ಬ್ಯಾನ್ ಮಾಡಿವೆ. ಈ ಡ್ರಗ್ಸ್ ಅನ್ನು ಕ್ಯಾಪ್ಸೂಲ್, ಟ್ಯಾಬ್ಲೆಟ್, ಚುಚ್ಚುಮದ್ದುಗಳ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಇದು ಉತ್ತೇಜಕ ಡ್ರಗ್ ಆಗಿದ್ದು, ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಕೆಲವು ರೋಗಗಳಿಗೆ ಚಿಕಿತ್ಸೆ ನೀಡಲು ಈ ಡ್ರಗ್ ಬಳಸಲಾಗುತ್ತದೆ. ಆದರೆ, ನಿಯಮಿತವಾಗಿ ಈ ಡ್ರಗ್ ದೇಹಕ್ಕೆ ಸೇರಿದರೆ ಪ್ರಾಣಾಪಾಯದ ಸಂಭವವೂ ಇರುತ್ತದೆ. ಈ ಡ್ರಗ್ ಅನ್ನು ಸಾಗಾಟ ಮಾಡುತ್ತಿದ್ದವರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisment -

RECENT NEWS

ಕೊರೊನಾ ಬಿಸಿಯ ನಡುವೆಯೂ ಕರಾವಳಿ ಜನತೆಗೆ ತಂಪೆರೆದ ಮಳೆರಾಯ

ಕೊರೊನಾ ಬಿಸಿಯ ನಡುವೆಯೂ ಕರಾವಳಿ ಜನತೆಗೆ ತಂಪೆರೆದ ಮಳೆರಾಯ ಬೆಳ್ತಂಗಡಿ: ಒಂದೆಡೆ ಕೊರೊನಾ ವೈರಸ್ ಭೀತಿಯಾದ್ರೆ, ಇತ್ತ ಮಳೆರಾಯ ಕೂಡ ತನ್ನ ಕೆಲಸ ಶುರು ಹಚ್ಚಿಕೊಂಡು ಬಿಟ್ಟಿದ್ದಾನೆ. ರಣ ಬಿಸಿಲಿನಿಂದ ಕಂಗೆಟ್ಟಿದ್ದ ಕರಾವಳಿ ಜನತೆಗೆ ವರುಣ...

ಲಾಕ್ ಡೌನ್ ಗೆ ಮನೆಯಲ್ಲಿದ್ದು ಬೋರಾದ ಮೆಗಾಸ್ಟಾರ್ ಗಳು ಮಾಡಿದ್ದೇನು.?

ಲಾಕ್ ಡೌನ್ ಗೆ ಮನೆಯಲ್ಲಿದ್ದು ಬೋರಾದ ಮೆಗಾಸ್ಟಾರ್ ಗಳು ಮಾಡಿದ್ದೇನು.? ಕೋವಿಡ್ 19 ನ ವ್ಯಾಪಕ ಹರಡುವಿಕೆಯನ್ನು ತಡೆಯಲು ದೇಶ  ಸಂಪೂರ್ಣ ಲಾಕ್ ಡೌನ್ ಆಗಿದೆ. ಇಡೀ ದೇಶದಲ್ಲಿ ಚಟುವಟಿಕೆ ಸ್ಥಬ್ದಗೊಂಡಿದೆ. ಜನ ರಸ್ತೆಗಿಳಿಯದಂತೆ ನಿಷೇಧಾಜ್ಞೆ...

ರಾಜ್ಯದ ಪ್ರಥಮ ಕೊರೊನಾ ಮುಕ್ತ ಜಿಲ್ಲೆ “ಮಂಜಿನನಗರಿ”

ರಾಜ್ಯದ ಪ್ರಥಮ ಕೊರೊನಾ ಮುಕ್ತ ಜಿಲ್ಲೆ “ಮಂಜಿನನಗರಿ” ಮಡಿಕೇರಿ: ರಾಜ್ಯದಾದ್ಯಂತ ಎಲ್ಲೆಲ್ಲೋ ಕೊರೊನಾ ಭೀತಿ ಆವರಿಸಿಕೊಂಡಿದ್ದರು. ಮಂಜಿನನಗರಿ ಕೊಡಗು ಜಿಲ್ಲೆಯ ಮಡಿಕೇರಿ ಜನ ಮಾತ್ರ ರಿಲ್ಯಾಕ್ಸ್ ಆಗಿದ್ದಾರೆ. ಕಳೆದ ವರ್ಷ ಪ್ರವಾಹದಿಂದ ತತ್ತರಿಸಿದ್ದ ಕೊಡಗು ಜನತೆ...

ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯ: ತುರ್ತು ವೈದ್ಯಕೀಯ ಅಗತ್ಯವಿದ್ದರೆ ಮಾತ್ರ ಗಡಿ ಓಪನ್

ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯ: ತುರ್ತು ವೈದ್ಯಕೀಯ ಅಗತ್ಯವಿದ್ದರೆ ಮಾತ್ರ ಗಡಿ ಓಪನ್ ಕಾಸರಗೋಡು: ಕೇರಳ ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯಗೊಂಡಿದೆ. ತುರ್ತು ವೈದ್ಯಕೀಯ ಅಗತ್ಯ ಇದ್ದರೆ ಮಾತ್ರ ಕೇರಳಕ್ಕೆ...