LATEST NEWS
ಮಕ್ಕಳು ಓದಲ್ಲ ಅಂತ ಬೈಬೇಡಿ; ಜಸ್ಟ್ ಹೀಗೆ ಮಾಡಿ ಸಾಕು !!
Published
1 hour agoon
ಮಕ್ಕಳಿಗಾಗಿ ಪ್ರತಿಯೊಬ್ಬ ಪೋಷಕರು ತುಂಬಾ ಕಷ್ಟಪಡುತ್ತಾರೆ. ಉತ್ತಮ ಭವಿಷ್ಯ ನೀಡಲು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಮಕ್ಕಳು ಮಾಡುವ ಕೆಲವು ಕೆಲಸಗಳು ಪೋಷಕರಿಗೆ ಕಿರಿಕಿರಿ ಉಂಟುಮಾಡುತ್ತವೆ. ವಿಶೇಷವಾಗಿ ಓದಿನ ವಿಷಯದಲ್ಲಿ ಮಕ್ಕಳಿಗೆ ಶಿಕ್ಷೆ ನೀಡದೇ ಜಾಣ್ಮೆಯಿಂದ ಅವರನ್ನು ಓದುವಂತೆ ಮಾಡುವುದು ಹೇಗೆ? ಎಂಬ ಕೆಲವು ಸರಳ ಐಡಿಯಾಗಳು ಇಲ್ಲಿವೆ.
ಓದಿಸುವ ಸರಳ ಮಾರ್ಗ :
ಮಕ್ಕಳು ದೊಡ್ಡವರಂತೆ ಅಲ್ಲ. ಅವರಿಗೆ ಯಾವುದೇ ನೋವುಗಳು ಅರಿತಿರುವುದಿಲ್ಲ. ಆದ್ದರಿಂದ ಯಾವಾಗಲೂ ಸಂತೋಷದಿಂದ ವರ್ತಮಾನವನ್ನು ಚೆನ್ನಾಗಿ ಆನಂದಿಸುತ್ತಾರೆ. ಆಟ ತುಂಟಾಟಗಳಲ್ಲಿ ಮುಳುಗಿರುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಆದ್ದರಿಂದ ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ಮೂಡಬೇಕೆಂದರೆ ಅವರೊಂದಿಗೆ ಪ್ರೀತಿಯಿಂದ ಮಾತನಾಡುವುದು ಅನಿವಾರ್ಯ. ಇಂದಿನ ಕಾಲದಲ್ಲಿ ಅನೇಕ ಪೋಷಕರು ವಿದ್ಯಾವಂತರಾಗಿದ್ದು, ಮಕ್ಕಳಿಗಿಂತ ಮೊದಲು ಪೋಷಕರು ಓದಿನ ಬಗ್ಗೆ ಆಸಕ್ತಿ ತೋರಿಸಬೇಕು. ಮಕ್ಕಳಿಗೆ ಓದುವ ಸಮಯವನ್ನು ನಿಗದಿಪಡಿಸಿ, ಆ ಸಮಯದಲ್ಲಿ ಮಕ್ಕಳು ಮಾತ್ರವಲ್ಲ ಪೋಷಕರು ಕೂಡ ಮಕ್ಕಳ ಜೊತೆ ಕುಳಿತು ಓದಿದರೆ ಮಾತ್ರ ಮಕ್ಕಳು ಕೂಡ ಓದುತ್ತಾರೆ.
ಮಕ್ಕಳು ಓದಲು ಕೆಲವು ಟ್ರಿಕ್ ಬಳಸುವುದು ಮುಖ್ಯ. ಓದಿದರೆ ಮಾತ್ರ ಆಟವಾಡಲು ಕಳುಹಿಸುತ್ತೇನೆ. ಇಲ್ಲದಿದ್ದರೆ ಕಳುಹಿಸುವುದಿಲ್ಲ, ಎಂದು ತಮಾಷೆಯಾಗಿ ಹೇಳಬೇಕು, ಇಲ್ಲದಿದ್ದರೆ, ಸ್ವಲ್ಪ ಹೊತ್ತು ಆಟವಾಡು, ಸ್ವಲ್ಪ ಹೊತ್ತು ಓದು ಎಂದು ಪ್ರೀತಿಯಿಂದ ಹೇಳಲು ಪ್ರಯತ್ನಿಸಬೇಕು. ಸಾಧ್ಯವಾದಷ್ಟು ಮಕ್ಕಳಿಗೆ ಮನೆ ಪಾಠ ಕಲಿಸಲು ಪ್ರಯತ್ನಿಸಬೇಕು. ಮಕ್ಕಳು ಚೆನ್ನಾಗಿ ಓದಬೇಕೆಂದರೆ ಅವರಿಗೆ ಸೂಕ್ತ ಸಮಯವನ್ನು ಮೀಸಲಿಡಬೇಕು. ಅದೇ ರೀತಿ ಅವರು ಶ್ರದ್ಧೆಯಿಂದ ಓದಲು ಸೂಕ್ತ ವಾತಾವರಣವನ್ನು ಕಲ್ಪಿಸಬೇಕಾದ ಜವಾಬ್ದಾರಿ ಪೋಷಕರ ಮೇಲಿರುತ್ತದೆ. ಮನೆಯ ವಾತಾವರಣ ಮಕ್ಕಳಿಗೆ ಇಷ್ಟವಾಗದಿದ್ದರೆ, ಮನೆಯಲ್ಲಿ ಮಕ್ಕಳಿಗಾಗಿ ಒಂದು ಸ್ಥಳವನ್ನು ಏರ್ಪಾಟು ಮಾಡಿ. ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ಮೂಡುತ್ತದೆ.
ಮಕ್ಕಳಿಗೆ ಕೇವಲ ಓದು ಮಾತ್ರ ಉಪಯುಕ್ತವಲ್ಲ. ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸುತ್ತಲೇ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡಬೇಕು. ಅಂದರೆ ಹೆಚ್ಚಿನ ಮಕ್ಕಳಿಗೆ ಆಟಗಳೆಂದರೆ ತುಂಬಾ ಇಷ್ಟ. ಆದ್ದರಿಂದ ಅವರ ಇಷ್ಟಗಳನ್ನು ತಿಳಿದುಕೊಂಡು ಅದರಲ್ಲಿ ಪ್ರೋತ್ಸಾಹಿಸಬೇಕು. ಅದೇ ರೀತಿ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ಕೂಡ ಮಕ್ಕಳಿಗೆ ಅರಿವು ಮೂಡಿಸಬೇಕು. ಅನೇಕ ಪೋಷಕರು ತಮ್ಮ ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿ ಮಾತ್ರ ಮಾಡಬೇಕೆಂದು ಬಯಸುತ್ತಾರೆ. ಇದರಿಂದ ಮಕ್ಕಳಿಗೆ ಸಮಾಜದ ಬಗ್ಗೆ ಏನೂ ತಿಳಿಯದಂತಾಗುತ್ತದೆ. ಈ ಹಂತಗಳನ್ನು ಅನುಸರಿಸಿದರೂ ಓದಿನ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲವೆಂದರೆ ಅವರು ಒತ್ತಡಕ್ಕೆ ಒಳಗಾಗಿದ್ದಾರೆಯೇ ಎಂದು ತಿಳಿದುಕೊಂಡು, ಮಕ್ಕಳ ಮೇಲೆ ಒಂದು ಕಣ್ಣಿಟ್ಟು ಗಮನಿಸುತ್ತಿರಬೇಕು.
LATEST NEWS
ಪತ್ನಿಯನ್ನು ಪರೀಕ್ಷಿಸಲು ಬೀಸಿದ ಗಾಳಕ್ಕೆ ತಾನೇ ಸಿಲುಕಿದ ಪತಿ !!
Published
16 minutes agoon
17/11/2024ಅನುಮಾನ ಅನ್ನೋದು ದೊಡ್ಡ ಪಿಡುಗು ಎಂದರೆ ತಪ್ಪಾಗಲಾರದು. ಸುಂದರ ಸಂಸಾರವ ಒಡೆದು ಹಾಕಲು ಅನುಮಾನವೆಂಬ ಒಂದು ಬೀಜ ಇದ್ದರೆ ಸಾಕು. ಅದೆಷ್ಟೋ ಸಂಸಾರಗಳು ಹಾಳಾಗಿರುವುದು ಅನುಮಾನ ಅನ್ನೋ ಕೆಟ್ಟ ಚಾಳಿಯಿಂದಾಗಿ ಎನ್ನಬಹುದು.
ಅದೇ ರೀತಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಅನುಮಾನಪಡಲು ಹೋಗಿ ದೊಡ್ಡ ಸಂಕಷ್ಟಕ್ಕೆ ಸುಲುಕಿಕೊಂಡ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ಪತ್ನಿಯ ನಡವಳಿಕೆ ಮೇಲೆ ಅನುಮಾನ :
ಪತ್ನಿಯ ನಡವಳಿಕೆಯ ಮೇಲಿನ ಅನುಮಾನದಿಂದ ಕಾನ್‌ಸ್ಟೆಬಲ್ ರಾಕೇಶ್ ಕುಮಾರ್ ಆಕೆಯನ್ನು ಪರೀಕ್ಷಿಸಲು ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ರಚಿಸಿ, ಅದರಿಂದ ಮೆಸೆಜ್ ಮಾಡಲು ಮುಂದಾಗಿದ್ದಾನೆ. ದುರಂತ ತಾನು ಬೀಸಿದ ಗಾಳಕ್ಕೆ ತಾನೇ ಸಿಲುಕಿಕೊಂಡಿದ್ದಾನೆ. ಪತ್ನಿಯಲ್ಲಿರುವ ತಪ್ಪನ್ನು ಬಹಿರಂಗಪಡಿಸುವ ಬದಲು ಆತನ ವಂಚನೆಯೇ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಂತರ ಪೊಲೀಸರು ಆರೋಪಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು :
ಜೂನ್ 21, 2024 ರಂದು, ಮಹಿಳೆ ಹರ್ದೋಯ್‌ನಲ್ಲಿರುವ ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು, “ಗೌರವ್ ಕುಮಾರ್” ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಸಭ್ಯ ಸಂದೇಶಗಳನ್ನು ಮಾಡಲಾಗುತ್ತಿದೆ ಎಂದು ಅಲ್ಲಿ ಬರೆದುಕೊಂಡಿದ್ದರು. ಆಕೆಯ ಹೇಳಿಕೆಯ ಪ್ರಕಾರ, ‘ಸಂದೇಶಗಳಲ್ಲಿ ಭಾಭಿ ಜೀ, ನೀವು ತುಂಬಾ ಹಾಟ್ ಆಗಿದ್ದೀರಿ’ ಎಂಬಂತಹ ಅನುಚಿತ ಕಾಮೆಂಟ್‌ಗಳನ್ನು ಒಳಗೊಂಡಿತ್ತು, ಜೊತೆಗೆ ‘ಫ್ಲರ್ಟ್’ ಮಾಡಲು ನಿರಂತರ ಪ್ರಯತ್ನ ಮಾಡುವಂತೆ ತೋರುತ್ತಿತ್ತು.
‘ನನಗೆ ಈ ವ್ಯಕ್ತಿಯ ಪರಿಚಯ ಇಲ್ಲ, ಅವನ ಸಂದೇಶಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ನಾನು ಅವರನ್ನು ಬ್ಲಾಕ್ ಮಾಡಿದರೂ ಬೇರೆ ಬೇರೆ ಖಾತೆಗಳಿಂದ ನನಗೆ ಸಂದೇಶ ಕಳುಹಿಸುತ್ತಲೇ ಇದ್ದಾನೆ. ಇದರಿಂದ ನನಗೆ ಬಹಳ ಸಮಸ್ಯೆ ಆಗಿದೆ, ನನಗೆ ಸಹಾಯ ಮಾಡಿ’ ಎಂದು ಸೈಬರ್ ಠಾಣೆ ಮೆಟ್ಟಿಲೇರಿದ್ದರು.
ತನಿಖೆಯಿಂದ ಬಯಲಾದ ಆಘಾತಕಾರಿ ಸತ್ಯ :
ಅಧಿಕಾರಿಗಳು ತಮ್ಮ ತನಿಖೆಯನ್ನು ಪ್ರಾರಂಭಿಸಿದಾಗ, ನಕಲಿ ಇನ್‌ಸ್ಟಾಗ್ರಾಮ್ ಐಡಿಯನ್ನು ಆಪರೇಟ್ ಮಾಡಿದ್ದು ಬೇರಾರೂ ಅಲ್ಲ ಮಹಿಳೆಯ ಪತಿ ರಾಕೇಶ್ ಕುಮಾರ್ ಅನ್ನೋದು ತಿಳಿದುಬಂದಿದೆ. ರಾಯ್‌ಬರೇಲಿ ಪೊಲೀಸ್ ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾನ್‌ಸ್ಟೆಬಲ್ ತನ್ನ ಪತ್ನಿಯ ಬಗ್ಗೆ ಅನುಮಾನೊಂಡು ಈ ರೀತಿ ಮೆಸೆಜ್‌ಗಳನ್ನು ಮಾಡುತ್ತಿದ್ದನಂತೆ. ಆದರೆ ಈಗ ಬೇರೆಯವರ ತಪ್ಪನ್ನು ಕಂಡುಹಿಡಿಯಲು ಹೋಗಿ ತಾನೇ ದೊಡ್ಡ ತಪ್ಪು ಮಾಡಿ ಬಂಧಿಯಾಗಿದ್ದಾನೆ.
ಈ ನಡುವೆ ಸರ್ಕಲ್ ಆಫೀಸರ್ (ಸಿಒ) ಸೂಚನೆ ಮೇರೆಗೆ ರಾಕೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಯನ್ನು ಸಬ್ ಇನ್ಸ್‌ಪೆಕ್ಟರ್ ನಿರ್ವಹಿಸುತ್ತಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿ, ಮಹಿಳೆ ಈಗಾಗಲೇ ತನ್ನ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದರು. ಇತ್ತೀಚಿನ ಘಟನೆ ಕಾನ್‌ಸ್ಟೆಬಲ್‌ನ ಇಮೇಜ್‌ಗೆ ಮತ್ತಷ್ಟು ಕಳಂಕ ತಂದಿದೆ. ಅವರ ನಡವಳಿಕೆಯ ಬಗ್ಗೆ ಗಂಭೀರ ಕಳವಳವನ್ನು ಸಹ ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ದುರುಪಯೋಗವನ್ನು ಈ ಘಟನೆ ಸಹ ಎತ್ತಿ ತೋರಿಸುತ್ತದೆ.
LATEST NEWS
ರೀಲ್ಸ್ ಪ್ರಿಯರಿಗೆ ಶಾ*ಕ್ ನೀಡಿದ ರೈಲ್ವೇ ಇಲಾಖೆಯ ಮಹತ್ವದ ನಿರ್ಧಾರ!
Published
2 hours agoon
17/11/2024By
NEWS DESK4ಮಂಗಳೂರು/ನವದೆಹಲಿ : ಇದು ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಟ್ರೆಂಡಿಂಗ್ ನಲ್ಲಿರೋದು ಮುಖ್ಯ. ಅದಕ್ಕಾಗಿ ಅನೇಕ ಸರ್ಕಸ್ ಮಾಡಿ ರೀಲ್ಸ್ ಗಳನ್ನು ಮಾಡಿ, ಆ ಮೂಲಕ ಲೈಕ್ಸ್, ವ್ಯೂವ್ಸ್ ಗಿಟ್ಟಿಸಿಕೊಂಡು ಫೇಮಸ್ ಆಗೋ ಬಯಕೆ ಹೆಚ್ಚಾಗಿದೆ. ಸಾರ್ವಜನಿಕ ಸ್ಥಳ, ರೈಲ್ವೇ ಸ್ಟೇಷನ್, ಬಸ್ ಸ್ಟ್ಯಾಂಡ್ , ಹೀಗೆ ಎಲ್ಲೆಂದರಲ್ಲಿ ರೀಲ್ಸ್ ಹುಚ್ಚಾಟ ಜಾಸ್ತಿಯಾಗಿದೆ. ಇದಕ್ಕೆ ಬ್ರೇಕ್ ಹಾಕಲು ಭಾರತೀಯ ರೈಲ್ವೇ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದೀಗ ರೈಲುಗಳಲ್ಲಿ ರೀಲ್ಸ್ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಭಾರತೀಯ ರೈಲ್ವೇ ಇಲಾಖೆ ಮುಂದಾಗಿದೆ. ಈಗಾಗಲೇ ಎಲ್ಲಾ ವಲಯಗಳಲ್ಲಿಯೂ ಸೂಚನೆ ನೀಡಿದೆ. ಇಲಾಖೆಯ ನಿಯಮದನುಸಾರ ಇನ್ಮುಂದೆ ಯಾರಾದರೂ ರೈಲುಗಳಲ್ಲಿ, ಸ್ಟೇಷನ್ ಗಳಲ್ಲಿ ರೀಲ್ಸ್ ಮಾಡಿ, ಇತರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ಅಥವಾ ರೈಲ್ವೇ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ದ ಪ್ರಕರಣ (ಎಫ್ಐಆರ್) ದಾಖಲಿಸಲು ರೈಲ್ವೇ ಮಂಡಳಿ ಆದೇಶಿಸಿದೆ.
ಕೇಸ್ ಬೀಳುತ್ತೆ ಹುಷಾರ್!
ರೈಲ್ವೇ ಕೋಚ್ ಗಳು, ರೈಲು ನಿಲ್ದಾಣಗಳು ಮತ್ತು ರೈಲ್ವೇ ಆವರಣದಲ್ಲಿ ಇಂತಹ ರೀಲ್ಸ್ ಗಳನ್ನು ಮಾಡುವವರ ವಿರುದ್ದ ಕಠಿಣ ಕ್ರಮ ಕ್ಯಗೊಳ್ಳಲಾಗುವುದು ಎಂದು ತಿಳಿಸಿದೆ. ಅದೇ ರೀತಿ ರೈಲುಗಳಲ್ಲಿ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ರೀಲ್ಸ್ ಮಾಡುವುದು ಅಥವಾ ಫೋಟೋ ತೆಗೆಯುವುದು ಕಂಡುಬಂದರೆ ರೈಲ್ವೇ ರಕ್ಷಣಾ ಪಡೆ (RPF), ಸರ್ಕಾರಿ ರೈಲ್ವೇ ಪೋಲಿಸ್ (GRP) ಪ್ರಕರಣ ದಾಖಲಿಸಿಕೊಳ್ಳುತ್ತದೆ.
ಇದನ್ನೂ ಓದಿ : IPL 2025 : ಅದೃಷ್ಟ ಪರೀಕ್ಷೆಯಲ್ಲಿ ಪಾಸಾಗುತ್ತಾರಾ ಕರ್ನಾಟಕದ ಆಟಗಾರರು!
ಹಾಗಾದರೆ ನೀವು ಯೋಚನೆ ಮಾಡಬಹುದು, ಅಧಿಕಾರಿಗಳು ನೋಡದ ಹಾಗೆ ಗೌಪ್ಯವಾಗಿ ರೀಲ್ಸ್ ಮಾಡಬಹುದಲ್ವಾ ಅಂತ. ಹಾಗೊಂದು ವೇಳೆ ಮಾಡಿದ್ರೋ ತಗಲಾಕ್ಕೊಂತೀರಿ. ಅದು ಹೇಗೆ ಅಂದ್ರೆ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಬಳಿಕ ಅಧಿಕಾರಿಗಳು ಪರೀಶಿಲನೆ ನಡೆಸಿ ಸಂಬಂಧಪಟ್ಟವರನ್ನು ಹುಡುಕಿ ಬಂಧಿಸಲಿದ್ದಾರೆ. ಈ ಮೂಲಕ ರೈಲು ನಿಲ್ದಾಣ, ರೈಲ್ವೇ ಕೋಚ್ ಹಾಗೂ ರೈಲ್ವೇ ಆವರಣಗಳಲ್ಲಿ ರೀಲ್ಸ್ ಮಾಡುವವರಿಗೆ ಭಾರತೀಯ ರೈಲ್ವೇ ಇಲಾಖೆ ರೀಲ್ಸ್ ಹಾಗೂ ಫೋಟೋ ತೆಗೆಯದಂತೆ ಎಚ್ಚರಿಕೆ ಕೊಟ್ಟಿದೆ.
LATEST NEWS
ಇಸ್ರೇಲ್ ವಿಸಾ ಹೆಸರಿನಲ್ಲಿ ಯುವಕರಿಗೆ ವಂಚನೆ. ಕೇರಳದ ಏಜನ್ಸಿ ವಿರುದ್ದ ಯುವಕರ ದೂರು
Published
2 hours agoon
17/11/2024By
NEWS DESK2ಇಸ್ರೇಲ್‌ನಲ್ಲಿ ಲಕ್ಷಾಂತರ ರೂಪಾಯಿ ಸಂಬಳದ ಕೆಲಸದ ಆಸೆಯಲ್ಲಿ ವಿಸಾ ಪಡೆಯಲು ಲಕ್ಷಾಂತರ ರೂಪಾಯಿ ಹಣ ನೀಡಿ ಯುವಕರು ಮೋಸ ಹೋಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ನೂರ ಮೂವತ್ತು ಯುವಕರು ಇದೀಗ ಹಣ ಕಳೆದುಕೊಂಡಿದ್ದು ಮಾತ್ರವಲ್ಲದೇ ತಮ್ಮ ಪಾಸ್ ಪೋರ್ಟ್ ಹಿಂದಕ್ಕೆ ಸಿಗದೆ ಪರದಾಡುತ್ತಿದ್ದಾರೆ.
ಇಸ್ರೇಲ್ ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಜನರು ಅಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಭಾರತೀಯರು ಹೆಚ್ಚಿನ ಸಂಬಳ ಸಿಗುತ್ತದೆ ಎಂಬ ಕಾರಣಕ್ಕೆ ಇಸ್ರೇಲ್‌ನಲ್ಲಿ ಕೆಲಸಕ್ಕೆ ಸೇರುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೇರಳದ ಕೊಚ್ಚಿ ಮೂಲದ ಸ್ಪೇಸ್ ಇಂಟರ್ನ್ಯಾಷನಲ್ ಎಂಬ ಏಜೆನ್ಸಿಯೊಂದು ಯುವಕರಿಗೆ ಪಂಗನಾಮ ಹಾಕಿದೆ.
ಈ ಕಂಪೆನಿ ಮೂಲಕ ಇಸ್ರೇಲ್ ವಿಸಾ ಪಡೆಯಲು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಮುಂಗಡ ಹಣ ನೀಡಿ ಕೈ ಸುಟ್ಟುಕೊಂಡಿದ್ದಾರೆ. ತಮ್ಮ ಪಾಸ್ ಪೋರ್ಟ್ ಕೂಡಾ ನೀಡಿದ್ದು, ಇದೀಗ ಪಾಸ್ ಪೋರ್ಟ್ ನೀಡಬೇಕಾದರೆ 60 ಸಾವಿರ ಪಾವತಿಸುವಂತೆ ಡಿಮ್ಯಾಂಡ್ ಇಟ್ಟಿದೆ. ಇಸ್ರೇಲ್‌ನಲ್ಲಿ ನೌಕರಿ ಕನಸು ಕಂಡಿದ್ದ ಯುವಕರಿಗೆ ಇಸ್ರೇಲ್‌ನಲ್ಲಿನ ಯುವಕನೊಬ್ಬ ಈ ಏಜೆನ್ಸಿಯ ವಂಚನೆಯ ಬಗ್ಗೆ ಮಾಹಿತಿ ನೀಡಿದ್ದ. ಏಜೆನ್ಸಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಕೋಹೆನ್ ಗ್ರೂಪ್ ಎಂಬ ಕಂಪೆನಿಯೇ ಇಸ್ರೇಲ್‌ನಲ್ಲಿ ಇಲ್ಲ ಎಂದು ಗೊತ್ತಾಗಿದೆ.
ಇಸ್ರೇಲ್‌ನಲ್ಲಿ ವಿಳಾಸ ಹುಡುಕಾಡಿದ ಯುವಕ ಆ ವಿಳಾಸದಲ್ಲಿ ಮನೆಯೊಂದು ಇರುವುದನ್ನು ಗುರುತಿಸಿದ್ದು, ಈ ವಿಚಾರವನ್ನು ಭಾರತದಲ್ಲಿನ ಸ್ನೇಹಿತರಿಗೆ ತಿಳಿಸಿದ್ದಾನೆ. ಹೀಗಾಗಿ ವಂಚನೆಯ ಬಗ್ಗೆ ಅರಿವಾದ 130 ಯುವಕರು ಒಟ್ಟಾಗಿ ತಾವು ನೀಡಿದ ಹಣ ಹಾಗೂ ತಮ್ಮ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಸ್ಪೇಸ್ ಇಂಟರ್ನ್ಯಾಷನಲ್ ಸಂಸ್ಥೆಯ ಜಸ್ಟಿಸ್ ಜೋಸ್ ಎಂಬಾತನಿಗೆ ಒತ್ತಡ ಹಾಕಿದ್ದಾರೆ. ಆದರೆ ಆತ ಪಾಸ್‌ಪೋರ್ಟ್ ವಾಪಾಸ್ ನೀಡಬೇಕಾದ್ರೆ 60 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ.
ಈ ಹಿನ್ನಲೆಯಲ್ಲಿ ಮೋಸ ಹೋದ ಯುವಕನೊಬ್ಬ ಉಡುಪಿಯ ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲೆ ಸಮೇತ ದೂರು ನೀಡಿ ನ್ಯಾಯ ಒದಗಿಸುವಂತೆ ಕೋರಿದ್ದಾನೆ. ಕಾನೂನಿನ ತೊಡಕಿನ ಕಾರಣದಿಂದಾಗಿ ಸ್ಥಳೀಯವಾಗಿ ದೂರು ಸ್ವೀಕರಿಸಲು ಅಸಾಧ್ಯ ಎಂಬ ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಇದೀಗ ಶಿರ್ವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
LATEST NEWS
ಇಸ್ರೇಲ್ ವಿಸಾ ಹೆಸರಿನಲ್ಲಿ ಯುವಕರಿಗೆ ವಂಚನೆ. ಕೇರಳದ ಏಜನ್ಸಿ ವಿರುದ್ದ ಯುವಕರ ದೂರು
ಮಣಿಪುರದಲ್ಲಿ ಭುಗಿಲೆದ್ದ ಹಿಂ*ಸಾಚಾರ; ಸಿಎಂ ಮನೆಗೆ ನುಗ್ಗಿದ ಆಕ್ರೋಶಿತರ ಗುಂಪು
ಉಡುಪಿ ಹಿಟ್ ಆ್ಯಂಡ್ ರನ್ ಕೇಸ್; ಆರೋಪಿಗೆ ಬೇಲ್
ಸರಳವಾಗಿ ನಡೆಯಿತು ಡಾಲಿ ಧನಂಜಯ್, ಧನ್ಯತಾ ನಿಶ್ಚಿತಾರ್ಥ- ಫೆ.16ಕ್ಕೆ ಮದುವೆ
ಅಜ್ಜಿಗಾಗಿ 12 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ಮೊಮ್ಮಗ! Mclaren 675 LT
ಊಟ ಮಾಡುವಾಗ ಅನ್ನದಲ್ಲಿ ಪದೇ ಪದೇ ಕೂದಲು ಸಿಗುತ್ತಿದೆಯೇ? ಇದು ಶುಭನಾ? ಅಶುಭನಾ?
Trending
- LATEST NEWS4 days ago
ಬಾದಾಮಿ-ಹರ್ಬಲ್ ಟೀಯಂತಹ ಸಿಂಪಲ್ ಆಹಾರದಿಂದಲೇ 32 ಕೆಜಿ ಸ್ಲಿಮ್ ಆದ ವ್ಯಕ್ತಿ; 90 ದಿನಗಳಲ್ಲೇ ರಿಸಲ್ಟ್!
- FILM4 days ago
ಅಭಿಷೇಕ್-ಅವಿವಾ ಪುತ್ರನಿಗೆ ಅಂಬರೀಷ್ ಹೆಸರು
- DAKSHINA KANNADA4 days ago
ತೃತೀಯ ಲಿಂಗಿ ತಾಯಿಯ ಹೋರಾಟ ; ಅಪ್ಪನ ಹೆಸರಿಲ್ಲದೆ ಪಾಸ್‌ಪೋರ್ಟ್ ಪಡೆದ ಮಗ .. !
- FILM5 days ago
ಅಂಬಿ ಮನೆಗೆ ಜ್ಯೂನಿಯರ್ ಅಭಿ ಎಂಟ್ರಿ; ಗಂಡು ಮಗುವಿಗೆ ಜನ್ಮವಿತ್ತ ಅವಿವಾ