Connect with us

    LATEST NEWS

    ಇಸ್ರೇಲ್‌ ವಿಸಾ ಹೆಸರಿನಲ್ಲಿ ಯುವಕರಿಗೆ ವಂಚನೆ. ಕೇರಳದ ಏಜನ್ಸಿ ವಿರುದ್ದ ಯುವಕರ ದೂರು

    Published

    on

    ಇಸ್ರೇಲ್‌ನಲ್ಲಿ ಲಕ್ಷಾಂತರ ರೂಪಾಯಿ ಸಂಬಳದ ಕೆಲಸದ ಆಸೆಯಲ್ಲಿ ವಿಸಾ ಪಡೆಯಲು ಲಕ್ಷಾಂತರ ರೂಪಾಯಿ ಹಣ ನೀಡಿ ಯುವಕರು ಮೋಸ ಹೋಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ನೂರ ಮೂವತ್ತು ಯುವಕರು ಇದೀಗ ಹಣ ಕಳೆದುಕೊಂಡಿದ್ದು ಮಾತ್ರವಲ್ಲದೇ ತಮ್ಮ ಪಾಸ್‌ ಪೋರ್ಟ್ ಹಿಂದಕ್ಕೆ ಸಿಗದೆ ಪರದಾಡುತ್ತಿದ್ದಾರೆ.

    ಇಸ್ರೇಲ್‌ ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಜನರು ಅಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಭಾರತೀಯರು ಹೆಚ್ಚಿನ ಸಂಬಳ ಸಿಗುತ್ತದೆ ಎಂಬ ಕಾರಣಕ್ಕೆ ಇಸ್ರೇಲ್‌ನಲ್ಲಿ ಕೆಲಸಕ್ಕೆ ಸೇರುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೇರಳದ ಕೊಚ್ಚಿ ಮೂಲದ ಸ್ಪೇಸ್ ಇಂಟರ್ನ್ಯಾಷನಲ್ ಎಂಬ ಏಜೆನ್ಸಿಯೊಂದು ಯುವಕರಿಗೆ ಪಂಗನಾಮ ಹಾಕಿದೆ.

    ಈ ಕಂಪೆನಿ ಮೂಲಕ ಇಸ್ರೇಲ್ ವಿಸಾ ಪಡೆಯಲು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಮುಂಗಡ ಹಣ ನೀಡಿ ಕೈ ಸುಟ್ಟುಕೊಂಡಿದ್ದಾರೆ. ತಮ್ಮ ಪಾಸ್‌ ಪೋರ್ಟ್‌ ಕೂಡಾ ನೀಡಿದ್ದು, ಇದೀಗ ಪಾಸ್‌ ಪೋರ್ಟ್ ನೀಡಬೇಕಾದರೆ 60 ಸಾವಿರ ಪಾವತಿಸುವಂತೆ ಡಿಮ್ಯಾಂಡ್ ಇಟ್ಟಿದೆ. ಇಸ್ರೇಲ್‌ನಲ್ಲಿ ನೌಕರಿ ಕನಸು ಕಂಡಿದ್ದ ಯುವಕರಿಗೆ ಇಸ್ರೇಲ್‌ನಲ್ಲಿನ ಯುವಕನೊಬ್ಬ ಈ ಏಜೆನ್ಸಿಯ ವಂಚನೆಯ ಬಗ್ಗೆ ಮಾಹಿತಿ ನೀಡಿದ್ದ. ಏಜೆನ್ಸಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಕೋಹೆನ್ ಗ್ರೂಪ್ ಎಂಬ ಕಂಪೆನಿಯೇ ಇಸ್ರೇಲ್‌ನಲ್ಲಿ ಇಲ್ಲ ಎಂದು ಗೊತ್ತಾಗಿದೆ.

    ಇಸ್ರೇಲ್‌ನಲ್ಲಿ ವಿಳಾಸ ಹುಡುಕಾಡಿದ ಯುವಕ ಆ ವಿಳಾಸದಲ್ಲಿ ಮನೆಯೊಂದು ಇರುವುದನ್ನು ಗುರುತಿಸಿದ್ದು, ಈ ವಿಚಾರವನ್ನು ಭಾರತದಲ್ಲಿನ ಸ್ನೇಹಿತರಿಗೆ ತಿಳಿಸಿದ್ದಾನೆ. ಹೀಗಾಗಿ ವಂಚನೆಯ ಬಗ್ಗೆ ಅರಿವಾದ 130 ಯುವಕರು ಒಟ್ಟಾಗಿ ತಾವು ನೀಡಿದ ಹಣ ಹಾಗೂ ತಮ್ಮ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಸ್ಪೇಸ್ ಇಂಟರ್ನ್ಯಾಷನಲ್ ಸಂಸ್ಥೆಯ ಜಸ್ಟಿಸ್ ಜೋಸ್ ಎಂಬಾತನಿಗೆ ಒತ್ತಡ ಹಾಕಿದ್ದಾರೆ. ಆದರೆ ಆತ ಪಾಸ್‌ಪೋರ್ಟ್‌ ವಾಪಾಸ್ ನೀಡಬೇಕಾದ್ರೆ 60 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ.

    ಈ ಹಿನ್ನಲೆಯಲ್ಲಿ ಮೋಸ ಹೋದ ಯುವಕನೊಬ್ಬ ಉಡುಪಿಯ ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲೆ ಸಮೇತ ದೂರು ನೀಡಿ ನ್ಯಾಯ ಒದಗಿಸುವಂತೆ ಕೋರಿದ್ದಾನೆ. ಕಾನೂನಿನ ತೊಡಕಿನ ಕಾರಣದಿಂದಾಗಿ ಸ್ಥಳೀಯವಾಗಿ ದೂರು ಸ್ವೀಕರಿಸಲು ಅಸಾಧ್ಯ ಎಂಬ ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಇದೀಗ ಶಿರ್ವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

    BANTWAL

    ಭೀ*ಕರ ರಸ್ತೆ ಅ*ಪಘಾತ; ಮಹಿಳೆ ಸಾ*ವು, ಮಕ್ಕಳ ಸಹಿತ 8 ಮಂದಿಗೆ ಗಾ*ಯ

    Published

    on

    ಬಂಟ್ವಾಳ: ಕಾರು ಮತ್ತು ರಿಕ್ಷಾ ನಡುವೆ ಭೀ*ಕರ ಅ*ಪಘಾತವಾಗಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಸಾ*ವನ್ನಪ್ಪಿ, ಮಕ್ಕಳ ಸಹಿತ 8 ಮಂದಿಗೆ ಗಾ*ಯಗಳಾಗಿರುವ ಘಟನೆ ಬಂಟ್ವಾಳದ ವಗ್ಗ ಸಮೀಪ ಬಾಂಬಿಲದಲ್ಲಿ ಇಂದು (ಡಿ.5) ಸಂಭವಿಸಿದೆ.

    ಪಂಜಿಕಲ್ಲು ಬಾಂದೊಟ್ಟು ರೆಚ್ಚಾಡಿ ಹರೀಶ್‌ ಎಂಬುವವರ ಪತ್ನಿ ತಿಲಕ (40) ಮೃ*ತ ಮಹಿಳೆ.

    ಮಕ್ಕಳ ಸಹಿತ ರಿಕ್ಷಾದಲ್ಲಿದ್ದ ಎಂಟು ಮಂದಿಗೆ ಗಾ*ಯವಾಗಿದ್ದು, ಅವರನ್ನು ಯಶಸ್ವಿನಿ, ಗೀತಾ, ರೇವತಿ, ಸರಸ್ವತಿ, ವೇದಾವತಿ, ರಾಜೀವಿ ಮತ್ತು ಮಕ್ಕಳಾದ ದಿಗಂತ್‌, ದಿಶಾನಿ ಎಂದು ಗುರುತಿಸಲಾಗಿದೆ. ಗಾ*ಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮದ್ವದಲ್ಲಿ ಸಂಬಂಧಿಕರ ಮನೆಯಲ್ಲಿ ನಡೆದ ಸೀಮಂತ ಕಾರ್ಯಕ್ರಮಕ್ಕೆ ಹೋಗಿ ವಾಪಾಸು ಮನೆಗೆ ಬರುವ ಸಂದರ್ಭ ದು*ರ್ಘಟನೆ ನಡೆದಿದೆ. ಪಂಜಿಕಲ್ಲುವಿನಿಂದ ನಾರಾಯಣ ಪೂಜಾರಿಯ ರಿಕ್ಷಾವನ್ನು ಗಾಯಾಳುಗಳು ಬಾಡಿಗೆ ಮಾಡಿದ್ದು, ಕಾರ್ಯಕ್ರಮ ಮುಗಿಸಿ ಅದೇ ಗಾಡಿಯಲ್ಲಿ ಮಂಗಳೂರಿನಿಂದ ಪುಂಜಾಲಕಟ್ಟೆ ಕಡೆಗೆ ಬರುತ್ತಿದ್ದ ವೇಳೆ ರಿಟ್ಸ್‌ ಕಾರು ಮತ್ತು ಆಪೆ ರಿಕ್ಷಾ ನಡುವೆ ಅ*ಪಘಾತವಾಗಿದೆ.

    ಇನ್ನು ಘಟನೆ ತಿಳಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ ಉಳಿಪ್ಪಾಡಿಗುತ್ತು ಗಾಯಾಳುಗಳು ದಾಖಲಾಗಿರುವ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮೃತರಾದ ತಿಲಕ ಅವರ ಮೃತದೇಹ ಇರಿಸಲಾದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಘಟನೆಯ ಕುರಿತು ಪಾಣೆಮಂಗಳೂರು ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    1700 ವರ್ಷಗಳ ಬಳಿಕ ಸಾಂಟಾ ಕ್ಲಾಸ್ ನಿಜ ಮುಖ ಅನಾವರಣ..!

    Published

    on

    ಮಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬ ಬರಲಿದ್ದು, ಹಬ್ಬಕ್ಕೆ ಕಳೆ ತರಲು ಉಡುಗೊರೆ ಸಹಿತವಾಗಿ ಸಾಂಟಾ ಕ್ಲಾಸ್ ಕೂಡ ಬರಲಿದ್ದಾನೆ. ಮಕ್ಕಳಿಗೆ ತುಂಬಾ ಅಚ್ಚುಮೆಚ್ಚಿನ ಕ್ರಿಸ್ಮಸ್ ಅಜ್ಜನಾಗಿ ಕಾಣಿಸಿಕೊಳ್ಳುವ ಈ ಸಾಂಟಾ ಕ್ಲಾಸ್ ನಿಜಕ್ಕೂ ಇದ್ರಾ? ಅಥವಾ ಇದೊಂದು ಕಾಲ್ಪನಿಕ ವ್ಯಕ್ತಿಯಾ ಎಂಬ ಗೊಂದಲ ಹಲವರಲ್ಲಿ ಇರಬಹುದು. ಆದ್ರೆ ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸವನ್ನು ವಿಜ್ಞಾನಿಗಳು ಮಾಡಿದ್ದು, ನಿಜವಾದ ಸಾಂಟಾಕ್ಲಾಸ್ ಹೇಗಿದ್ದ ಎಂಬ ಚಿತ್ರವನ್ನು ರಚಿಸಿದ್ದಾರೆ.

    ಮೈರಾದ ಸೇಂಟ್‌ ನಿಕೋಲ್ಸನ್ ಎಂಬ ವ್ಯಕ್ತಿಯೇ ಈ ಸಾಂಟಾ ಕ್ಲಾಸ್‌ ಎಂಬುದನ್ನು ವಿಜ್ಞಾನಿಗಳು ಅನಾವರಣ ಮಾಡಿದ್ದಾರೆ. 1700 ವರ್ಷಗಳ ಬಳಿಕ ಇದೇ ಮೊದಲ ಬಾರಿ ಸಾಂಟಾ ಕ್ಲಾಸ್ ಯಾರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಕ್ರೈಸ್ತ ಸಮುದಾಯದವರಾದ ನಿಕೋಲ್ಸನ್‌ , ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಿದ್ದು, ಬಳಿಕ ಇದು ಕ್ರಿಸ್‌ಮಸ್ ಜೊತೆಗೆ ಸಂಬಂಧ ಹೊಂದಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಕಾರಣದಿಂದ ಮಕ್ಕಳು ಅವರನ್ನು ತುಂಬಾ ಇಷ್ಟ ಪಡುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.  ಮಿರರ್ ವರದಿಯ ಸೇಂಟ್ ನಿಕೋಲ್ಸನ್ ಅವರ ತಲೆ ಬುರುಡೆಯನ್ನು ವಿಧಿ ವಿಜ್ಞಾನದ ಮೂಲಕ ಅಂದಾಜಿಸಿ ಅವರ ಮುಖವನ್ನು ಚಿತ್ರಿಸಲಾಗಿದೆ. ಪ್ರಪಂಚದಾದ್ಯಂತ ಅಪಾರ ಜನಪ್ರಿಯತೆ ಹೊಂದಿರುವ ಸೇಂಟ್ ನಿಕೋಲ್ಸನ್‌ ಅವರ ಬಗ್ಗೆ ಯಾವುದೇ ನಿರ್ದಿಷ್ಟ ವಿವರಣೆ ಇಲ್ಲದೇ ಇದ್ರೂ ಜನರು ಅವರ ಅಸಲಿ ಮುಖವನ್ನು ನೋಡುವಂತೆ ವಿಜ್ಞಾನಿಗಳು ಮಾಡಿದ್ದಾರೆ ಎನ್ನಲಾಗಿದೆ.


    ಈ ವರದಿಯ ಪ್ರಕಾರ, ಅಧ್ಯಯನದ ಮುಖ್ಯಸ್ಥ ಸಿಸೆರೋ ಮೊರೆಸ್ ಅವರು ನಿಕೋಲ್ಸನ್ ಅವರ ತಲೆ ತುಂಬಾ ಬಲವಾಗಿತ್ತು ಎಂದು ತೋರಿಸುತ್ತದೆ ಎಂದಿದ್ದಾರೆ. ಈ ಮುಖವು 1823 ರಲ್ಲಿ ‘ಎ ವಿಸಿಟ್ ಫ್ರಮ್‌ ಸೇಂಟ್ ನಿಕೋಲ್ಸನ್‌’ ಎಂಬ ಕವಿತೆಯಲ್ಲಿ ಮುದ್ರಿತವಾದ ಮುಖಕ್ಕೆ ಹೊಂದಿಕೆಯಾಗುತ್ತದೆ ಎಂದಿದ್ದಾರೆ. ಈ ಕವಿತೆಯಲ್ಲಿ ದಪ್ಪ ಗಡ್ಡದ ಮುಖವು ಸಾಂಟಾ ಕ್ಲಾಸ್ ಅವರನ್ನು ನೆನಪಿಸುತ್ತದೆ.

    ಸಾಂಟಾ ಕ್ಲಾಸ್ ಬಗ್ಗೆ ಅಧ್ಯಯನ ನಡೆಸ್ತಾ ಇರುವುದು ಹೊಸದೇನು ಅಲ್ಲ. 1950 ರಲ್ಲಿ ಲುಯಿಗಿ ಮಾರ್ಟಿನೋ ಎಂಬವರು ಸೇಂಟ್ ನಿಕೋಲ್ಸನ್‌ ಅವರನ್ನು ಅಧ್ಯಯನ ಮಾಡಲು ಆರಂಭಿಸಿದ್ದರು. ಈಗ ಸಿಸೆರೋ ಮೋರಸ್ ಅವರು ಲುಯಿಗಿ ಮಾರ್ಟಿನೋ ಅವರು ಸಂಗ್ರಹಿಸಿದ ಡೇಟಾವನ್ನು ಬಳಿಸಿಕೊಂಡು 3ಡಿ ಯಲ್ಲಿ ಅವರ ತಲೆಯನ್ನು ಮರು ನಿರ್ಮಿಸಿದ್ದಾರೆ. ನಂತರ ಎಸ್ಪಾಟಿಕ್ಸ್‌ ಎಕ್ಸ್‌ಟೆನ್ಶನ್ ಸಹಾಯದಿಂದ ಮುಖದ ಬಾಹ್ಯ ರೇಖೆಯನ್ನು ರಚಿಸಿ ರೂಪ ನೀಡಿದ್ದಾರೆ.

    Continue Reading

    LATEST NEWS

    2025 ರ ಕ್ಯಾಲೆಂಡರ್ ನೋಡಿ ಭಯ ಪಟ್ಟ ಜನ…! ಏನು ಈ WTF..?

    Published

    on

    ಮಂಗಳೂರು : 2024 ರ ಕ್ಯಾಲೆಂಡರ್ ಬದಲಾಯಿಸಿ 2025 ರ ಕ್ಯಾಲೆಂಡರ್ ಗೋಡೆಯಲ್ಲಿ ನೇತು ಹಾಕುವ ಸಮಯ ಬಂದೇ ಬಿಟ್ಟಿದೆ. ಹೊಸ ವರ್ಷದಲ್ಲಿ ಹೊಸದಾಗಿ ಏನು ಮಾಡುವುದು ? ಎಲ್ಲಿ ಹೋಗುವುದು ? ಹೇಗೆ ಹೊಸ ವರ್ಷವನ್ನು ಹೇಗೆ ಎಂಜಾಯ್ ಮಾಡುವುದು ? ಹೀಗೆ ಹಲವು ಪ್ಲ್ಯಾನ್‌ಗಳು ಕೂಡ ಆರಂಭವಾಗಿದೆ. ಆದ್ರೆ, ಸಾಮಾಜಿಕ ಜಾಲತಾಣದಲ್ಲಿ ಹೊಸ ವರ್ಷದ ಆರಂಭದ ಬಗ್ಗೆ ಆತಂಕಕಾರಿ ವಿಚಾರಗಳು ಚರ್ಚೆ ಆಗುತ್ತಿವೆ. ಹೊಸ ವರ್ಷದ ಆರಂಭ ಬುಧವಾರ ಆಗುತ್ತಿರುವುದೇ ಇದಕ್ಕೆ ಕಾರಣ ಅಂತ ಚರ್ಚೆಗಳು ನಡಿತಾ ಇದೆ.

    ಹೊಸ ವರ್ಷದ ಆರಂಭ ಅಂದ ಮೇಲೆ ಎಲ್ಲರಿಗೂ ಹೊಸತೊಂದು ಖುಷಿ ಕೊಡುವ ದಿನದ ಆರಂಭ ಮಾತ್ರವಲ್ಲ, ಪೂರ್ತಿ ವರ್ಷ ಚೆನ್ನಾಗಿ ಸಾಗಲಿ ಎಂದು ಒಬ್ಬರಿಗೊಬ್ಬರು ಹಾರೈಸುವ ದಿನ ಕೂಡ ಹೌದು. ಆದ್ರೆ, 2025 ರ ಆರಂಭದ ಕುರಿತಾಗಿ ದೊಡ್ಡ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಮೊಬೈಲ್ ಕ್ಯಾಲೆಂಡರ್ ಪ್ರಕಾರವಾಗಿ ಮೊದಲ ಮೂರು ದಿನಗಳನ್ನು WTF ಎಂದು ಕರೆಯಲಾಗುತ್ತದೆ. ಬುಧವಾರ ಗುರುವಾರ ಶುಕ್ರವಾರ ಈ ಮೊದಲ ಮೂರು ದಿನಗಳಲ್ಲಿ ಆರಂಭವಾಗುವ ವರ್ಷ ಸುಂದರವಾಗಿರುವುದಿಲ್ಲ ಎಂದು ಚರ್ಚೆ ನಡೆಯುತ್ತಿದೆ.

    WTF ಅಂದರೆ ಏನು ಇದರ ಭಯ ಯಾಕೆ ?

    ಎಕ್ಸ್ ಖಾತೆಯ ಬಳಕೆದಾರರೊಬ್ಬರು ಈ WTF ಮಾರ್ಕ್ ಮಾಡಿದ ಕ್ಯಾಲೆಂಡರ್‌ ಹಂಚಿಕೊಂಡು, “2025 WTF ನೊಂದಿಗೆ ಆರಂಭವಾಗುವುದಕ್ಕೆ ಚಿಂತಿಸಬೇಕೇ” ಎಂದು ಬರೆದಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಸುಮಾರು 11 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ ಮತ್ತು ಇದರ ಅರ್ಥ ಏನು ಎಂದು ಜನರು ಸರ್ಚ್ ಇಂಜಿನ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ, ಮುಂದಿನ ವರ್ಷ ಆಶಾದಾಯಕವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಕೆಲವರು ಕಳೆದ ವರ್ಷಕ್ಕಿಂತ ಕೆಟ್ಟದಾಗಿರಲಿದೆ ಎಂದರೆ, ಇನ್ನೂ ಕೆಲವರು ಚಿಂತಿಸಬೇಕಾಗಿದೆ ಎಂದು ಹೇಳಿದ್ದಾರೆ.

    2020 ರ ಪುನಾರಾವರ್ತನೆಯ ಭಯ..!

    ಇದು ಇಷ್ಟೊಂದು ವೈರಲ್ ಆಗಲು ಕಾರಣವಾಗಿದ್ದು 2020 ರ ಆರಂಭ ಬುಧವಾರದಿಂದಲೇ ಆಗಿತ್ತು ಎಂಬುದು . 2020ರ ಆರಂಭದಲ್ಲೇ ಕೋವಿಡ್‌ 19 ಜಗತ್ತಿಗೆ ಅಪ್ಪಳಿಸಿತ್ತು. ಆ ವರ್ಷ ಜಗತ್ತಿನ ಜನ ಏನೆಲ್ಲಾ ಸಂಕಷ್ಟ ಪಟ್ಟಿದ್ದರು ಎಂಬುದು ಮರೆಯುವಂತಿಲ್ಲ. ಹೀಗಾಗಿ ಈ ವರ್ಷದ ಆರಂಭ ಬುಧವಾರ ಆಗುವ ಕಾರಣ ಮತ್ತೊಂದು ಸಂಕಷ್ಟ ಜಗತ್ತನ್ನು ಕಾಡಲಿದೆಯಾ ಎಂಬ ಚಿಂತೆಯನ್ನು ಜನ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    Trending