Connect with us

    sports

    IPL 2025 : ಅದೃಷ್ಟ ಪರೀಕ್ಷೆಯಲ್ಲಿ ಪಾಸಾಗುತ್ತಾರಾ ಕರ್ನಾಟಕದ ಆಟಗಾರರು!

    Published

    on

    ಮಂಗಳೂರು/ಮುಂಬೈ : ಭಾರತೀಯರು 2025ರ ಐಪಿಎಲ್ ಗಾಗಿ ಈಗಾಗಲೇ ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ನವೆಂಬರ್ 24 ಮತ್ತು 25ರಂದು ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇದರಲ್ಲಿ  ಒಟ್ಟು 1574 ಆಟಗಾರರು ಹರಾಜಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಇದೀಗ ಆಟಗಾರರ ಸಂಖ್ಯೆ 574ಕ್ಕೆ ಸೀಮಿತಗೊಳಿಸಲಾಗಿದೆ. ಈಗಾಗಲೇ ನೋಂದಾಯಿಸಿಕೊಂಡಿರುವವರ ಪಟ್ಟಿಯಲ್ಲಿ ಕರ್ನಾಟಕದ 24 ಆಟಗಾರರ ಹೆಸರು ಇದೆ.

    ಯಾರು ಈ ಆಟಗಾರರು?

    ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಕೆ.ಎಲ್ ರಾಹುಲ್ ಮನೀಷ್ ಪಾಂಡೆ, ದೇವದತ್ತ್ ಪಡಿಕಲ್, ಮಾಯಂಕ್ ಅಗರ್ವಾಲ್, ಪ್ರಸಿದ್ದ್ ಕೃಷ್ಣ ಘಟಾನುಘಾಟಿ ಆಟಗಾರರ ಜೊತೆ  ಲವ್ನಿತ್ ಸಿಸೋಡಿಯಾ, ಆರ್ ಸ್ಮರಣ್, ಎಲ್.ಆರ್.ಚೇತನ್, ಮನೋಜ್ ಭಾಂಡಗೆ, ವೈಶಾಖ್ ವಿಜಯ್ ಕುಮಾರ್, ಅಭಿಲಾಶ್ ಶೆಟ್ಟಿ, ಪ್ರವೀಣ್ ದುಬೆ, ಕೆ.ಗೌತಮ್, ಮನ್ವಂತ್ ಕುಮಾರ್, ಶ್ರೇಯಶ್ ಗೋಪಾಲ್, ಹಾರ್ದಿಕ್ ರಾಜ್, ಅಭೀನವ್ ಮನೋಹರ್, ಬಿ. ಅರ್ ಶರತ್, ಕೃಷ್ಣನ್ ಶ್ರೀಜಿತ್, ವಿದ್ವತ್ ಕಾವೇರಪ್ಪ, ದೀಪಕ್ ದೇವಾಡಿಗ, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗಡೆ, ಸಮರ್ಥ್ ನಾಗರಾಜ್ ಈ ಎಲ್ಲಾ ಆಟಗಾರರು ಐಪಿಎಲ್ ನ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

     

     

    Click to comment

    Leave a Reply

    Your email address will not be published. Required fields are marked *

    International news

    ರೋಹಿತ್ ಬಿಟ್ಟು, ಕೊಹ್ಲಿ ಆಟೋಗ್ರಾಫ್ ಪಡೆದಿದ್ದೇಕೆ ಆಸ್ಟ್ರೇಲಿಯಾ ಪ್ರಧಾನಿ ?

    Published

    on

    ಮಂಗಳೂರು/ಕ್ಯಾನ್ ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಆಲ್ಬನೀಸ್ ಅವರನ್ನು ಭೇಟಿ ಮಾಡಿತು. ಈ ವೇಳೆ ಆಸೀಸ್ ಪ್ರಧಾನಿ, ಕೊಹ್ಲಿ ಅವರ ಆಟೋಗ್ರಾಫ್ ಪಡೆದುಕೊಂಡಿದ್ದು ತುಂಬಾ ಸದ್ದು ಮಾಡಿತ್ತು.


    ಅಷ್ಟಕ್ಕೂ, ಆಂಥೋನಿ ಆಲ್ಬನೀಸ್ ಅವರು ಟೀಂ ಇಂಡಿಯಾ ನಾಯಕ ರೋಹಿತ್ ಅವರನ್ನು ಬಿಟ್ಟು ವಿರಾಟ್ ಕೊಹ್ಲಿ ಅವರ ಆಟೋಗ್ರಾಫ್ ಪಡೆದಿದ್ದೇಕೆ ಎಂಬುದನ್ನು ಸ್ವತಃ ಅವರೇ ರಿವಿಲ್ ಮಾಡಿದ್ದಾರೆ.

    ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ರಹಸ್ಯ ಬಯಲು ! 

    ಈ ಬಗ್ಗೆ ಮಾತನಾಡಿರುವ ಆಲ್ಬನೀಸ್,’ನನ್ನ ಖಾಸಗಿ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಅವರು ಕೊಹ್ಲಿಯ ಬಗ್ಗೆ ಎಷ್ಟು ಭಾವೋದ್ರಿಕೃತರಾಗಿದ್ದಾರೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ನಾನು ಕೊಹ್ಲಿಯನ್ನು ಭೇಟಿಯಾಗುತ್ತೇನೆ ಎಂದು ಹೇಳಿದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಈಗಾಗೀ ಕೊಹ್ಲಿಯ ಆಟೋಗ್ರಾಫ್ ಕೊಡಿಸಲು ಅವರು ನನ್ನಲ್ಲಿ ಹೇಳಿದ್ದಾರೆ. ಎಂದು ತಿಳಿಸಿದರು.

    ಇನ್ನೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಎರಡನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯಾವು ಶುಕ್ರವಾರದಿಂದ ಶುರುವಾಗಲಿದೆ.

    Continue Reading

    International news

    ಭಾರತ vs ಆಸ್ಟ್ರೇಲಿಯಾ; 2ನೇ ಟೆಸ್ಟ್ ಗೆ ಭಾರತದ ಪ್ಲೇಯಿಂಗ್-11

    Published

    on

    ಮಂಗಳೂರು/ಅಡಿಲೇಡ್: ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಟೆಸ್ಟ್ ನ ಎರಡನೇ ಪಂದ್ಯ ಡಿಸೆಂಬರ್ 6 ರಿಂದ ಅಡಿಲೇಡ್ ನಲ್ಲಿ ನಡೆಯಲಿದೆ.


    ಎರಡನೇ ಪಂದ್ಯಕ್ಕೂ ಮೊದಲು ನಿನ್ನೆ, ಟೀಂ ಇಂಡಿಯಾ ಮತ್ತು ಪ್ರೈಮ್ ಮಿನಿಸ್ಟರ್ ಇಲೆವೆನ್ ತಂಡದ ಅಭ್ಯಾಸ ಪಂದ್ಯ ನಡೆಸಲಾಯಿತು. ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳಿಂದ ಪ್ರೈಮ್ ಮಿನಿಸ್ಟರ್ ಇಲೆವೆನ್ ತಂಡವನ್ನು ಸೋಲಿಸಿದೆ.
    ಈ ಅಭ್ಯಾಸ ಪಂದ್ಯದಿಂದ ಟೀಂ ಇಂಡಿಯಾದ ಕೆಲವು ಆಟಗಾರರ ಸ್ಥಾನಗಳನ್ನು ನಿರ್ಧರಿಸಲಾಗಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಗಿಲ್ ಹೆಸರು ಕೂಡ ಸೇರಿದೆ.

    ಹರ್ಷಿತ್ ರಾಣಾ ಸ್ಥಾನ ಬಹುತೇಕ ಖಚಿತ :
    ಅಭ್ಯಾಸ ಪಂದ್ಯದಲ್ಲಿ ಮಾರಕ ಬೌಲಿಂಗ್ ಪ್ರದರ್ಶನ ನೀಡಿರುವ ಅಲ್ ರೌಂಡರ್ ಹರ್ಷಿತ್ ರಾಣಾ ಸ್ಥಾನ ಬಹುತೇಕ ಖಚಿತವಾಗಿದೆ. 6 ಓವರ್ ಗಳಲ್ಲಿ 44 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೂ ರಾಣಾ ಅದ್ಬುತ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ಪಡೆದರು.

    ಇದನ್ನೂ ಓದಿ: BBK11: ಶೋಭಾ ಶೆಟ್ಟಿ ನಿರ್ಧಾರಕ್ಕೆ ಕಿಚ್ಚ ಗರಂ; ವೋಟ್ ಮಾಡಿದ ಜನರಿಗೆ ಕ್ಷಮೆ ಕೇಳಿದ ಸುದೀಪ್
    ಯಾರು ಡ್ರಾಪ್ ? ಯಾರು ಇನ್ ?
    ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಇವರಿಬ್ಬರ ಆಗಮನದಿಂದ ದೇವದತ್ ಪಡಿಕ್ಕಲ್ ಹಾಗೂ ಧ್ರುವ ಜುರೆಲ್ ರನ್ನು ಬೆಂಚ್ ನಲ್ಲಿ ಕೂರಿಸುವ ಸಾಧ್ಯತೆ ಇದೆ.

    ಸಂಭಾವ್ಯ ಭಾರತದ ಪ್ಲೇಯಿಂಗ್ 11 :

    ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಗಿಲ್, ಕೊಹ್ಲಿ, ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

    Continue Reading

    International news

    ಸ್ಪೋಟಕ ಅರ್ಧಶತಕ ಸಿಡಿಸಿದ ಆರ್‌ಸಿಬಿ ಹುಡುಗ !

    Published

    on

    ಮಂಗಳೂರು: ಯುವ ಅಲ್ ರೌಂಡರ್ 21 ವರ್ಷದ ಜೇಕಬ್ ಬೆಥಲ್ ಇಂಗ್ಲೆಂಡ್ ತಂಡದ ಭರವಸೆಯ ಆಟಗಾರ. ಈ ಬಾರಿ ಆರ್‌ಸಿಬಿಯಲ್ಲಿ ಅಬ್ಬರಿಸುವ ಸೂಚನೆ ನೀಡಿದ್ದಾರೆ. ಜೇಕಬ್ ಬೆಥಲ್ ಈ ಬಾರಿಯ ಮೆಗಾ ಹರಾಜಿನಲ್ಲಿ ಬೆಥೆಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2.6 ಕೋಟಿ ರೂ.ಗೆ ಖರೀದಿಸಿದೆ.


    ಕ್ರೈಸ್ಟ್​​ಚರ್ಚ್​​ ಹ್ಯಾಗ್ಲಿ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಯುವ ದಾಂಡಿಗ ಜೇಕಬ್ ಬೆಥೆಲ್ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಚೊಚ್ಚಲ ಪಂದ್ಯದಲ್ಲೇ ಸಿಡಿಲಬ್ಬರದ ಅರ್ಧಶತಕ ಸಿಡಿಸುವ ಮೂಲಕ ಎಂಬುದು ವಿಶೇಷ.

    ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವ ಎಡಗೈ ದಾಂಡಿಗ ಬೆಥೆಲ್ ಸ್ಪೋಟಕ ಇನಿಂಗ್ಸ್ ಆಡಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​​ಗೆ ಒತ್ತು ನೀಡಿದ ಜೇಕಬ್ ಬೆಥೆಲ್ ಕೇವಲ 37 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್​​​ಗೊಂದಿಗೆ ಅಜೇಯ 50 ರನ್ ಬಾರಿಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಚೊಚ್ಚಲ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಇಂಗ್ಲೆಂಡ್ ಬ್ಯಾಟರ್ ಎಂಬ ದಾಖಲೆ ಬೆಥೆಲ್ ಪಾಲಾಯಿತು.

    ಇದೀಗ 16 ವರ್ಷಗಳ ಬಳಿಕ ಜೇಕಬ್ ಬೆಥೆಲ್ 135.13ರ ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟ್ ಬೀಸಿ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಚೊಚ್ಚಲ ಟೆಸ್ಟ್​​ ಪಂದ್ಯದಲ್ಲೇ ಸ್ಪೋಟಕ ಅರ್ಧಶತಕ ಸಿಡಿಸಿದ ಇಂಗ್ಲೆಂಡ್​ನ ಮೊದಲ ಬ್ಯಾಟರ್ ಹಾಗೂ ವಿಶ್ವದ 2ನೇ ಬ್ಯಾಟ್ಸ್​​ಮಮನ್ ಎಂಬ ವಿಶ್ವ ದಾಖಲೆಯನ್ನು ಬೆಥೆಲ್ ತಮ್ಮದಾಗಿಸಿಕೊಂಡಿದ್ದಾರೆ.
    ಈ ಮೂಲಕ ಆರ್ ಸಿಬಿಯ ಅಭಿಮಾನಿಗಳಿಗೆ ಹೊಸ ಬರವಸೆ ಮೂಡಿದೆ.

    Continue Reading

    LATEST NEWS

    Trending