ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಪತ್ನಿಗೆ ಕೊರೊನಾ ಪಾಸಿಟಿವ್..!!
ದೆಹಲಿ: ಭೂಗತ ಜಗತ್ತಿನ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂಗೆ ಕೊರೊನಾ ಅಟ್ಯಾಕ್ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ.
ಮೋಸ್ಟ್ ವಾಂಟೆಡ್ ಅಪರಾಧಿಗೆ ಸೋಂಕು ಖಚಿತವಾಗುತ್ತಿದ್ದಂತೆ ಆತನ ಸಹಚರರು ಮತ್ತು ಇತರೆ ಸಿಬ್ಬಂದಿ ಕ್ವಾರಂಟೈನ್ ಆಗಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಇನ್ನು ದಾವೂದ್ ಇಬ್ರಾಹಿಂ ಮಾತ್ರವಲ್ಲದೆ, ಆತನ ಪತ್ನಿ ಮಹಜಬೀನ್ಗೂ ಸಹ ಕೊವಿಡ್ ಸೋಂಕು ಅಂಟಿಕೊಂಡಿದೆ ಎನ್ನಲಾಗಿದೆ.
ಸದ್ಯದ ಮೂಲಗಳ ಪ್ರಕಾರ, ದಾವೊದ್ ಮತ್ತು ಮತ್ತು ಪತ್ನಿಯನ್ನು ಕರಾಚಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ಥಾನದ ಕರಾಚಿ ನಗರದ ರಹಸ್ಯ ಸ್ಥಳದಲ್ಲಿ ನೆಲೆಸಿರುವ ದಾವೂದ್ ನನ್ನು ಸೋಂಕು ಪರೀಕ್ಷೆಗೆ ಒಳಪಡಿಸಿದ್ದು ಪಾಸಿಟಿವ್ ಆಗಿರುವುದಾಗಿ ಅಲ್ಲಿನ ಮಾಧ್ಯಮಗಳು ಹೇಳಿಕೊಂಡಿವೆ. ಆದರೆ, ಪಾಕಿಸ್ಥಾನ ಸರಕಾರ ಈ ಸುದ್ದಿಯನ್ನು ದೃಢಪಡಿಸಿಲ್ಲ.
ಸರ್ಕಾರದ ಉನ್ನತ ಮೂಲಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ದಾವೊದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ.
ಆತನಿಗೆ ಪಾಕ್ ಮಿಲಿಟರಿ ಬೆಂಗಾವಲಾಗಿ ನಿಂತಿದೆ. ಇದೀಗ, ಪಾಕಿಸ್ತಾನದ ಕರಾಚಿಯಲ್ಲಿ ಕೊರೊನಾ ವೈರಸ್ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.
ಇದರ ಪರಿಣಾಮ ದಾವೊದ್ ಇಬ್ರಾಹಿಂ ಮತ್ತು ಆತನ ಪತ್ನಿಗೆ ಸೋಂಕು ತಗುಲಿದೆ. ಮಿಲಿಟರಿ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವಿಷಯ ಸೋರಿಕೆ ಆಗ್ತಿದೆ.
ಕರಾಚಿಯಲ್ಲಿ ಭಾರೀ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳ ಹೆಚ್ಚುತ್ತಿದ್ದು ನಿಯಂತ್ರಣ ಅಸಾಧ್ಯ ಅನ್ನುವಷ್ಟರ ಮಟ್ಟಿಗೆ ತಲುಪಿದೆ.
ದಾವೂದ್ ಇಬ್ರಾಹಿಂ ಇಬ್ರಾಹಿಂ 1993ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿಯಾಗಿದ್ದು ಭಾರತ ಸರಕಾರ ಆತನನ್ನು ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಸೇರಿಸಿದೆ.
ದಾವೊದ್ ಇಬ್ರಾಹಿಂ ಮತ್ತು ಆತನ ಕುಟುಂಬ ಪಾಕಿಸ್ತಾನದಲ್ಲಿ ತಲೆಮರಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವೂ ಅನೇಕ ಸಾಕ್ಷ್ಯಗಳನ್ನು ಒದಗಿಸಿದೆ.
ಆದರೂ ಪಾಕಿಸ್ತಾನ ಮಾತ್ರ ದಾವೊದ್ ಕುರಿತಾದ ಯಾವ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ.
ಭೂಗತ ಪಾತಕಿಗೆ ದಾವೊದ್ಗೆ ಮೊದಲ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ದಾವೊದ್ ಸಂಪರ್ಕದಿಂದ ಆತನ ಪತ್ನಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ.
ಬಳಿಕ ಪರೀಕ್ಷೆಗೆ ಒಳಪಡಿಸದಾಗ ಕೊರೊನಾ ತಗುಲಿರುವುದು ಖಚಿತವಾಗಿದೆ. ದಾವೊದ್ ಹಾಗೂ ಪತ್ನಿಗೆ ಸೋಂಕು ದೃಢಪಟ್ಟ ಬಳಿಕ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆತಂಕ ಹೆಚ್ಚಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಮನೆ ಕೆಲಸಗಾರರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಮೂಲಗಳು ಹೇಳಿದೆ.
ದಾವೂದ್, 1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್. ಕಳೆದ ಹಲವು ದಿನಗಳಿಂದ ದಾವೊದ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಲಾಗಿತ್ತು.
ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಹರಿದಾಡಿತ್ತು.