Connect with us

  LATEST NEWS

  ಬಿಜೆಪಿಯ ಶಿಸ್ತನ್ನು ಡಿಕೆಶಿ ಕಲಿಯಲಿ: ಪ್ರಮೋದ್‌ ಮಧ್ವರಾಜ್‌

  Published

  on

  ಉಡುಪಿ: ಬಿಜೆಪಿಯಲ್ಲಿ ಶಿಸ್ತು ಇದೆ. ಕಾಂಗ್ರೆಸ್‌ನ ವೇದಿಕೆಗಳಲ್ಲಿ ಜನಜಂಗುಳಿ ಇರುತ್ತದೆ. ಬಿಜೆಪಿ ವೇದಿಕೆಯಲ್ಲಿ ಕೆಲವೇ ಕೆಲವು ಜನ ಕುಳಿತುಕೊಳ್ಳುತ್ತಾರೆ.

  ಇದು ಬಿಜೆಪಿ ಸಂಪ್ರದಾಯ. ಅದನ್ನು ಡಿಕೆಶಿ ಕಲಿಯುವುದು ಒಳ್ಳೆಯದು ಎನ್ನುವುದನ್ನು ಪುಕ್ಕಟ್ಟೆ ಸಲಹೆ ಕೊಡುತ್ತೇನೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.


  ಉಡುಪಿ ಭೇಟಿ ವೇಳೆ ಬಿಜೆಪಿಯಲ್ಲಿ ಪ್ರಮೋದ್ ಮಧ್ಚರಾಜ್ ಗೆ ವೇದಿಕೆ ಸಿಗುವುದಿಲ್ಲ ಎಂಬ ಡಿಕೆಶಿ ಲೇವಡಿಗೆ ಉತ್ತರಿಸಿದ ಮಧ್ವರಾಜ್ ಕಾಂಗ್ರೆಸ್ ನ ಸಂಪ್ರದಾಯಕ್ಕೂ ಬಿಜೆಪಿ ಸಂಪ್ರದಾಯಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಕಾಂಗ್ರೆಸ್ ವೇದಿಕೆಗಳಲ್ಲಿ ಜನಜಂಗುಳಿ ಇರುತ್ತದೆ…ಎಲ್ಲರೂ ವೇದಿಕೆಗೆ ಹತ್ತುವವರೇ ಇರುವುದು.

  ಬಿಜೆಪಿಯಲ್ಲಿ ಹಾಗಿಲ್ಲ, ಶಿಸ್ತಿದೆ. ಬಿಜೆಪಿಯಲ್ಲಿ ಮಂತ್ರಿ, ಶಾಸಕ, ಸಂಸದರು ಕೂಡಾ ಕೆಳಗೆ ಕುಳಿತು ಕೊಳ್ಳುತ್ತಾರೆ. ಬಿಜೆಪಿಯ ಸಂಪ್ರದಾಯವನ್ನು ಡಿಕೆ ಶಿವಕುಮಾರ್ ಕಲಿಯೋದು ಒಳ್ಳೆಯದು. ಅವರಿಗೆ ಪುಕ್ಕಟೆ ಸಲಹೆ ಕೊಡುತ್ತೇನೆ.

  ವೇದಿಕೆ ಹುಡುಕಿಕೊಂಡು ಹೋಗುವ ಜಾಯಮಾನ ನನ್ನದಲ್ಲ. ಬಿಜೆಪಿಗೆ ಕಾರ್ಯಕರ್ತನಾಗಿ ಸೇರಿದ್ದೇನೆ, ಕಾರ್ಯಕರ್ತನೊಟ್ಟಿಗೆ ಕುಳಿತುಕೊಳ್ಳುತ್ತೇನೆ. ಇದರಲ್ಲಿ ನನಗೆ ಯಾವ ಮುಜುಗರ, ಬೇಸರ ಇಲ್ಲ ಎಂದಿದ್ದಾರೆ.
  ನಾನು ಪೂರ್ವ ನಿರ್ಧಾರ ಇಲ್ಲದೇ ಬಿಜೆಪಿಗೆ ಸೇರ್ಪಡೆ ಆಗಿದ್ದೇನೆ. ಸ್ಥಳೀಯ ಕಾರ್ಯಕರ್ತರ ವಿಶ್ವಾಸ ಪಡೆಯದೆ ಬಿಜೆಪಿ ಯಾರನ್ನು ಸೇರಿಸಿಕೊಳ್ಳುವುದಿಲ್ಲ. ಆದರೆ ಕಾಂಗ್ರೆಸ್ ಗೆ ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು.

  ನನ್ನ ಬೆಂಬಲಿಗರಲ್ಲಿ ಯಾರಿಗೆಲ್ಲಾ ಬಿಜೆಪಿ ಸೇರ್ಪಡೆಗೆ ಆಸಕ್ತಿ ಇದೆ ಕೇಳಿಲ್ಲ. ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರು ಪರಸ್ಪರ ವಿರೋಧಿಗಳಾಗಿರುತ್ತಾರೆ.

  ಯಾರನ್ನೂ ಬಿಜೆಪಿ ಸೇರಲು ಬಲವಂತ ಮಾಡುವುದಿಲ್ಲ. ಸೇರ್ಪಡೆಗೂ ಮುನ್ನ ಕಾರ್ಯಕರ್ತರ ಷರತ್ತುಗಳನ್ನು ಕೇಳಬೇಕಾಗುತ್ತದೆ ಎಂದರು.

  1 Comment

  1 Comment

  1. ಶೌಕತ್ ಅಲಿ

   23/05/2022 at 6:36 AM

   ಮಧ್ವರಾಜ್ ರವರೇ ನೀವು ಬಿಜೆಪಿಗೆ ಹೋಗಿದ್ದೀರಲ್ವ ನೀವು ಮೊದಲು ಕಲಿಯಿರಿ. ತಾಯಿ ಮಗ ಕಾಂಗ್ರೆಸ್ ನಲ್ಲಿ ಅಧಿಕಾರ ಅನುಭವಿಸಿ ಪಕ್ಷ ಸಂಕಷ್ಟದಲ್ಲಿರುವಾಗ ಪಕ್ಷಕ್ಕೆ ದ್ರೋಹ ಮಾಡಿ ಹೋಗುವವರಿಂದ ಉಪದೇಶ ಅಗತ್ಯವಿಲ್ಲ ತಾಯಿ ಮಗನ ಊಸರವಳ್ಳಿ ಸ್ವಭಾವ ಗೊತ್ತಿರುವವರು ಯಾವ ಪಕ್ಷದವರೂ ಹತ್ತಿರ ಮಾಡಲಿಕ್ಕಿಲ್ಲ. ಇಂತಹ ನಾಲಾಯಕ್ ಗಳಿಂದ ಬಿಟ್ಟಿ ಉಪದೇಶ.

  Leave a Reply

  Your email address will not be published. Required fields are marked *

  LATEST NEWS

  ಬಜೆಟ್ 2024: ಮೊದಲ ಬಾರಿಗೆ ಉದ್ಯೋಗ ಹುಡುಕುವವರಿಗೆ ಬಂಪರ್ ಉಡುಗೊರೆ.!

  Published

  on

  Union Budget 2024 : ಸರ್ಕಾರದ 9 ಆದ್ಯತೆಗಳಲ್ಲಿ ಒಂದು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ. ಇದರ ಅಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಾಗಿರುವವರಿಗೆ ದೊಡ್ಡ ಸಹಾಯ ದೊರೆಯಲಿದೆ. ಔಪಚಾರಿಕ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರದ ವತಿಯಿಂದ ನೀಡಲಾಗುವುದು.

  ಈ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಗರಿಷ್ಠ ಮೊತ್ತ 15 ಸಾವಿರ ರೂ. ಇಪಿಎಫ್​ಒನಲ್ಲಿ ನೋಂದಾಯಿಸಲ್ಪಟ್ಟವರು ಈ ಭತ್ಯೆ ಪಡೆಯಲಿದ್ದಾರೆ. ಅರ್ಹತೆಯ ಮಿತಿಯು ತಿಂಗಳಿಗೆ 1 ಲಕ್ಷ ರೂ. ಇದರಿಂದ 2.10 ಕೋಟಿ ಯುವಕರಿಗೆ ಅನುಕೂಲವಾಗಲಿದೆ.

  ಉದ್ಯೋಗ, ಕೌಶಲ್ಯ ತರಬೇತಿಗೆ ಸಂಬಂಧಿಸಿದ 5 ಯೋಜನೆಗಳಿಗೆ ₹2 ಸಾವಿರ ಕೋಟಿ

  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಭಾರತದ ಆರ್ಥಿಕತೆಯ ಬೆಳವಣಿಗೆಯು ಅತ್ಯುತ್ತಮವಾಗಿ ಮುಂದುವರಿದಿದೆ. ಭಾರತದ ಹಣದುಬ್ಬರವು ಸ್ಥಿರವಾಗಿದೆ, 4% ಗುರಿಯತ್ತ ಸಾಗುತ್ತಿದೆ. ಬಡವರು, ಯುವಕರು, ಮಹಿಳೆಯರು, ರೈತರಂತಹ ಪ್ರಮುಖ ವರ್ಗಗಳನ್ನು ಕೇಂದ್ರೀಕರಿಸುವ ಪ್ರಯತ್ನ ಮಾಡಲಾಗುತ್ತಿದೆ. ಉದ್ಯೋಗ, ಕೌಶಲ್ಯ, ಎಂಎಸ್‌ಎಂಇ, ಮಧ್ಯಮ ವರ್ಗದವರಿಗೆ ನಿರಂತರ ಗಮನ ನೀಡಲಾಗುತ್ತಿದೆ. ಉದ್ಯೋಗ ಮತ್ತು ಕೌಶಲ್ಯ ತರಬೇತಿಗೆ ಸಂಬಂಧಿಸಿದ 5 ಯೋಜನೆಗಳಿಗೆ 2 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಹೇಳಿದರು.

  Continue Reading

  LATEST NEWS

  ಮಳೆ ಆರ್ಭಟ; ಕೃಷ್ಣೆಗೆ ಭಾಗಿನ ಅರ್ಪಿಸಲು ಹೋಗಿ ಯುವಕ ನೀರು ಪಾ*ಲು

  Published

  on

  ಮಳೆ ಬಂದ್ರೆ ಇಳೆಗೆ ಜೀವ ಕಳೆ. ಅದೇ ಮಳೆ ರೌದ್ರನರ್ತನ ಮೆರೆದ್ರೆ ಸಾ*ವು-ನೋವಿನ ಸೆಲೆ. ರಾಜ್ಯದ ಅಷ್ಟ ದಿಕ್ಕುಗಳಲ್ಲೂ ಅಬ್ಬಿರಿಸಿ ಬೊಬ್ಬರಿಯುತ್ತಿರೋ ವರುಣ ಸಾ*ವು ನೋವಿನ ಸಂಕಷ್ಟಗಳ ಸರಮಾಲೆಗೆ ಸಾಕ್ಷಿಯಾಗಿದ್ದಾನೆ.

  ಕೃಷ್ಣಾ ನದಿಗೆ ಭಾಗಿನ ಅರ್ಪಿಸಲು ಹೋದ ಯುವಕ ಸಾ*ವು

  ಕೃಷ್ಣಾ ನದಿಯ ಹಿನ್ನೀರಿನಲ್ಲಿ ಭಾಗಿನ ಅರ್ಪಿಸಲು ಹೋದ ಯುವಕ ನೀರುಪಾ*ಲಾಗಿರೋ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.

  ಈಜಲು ಬರದ ಹಿನ್ನಲೆ 28 ವರ್ಷದ ಯುವಕ ರೋಹಣ ಪಾಟೀಲ ಆಯತಪ್ಪಿ ನೀರಿಗೆ ಬಿದ್ದು ಸಾ*ವನ್ನಪ್ಪಿದ್ದಾನೆ. ಸ್ಥಳೀಯರ ಸಹಾಯದಿಂದ ಬೋಟ್ ಮೂಲಕ ರೋಹಣ ಪಾಟೀಲ ಮೃ*ತದೇಹ ಹೊರ ತೆಗೆಯಲಾಗಿದೆ.

  Continue Reading

  LATEST NEWS

  ಕೇಂದ್ರ ಬಜೆಟ್ 2024 : ಗಮನ ಸೆಳೆದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೀರೆ

  Published

  on

  ಮಂಗಳೂರು / ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಕೇಂದ್ರ ಬಜೆಟ್ 2024 ಅನ್ನು ಮಂಡಿಸಲಿದ್ದಾರೆ.  ಪ್ರತೀ ವರ್ಷದಂತೆ ಈ ವರ್ಷವೂ ಅವರ ಸೀರೆ ಗಮನ ಸೆಳೆದಿದೆ. ಅವರು ಮೆಜೆಂಟಾ ಮತ್ತು ಗೋಲ್ಡ್ ಬಾರ್ಡರ್ ಹೊಂದಿರುವ ಬಿಳಿ ಚೆಕ್ ಸೀರೆಯನ್ನು ಉಟ್ಟಿದ್ದಾರೆ.


  ಸತತ ಏಳನೇ ಬಜೆಟ್ ಮಂಡಿಸುತ್ತಿರುವ ಮೊದಲ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಹೊರಹೊಮ್ಮಿದ್ದಾರೆ. ಇದು ಭಾರತದ ಇತಿಹಾಸದ ಪುಟ ಸೇರಿದೆ.

  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಕೈಮಗ್ಗ ಸೀರೆ ಸಂಗ್ರಹ ಅಧಿಕ. ಹೀಗಾಗಿ ಇದು ಎಲ್ಲರ ಗಮನ ಸೆಳೆಯುತ್ತದೆ. ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2024 ಅನ್ನು ಮಂಡಿಸಲು ಸಂಸತ್ತಿಗೆ ತೆರಳುತ್ತಿದ್ದಾಗ,  ತಮ್ಮ ತಂಡದೊಂದಿಗೆ ಫೋಟೋಗೆ ಫೋಸ್ ನೀಡಿದರು. ಅವರು ಚೌಕಾಕಾರದ ಚೆಕ್ ಮತ್ತು ಚಿನ್ನದ ಕಸೂತಿಯೊಂದಿಗೆ ಅಗಲವಾದ ಮೆಜೆಂಟಾ ಬಾರ್ಡರ್ ಹೊಂದಿರುವ ಆಫ್-ವೈಟ್ ಬೇಸ್ ಕೈಮಗ್ಗ ಸೀರೆಯಲ್ಲಿ ಕಂಗೊಳಿಸುತ್ತಿದ್ದರು.

  Continue Reading

  LATEST NEWS

  Trending