ಉಡುಪಿ ಕರ್ಕಶ ಬೈಕ್ ಸೈಲೆನ್ಸರ್ ನಾಶ;ಪೊಲೀಸರ ಕ್ರಮಕ್ಕೆ ಸಾರ್ವಜನಿಕರ ಶ್ಲಾಘನೆ..!
Destroyer of bike silencer; public applause for police action
ಉಡುಪಿ: ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಕರ್ಕಶವಾದ ಸೈಲೆನ್ಸರ್ ಹೊಂದಿದ ಬೈಕ್ ಸವಾರರ ಮೇಲೆ, ಉಡುಪಿ ಪೊಲೀಸರು ಕಠಿಣ ಕ್ರಮ ಕೈಗೊಂಡು ಭಾರಿ ದಂಡ ವಿಧಿಸಿದ್ದಾರೆ.
ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಬೈಕುಗಳನ್ನು ಪರಿಶೀಲಿಸಿ ಕರ್ಕಶ ಸೈಲೆನ್ಸರ್ ಗಳ ತೆರವುಗೊಳಿಸಿ ಠಾಣಾ ಮುಂಭಾಗದಲ್ಲಿ ರೋಡ್ ರೋಮಿಯೋ ಸೈಲೆನ್ಸರ್ ಗಳ ಮೇಲೆ ರೋಡ್ ರೋಲರ್ ಹರಿಸಿ ನಾಶ ಪಡಿಸಿದ್ದಾರೆ.
ಸೈಲೆನ್ಸರ್ ಬದಲಾಯಿಸಿ ಕೊಡುವ ಗ್ಯಾರೇಜು ಗಳ ಮೇಲೂ ಪೊಲೀಸರು ಕ್ರಮ ಕೈಗೊಂಡಿದ್ದು, ಶಬ್ದ ಮಾಲಿನ್ಯ ನಡೆಸುವ ಸೈಲೆನ್ಸರ್ ಅಳವಡಿಸುವ ಅಂಗಡಿಯವರ ಲೈಸೆನ್ಸ್‍ಗಳನ್ನು ರದ್ದು ಮಾಡಿದ್ದಾರೆ.ಜಿಲ್ಲೆಯಲ್ಲಿ ಪೊಲೀಸರು ಕೈಗೊಂಡ ದಿಟ್ಟ ಕ್ರಮಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.