Connect with us

    BANTWAL

    ಮುಖ್ಯ ಶಿಕ್ಷಕನಿಂದ ಕರ್ತವ್ಯ ಲೋಪ..! ವರ್ಗಾವಣೆಗೆ ಸ್ಥಳೀಯರಿಂದ ಆಗ್ರಹ

    Published

    on

    ಬಂಟ್ವಾಳ:  ಕರ್ತವ್ಯ ಲೋಪದ ಆರೋಪ, ವಿದ್ಯಾರ್ಥಿಗಳ ಮೇಲೆ ದಂಡಪ್ರಹಾರ,ಸಹಶಿಕ್ಷಕರಿಗೆ ಕಿರುಕುಳ ನೀಡಿ ಸರಕಾರಿ ಅಂಗ್ಲ ಮಾಧ್ಯಮ ಶಾಲೆಯ ಹೆಸರು ಕೆಡಿಸುವ ಪ್ರಭಾರ ಶಾಲಾ ಮುಖ್ಯ ಶಿಕ್ಷಕನೋರ್ವನನ್ನು ಕೂಡಲೇ ವರ್ಗಾವಣೆ ಮಾಡುವಂತೆ ಎಸ್‌.ಡಿ.ಎಂ.ಸಿ ಹಾಗೂ ದುರ್ಗಾ ಚಾರಿಟೇಬಲ್ ಟ್ರಸ್ಟ್ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿದ ಘಟನೆ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ನಡೆದಿದೆ.

    ಸರಕಾರಿ ಶಾಲೆ ಉಳಿಸಿ, ಬೆಳೆಸಿ ಹೋರಾಟದ ಮೂಲಕ ಶಿಕ್ಷಣ ಕ್ರಾಂತಿಯನ್ನು ಮಾಡಿ ಬಂಟ್ವಾಳ ತಾಲೂಕಿನಲ್ಲಿ ಹೆಸರುವಾಸಿಯಾಗಿರುವ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇದೀಗ ಮುಖ್ಯ ಶಿಕ್ಷಕನ ಎಡವಟ್ಟಿನಿಂದಾಗಿ , ಮಕ್ಕಳ ಸಂಖ್ಯೆಯಲ್ಲಿ ಕೊರತೆ ಉಂಟಾಗುವ ಭಯ ಸಮಿತಿಗೆ ಉಂಟು ಮಾಡಿದೆ. ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕನಿಂದ ಕೀಟಲೆ ಆರಂಭವಾಗಿದ್ದು. ವಿನಾಕಾರಣ ಮಕ್ಕಳ ಮೇಲೆ ಬಲಪ್ರಯೋಗ ಮಾಡುವುದರ ಜೊತೆ ಅಶ್ಲೀಲ ಪದಗಳನ್ನು ಬಳಸಿ ಬೈಯುವುದು ಕಂಡುಬಂದಿದ್ದು, ಮಕ್ಕಳ ಪೋಷಕರು ಶಾಲಾಭಿವೃದ್ದಿ ಸಮಿತಿಗೆ ದೂರು ನೀಡಿದ್ದು, ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬುದಾಗಿ ಸಮಿತಿಗೆ ತಿಳಿಸಿದ್ದಾರೆ.

    ಮುಂದೆ ಓದಿ..;  ಹೆಣ್ಮಕ್ಕಳು ಪದೇ ಪದೇ ತವರು ಮನೆಗೆ ಬರುತ್ತಿದ್ದರೆ ಈ ಸಮಸ್ಯೆಗಳು ಖಂಡಿತ!

    ಶಾಲಾ ಸಹಶಿಕ್ಷರಲ್ಲಿ ಪ್ರಭಾರ ಮುಖ್ಯಶಿಕ್ಷಕ ಅಸಭ್ಯವಾದ ವರ್ತನೆ, ಮಾನಸಿಕ ಕಿರುಕುಳ ನೀಡುವುದಾಗಿಯೂ ದೂರನ್ನು ನೀಡಲಾಗಿದೆ. ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಹೆಚ್ಚು ಗಮನ ಹಸರಿಸುತ್ತಾರೆ. ಪಾಠದ ಕಡೆ ಗಮನ ನೀಡದೆ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆಯಲು ಕಾರಣವಾಗಿದೆ ಎಂದು ಆರೋಪ ಕೇಳಿಬಂದಿದೆ. ಸರಿಯಾಗಿ ಪಾಠ ಮಾಡದೆ ಇರುವ ಕಾರಣಕ್ಕಾಗಿ ನಿರೀಕ್ಷಿತ ಅಂಕಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂಬುದನ್ನು ಹಾಗೂ ಶಿಕ್ಷಕನ ವರ್ತನೆಯ ಬಗ್ಗೆ ಅನೇಕ ವಿದ್ಯಾರ್ಥಿಗಳು ಶಾಲಾ ದೂರು ಪೆಟ್ಟಿಗೆಯಲ್ಲಿ ಲಿಖಿತ ರೂಪದಲ್ಲಿ ನೀಡಿದ್ದಾರೆ.

    ಶಿಕ್ಷಣಾಧಿಕಾರಿಗೆ ದೂರು

    ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯಲ್ಲಿರುವ ಪ್ರಭಾರ ಮುಖ್ಯ ಶಿಕ್ಷಕನ ಕರ್ತವ್ಯ ಲೋಪದ ಬಗ್ಗೆ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಶಾಲಾಭಿವೃದ್ದಿ ಸಮಿತಿ ಹಾಗೂ ದಡ್ಡಲಕಾಡು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ (ರಿ.) ನ ವತಿಯಿಂದ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ಶಾಲಾ ಮುಖ್ಯ ಶಿಕ್ಷಕ ರಮಾನಂದ ಎಂಬವರು ಕರ್ತವ್ಯ ಲೋಪ ಎಸಗಿದ್ದಲ್ಲದೆ, ವಿದ್ಯಾರ್ಥಿಗಳಿಗೆ ದೈಹಿಕ ದಂಡನೆ ಮತ್ತು ಸಹಶಿಕ್ಷಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು ಶಿಕ್ಷಕನನ್ನು ಕೂಡಲೇ ವರ್ಗಾವಣೆಗೊಳಿಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.  ಈ ಕುರಿತು ಯಾವುದೇ ಕ್ರಮಕೈಗೊಳ್ಳದೇ ಇದ್ದರೆ ಮುಂದಿನ ವಾರ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು  ಆಗ್ರಹಿಸಿದ್ದಾರೆ.

     

     

    Click to comment

    Leave a Reply

    Your email address will not be published. Required fields are marked *

    BANTWAL

    ಹಿರಿಯ ಸಾಮಾಜಿಕ ಮುಂದಾಳು ಉದ್ಯಮಿ ರಘು ಸಪಲ್ಯ ನಿ*ಧನ

    Published

    on

    ಮಂಗಳೂರು: ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದಲ್ಲಿ ಸಕ್ರೀಯರಾಗಿದ್ದ ಮತ್ತು ಹಲವು ದೇವಸ್ಥಾನಗಳ ಅಧ್ಯಕ್ಷರಾಗಿ, ದೇವಸ್ಥಾನಗಳ ಅಭಿವೃದ್ದಿಗೆ ಕಾರಣೀಕರ್ತರಾಗಿದ್ದ ಉದ್ಯಮಿ ರಘು ಸಪಲ್ಯ ನಿ*ಧನರಾಗಿದ್ದಾರೆ.

    ಬಂಟ್ವಾಳ ತಾಲೂಕು ಗಾಣಿಗ ಸಂಘದ ಅಧ್ಯಕ್ಷರಾಗಿ, ಸುಮಂಗಲ ಹಾಲ್ ಹಾಗೂ ಸುಮಂಗಲ ಕೋ ಅಪರೇಟ್‌ ಬ್ಯಾಂಕ್ ಸ್ಥಾಪನೆಯ ಮೂಲಕ ಸಹಕಾರಿ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ಜ್ಯೋತಿ ಬೀಡಿ ಎಂಬ ಬೀಡಿ ಉದ್ಯಮದ ಮೂಲಕ ಅನೇಕ ಬಡ ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟ ಹೆಗ್ಗಳಿಕೆ ಇವರದ್ದು. ಬಡವರಿಗೆ ಅಶಕ್ತರಿಗೆ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಕೊಡುಗೈ ಧಾನಿಯಾಗಿ ಇವರು ಗುರುತಿಸಿಕೊಂಡಿದ್ದರು.

    ಅಪಾರ ದೈವ ಭಕ್ತರಾಗಿದ್ದ ರಘು ಸಪಲ್ಯ ಅವರು ಜಿಲ್ಲೆಯಲ್ಲಿ ಮಾತ್ರವಲ್ಲದೆ ಹೊರ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗೆ ಸಹಕಾರ ನೀಡಿದ್ದರು. ನೇರ ನಡೆನುಡಿಯವರಾಗಿದ್ದರೂ ಅಜಾತ ಶತ್ರು ಎಂಬ ಹೆಸರು ಗಳಿಸಿದ್ದ ಇವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಘದ ಸ್ವಯಂ ಸೇವಕರಾಗಿ ಹೋರಾಟದಲ್ಲಿ ಭಾಗಿಯಾಗಿದ್ದರು.

    ಪಾಣೆ ಮಂಗಳೂರು ಭಯಂಕೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟ್, ಉಳಿಯ ಕ್ಷೇತ್ರ, ಅತ್ತಾವರ ಉಮಾಮಹೇಶ್ವರ ಕ್ಷೇತ್ರ, ಕೀರ್ತಿಶ್ವರ ಕ್ಷೇತ್ರ ಮಂಜೇಶ್ವರ, ಕೋದಂಡ ರಾಮ ಭಜನಾ ಮಂದಿರ ಹೀಗೆ ಹಲವಾರು ಧಾರ್ಮಿಕ ಕ್ಷೇತ್ರದಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ.

    Continue Reading

    BANTWAL

    ವಗ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್; ಹಲವರಿಗೆ ಗಾಯ

    Published

    on

    ಬಂಟ್ವಾಳ ತಾಲೂಕಿನ ವಗ್ಗದ ಸಮೀಪ ಕೊಪ್ಪಳ ಎಂಬಲ್ಲಿ ಸರ್ಕಾರಿ ಬಸ್‌ ಉರುಳಿ ಬಿದ್ದಿದ್ದು, ಹಲವರು ಗಾಯಗೊಂಡಿದ್ದಾರೆ.

    ಧರ್ಮಸ್ಥಳ ಮಂಗಳೂರು ನಡುವೆ ಸಂಚರಿಸುವ ಸರ್ಕಾರಿ ಬಸ್ ಇದಾಗಿದ್ದು, ಕೊಪ್ಪಳ ಎಂಬಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆಯ ಪಕ್ಕದ ಗುಂಡಿಗೆ ಬಸ್ ಉರುಳಿ ಬಿದ್ದಿದ್ದು ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದೆ. ತಕ್ಷಣ ಸ್ಥಳೀಯ ಯುವಕರು ಸೇರಿ ಬಸ್‌ ಒಳಗಿದ್ದ ಪ್ರಯಾಣಿಕರನ್ನು ಬಸ್‌ ನಿಂದ ಹೊರ ತೆಗೆದಿದ್ದಾರೆ.

    ಗಾಯಾಳುಗಳನ್ನು ಖಾಸಗಿ ವಾಹನಗಳ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಬಸ್ ಬರುತ್ತಿರುವ ವೇಳೆ ಬೈಕ್‌ ಒಂದು ಅಡ್ಡ ಬಂದಿದ್ದು ಈ ವೇಳೆ ಬಸ್ ನಿಯಂತ್ರಿಸುವ ವೇಳೆ ರಸ್ತೆಯಿಂದ ಪಕ್ಕಕ್ಕೆ ಉರುಳಿದೆ ಎಂದು ಬಸ್ ಚಾಲಕ ಮಾಹಿತಿ ನೀಡಿದ್ದಾರೆ . ಆದರೆ ಸ್ಥಳಿಯರು ಇದನ್ನು ನಿರಾಕರಿಸಿದ್ದು ಬಸ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.

    ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡು ಘಟನೆಗೆ ಕಾರಣ ಏನು ಎಂಬ ಬಗ್ಗೆ ವಿಚಾರಣೆ ಮುಂದುವರೆಸಿದ್ದಾರೆ.

    Continue Reading

    BANTWAL

    VIDEO: ಕೆಸರುಗದ್ದೆಯಲ್ಲಿ ಜಿಲ್ಲಾಧಿಕಾರಿಯ ಪಿಲಿ ನಲಿಕೆ

    Published

    on

    ಬಂಟ್ವಾಳ: ತಾಲೂಕಿನ ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ ( ರಿ ) ಅನಂತಾಡಿ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಜರಗಿದ 6 ನೇ ವರ್ಷದ “ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅನೀಶ್ ಅಶ್ವತ್ತಾಡಿ ವಹಿಸಿದ್ದರು.

    ಕಾರ್ಯಕ್ರಮದ ಧ್ವಜಾರೋಹಣವನ್ನು ಡಾ.ರೂಪಲತಾ ಕೊಂಗಲಾಯಿ ನೆರವೇರಿಸಿ , ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಮಾಣಿ ವಲಯ ಅಧ್ಯಕ್ಷ ರಾಮ್ ಕಿಶಾನ್ ರೈ ನೆರವೇರಿಸಿದರು. ಕ್ರೀಡಾಕೂಟದ ಕೆಸರುಗದ್ದೆಯ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಹಾಗೂ ವಿಠಲ ಕೋಟ್ಯಾನ್ ಪೊಯ್ಯೇ ನೆರವೇರಿಸಿದರು.

    ಕೆಸರು ಗದ್ದೆಯಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ, ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು.  ಈ ಸಂದರ್ಭದಲ್ಲಿ ನಮ್ಮ ತುಳುವ ಸಂಸ್ಕೃತಿಯ ಚಾಪೆ ಹೆಣೆಯುವುದು, ಬುಟ್ಟಿ ಹೆಣೆಯುವುದು, ಮುಟ್ಟಾಲೆ ಕಟ್ಟುವುದು, ತೆಂಗಿನಗರಿ ಹೆಣೆಯುವುದು,  ಅಕ್ಕಿ ಮುಡಿ ಕಟ್ಟುವ ಪ್ರಾತ್ಯಕ್ಷತೆ ನಡೆಸಲಾಯಿತು. 

    ಕತ್ತಲು ಆವರಿಸಿದ ಬ್ರಹ್ಮಗಿರಿಯ ಪ್ರವಾಸಿತಾಣ..! ಮೆಸ್ಕಾಂ ಅಧಿಕಾರಿಗಳಿಂದ ವಿದ್ಯುತ್ ಕಡಿತ

    ವೇದಿಕೆಯಲ್ಲಿ ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಕೋಂಗಲಾಯಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಾರ್ಶ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ, ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವಿನ ರಾಧಾಕೃಷ್ಣಮೂಲ್ಯ, ಮಲ್ಲರಾಯ ದೈವ ಪರಿಚರಕರುಗಳಾದ ರಾಮಣ್ಣ ಗೌಡ, ಬಾಲಪ್ಪ ಮಡಿವಾಳ, ಲಕ್ಷ್ಮಣ ಪೂಜಾರಿ ಬಾಕಿಲ, ಪದ್ಮನಾಭ ಪೂಜಾರಿ ಈಡೆಮುಂಡೆವು ಮೊದಲಾದವರು ಉಪಸ್ಥಿತರಿದ್ದರು.

    ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಜಿಲ್ಲಾಧಿಕಾರಿ
    ಈಗಾಗಲೇ ಶಾಲಾ ಮಕ್ಕಳಿಗೆ ರಜೆ ನೀಡುವ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಫೇವರೆಟ್ ಆಗಿರುವ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅನಂತಾಡಿಯಲ್ಲಿ ಸಂಘಟನೆಯವರು ಆಯೋಜನೆ ಮಾಡಿದ್ದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿ, ಮಕ್ಕಳೊಂದಿಗೆ ಮಕ್ಕಳಾಗಿ ಕೆಸರಿನಲ್ಲಿ ಆಟವಾಡಿದ್ದಾರೆ. ಅಲ್ಲದೇ ಕರಾವಳಿಯ ಪಿಲಿ ನಲಿಕೆಗೆ ಹೆಜ್ಜೆ ಹಾಕಿ ಎಲ್ಲರ ಹುಬ್ಬೆರಗಾಗುವಂತೆ ಮಾಡಿದ್ದಾರೆ. ಮಕ್ಕಳ ಜೊತೆ ತಾನೂ ಮಗುವಾಗಿ ಮೈಮರೆತು ಹಾಡಿನ ನೃತ್ಯ ಮಾಡಿದ ಜಿಲ್ಲಾಧಿಕಾರಿಗಳ ನಡೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಇದರ ಜೊತೆಗೆ ಯುವಕರ ಜೊತೆ ವಾಲಿಬಾಲ್ ಆಡುವ ಮೂಲಕವೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರು ಎಲ್ಲರ ಗಮನ ಸೆಳೆದಿದ್ದಾರೆ.

     

    Continue Reading

    LATEST NEWS

    Trending