Connect with us

bengaluru

ಹೆಚ್ಚು ಹಣಕ್ಕೆ ಡಿಮಾಂಡ್- ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಮಂಗಳಮುಖಿಯರು ಅರೆಸ್ಟ್.!

Published

on

ಹೆಚ್ಚು ಹಣ ನೀಡದ್ದಕ್ಕೆ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಮೂವರು ಮಂಗಳಮುಖಿಯರನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ರಾಜಧಾನಿಯಲ್ಲಿ ಮಂಗಳಮುಖಿಯರ ಆಟಾಟೋಪ ಹೆಚ್ಚಾಗುತ್ತಿದೆ. ಕನಸಿನ ಮ‌ನೆ ಕಟ್ಟಿ ಗೃಹ ಪ್ರವೇಶ ಮಾಡುವಾಗಲೇ ಪ್ರವೇಶಿಸಿದ್ದ ಮೂವರು ಮಂಗಳಮುಖಿಯರು ಹೆಚ್ಚು ಹಣ ನೀಡುವಂತೆ‌ ಪೀಡಿಸಿ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ಸಂಬಂಧ ಮೂವರನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೃತಿಕಾ, ಪ್ರಶಾಂತ್ ಆಲಿಯಾಸ್ ಪ್ರೀತಿ ಹಾಗೂ ಮಣಿಕಂಠನ್ ಆಲಿಯಾಸ್ ಪೂಜಾ ಬಂಧಿತ ಮಂಗಳಮುಖಿಯರು.

ಇವರೆಲ್ಲರೂ ಶ್ರೀರಾಮಪುರದಲ್ಲಿ ವಾಸವಿದ್ದರು.

ವೈಯಾಲಿಕಾವಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ರಾಜೇಶ್- ದೀಪಾ ದಂಪತಿ ಕಟ್ಟಿದ್ದ ನೂತನ ಮನೆಯ ಗೃಹಪ್ರವೇಶದ ಹಿನ್ನೆಲೆಯಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿತ್ತು.

ಆರೋಪಿಗಳ ಪೈಕಿ ಓರ್ವ ಮಂಗಳಮುಖಿ ಮನೆಗೆ ಆಗಮಿಸಿ ಹಣ ನೀಡುವಂತೆ ಕೇಳಿದ್ದಾಳೆ. ಮಾಲೀಕರು 200 ರೂಪಾಯಿ ಕೊಟ್ಟಿದ್ದಾರೆ.

ಇದರಿಂದ ಆಕ್ರೋಶಗೊಂಡ ಆಕೆ 200 ರೂಪಾಯಿ ಸಾಲುವುದಿಲ್ಲ‌, ಹೊರಗೆ ಮತ್ತಿಬ್ಬರಿದ್ದಾರೆ.

ಹೆಚ್ಚು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ.

ಸತತ ಮಾತುಕತೆಯ ಬಳಿಕ ಮನೆಯವರು 5 ಸಾವಿರ ರೂ ನೀಡಿದ್ದಾರೆ.‌

ಇಷ್ಟಕ್ಕೂ ಸುಮ್ಮನಾಗದ ಮಂಗಳಮುಖಿಯರು ಓರ್ವಳಿಗೆ 5 ಸಾವಿರದಂತೆ ಒಟ್ಟು 15 ಸಾವಿರ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರು ಹಾಗೂ ಮಂಗಳಮುಖಿಯರೊಂದಿಗೆ ಮಾತಿನ ಚಕಮಕಿ‌ ನಡೆದಿದೆ.‌

ಈ ವೇಳೆ ಧರಿಸಿದ್ದ ಬಟ್ಟೆ ಎತ್ತಿ ಅನುಚಿತ ವರ್ತನೆ ತೋರಿ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ದರು.

ಈ ಘಟನೆಯ ಕುರಿತು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಪ್ರತಿಕ್ರಿಯಿಸಿ, “ಗೃಹ ಪ್ರವೇಶ ನಡೆಯುವಾಗ ಮೂವರು ಮಂಗಳಾ‌ಮುಖಿಯರು ಬಂದು ಹಣಕ್ಕೆ ಡಿಮ್ಯಾಂಡ್ ಮಾಡಿ ಪುಂಡಾಟಿಕೆ ಮೆರೆದಿದ್ದರು.

ಘಟನೆ ಕುರಿತು ಮನೆಯವರು ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ” ಎಂದರು.

bengaluru

ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಪ್ರಶಸ್ತಿ

Published

on

ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರು ಇದರ 19 ನೇ ವಾರ್ಷಿಕ ಸಾಮಾನ್ಯ ಸಭೆ ಬೆಂಗಳೂರಿನಲ್ಲಿ ಮಹಾಮಂಡಳದ ಅಧ್ಯಕ್ಷೆ ಲಲಿತ ಜಿ. ಟಿ. ದೇವೇಗೌಡ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಾಮಾನ್ಯ ಸಭೆಯಲ್ಲಿ ರಾಜ್ಯದಲ್ಲಿ ಹೆಚ್ಚು ಮುದ್ರಾಂಕ ಶುಲ್ಕ ಪಡೆದು ಹಾಗೂ ಇ-ಸ್ಟಾಂಪಿಂಗ್ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿರುವ ಸಹಕಾರ ಸಂಘಗಳ ಮುಖ್ಯಸ್ಥರನ್ನು ಸನ್ಮಾನಿಸಲಾಗಿದೆ.

2022-23ನೇ ಸಾಲಿನಲ್ಲಿ ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅತಿ ಹೆಚ್ಚು ಮೊತ್ತದ ಇ ಸ್ಟಾಂಪಿಂಗ್ ಮುದ್ರಿಸಿರುವ ಸಂಘ ಎಂಬ ಪ್ರಶಂಸಾ ಫಲಕ ಪಡೆಯಿತು.

ಸಂಘದ ಅಧ್ಯಕ್ಷ ಹಾಗೂ ಮಹಾಮಂಡಳದ ನಿರ್ದೇಶಕ  ಚಿತ್ತರಂಜನ್ ಬೋಳಾರ್ ಅವರಿಗೆ ಲಲಿತ ಜಿ. ಟಿ. ದೇವೇಗೌಡ ಇವರು ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂಘವು ಸತತ 9 ವಗಳಿಂದ ಇ ಸ್ಟಾಂಪಿಂಗ್ ಸೇವೆಗೆ ಪ್ರಶಸ್ತಿಯನ್ನು ಪಡೆದಿರುವುದು ಪ್ರಗತಿಯ ಸಂಖೇತವಾಗಿದೆ

ಮಹಾಮಂಡಳದ ಉಪಾಧ್ಯಕ್ಷ  ಕೆ.ಕೆ ಮಹೇಂದ್ರ ಪ್ರಸಾದ್ ಗೌಡ,  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಾಲತಾ.ಪಿ,  ಮಹಾಮಂಡಳದ ನಿರ್ದೇಶಕರು, ಉಪಸ್ಥಿತರಿದ್ದರು.

 

Continue Reading

bengaluru

ಕಾಂತಾರ ಚಿತ್ರಕ್ಕೆ 1 ವರ್ಷ-ನಾಳೆ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್

Published

on

ಜಗತ್ತೆ ನಿಬ್ಬೆರಗಾಗಿ ನೋಡಿದ ಕಾಂತಾರ ಸಿನೆಮಾ ರಿಲೀಸ್ ಆಗಿ ನಾಳೆಗೆ ಭರ್ತಿ 1 ವರ್ಷ. ಇದೇ ಖುಷಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೊಸ ಘೋಷಣೆಯಾಗಿದ್ದು ಸೆ.30ರಂದು ಕಾಂತಾರ ಚಿತ್ರದ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ.

 

ಜಗತ್ತೆ ನಿಬ್ಬೆರಗಾಗಿ ನೋಡಿದ ಕಾಂತಾರ ಸಿನೆಮಾ ರಿಲೀಸ್ ಆಗಿ ನಾಳೆಗೆ ಭರ್ತಿ 1 ವರ್ಷ.

ಇದೇ ಖುಷಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೊಸ ಘೋಷಣೆಯಾಗಿದ್ದು ಸೆ.30ರಂದು ಕಾಂತಾರ ಚಿತ್ರದ ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ.

ಸಣ್ಣ ಬಜೆಟ್ ನಲ್ಲಿ ಕಾಂತಾರ ಸಿನೆಮಾ ನಿರ್ಮಾಣವಾಗಿದ್ದು ಚಿತ್ರ ಗಳಿಸಿದ್ದು ಮಾತ್ರ ಬರೋಬ್ಬರಿ 400 ಕೋಟಿಗಿಂತಲೂ ಅಧಿಕ ಮೊತ್ತ.

ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿ ಅನೇಕ ಕಲಾವಿದರು ಕಾಂತಾರ ಚಿತ್ರದಲ್ಲಿ ನಟಿಸಿ ಪ್ರತಿಯೊಬ್ಬ ಸಿನಿ ರಸಿಕರ ಮನದಲ್ಲಿ ಹಚ್ಚೊತ್ತಿದ್ರು.

ನಿರೀಕ್ಷೆಗೂ ಮೀರಿ ನೇಮು-ಫೇಮು ಎಲ್ಲವೂ ಸಿಕ್ಕಿತು.


ಇದೀಗ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಆಗಿದೆ. ಈ ಹಿನ್ನಲೆ ನಾಳೆ ಸೆ. 30 ರಂದು ಬೆಳಿಗ್ಗೆ ಕಾಂತಾರ ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡ ‘ವರಾಹ ರೂಪಂ’ ಹಾಡಿನ ವಿಡಿಯೋ ವರ್ಷನ್ ರಿಲೀಸ್ ಆಗಲಿದೆ.

ಈ ಕುರಿತು ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.

Continue Reading

bangalore

SHOCKING! ಗುರುತೇ ಸಿಗದಷ್ಟು ಬದಲಾದ ‘ಹುಚ್ಚ’ ಖ್ಯಾತಿಯ ನಟಿ ರೇಖಾ …!

Published

on

ಶಾಕಿಂಗ್ ಲುಕ್ ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಜೊತೆ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ರೇಖಾ ವೇದವ್ಯಾಸ್.

 

ಬೆಂಗಳೂರು : ಕಿಚ್ಚ ಸುದೀಪ್ ಜೊತೆ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ನಟಿ ರೇಖಾ ವೇದವ್ಯಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.

ಅಷ್ಟೊಂದು ಮುದ್ದು ಮುದ್ದು ಮುಖ, ಹೊಳೆಯುತ್ತಿದ್ದ ಕಣ್ಣು, ಮಿನುಗುತ್ತಿದ್ದ ಕೆನ್ನೆಯನ್ನು ಇಂದಿಗೂ ಅಭಿಮಾನಿಗಳು ನೆನೆಸಿಕೊಳ್ಳುತ್ತಾರೆ.ಆದ್ರೆ ಈಗ ಅದೇ ರೇಖಾ ಗುರುತೆ ಸಿಗದಷ್ಟರ ಮಟ್ಟಿಗೆ ಬದಲಾಗಿ ಹೋಗಿದ್ದಾರೆ.

ಸಣಕಲು ದೇಹ, ಬತ್ತಿದ ಕಣ್ಣುಗಳು, ಬಾಡಿದ ಕೆನ್ನೆಗಳು ರೇಖಾ ಅವರ ನಿಜ ಸ್ವರೂಪವನ್ನೇ ಬದಲಾಯಿಸಿ ಬಿಟ್ಟಿದೆ.

ಒಂದು ಕಾಲದಲ್ಲಿ ಬೆಳ್ಳಿ ತೆರೆಯಲ್ಲಿ ಮಿರ ಮಿರ ಮಿಂಚಿ ಮರೆಯಾಗಿರುವ ನಟಿ ರೇಖಾ ದಿಢೀರನೆ ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಆಗಿದ್ದಾರೆ.

ತೆಲುಗಿನ ‘ಶ್ರೀದೇವಿ ಡ್ರಾಮಾ ಕಂಪನಿ’ ಕಾಮಿಡಿ ಶೋಗೆ ಅತಿಥಿಯಾಗಿ ಬಂದಿದ್ದ ರೇಖಾ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿಬೆಳೆದ ರೇಖಾ ಕನ್ನಡದ ‘ಹುಚ್ಚ’ ಚಿತ್ರದಲ್ಲಿ ಮೊದಲಿಗೆ ಆಕೆ ಬಣ್ಣ ಹಚ್ಚಿದ್ದರು.

ಅಲ್ಲಿಂದ ಮುಂದೆ ಕನ್ನಡ ಸಿನಿರಸಿಕರಿಗೆ ‘ಹುಚ್ಚ’ ನಟಿ ರೇಖಾ ಅಂತ್ಲೇ ಪರಿಚಿತರಾದರು.

ಕನ್ನಡ ಜೊತೆ ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲಿ ರೇಖಾ ಮಿಂಚಿದರು. ತೆಲುಗಿನಲ್ಲೂ ಆಕೆ ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದಾರೆ.

ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿದ ಚೆಲುವೆಗೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ.

‘ಚಿತ್ರ’, ‘ತುಂಟಾಟ’, ‘ಮೋನಲಿಸಾ’, ‘ಚೆಲ್ಲಾಟ’ ಹೀಗೆ ಹಿಟ್ ಸಿನಿಮಾಗಳಲ್ಲಿ ಮಿಂಚಿದರು.

ಬಳಿಕ ತೆಲುಗು, ತಮಿಳು ಸಿನಿಮಾಗಳತ್ತ ಮುಖ ಮಾಡಿದ್ದರು. ಗಣೇಶ್ ಜೋಡಿಯಾಗಿ ‘ಹುಡುಗಾಟ’ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದ ರೇಖಾ ಮತ್ತೊಮ್ಮೆ ಕಮಾಲ್ ಮಾಡಿದರು.

ನಟಿ ರೇಖಾ 2014ರ ನಂತರ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಅವಕಾಶಗಳು ಸಿಕ್ಕಿಲ್ವೋ ಅಥವಾ ಸಿನಿಮಾ ಮೇಲಿನ ಆಸಕ್ತಿ ಕಮ್ಮಿ ಆಯ್ತೋ ಗೊತ್ತಿಲ್ಲ.

ಆದರೆ ಇದ್ದಕ್ಕಿಂದ್ದಂತೆ ಬಿಗ್ ಸ್ಕ್ರೀನ್​ನಿಂದ ಮಾಯವಾಗಿದ್ದ ರೇಖಾ ಸಿನಿಪ್ರೇಮಿಗಳಿಗೆ ಅಪರೂಪದ ತಾರೆಯಾಗಿ ಉಳಿದುಕೊಂಡು ಬಿಟ್ರು.

ಆದಷ್ಟು ಬೇಗ ಕನ್ನಡ ಮುದ್ದು ಮುಖದ ನಟಿ ರೇಖಾ ವೇದವ್ಯಾಸ್ ಗುಣ ಮುಖರಾಗಿ ಮೊದಲಿನ ಮಂದಹಾಸ ಬರಲಿ ಅನ್ನೋದೆ ಅವರ ಅಭಿಮಾನಿಗಳ ಆಸೆ.

 

Continue Reading

LATEST NEWS

Trending