Saturday, June 3, 2023

ಇನ್ನು ದೆಹಲಿ ಶಾಸಕರ ಸಂಬಳ 90 ಸಾವಿರ ರೂಪಾಯಿ

ನವದೆಹಲಿ: ದೆಹಲಿಯ ಶಾಸಕರ ಮಾಸಿಕ ವೇತನವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮಾಡಿದ್ದ ಶಿಫಾರಸನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಸರ್ಕಾರ ಮಂಗಳವಾರ ಅನುಮೋದನೆ ನೀಡಿದೆ.


ಇನ್ನು ಮುಂದೆ ದೆಹಲಿಯ ಪ್ರತಿ ಶಾಸಕರು ವೇತನ ಮತ್ತು ಭತ್ಯೆ ಸೇರಿ ತಿಂಗಳಿಗೆ ₹90 ಸಾವಿರ ಪಡೆಯುತ್ತಾರೆ. ಇದಕ್ಕೂ ಮುನ್ನ ಶಾಸಕರು ಪ್ರತಿ ತಿಂಗಳು ₹53 ಸಾವಿರ ವೇತನ ಪಡೆಯುತ್ತಿದ್ದರು. ಇದರಲ್ಲಿ ₹12 ಸಾವಿರ ವೇತನವಾದರೆ, ಉಳಿದ ಹಣವನ್ನು ಇತರೆ ಭತ್ಯೆಗಳ ರೂಪದಲ್ಲಿ ನೀಡಲಾಗುತ್ತಿತ್ತು ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಪರಿಷ್ಕೃತ ವೇತನದಿಂದಾಗಿ ಪ್ರತಿ ಶಾಸಕರು ತಿಂಗಳಿಗೆ ₹30 ಸಾವಿರವನ್ನು ವೇತನವಾಗಿ ಹಾಗೂ ₹60 ಸಾವಿರ ಹಣವನ್ನು ವಿವಿಧ ಭತ್ಯೆಗಳ ರೂಪದಲ್ಲಿ ಪಡೆಯಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ವೇತನದಲ್ಲಿ ಇಷ್ಟೆಲ್ಲ ಏರಿಕೆಯಾದರೂ, ಇಡೀ ದೇಶದಲ್ಲೇ ಅತಿ ಕಡಿಮೆ ವೇತನ ಪಡೆಯುವವರು ದೆಹಲಿ ಶಾಸಕರು‘ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಹತ್ತು ವರ್ಷಗಳಿಂದ ದೆಹಲಿ ಶಾಸಕರ ವೇತನವನ್ನು ಹೆಚ್ಚಿಸಿರಲಿಲ್ಲ. ಇತ್ತೀಚೆಗೆ ಕೇಜ್ರಿವಾಲ್‌ ಸರ್ಕಾರ ಶಾಸಕರ ವೇತನವನ್ನು ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿತ್ತು. ಇತರೆ ರಾಜ್ಯಗಳಲ್ಲಿ ಶಾಸಕರಿಗೆ ನೀಡುವ ವೇತನ ಮತ್ತು ಭತ್ಯೆಗಳಿಗೆ ಸರಿ ಸಮಾನವಿರುವಷ್ಟು ವೇತನ ನೀಡಬೇಕೆಂದು ಮನವಿ ಮಾಡಲಾಗಿತ್ತು.

LEAVE A REPLY

Please enter your comment!
Please enter your name here

Hot Topics