ಕಾರ್ಕಳ ತಾಲೂಕಿನ ಜನರಿಗೆ ಕುಡಿಯಲು ಮತ್ತು ಕೃಷಿ ಉದ್ದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಸ್ವರ್ಣ ನದಿಯಲ್ಲಿ ಮಲೆಬೆಟ್ಟು ಮತ್ತು ಕೆರ್ವಾಶೆ ನಡುವಣ ಬಾಕ ಗುಂಡಿಯಲ್ಲಿ ಅಧಿಕ ಪ್ರಮಾಣದಲ್ಲಿ ಮೀನುಗಳು ಸತ್ತಿರುವುದು ಕಂಡು ಬಂದುದ್ದು, ಕಿಡಿಗೇಡಿಗಳು ವಿಷ ಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಾರ್ಕಳ: ಕಾರ್ಕಳ ತಾಲೂಕಿನ ಜನರಿಗೆ ಕುಡಿಯಲು ಮತ್ತು ಕೃಷಿ ಉದ್ದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಸ್ವರ್ಣ ನದಿಯಲ್ಲಿ ಮಲೆಬೆಟ್ಟು ಮತ್ತು ಕೆರ್ವಾಶೆ ನಡುವಣ ಬಾಕ ಗುಂಡಿಯಲ್ಲಿ ಅಧಿಕ ಪ್ರಮಾಣದಲ್ಲಿ ಮೀನುಗಳು ಸತ್ತಿರುವುದು ಕಂಡು ಬಂದುದ್ದು, ಕಿಡಿಗೇಡಿಗಳು ವಿಷ ಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇಲ್ಲಿ ಯಥೇಚ್ಛವಾಗಿ ಮೀನುಗಳ ಮಾರಣ ಹೋಮವಾಗಿರುವುದನ್ನು ಗಮನಿಸಿದರೆ ನದಿಯ ನೀರಿಗೆ ಗೇರುಬೀಜ ಎಣ್ಣೆ ಇಲ್ಲವೇ ಯಾವುದೋ ಕೀಟನಾಶಕ ಹಾಕಿರುವ ಸಂಶಯವನ್ನು ಸ್ಥಳೀಯರು ವ್ಯಕ್ತ ಪಡಿಸಿದ್ದಾರೆ.
ನಿನ್ನೆ ರಾತ್ರಿ ವೇಳೆ ಈ ಕೃತ್ಯವನ್ನು ಎಸಗಿರುವ ಸಾಧ್ಯತೆ ಇದ್ದು, ಇಂದು ಬೆಳಗ್ಗಿನ ಜಾವ ಬೆಳಕಿಗೆ ಬಂದಿದೆ.
ಸ್ಥಳೀಯರು ಈ ನದಿಯ ನೀರನ್ನು ಕೃಷಿಗೆ ಮಾತ್ರವಲ್ಲದೆ ಕುಡಿಯಲು ಕೂಡಾ ಉಪಯೋಗಿಸುತ್ತಿದ್ದಾರೆ.
ಪ್ರಸ್ತುತ ಕುಡಿಯುವ ನೀರಿಗೆ ಬರ ಇರುವ ಈ ಸಮಯದಲ್ಲಿ ನಿತ್ಯ ಬಳಕೆಗೆ ಆಧಾರವಾಗಿದ್ದ ನೀರಿನ ಮೂಲಕ್ಕೆ ಯಾವುದೋ ಪದಾರ್ಥವನ್ನು ಹಾಕಿ ಕಲುಷಿತಗೊಳಿಸಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.