ಬಂಟ್ವಾಳ: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಕಾಪಿಕಾಡು ನಿವಾಸಿ ಶಿವಪ್ರಸಾದ್. ಕೆ (23) ನಿನ್ನೆ ನಿಧನರಾಗಿದ್ದಾರೆ.
ಶಿವಪ್ರಸಾದ್ ಕಬಡ್ಡಿ ಆಟಗಾರನಾಗಿದ್ದು, ಮಾಣಿ ಯುವಕ ಮಂಡಲದ ಸದಸ್ಯರಾಗಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಸಂದರ್ಭದಲ್ಲಿ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಸ್ಯದ ಮೂಲಕ ಜನರ ಮನಸ್ಸು ಗೆದ್ದಿದ್ದ ಶಿವಪ್ರಸಾದ್ಅಪ್ಪಟ ದೇಶಪ್ರೇಮಿಯಾಗಿದ್ದರು. ಬಾಲ್ಯದಿಂದಲೇ ಸೈನಿಕನಾಗಬೇಕು ಎಂಬ ಕನಸು ಹೊಂದಿದ್ದರು.
ಇದಕ್ಕಾಗಿ ಜಿಮ್ ಮತ್ತು ಇತರ ವ್ಯಾಯಾಮ ದಲ್ಲಿ ಸದಾ ತೊಡಗಿಸಿಕೊಂಡಿದ್ದ ಅವರು ಇತ್ತೀಚಿಗೆ ಸೈನಿಕ ಸೇವೆಗೆ ಪೂರಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದರು. ಮೃತರು ತಾಯಿ,ಸಹೋದರಿ, ಸಹೋದರ ಮತ್ತು ಬಂಧು-ಮಿತ್ರರನ್ನು ಅಗಲಿದ್ದಾರೆ.