Home ಉಡುಪಿ ನಾಪತ್ತೆಯಾಗಿದ್ದ ಉಡುಪಿ ಮೂಲದ ಹೋಟೆಲ್ ಸಿಬ್ಬಂದಿಗಳು ಮುಂಬೈನಲ್ಲಿ ಶವವಾಗಿ ಪತ್ತೆ..!

ನಾಪತ್ತೆಯಾಗಿದ್ದ ಉಡುಪಿ ಮೂಲದ ಹೋಟೆಲ್ ಸಿಬ್ಬಂದಿಗಳು ಮುಂಬೈನಲ್ಲಿ ಶವವಾಗಿ ಪತ್ತೆ..!

ಮುಂಬೈನ ಬಾರ್ ಆಂಡ್ ರೆಸ್ಟೋರೆಂಟ್ ಇಬ್ಬರು ಸಿಬ್ಬಂದಿಗಳ ಶವ ನೀರಿನ ಟ್ಯಾಂಕಿಯೊಳಗೆ ಪತ್ತೆ…….!

ಮುಂಬೈ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಉಡುಪಿ ಮೂಲದ ಮುಂಬೈನ ಬಾರ್ ಆಂಡ್ ರೆಸ್ಟೋರೆಂಟ್ ನ ಇಬ್ಬರು ಸಿಬ್ಬಂದಿಗಳ ಶವ ಸಂಶಯಾಸ್ಪದವಾಗಿ ನೀರಿನ ಟ್ಯಾಂಕಿಯೊಳಗೆ ಪತ್ತೆಯಾಗಿದೆ.

 

ಮುಂಬೈನ ಮೀರಾ ರೋಡ್ ಸಮೀಪದ ಶೀತಲ್ ನಗರದಲ್ಲಿ ಈ ಘಟನೆ ನಡೆದಿದ್ದು, ಬಾರ್ ಆಂಡ್ ರೆಸ್ಟೋರೆಂಟ್ ನ ಮ್ಯಾನೇಜರ್ ಹರೀಶ್ ಶೆಟ್ಟಿ (42), ವೈಟರ್ ನರೇಶ್ ಪಂಡಿತ್ (58) ಮೃತ ದುರ್ದೈವಿಗಳಾಗಿದ್ದಾರೆ.

ಲಾಕ್ ಡೌನ್ ನಿಂದಾಗಿ ಹೊಟೇಲ್ ಗಳು ಮುಚ್ಚಿದ್ದು, ಕೆಲ ಸಿಬ್ಬಂದಿಗಳು ಹೋಟೇಲ್ ನ ಕೊಠಡಿಯಲ್ಲೇ ಉಳಿದುಕೊಂಡಿದ್ದರು.

ಹೊಟೇಲ್ ಮಾಲಿಕರು ಫೋನ್ ಮಾಡಿದರೂ ಸ್ವಿಚ್ಛ್ ಆಫ್ ಬರುತ್ತಿತ್ತು.  ಹುಡುಕಿದ್ರೂ ಯಾವ ಪತ್ತೆಯೂ ಇರಲಿಲ್ಲ.

ಆದರೆ ನಿನ್ನೆ ಹೊಟೇಲ್ ಮಾಲಿಕರಿಗೆ ಪುಣೆಯಿಂದ ಅನಾಮಾಧೇಯ ಕರೆ ಬಂದಿದ್ದು, ಇಬ್ಬರನ್ನು ನಾನೇ ಕೊಂದಿದ್ದೇನೆ ಎಂದು ಹೇಳಿ ಫೋನ್ ಕಟ್ ಆಗಿದೆ.

ನಂತರ ಫೋನ್ ಸ್ವಿಚ್ ಆಫ್ ಆಗಿದ್ದು, ಕರೆಯ ಆಧಾರದಲ್ಲಿ ಹುಡುಕಿದಾಗ ಇಬ್ಬರ ಶವ ನೀರಿನ ಟ್ಯಾಂಕಿಯಲ್ಲಿ ಪತ್ತೆಯಾಗಿದೆ.

ದೇಹದ ಮೇಲೆ ಗಾಯದ ಗುರುತುಗಳಿದ್ದು, ಸದ್ಯ ಅನಾಮಧೇಯ ಕರೆ ಮಾಡಿರುವ ವ್ಯಕ್ತಿ ಯಾರೆಂದು ತನಿಖೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಎರಡು ದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಗೆ ಕಾರಣವೇನೆಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.

RECENT NEWS

ದ.ಕ-ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ…

ದ.ಕ-ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ… ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕಳೆದ ಎರಡು...

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗೆ ಕೊರೊನಾ ಪಾಸಿಟಿವ್..!!

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗೆ ಕೊರೊನಾ ಪಾಸಿಟಿವ್..!! ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೂರಜ್ ಜೈಬ್ ಅವರಿಗೂ ಕೋವಿಡ್ 19 ಸೋಂಕು...

ಉಳ್ಳಾಲ ನಗರಸಭೆಗೂ ವಕ್ಕರಿಸಿದ ವೈರಸ್: ರ್ಯಾಂಡಮ್ ಟೆಸ್ಟ್ ನಲ್ಲಿ 28 ಮಂದಿಗೆ ಪಾಸಿಟಿವ್ ಪತ್ತೆ..!!

ಉಳ್ಳಾಲ ನಗರಸಭೆಗೂ ವಕ್ಕರಿಸಿದ ವೈರಸ್: ರ್ಯಾಂಡಮ್ ಟೆಸ್ಟ್ ನಲ್ಲಿ 28 ಮಂದಿಗೆ ಪಾಸಿಟಿವ್ ಪತ್ತೆ..!! ಮಂಗಳೂರು: ಉಳ್ಳಾಲದಲ್ಲಿ ಬುಧವಾರ ನಡೆಸಲಾದ ರ್ಯಾಂಡಮ್ ಟೆಸ್ಟ್ ವರದಿ ನಿನ್ನೆ (ಜುಲೈ 3) ಬಂದಿದ್ದು ಮತ್ತೆ 28 ಮಂದಿಯಲ್ಲಿ...

ಉಡುಪಿಯಲ್ಲಿ ಇಂದು 14 ಮಂದಿಗೆ ಪಾಸಿಟಿವ್ ಪತ್ತೆ: ಪೀಡಿತರ ಸಂಖ್ಯೆ 1242ಕ್ಕೆ ಏರಿಕೆ..!!

ಉಡುಪಿಯಲ್ಲಿ ಇಂದು 14 ಮಂದಿಗೆ ಪಾಸಿಟಿವ್ ಪತ್ತೆ: ಪೀಡಿತರ ಸಂಖ್ಯೆ 1242ಕ್ಕೆ ಏರಿಕೆ..!! ಉಡುಪಿ: ಉಡುಪಿಯಲ್ಲಿ ಇಂದು 14 ಕೊರೊನಾ ಪಾಸಿಟಿವ್ ವರದಿಯಾಗಿದೆ. ಮಹಾರಾಷ್ಟ್ರ4, ಕೇರಳ ರಾಜ್ಯದ 1 ಕೇಸ್ ಪತ್ತೆಯಾಗಿದೆ. ಬೆಂಗಳೂರಿಂದ ಬಂದ ನಾಲ್ವರಲ್ಲಿ...
error: Content is protected !!