Home ಪ್ರಮುಖ ಸುದ್ದಿ ಕೊನೆಗೂ ಬಂಟ್ವಾಳ ಸೀಲ್ ಡೌನ್ ಪ್ರದೇಶ ತೆರವಿಗೆ ಆದೇಶಿಸಿದ ಜಿಲ್ಲಾಧಿಕಾರಿ.!!

ಕೊನೆಗೂ ಬಂಟ್ವಾಳ ಸೀಲ್ ಡೌನ್ ಪ್ರದೇಶ ತೆರವಿಗೆ ಆದೇಶಿಸಿದ ಜಿಲ್ಲಾಧಿಕಾರಿ.!!

ಕೊನೆಗೂ ಬಂಟ್ವಾಳ ಸೀಲ್ ಡೌನ್ ಪ್ರದೇಶ ತೆರವಿಗೆ ಆದೇಶಿಸಿದ ಜಿಲ್ಲಾಧಿಕಾರಿ.!!

ಬಂಟ್ವಾಳ: ತಿಂಗಳಿಗೂ ಅಧಿಕ ದಿನಗಳಿಂದ ಸೀಲ್ ಡೌನ್ ಆಗಿದ್ದ ಬಂಟ್ವಾಳ ಕಸಬಾ ವ್ಯಾಪ್ತಿಯಲ್ಲಿ ಕೊನೆಗೂ ಸೀಲ್ ಡೌನ್ ತೆರವಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶ ಹೊರಡಿಸಿದ್ದಾರೆ.

ಬಂಟ್ವಾಳ ಕಸಬಾ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಕೇಸುಗಳು ದೃಢಪಟ್ಟ ಹಿನ್ನಲೆಯಲ್ಲಿ ಕಸಬಾ ಪ್ರದೇಶವನ್ನು ಈ ಹಿಂದೆ ಸೀಲ್ ಡೌನ್ ಮಾಡಲಾಗಿತ್ತು.

ಈಗ ಹೊಸ ಪಾಸಿಟಿವ್ ಕೇಸುಗಳು ಪತ್ತೆಯಾಗದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಬಂಟ್ವಾಳ ಕಾರ್ ಸ್ಟ್ರೀಟ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪೂರ್ವದ ಮುಖ್ಯ ರಸ್ತೆ ರಫೀಯಾ ಬೀದಿ, ಪಶ್ಚಿಮದ ಎಸ್ ವಿ ಎಸ್ ಶಾಲಾ ಮೈದಾನ, ಉತ್ತರದ ಜನವಸತಿ ಪ್ರದೇಶ ಬಫರ್ ಝೋನ್ ನಲ್ಲಿ ಸೇರಿದೆ.

ಈ ಪ್ರದೇಶದಲ್ಲಿ ಒಟ್ಟು 97 ಜನವಸತಿ ಮನೆಗಳಿದ್ದು, 15 ಕಚೇರಿಗಳು ಮತ್ತು ಅಂಗಡಿಗಳಿದ್ದು, ಒಟ್ಟು 388 ಜನಸಂಖ್ಯೆಯನ್ನು ಹೊಂದಿದೆ.

ಈ ಹಿಂದೆ ಈ ಪ್ರದೇಶದಲ್ಲಿ ಕೊರೊನಾ ಸೋಂಕು ಹಿನ್ನಲೆ ಸಾವು ಸಂಭವಿಸಿತ್ತು. ಕೊರೊನಾ ಹಾಟ್ ಸ್ಪಾಟ್ ಆಗಿ ಕಸಬಾ ಪ್ರದೇಶ ಕೇಂದ್ರೀಕರಿಸಲ್ಪಟ್ಟಿತ್ತು.

ಈ ಹಿನ್ನಲೆ ತಿಂಗಳಿಗೂ ಅಧಿಕ ದಿನಗಳಿಂದ ಈ ಪ್ರದೇಶವನ್ನ ಜಿಲ್ಲಾಡಳಿತ ಸೀಲ್ ಡೌನ್ ಮಾಡಿತ್ತು.

ಇನ್ನು ಅಧಿಕ ದಿನಗಳ ಸೀಲ್ ಡೌನ್ ನಿಂದ ಬೇಸತ್ತಿದ್ದ ಜನರು ಸೀಲ್ ಡೌನ್ ತೆರವು ಮಾಡುವಂತೆ ಪ್ರತಿಭಟನೆಯನ್ನೂ ನಡೆಸಿದ್ದರು.

ಸ್ಥಳೀಯರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಕೊನೆಗೂ ನಿನ್ನೆ ಮಧ್ಯರಾತ್ರಿ ಸೀಲ್ ಡೌನ್ ತೆರವುಗೊಳಿಸಿದೆ.

- Advertisment -

RECENT NEWS

ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು ಪ್ರಕರಣ: ತನಿಖೆಗೆ ವಿಚಾರಣಾ ಸಮಿತಿ ರಚನೆ

ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು ಪ್ರಕರಣ: ತನಿಖೆಗೆ ವಿಚಾರಣಾ ಸಮಿತಿ ರಚನೆ ಮಂಗಳೂರು: ಮಂಗಳೂರಿನಲ್ಲಿ ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದ ಪ್ರಕರಣದ ತನಿಖೆಗೆ ಐಎಎಸ್ ಅಧಿಕಾರಿ ನೇತೃತ್ವದ ವಿಚಾರಣಾ...

ಚಾಲಕನ ಕೇರ್ ಲೆಸ್ ನಿಂದಾಗಿ ಉದ್ಯಾವರ ಸೇತುವೆಗೆ ಡಿಕ್ಕಿ ಹೊಡೆದ ಕೆ.ಎಸ್ಆರ್ ಟಿಸಿ ಬಸ್

ಚಾಲಕನ ಕೇರ್ ಲೆಸ್ ನಿಂದಾಗಿ ಉದ್ಯಾವರ ಸೇತುವೆಗೆ ಡಿಕ್ಕಿ ಹೊಡೆದ ಕೆಎಸ್ಆರ್ ಟಿಸಿ ಬಸ್ ಉಡುಪಿ: ಕೆಎಸ್ ಆರ್ ಟಿ ಸಿ ಬಸ್ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಉಡುಪಿಯ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ...

ನೇತ್ರಾವತಿ ನದಿಗೆ ಹಾರಿದ ಯುವಕನ ರಕ್ಷಣೆ ಮಾಡಿದ್ದ ಯುವಕರಿಗೆ ಅಭಿನಂದನೆ ಸಲ್ಲಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ

ನೇತ್ರಾವತಿ ನದಿಗೆ ಹಾರಿದ ಯುವಕನ ರಕ್ಷಣೆ ಮಾಡಿದ್ದ ಯುವಕರಿಗೆ ಅಭಿನಂದನೆ ಸಲ್ಲಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ ದುಬೈ: ಇಂದು ಪ್ರಪಂಚವೇ ಕೊರೊನಾ ಎಂಬ ಮಹಾ ವೈರಸ್ ಗೆ ಹೆದರಿ ಜೀವಿಸುತ್ತಿರುವ ಈ ಸಮಯದಲ್ಲಿಯೂ ಮಾನವೀಯತೆ...

ಢಾಕಾದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ: ಐವರು ಕೊರೊನಾ ವೈರಸ್ ರೋಗಿಗಳು ಸಾವು.!

ಢಾಕಾದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ: ಐವರು ಕೊರೊನಾ ವೈರಸ್ ರೋಗಿಗಳು ಸಾವು.! ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಐವರು ಕೊರೊನಾ ವೈರಸ್ ರೋಗಿಗಳು ಮೃತಪಟ್ಟಿದ್ದಾರೆ. ಬೆಂಕಿ...