Connect with us

DAKSHINA KANNADA

ದ.ಕ. ಜಿಲ್ಲೆಯಲ್ಲಿ 87 ಭೂಕುಸಿತ ತಾಣ: ನಿಷೇಧಿತ ರಸ್ತೆಯಲ್ಲಿ ಸಂಚರಿಸಿದರೆ ಕಾನೂನು ಕ್ರಮ- ಡಿಸಿ ಎಚ್ಚರಿಕೆ

Published

on

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 63 ನೆರೆ ಪೀಡಿತ ಪ್ರದೇಶಗಳನ್ನು ಮತ್ತು 87 ಭೂಕುಸಿತ ತಾಣಗಳನ್ನು ಗುರುತಿಸಲಾಗಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 63 ನೆರೆ ಪೀಡಿತ ಪ್ರದೇಶಗಳನ್ನು ಮತ್ತು 87 ಭೂಕುಸಿತ ತಾಣಗಳನ್ನು ಗುರುತಿಸಲಾಗಿದೆ.

ಚಾರ್ಮಾಡಿ ಘಾಟ್‌ ರಸ್ತೆಯೊಂದರಲದಲಿಯೇ 34 ಭೂಕುಸಿತ ಸಾಧ್ಯತೆ ತಾಣಗಳಿವೆ.

ಹಲವಾರು ಕಡೆ ಸೇತುವೆ, ಮೋರಿಗಳು ಬಿರುಕು ಬಿಟ್ಟಿವೆ ಮತ್ತು ಕಾಲು ಸಂಕಗಳು ಅಪಾಯದಲ್ಲಿವೆ.

ಅಪಾಯ ಸಾಧ್ಯತೆ ಇರುವ ಕಡೆ ಸಂಚಾರ ನಿಷೇಧ ಸೂಚನಾ ಫಲಕಗಳನ್ನು ಆಳವಡಿಸಲಾಗಿದೆ.

ಇಂತಹ ನಿಷೇಧಿತ ರಸ್ತೆ, ಸೇತುವೆ ಮೇಲೆ ಸಂಚರಿಸುವ ಸಾಹಸ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಪ್ರಕೃತಿ ವಿಕೋಪ ಮತ್ತು ಹಾನಿ ನಿಭಾಯಿಸುವ ಕುರಿತಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕೃತಿ ವಿಕೋಪದಿಂದ ಹಾನಿ ಮತ್ತು ಸಾವು ನೋವನ್ನು ಸಾಧ್ಯವಿದ್ದಷ್ಟು ಕಡಿಮೆ ಮಾಡ ಬೇಕೆಂದು ಸರಕಾರ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಇದುವರೆಗೆ ಜಿಲ್ಲಾ ಮಟ್ಟದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದ ವಿಕೋಪ ನಿರ್ವಹಣೆ ಯೋಜನೆಯನ್ನು ವಿಕೇಂದ್ರೀಕರಣ ಮಾಡಲಾಗಿದೆ.

ಇದೀಗ ಪ್ರತಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ, ಪ್ರತಿ ನಗರಾಡಳಿತ ಸಂಸ್ಥೆಗೆ ಒಂದರಂತೆ ಹಾಗೂ ಮಂಗಳೂರು ಮಹಾ ನಗರ ಪಾಲಿಕೆಯ ಪ್ರತಿ ವಾರ್ಡ್ ಗೆ ಒಂದರಂತೆ ವಿಕೋಪ ನಿರ್ವಹಣೆ ಯೋಜನೆಗಳನ್ನು ಮಾಡಲಾಗಿದೆ.

ಹಾಗೆ ಒಟ್ಟು 296 ವಿಕೋಪ ನಿರ್ವಹಣೆ ಯೋಜನಾ ಘಟಕಗಳಿವೆ.

ಈ ಮೂಲಕ ಸಣ್ಣ ಮಟ್ಟದ ಹಾನಿ ಸಾಧ್ಯತೆಯನ್ನೂ ಗುರುತಿಸಿ ನಿಭಾಯಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ರಕ್ಷಣಾ ವ್ಯವಸ್ಥೆಗಾಗಿ 25 ಜನ ಎನ್‌ಡಿಆರ್‌ಎಫ್‌, 38 ಎಸ್‌ಡಿಆರ್‌ಎಫ್‌, 190 ಅಗ್ನಿ ಶಾಮಕ ದಳ ಸಿಬಂದಿ, 74 ಮಂದಿ ಗೃಹ ರಕ್ಷಕರನ್ನು ನಿಯೋಜಿಸಲಾಗಿದೆ.

ಈ ವರ್ಷ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಇದುವರೆಗೆ ಒಟ್ಟು 7 ಮಂದಿ ಸಾವನ್ನಪ್ಪಿದ್ದು, ಎಲ್ಲ ಮೃತರ ವಾರಸುದಾರರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ವಿತರಿಸಲಾಗಿದೆ ಎಂದರು.

ಮಂಗಳೂರು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್, ಜಿಲ್ಲಾ ಎಸ್‌ಪಿ ರಿಷ್ಯಂತ್‌ ಸಿ.ಬಿ. ಅವರು ಉಪಸ್ಥಿತರಿದ್ದರು.

 

DAKSHINA KANNADA

ಮಂಗಳೂರಿನ ಆಟೋಮ್ಯಾಟ್ರಿಕ್ಸ್‌ ಶೋ ರೂಮ್‌ ನಲ್ಲಿ ಟಾಟಾ ನೆಕ್ಸಾನ್‌, ಇ.ವಿ ಬಿಡುಗಡೆ

Published

on

ಟಾಟಾ ಕಂಪೆನಿಯ ವಾಹನಗಳ ಅಧಿಕೃತ ಡೀಲರ್ ಆಗಿರುವ ಮಂಗಳೂರಿನ ಬಿಜೈನ ಆಟೋಮ್ಯಾಟ್ರಿಕ್ಸ್‌ ಶೋ ರೂಮ್‌ ನಲ್ಲಿ ನೂತನ ಟಾಟಾ ನೆಕ್ಸಾನ್‌ ಮತ್ತು ನೆಕ್ಸಾನ್‌ ಇ.ವಿ. 3.0 ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಮಾರಂಭ  ನಡೆಯಿತು.

ಮಂಗಳೂರು: ಟಾಟಾ ಕಂಪೆನಿಯ ವಾಹನಗಳ ಅಧಿಕೃತ ಡೀಲರ್ ಆಗಿರುವ ಮಂಗಳೂರಿನ ಬಿಜೈನ ಆಟೋಮ್ಯಾಟ್ರಿಕ್ಸ್‌ ಶೋ ರೂಮ್‌ ನಲ್ಲಿ ನೂತನ ಟಾಟಾ ನೆಕ್ಸಾನ್‌ ಮತ್ತು ನೆಕ್ಸಾನ್‌ ಇ.ವಿ. 3.0 ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಮಾರಂಭ  ನಡೆಯಿತು.

ಟಾಟಾ ವಾಹನಗಳ ಗ್ರಾಹಕ ವರದರಾಜ ಶೆಣೈ, ಶರಣ್‌ ಚಿಲಿಂಬಿ ಮತ್ತು ಪ್ರಿಯಾ ಮೋನಿಕಾ ಡಿ’ಸೋಜಾ ಆವರು ಈ ನೂತನ ವಾಹನಗಳನ್ನು ಅನಾವರಣಗೊಳಿಸಿದರು.

ಟಾಟಾ ಮೋಟಾರ್ಸ್‌ ನ ವಿಠಲದಾಸ್‌ ಅವರು ಹೊಸ ವಾಹನಗಳ ವೈಶಿಷ್ಟ್ಯಗಳನ್ನು ವಿವರಿಸಿ ಅತ್ಯಾಧುನಿಕ ತಾಂತ್ರಿಕತೆ, ವಿನೂತನ ವಿನ್ಯಾಸ, ಇಂಧನ ದಕ್ಷತೆ, ಕಂಫರ್ಟ್‌ ಇತ್ಯಾದಿ ಎಲ್ಲವೂ ಸೇರಿದಂತೆ ಹೊಸ ಅನುಭವವನ್ನು ಈ ವಾಹನಗಳು ನೀಡುತ್ತವೆ ಎಂದು ಹೇಳಿದರು.

ಗ್ರಾಹಕ ವರದರಾಜ ಶೆಣೈ ಮಾತನಾಡಿ ಟಾಟಾ ವಾಹನಗಳು ಜನಪ್ರಿಯ ಬ್ರಾಂಡ್‌ ಆಗಿದ್ದು, ನೆಕ್ಸಾನ್‌ ಕಾರು ಸುರಕ್ಷತೆ ಮತ್ತು ಇಂಧನ ದಕ್ಷತೆಗೆ ಹೆಸರಾಗಿದೆ. ಆಟೋಮ್ಯಾಟ್ರಿಕ್ಸ್‌ ಉತ್ತಮ ಸರ್ವೀಸ್‌ ಒದಗಿಸುತ್ತದೆ ಎಂದರು.

ನಾನು ಈ ಹಿಂದೆ ಟಾಟಾ ಪಂಚ್‌ ಖರೀದಿಸಿದ್ದು, ಈ ವಾಹನದ ಬಗ್ಗೆ ಇದುವರೆಗೆ ಯಾವುದೇ ದೂರು ಇಲ್ಲ.

ಆಟೋಮ್ಯಾಟ್ರಿಕ್ಸ್‌ ನಿಂದ ಉತ್ತಮ ಸೇವೆ ಲಭಿಸಿದೆ. ಇದೀಗ ಟಾಟಾ ನೆಕ್ಸಾನ್‌ ಖರೀದಿಸುತ್ತಿದ್ದೇನೆ ಎಂದು ಶರಣ್‌ ಚಿಲಿಂಬಿ ಹೇಳಿದರು.

2017 ರಲ್ಲಿ ಬಿಡುಗಡೆಯಾಗಿದ್ದ ನೆಕ್ಸಾನ್‌ ಕಾರು 2020 ರಲ್ಲಿ ಸುಧಾರಣೆ ಕಂಡಿತ್ತು. ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಾರಾಟವಾಗುವ ಎಸ್.ಯು.ವಿ. ಎನಿಸಿರುವ ನೆಕ್ಸಾನ್‌ ಇದೀಗ ಆಲ್‌ ನ್ಯೂ ನೆಕ್ಸಾನ್‌ ಮತ್ತು ನೆಕ್ಸಾನ್‌ ಇವಿ 3.0 ಸುಧಾರಿತ ಆವೃತ್ತಿಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಆಟೋಮ್ಯಾಟ್ರಿಕ್ಸ್‌ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್‌, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರದೀಪ್‌ ಮಯ್ಯ ಮತ್ತು ಇತರರು ಉಪಸ್ಥಿತರಿದ್ದರು.

 

Continue Reading

bengaluru

ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ..!

Published

on

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕನ್ನಡ ಖ್ಯಾತ ನಟ ವಿಜಯ ರಾಘವೇಂದ್ರ ಸೆ.24ರಂದು ಭೇಟಿ ನೀಡಿದರು.

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ನಟ ವಿಜಯ ರಾಘವೇಂದ್ರ ಅವರು ಭೇಟಿ ನೀಡಿದರು.


ಬಳಿಕ ತಾಯಿ ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಾರ್ಥಿಸಿದರು.

ಈ ಸಂದರ್ಭ ದೇವಳದ ವತಿಯಿಂದ ವಿಜಯ ರಾಘವೇಂದ್ರ ಅವರನ್ನು ಗೌರವಿಸಲಾಯಿತು.


ಈ ಹಿಂದೆ ಯಾವತ್ತೂ ನಟ ರಾಘು ಕಟೀಲು ಕ್ಷೇತ್ರಕ್ಕೆ ಪತ್ನಿ ಸ್ಪಂದನ ಜೊತೆ ಭೇಟಿ ನೀಡುತ್ತಿದ್ದರು.

ಆದರೆ ಈ ಬಾರಿ ಪತ್ನಿಯ ಅಗಲಿಕೆಯ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ನಟ ಭೇಟಿ ನೀಡಿದ್ದು, ಮುಖದಲ್ಲಿ ಪತ್ನಿಯ ಅಗಲಿಕೆಯ ನೋವು ಕಂಡು ಬರ್ತಾ ಇತ್ತು.

Continue Reading

bengaluru

ಬೆಂಗಳೂರಿನಲ್ಲಿ ಅನಾವರಣಗೊಂಡ ತುಳುನಾಡ ಸಂಸ್ಕೃತಿ -ಶಾಸಕ ಪೂಂಜಾ ಮೆಚ್ಚುಗೆ

Published

on

ಬೆಂಗಳೂರು: ತುಳುನಾಡ ಜವನೆರ್ ಬೆಂಗಳೂರು ರಿಜಿಸ್ಟರ್ ಆಯೋಜಿಸಿರುವ ರಾಜಬೂಡುಡು ಕುಡೊರ ಗರ್ದ್ ಗಮ್ಮತ್ ದ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಎಂಬ ಕಾರ್ಯಕ್ರಮವು ಸೆ.24ರಂದು ಬೆಂಗಳೂರಿನ ವಿಜಯನಗರದ ಬಂಟರ ಸಂಘದ ಸಭಾಭವನದಲ್ಲಿ  ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಅತಿಥಿ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಗುವನ್ನು ತೊಟ್ಟಿಲಿಗೆ ಹಾಕಿ ತೂಗುವ ಮೂಲಕ ಮತ್ತೊಮ್ಮೆ ವಿಶೇಷವಾಗಿ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಕಾರ್ಯಕ್ರಮಕ್ಕೆ ಅತಿಥಿಗಳು ಚಾಲನೆ ನೀಡಿದರು.

ನಂತರ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಅವರು ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ – ಬೆಳೆಸುವ ಕಾರ್ಯವನ್ನು ತುಳುನಾಡ ಜವನೆರ್ ಬೆಂಗಳೂರು ಇವರ ತಂಡ ಮಾಡ್ತ ಇರುವುದು ಶ್ಲಾಘನೀಯ ಎಂದರು.

ಇದೇ ವೇಳೆ ವೇಳೆ ಕಾರ್ಯಕ್ರದಮಲ್ಲಿ ಹಲವಾರು ಮಂದಿ ಅತಿಥಿ ಗಣ್ಯರು ಬೆಂಗಳೂರಿನಲ್ಲಿ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಸಂಘಟನೆ ಕುರಿತು ಸಂದರ್ಭೋಚಿತವಾಗಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಈ ಸಂದರ್ಭ ತುಳುನಾಡ ಜವನೆರ್ ಸಂಘಟನೆಯಿಂದ ಸನ್ಮಾನಿಸಿ ಸನ್ಮಾನಿಸ ಗೌರವಿಸಲಾಯಿತು.

ಇದಕ್ಕೂ ಮೊದಲು ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಕುಣಿತ ಭಜನೆ, ಹುಲಿ ವೇಷದ ತಂಡಗಳಿಂದ ಹುಲಿ ವೇಷದ ಕುಣಿತ ಪ್ರದರ್ಶನಗೊಂಡಿತು.

ಬಳಿಕ ಸಂಗೀತಗಾರದ ವಿದ್ಯಾಭೂಷಣ್ ಮತ್ತವರ ತಂಡದಿಂದ “ರಂಗಗ್ ಪದರಂಗ್” ಎನ್ನುವ ಭಕ್ತ ಗಾನೆ ಸುಧೆ ಮೂಡಿ ಬಂತು.

ಜೈ ತುಳುನಾಡು ರಿಜಿಸ್ಟರ್ ಬೆಂಗಳೂರು ಶಾಖೆ ಇವರ ತುಳುಲಿಪಿಯ ಕುರಿತಾದ “ತುಳು ಬರುವುದ ಐಸಿರ” ಎನ್ನುವ ಕೃತಿಯನ್ನು ವಿದ್ಯಾಭೂಷಣ್ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಮಕ್ಕಳಿಗಾಗಿ ಕೃಷ್ಣ ವೇಷ ಮಕ್ಕಳ ವೇಷ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.

ಮುದ್ದು ಮಕ್ಕಳು ಈ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ನಂತರ ವಿಠಲ್ ನಾಯಕ್ ಅವರ ತಂಡದಿಂದ ಗೀತಾ ಸಾಹಿತ್ಯ ಸಂಭ್ರಮ ಸೇರಿದಂತೆ,ಇನ್ನಿತರ ಹಲವಾರು ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂತು.

ಒಟ್ಟಿನಲ್ಲಿ ತುಳುನಾಡಿ ಸಂಪೂರ್ಣ ಸಂಸ್ಕೃತಿ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡು ನೋಡುಗರ ಮನಸೊರೆಗೊಂಡಿತು.

ಅಧ್ಯಕ್ಷ ಮಹೇಶ್ ಬೈಲೂರು ಅತಿಥಿಗಳನ್ನು ಸ್ವಾಗತಿಸಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಪಿಎಂಪಿ ನಿಕಟ ಪೂರ್ವ ಅಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಕಳದ ಬಾಲಾಜಿ ಶಿಬಿರದ ಬಾಲಕೃಷ್ಣ ಹೆಗಡೆ, ಬಂಟರ ಸಂಘದ ಗೌರವ ಕಾರ್ಯದರ್ಶಿ ಅನಂದ್ ರಾಮ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಅತಿಥಿ-ಗಣ್ಯರು ಪಾಲ್ಗೊಂಡಿದ್ದರು.

 

Continue Reading

LATEST NEWS

Trending