Connect with us

LATEST NEWS

ಮಂಗಳೂರು: ಕಾರುಗಳ ಮೇಲೆ ಬಿದ್ದ ಬೃಹತ್‌ ಕಟೌಟ್‌-ಟ್ರಾಫಿಕ್‌ ಜಾಂ

Published

on

ಮಂಗಳೂರು: ನಗರದ ಟೌನ್‌ ಬಳಿ ಅಳವಡಿಸಿದ್ದ ಬೃಹತ್‌ ಗಾತ್ರದ ಕಟೌಟ್‌ ಗಾಳಿಗೆ ಹಾರಿ ಎರಡು ಕಾರುಗಳ ಮೇಲೆ ಬಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ತೆರವೊಳಿಸಿದ್ದಾರೆ.


ಏ.27ರಿಂದ ಏ.30ರವರೆಗೆ ಮಂಗಳೂರು ಟೌನ್‌ ಹಾಲ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್‌ ಸ್ಪರ್ಧೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಕ್ಲಾಕ್ ಟವರ್‌ ಬಳಿ ಅಳವಡಿಸಿದ್ದ 40×20 ಬೃಹತ್‌ ಗಾತ್ರದ ಕಟೌಟ್‌ ಅಳವಡಿಸಿದ ಅರ್ಧ ಗಂಟೆಯಲ್ಲೆ ಗಾಳಿಗೆ ಹಾರಿ ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಿದ್ದ ಎರಡು ಕಾರುಗಳ ಮೇಲೆ ಬಿದ್ದಿದೆ.

ಅದೃಷ್ಟವಶಾತ್‌ ಪಾರ್ಕ್‌ ಮಾಡಿದ ಕಾರಿನಲ್ಲಿ ಯಾರೂ ಇರಲಿಲ್ಲ. ಈ ವೇಳೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ಸಿಬ್ಬಂದಿ ಕಟೌಟ್‌ ಅಡಿ ಇದ್ದ ವಾಹನ ತೆರವುಗೊಳಿಸಿದ್ದಾರೆ. ಕಟೌಟ್‌ ಬಿದ್ದ ಪರಿಣಾಮ ಕೆಲಕಾಲ ಕ್ಲಾಕ್‌ ಟವರ್‌ ಬಳಿ ಸಂಚಾರ ಅಸ್ತವ್ಯಸ್ತಗೊಂಡಿತು.

FILM

ಹೆಣ್ಣು ಮಕ್ಕಳು ಕನಿಷ್ಠ 25 ದಾಟಿದ ಮೇಲೆ ಮದುವೆಯಾಗಿ; ಮಿಲನಾ ನಾಗರಾಜ್

Published

on

ಮಂಗಳೂರು : ಮದುವೆ ಎಂಬುದು ಎಲ್ಲರ ಬಾಳಿನ ಪ್ರಮುಖ ಘಟ್ಟ. ಕೆಲವೊಂದು ವಿಷಯ, ಜವಾಬ್ದಾರಿಗಳು ಮದುವೆ ಆದ ಮೇಲೆಯೇ ಬರುತ್ತದೆ. ಇನ್ನು ಮನೆಯ ಹಿರಿಯರು ಹೇಳುತ್ತಾ ಇರುತ್ತಾರೆ ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ. ಆ ಸಂಬಂಧವನ್ನು ದೂರ ಮಾಡಲು ಯಾರಿಂದ ಸಾಧ್ಯವಿಲ್ಲ ಎಂದು. ಹೀಗೆ ಕೆಲವೊಂದು ಬುದ್ಧಿವಾದದ ಮಾತುಗಳನ್ನು ಎಲ್ಲರೂ ಹೇಳುತ್ತಾ ಇರುತ್ತಾರೆ. ಇದೇ ರೀತಿ ಫಿಲ್ಮ ಸ್ಟಾರ್ ತಾಯಿಯಾಗ್ತಿರೋ ಮಿಲನಾ ನಾಗರಾಜ್ ಈಗ ತಮ್ಮ ಬದುಕಿನ ಸಂತಸದ ಘಟ್ಟದಲ್ಲಿ ಇದ್ದಾರೆ. ಮಿಲನಾ ಮತ್ತು ಪತಿ ಡಾರ್ಲಿಂಗ್ ಕೃಷ್ಣ ಇಬ್ಬರೂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಮಿಲನಾ ನಾಗರಾಜ್ ಯಾವಾಗಲೂ ಪ್ರಬುದ್ಧತೆಯಿಂದಲೇ ಮಾತನಾಡುತ್ತಾರೆ.

ಇದೇ ರೀತಿಯಾಗಿ ನಮ್ಮ ಬದುಕಿನ ಸಾರ್ಥಕ ಕ್ಷಣಗಳನ್ನು ಮಿಲನಾ ತನ್ನ ವಿಡಿಯೋದಲ್ಲಿ ಮೆಲುಕು ಹಾಡಿದ್ದಾರೆ. ಹಾಗೆಯೇ ನಿಮಗೆ 25 ವರ್ಷಗಳಿಗಿಂತ ಹೆಚ್ಚು ವಯಸ್ಸಾಗುವವರಗೆ ಖಂಡಿತಾ ಮದುವೆಯಾಗ್ಬೇಡಿ. ಮೊದಲು ನೀವು ದುಡಿಯಿರಿ, ಗಳಿಸಿ, ಸ್ವತಂತ್ರರಾಗಿ, ಮಾನಸಿಕವಾಗಿ ಗಟ್ಟಿಯಾಗಿ, ಪ್ರಬುದ್ಧರಾಗಿ. ನಿಮ್ಮ ಬದುಕಿನ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವಷ್ಟು ಗಟ್ಟಿಯಾಗಿ ಆಗ ಮದುವೆಯಾಗಿ. ಅನೇಕ ಹುಡುಗಿಯರು, ಹುಡುಗರು ಕೂಡಾ ಗೊಂದಲದಲ್ಲೇ ಮದುವೆಯಾಗ್ತಾರೆ. ಹಾಗೆ ಆಗಬಾರದು. ಎಂದು ನಟಿ ಮಿಲನಾ ಹೇಳಿದ್ದರು.

ಅದೇ ರೀತಿ ಗಂಡು ಹೆಣ್ಣಿನ ಹೊಂದಾಣಿಕೆ ಹೇಳುವಷ್ಟು ಸುಲಭದ ಮಾತಲ್ಲ. ಮನೆಯಲ್ಲಿ ನಾವು ನಮ್ಮ ತಂದೆ- ತಾಯಿ ಜೊತೆಗೇ ಚಿಕ್ಕ ಚಿಕ್ಕ ವಿಚಾರಗಳಿಗೆ ಜಗಳ ಆಡುತ್ತಿರುತ್ತೇವೆ. ಆದರೆ ಮಕ್ಕಳು ಎನ್ನುವ ಕಾರಣಕ್ಕೆ ತಂದೆ ತಾಯಿ ಹೊಂದಿಕೊಳ್ಳುತ್ತಾರೆ. ಸುಲಭವಾಗಿ ಕ್ಷಮಿಸಿಬಿಡುತ್ತಾರೆ. ಆದರೆ ನಮ್ಮ ಬದುಕಿನಲ್ಲಿ ಒಬ್ಬ ಹೊಸ ವ್ಯಕ್ತಿ ಬಂದಾಗ ಹಾಗಿರುವುದಿಲ್ಲ. ಅವರು ಈ ಎಲ್ಲಾ ವಿಚಾರಗಳಿಗೆ ರೆಡಿ ಇರುವುದಿಲ್ಲ. ಅವರು ನಮ್ಮಿಂದ ಒಳ್ಳೆಯ ವಿಚಾರಗಳನ್ನ, ಸಿಹಿಯಾದ ವಿಚಾರಗಳನ್ನಷ್ಟೇ ಬಯಸುತ್ತಾರೆ. ಹಾಗಾಗಿ ಈ ಪ್ರಬುದ್ಧತೆ ಸಂಸಾರ ಸಾಮರಸ್ಯದಲ್ಲಿ ಬಹಳ ಮುಖ್ಯ ಎಂದಿದ್ದಾರೆ ಮಿಲನಾ ನಾಗರಾಜ್.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹೆಚ್ಚು ಹರಿದಾಡುತ್ತಿದೆ. ಮದುವೆ, ಸಂಬಂಧಗಳು, ಬದುಕು-ಭವಿಷ್ಯ ಈ ಎಲ್ಲದರ ಬಗ್ಗೆ ಅದೆಷ್ಟು ಸರಳವಾಗಿ ಮಿಲನಾ ವಿವರಿಸಿದ್ದಾರೆ ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಇನ್ನು ಈ ವರ್ಷ ಪೂರ್ತಿ ಡಾರ್ಲಿಂಗ್ ಕೃಷ್ಣ ಬಹಳ ಬ್ಯುಸಿಯಂತೆ. ಸಾಲು ಸಾಲು ಪ್ರಾಜೆಕ್ಟ್ ಗಳ ನಡುವೆ ಪತ್ನಿ ಜೊತೆ ಸಮಯ ಕಳೆಯಲು ಸಾಕಷ್ಟು ಪ್ಲಾನಿಂಗ್ ಮಾಡಿಕೊಳ್ತಿದ್ದಾರಂತೆ. ಮೊದಲ ಎರಡು ತಿಂಗಳು ನನಗೂ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳಿದ್ದವು, ಆದರೆ ನಂತರ ನಿಧಾನಕ್ಕೆ ದೇಹ ಮತ್ತು ಮನಸ್ಸು ಈ ಸನ್ನಿವೇಶಕ್ಕೆ ಹೊಂದಿಕೊಂಡಿದೆ. ಸೆಪ್ಟೆಂಬರ್ ಗಾಗಿ ಎದುರು ನೋಡುತ್ತಿದ್ದೇವೆ ಎಂದು ಮಿಲನಾ ನಾಗರಾಜ್ ಖುಷಿಯಿಂದ ತಿಳಿಸಿದ್ದಾರೆ.

Continue Reading

bangalore

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕಪಲ್ ‘ರೊಮ್ಯಾನ್ಸ್..’! ಪ್ರಿಯತಮಗೆ ಚುಂಬಿಸಿದ ಯುವತಿ.!!ವೀಡಿಯೋ ವೈರಲ್

Published

on

ಬೆಂಗಳೂರು:  ಅಗಾಗ ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳ ಆಲಿಂಗನದ ವೀಡಿಯೋ ವೈರಲ್ ಆಗುತ್ತಲೇ ಇದೆ.  ಇದೀಗ ಬೆಂಗಳೂರಿನಲ್ಲಿಯೂ ಇಂಥದ್ದೇ ಒಂದು ಘಟನೆ ಮರುಕಳಿಸಿದೆ. ಕಪಲ್ಸ್ ಇಬ್ಬರು ಒಬ್ಬರನೊಬ್ಬರು ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

bangalore metro

ಬೆಂಗಳೂರು ನಮ್ಮ ಮೆಟ್ರೋದ ಬಾಗಿಲಿನ ಬಳಿ ಯುವತಿ-ಯವಕರಿಬ್ಬರೂ ನಿಂತುಕೊಂಡಿದ್ದು ಒಬ್ಬರನೊಬ್ಬರು ತಬ್ಬಿಕೊಂಡಿದ್ದಾರೆ. ಯುವತಿ ಯುವಕನ ಕೆನ್ನೆಗೆ ಮುತ್ತು ನೀಡಿದ್ದಾಳೆ. ಈ ದೃಶ್ಯವನ್ನು ಮೆಟ್ರೋದಲ್ಲಿದ್ದ ಪ್ರಯಾಣಿಕರೋರ್ವರ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಈ ವಿಡಿಯೋವನ್ನು KPSB 52 ಎಂಬ ಎಕ್ಸ್​ ಖಾತೆಯಲ್ಲಿ ಪೋಸ್ಟ್​​​ ಮಾಡಿದ್ದು ‘ನಮ್ಮ ಮೆಟ್ರೋದಲ್ಲಿ ಇದೇನು ಅಸಭ್ಯವರ್ತನೆ’ ಎಂದು ಪ್ರಶ್ನಿಸಿದ್ದಾರೆ. ಇನ್ನು ಮೆಟ್ರೋದಲ್ಲಿದ್ದ ಇತರ ಪ್ರಯಾಣಿಕರು ಈ ಜೋಡಿಯ ರೋಮ್ಯಾನ್ಸ್‌ನಿಂದಾಗಿ ಮುಜುಗರಕ್ಕೊಳಗಾಗಿದ್ದಾರೆ.

Read More..; 15 ಸಾವಿರ ಸಂಬಳ..! ಮನೆಯಲ್ಲಿ ಕಂತೆ ಕಂತೆ ನೋಟು..! ED ಅಧಿಕಾರಿಗಳೇ ಶಾಕ್..!

ದೆಹಲಿಯಲ್ಲೂ ನಡೆದಿತ್ತು ಈ ಘಟನೆ:

ಈ ಹಿಂದೆ ದೆಹಲಿಯ ಮೆಟ್ರೋ ಸ್ಟೇಷನ್‌ ನಲ್ಲಿ ದಂಪಂತಿ ರೊಮ್ಯಾನ್ಸ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ದಂಪತಿ ಮೈಮರೆತು ರೋಮ್ಯಾನ್ಸ್ ಮಾಡಿಕೊಂಡು ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಅಲ್ಲದೇ ಇಬ್ಬರೂ ಲಿಪ್‌ಲಾಕ್‌ ಕೂಡಾ ಮಾಡಿದ್ದಾರೆ. ದಂಪತಿಯ ಸರಸಸಲ್ಲಾಪವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬ ವೀಡಿಯೋ ಮಾಡಿದ್ದಾನೆ. ಇನ್ನು ದೆಹಲಿಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು ಜನರನ್ನು ಮುಜುಗರಕ್ಕೆ ಒಳಪಡಿಸುತ್ತಿದೆ. ಈ ಬಗ್ಗೆ ಮೆಟ್ರೋ ಆಡಳಿತ ಮಂಡಳಿ ಸಾರ್ವಜನಿಕರಿಗೆ ಸೂಚನೆ ನೀಡಿದ್ದರೂ ಜನರು ಮಾತ್ರ ಕ್ಯಾರೇ ಅನ್ನುತ್ತಿಲ್ಲ.

 

 

Continue Reading

LATEST NEWS

SSLC ಫಲಿತಾಂಶ ಪ್ರಕಟಿಸಲು ದಿನಾಂಕ ನಿಗದಿ; ಯಾವಾಗ?

Published

on

ಬೆಂಗಳೂರು: 2023-24ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ದಿನಗಣನೆ ಶುರುವಾಗಿದೆ. ಕರ್ನಾಟಕ ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ವಾರವೇ ರಾಜ್ಯದಲ್ಲಿ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.

2023-24ನೇ ಸಾಲಿನ SSLC ಪರೀಕ್ಷೆ-1 ಕಳೆದ ಮಾರ್ಚ್‌ 25 ರಿಂದ ಏಪ್ರಿಲ್ 6, 2024ರವರೆಗೆ ನಡೆದಿತ್ತು. ಪರೀಕ್ಷೆ-1 ಬರೆದಿರುವ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಕೊನೆಗೂ ಕಾಯುವಿಕೆಯ ಸಮಯ ಕೊನೆಯಾಗುತ್ತಿದೆ.

ಈ ಬಾರಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗುವುದು ತಡವಾಗಿದೆ. SSLC ಮೌಲ್ಯಮಾಪನ ಈಗಾಗಲೇ ಸಂಪೂರ್ಣವಾಗಿದ್ದು, ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲು ಸರ್ವ ಸಿದ್ಧತೆಯನ್ನು ಮಾಡಿಕೊಂಡಿದೆ.

ನಾಳೆ ಅಂದ್ರೆ ಮೇ 7ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮತದಾನ ಮುಗಿದ ಎರಡು ದಿನದಲ್ಲಿ SSLC ಫಲಿತಾಂಶ ಪ್ರಕಟಿಸಲು ಪರೀಕ್ಷಾ ಮಂಡಳಿ ಮೂಲಗಳಿಂದ ಖಚಿತ ಮಾಹಿತಿ ಲಭ್ಯವಾಗಿದೆ. ಇದೇ ಮೇ 8 ಬುಧವಾರ ಇಲ್ಲವೇ ಮೇ 9ರ ಗುರುವಾರ SSLC ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಮೇ 10 ಬಸವ ಜಯಂತಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದೆ. ಹೀಗಾಗಿ ಮೇ 9ರೊಳಗೆ SSLC ಫಲಿತಾಂಶ ಪ್ರಕಟ ಮಾಡಲು ಪರೀಕ್ಷಾ ಮಂಡಳಿ ಮೂಲಗಳಿಂದ ಖಚಿತ ಮಾಹಿತಿ ಸಿಕ್ಕಿದೆ.

Continue Reading

LATEST NEWS

Trending