Thursday, August 11, 2022

‘ಕೋಮುವಾದಿ ಗೂಂಡಾಗಿರಿಗೆ ಬಜ್ಪೆ ಪೊಲೀಸರ ತಲೆದಂಡ ನಾಚಿಕೆಗೇಡಿನ ಕ್ರಮ’

ಮಂಗಳೂರು: ಕಟೀಲು ಪೇಟೆಯಲ್ಲಿ ಮುಸ್ಲಿಮ್ ಎಳನೀರು ವ್ಯಾಪಾರಿಗೆ ವ್ಯಾಪಾರ ನಡೆಸಲು ನಿಷೇಧ ಹೇರಿ, ಬೆದರಿಕೆ ಹಾಕಿದ ಬಿಜೆಪಿಯ ಕ್ರಿಮಿನಲ್ ಕಾರ್ಯಕರ್ತರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಂಡ ಬಜ್ಪೆ ಠಾಣಾಧಿಕಾರಿ ಸಂದೇಶ್ ಹಾಗೂ ಮೂರು ಸಿಬ್ಬಂದಿಗಳನ್ನು ರಾಜ್ಯ ಬಿಜೆಪಿ ಸರಕಾರ ಅಮಾನತುಗೊಳಿಸಿರುವುದು ಖಂಡನೀಯ.

ಇದು ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕುತ್ತಿರುವ ಆಳುವ ಬಿಜೆಪಿ ಬೆಂಬಲಿತ ಕೋಮುವಾದಿ ಗೂಂಡಾಗಿರಿಗೆ ಕಾನೂನು ಪ್ರಕಾರ ತಡೆ ಒಡ್ಡಿದ್ದಕ್ಕಾಗಿ ಪೊಲೀಸ್ ಇಲಾಖೆಯಿಂದ ಪಡೆದ ತಲೆದಂಡ, ನಾಚಿಕೆಗೇಡಿನ ಕ್ರಮ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಜಂಟಿ ಹೇಳಿಕೆಯಲ್ಲಿ ಆರೋಪಿಸಿದ್ದಾರೆ ಹಾಗೂ ಅಮಾನತನ್ನು ತಕ್ಷಣ ವಾಪಾಸು ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.
ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ, ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸುವ, ಬಹಿಷ್ಕಾರಗಳನ್ನು ಹಾಕುವ ಮೂಲಕ ಆರ್ಥಿಕವಾಗಿ ದುರ್ಬಲಗೊಳಿಸುವ, ಅಭದ್ರತೆಗೆ ದೂಡುವ ಕೋಮುವಾದಿ ಅಜೆಂಡಾವನ್ನು ಸರಕಾರದ ಬೆಂಬಲದೊಂದಿಗೆ ಬಿಜೆಪಿ ಕಾರ್ಯಕರ್ತರು ಜಾರಿಗೊಳಿಸುತ್ತಿದ್ದಾರೆ.

ಕಾನೂನು ಪ್ರಕಾರ ಗಂಭೀರ ಅಪರಾಧ ಪ್ರಕರಣವಾಗಿರುವ ಇಂತಹ ಕೃತ್ಯಗಳನ್ನು ಸಂಸದ, ಶಾಸಕರುಗಳ ಒತ್ತಡದಿಂದಾಗಿ ಪೊಲೀಸ್ ಇಲಾಖೆ ತಡೆಯಲು ಹಿಂಜರಿಯುತ್ತಿದೆ. ಕಟೀಲು ಪೇಟೆಯಲ್ಲಿಯೂ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕಲು ಪ್ರಯತ್ಮಗಳು ನಡೆದಿವೆ. ಅದರ ಭಾಗವಾಗಿಯೇ ಅಂಗಡಿಗಳಿಗೆ ಎಳೆನೀರು ಸರಬರಾಜು ಮಾಡುವ ಮುಸ್ಲಿಂ ವ್ಯಾಪಾರಿಗೆ ಎಳೆನೀರು ಇಳಿಸಲು ತಡೆಹಾಕಲಾಗಿದೆ.

ಊರಿಗೆ ಕಾಲಿಡದಂತೆ ಬೆದರಿಸಲಾಗಿದೆ‌.‌ ಕ್ರಿಮಿನಲ್ ಹಿನ್ನಲೆಯ ಬಿಜೆಪಿ ಕಾರ್ಯಕರ್ತರ ಕೋಮುವಾದಿ ಗೂಂಡಾಗಿರಿಯ ವಿರುದ್ದ ದಕ್ಷ ಅಧಿಕಾರಿ ಎಂದು ಹೆಸರಾಗಿರುವ ಸಂದೇಶ್ ಆರೋಪಿಗಳನ್ನು ವಶಕ್ಕೆ ಪಡೆದು ಕ್ಷಿಪ್ರ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿ ಜನಪ್ರತಿನಿಧಿಗಳು, ಸರಕಾರದ ಮುಖ್ಯಸ್ಥರು ಬಜ್ಪೆ ಠಾಣಾಧಿಕಾರಿಯನ್ನು ಅಭಿನಂದಿಸಬೇಕಿತ್ತು.

ಬದಲಿಗೆ ತಮ್ಮ ಬೆಂಬಲದೊಂದಿಗೆ ಕೋಮುವಾದಿ ಅಜೆಂಡಾ ಜಾರಿಗೊಳಿಸುತ್ತಿರುವ ಕ್ರಿಮಿನಲ್ ಕಾರ್ಯಕರ್ತರನ್ನು ತೃಪ್ತಿಪಡಿಸಲು ಠಾಣಾಧಿಕಾರಿ ಸಹಿತ ಬಜ್ಪೆ ಠಾಣೆಯ ಪೊಲೀಸರ ತಲೆದಂಡ ಪಡೆಯಲಾಗಿದೆ. ಇಂತಹ ನಾಚಿಕೆಗೇಡಿನ ಕ್ರಮದಿಂದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯಕ್ಕೆ ಪೆಟ್ಟು ಬಿದ್ದಿದೆ‌. ಕೋಮುವಾದಿ ಪುಂಡಾಟಿಕೆಗೆ, ಗೂಂಡಾ ಗುಂಪುಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ಇದನ್ನು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.‌

ಹಾಗೆಯೆ ಗೂಂಡಾಗಿರಿಗೆ ಕಡಿವಾಣ ಹಾಕಲು ಯತ್ನಿಸಿದ ಪೊಲೀಸರ ಮೇಲಿನ ಅಮಾನತು ಕ್ರಮ ಬಿಜೆಪಿ ಆಡಳಿತದಲ್ಲಿ ಜಿಲ್ಲೆಯಲ್ಲಿ ಚಿಗಿತು ಕೊಂಡಿರುವ ಮರಳು, ಟಿಂಬರ್, ಜುಗಾರಿ, ಗ್ಯಾಂಬ್ಲಿಂಗ್ ಮುಂತಾದ ದಂಧೆಯ ಮಾಫಿಯಾಗಳಿಗೆ ಮತ್ತಷ್ಟು ಬಲ ತುಂಬಲಿದೆ.

ಕೋಮುವಾದಿ ಪುಂಡರು ಹಾಗೂ ವಿವಿಧ ದಂಧೆಯ ಕ್ರಿಮಿನಲ್ ಗಳ ನಡುವೆ ಈಗಾಗಲೆ ಇರುವ ಹೊಂದಾಣಿಕೆಗಳು ಜಿಲ್ಲೆಯಲ್ಲಿ ಕಾನೂನಿನ ಆಡಳಿತವನ್ನು ಮುರಿದು ಹಾಕಲಿದೆ.

ಇದು ಜನಸಾಮಾನ್ಯರ ನೆಮ್ಮದಿಯ ಜೀವನಕ್ಕೆ ಕಂಟಕವಾಗಲಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಬಜ್ಪೆ ಠಾಣೆಯ ಪೊಲೀಸರ ಮೇಲಿನ ಅಮಾನತು ಕ್ರಮವನ್ನು ವಾಪಾಸು ಪಡೆದು ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು, ಇಲ್ಲದಿದ್ದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ

ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇಂದು ರಕ್ಷಾಬಂಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರರವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು...

“ಬೆಳ್ತಂಗಡಿಯಲ್ಲಿ ಪೂಂಜಾ ಬಂದ್ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ”

ಬೆಳ್ತಂಗಡಿ: 'ನಮ್ಮ ತಾಲೂಕಿನಲ್ಲಿ ಹರೀಶ್ ಪೂಂಜಾನ 40 ಪರ್ಸೆಂಟ್ ವ್ಯವಹಾರ ನಡೆಯುತ್ತಿದೆ. ಬೆಳ್ತಂಗಡಿಯಲ್ಲಿ ಪೂಂಜಾ ಬಂದ ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ. ದ.ಕ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವೇಳೆ...

ಕಾಶ್ಮೀರದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 3 ಯೋಧರು ಹುತಾತ್ಮ -ಇಬ್ಬರು ಉಗ್ರರು ಉಡೀಸ್

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದು, ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.ಘಟನೆಯಲ್ಲಿ ಇನ್ನಿಬ್ಬರು ಯೋಧರು ಗಾಯಗೊಂಡಿದ್ದು, ಅದರಲ್ಲಿ ಓರ್ವ ಸ್ಥಿತಿ...