Saturday, October 1, 2022

ಕೋಟ್ಯಾಂತರ ರೂ. ವಂಚಿಸಿದ ಬ್ಯಾಂಕ್ ಅಧಿಕಾರಿ ಅರೆಸ್ಟ್

ಕಾರವಾರ: ಬ್ಯಾಂಕ್ ಅಧಿಕಾರಿಯೋರ್ವ ಬ್ಯಾಂಕ್‌ನಲ್ಲಿ ಕೋಟ್ಯಾಂತರ ರೂ. ವಂಚನೆ ಮಾಡಿದ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶದ ಕುಮಾರ ಬೋನಾಲ ಕೃಷ್ಣಮೂರ್ತಿ ಬೋನಾಲ ಬಂಧಿತ ಆರೋಪಿ.
ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದಲ್ಲಿ ವಂಚನೆ ಮಾಡಿದ್ದ ಈತ ಬ್ಯಾಂಕ್ ನಲ್ಲಿ ಸಹಾಯಕ ವ್ಯವಸ್ಥಾಪಕನಾಗಿದ್ದ.


ಬ್ಯಾಂಕ್ ಆಫ್ ಬರೋಡಾ ಯಲ್ಲಾಪುರ ಶಾಖೆಯಿಂದ ಪತ್ನಿಯ ಖಾತೆಗೆ 26,99,5000 ರೂ. ವರ್ಗಾವಣೆ ಮಾಡಿಕೊಂಡು ಬ್ಯಾಂಕ್‌ಗೆ ಮೋಸ ಮಾಡಿ ನಂಬಿಕೆ ದ್ರೋಹ ಮಾಡಿರುವ ಬಗ್ಗೆ ವ್ಯವಸ್ಥಾಪಕ ವಿಘ್ನೇಶ್ವರ ಭಟ್ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಹುಬ್ಬಳ್ಳಿಯಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಸಿದ್ಧರಾಮಯ್ಯನಿಗೆ ಧಮ್ ಇದ್ರೆ ಹಿಂದೂಗಳ ಓಟು ಬೇಡ ಎನ್ನಲಿ ನೋಡೋಣ-ರಾಜ್ಯಾಧ್ಯಕ್ಷ ನಳಿನ್

ಹುಬ್ಬಳ್ಳಿ: ನಮಗೆ ಪಿಎಫ್‌ಐ ಬ್ಯಾನ್ ಮಾಡುವಂತೆ ಹಾಕಿದ ಸವಾಲಿಗೆ ತಕ್ಕಂತೆ ಇಂದು ಮಾಡಿ ತೋರಿಸಿದ್ದೇವೆ. ಅಷ್ಟೊಂದು ಧಮ್ ಇದ್ರೆ ಸಿದ್ಧರಾಮಯ್ಯನವರು ಹಿಂದೂಗಳ ಓಟು ನನಗೆ ಬೇಕಾಗಿಲ್ಲ ಎಂದು ಹೇಳಲಿ ನೋಡೋಣ' ಎಂದು ಬಿಜೆಪಿ...

ಮಂಗಳೂರು: ನೂತನ ಮೇಯರ್ ಪ್ರಥಮ ಸಭೆ-ತ್ಯಾಜ್ಯ ವಿಲೇವಾರಿ ಗುತ್ತಿಗೆ ಮತ್ತು LED ಲೈಟ್‌ ಬಗ್ಗೆ ಗಂಭೀರ ಚರ್ಚೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಸಿಕ ಸಭೆ ಇಂದು ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಮೇಯರ್‌ ಜಯಾನಂದ ಅಂಚನ್‌ ಆಧ್ಯಕ್ಷತೆಯ ಈ ಪ್ರಥಮ ಸಭೆಯಲ್ಲಿ ನಗರದ ತ್ಯಾಜ್ಯ ವಿಲೆವಾರಿ ಗುತ್ತಿಗೆ ಮತ್ತು...

ಮಂಗಳೂರು: ರಥಬೀದಿ ವೆಂಕಟರಮಣ ದೇಗುಲಕ್ಕೆ ಪತ್ನಿ ಜೊತೆ ಭೇಟಿ ಕೊಟ್ಟ ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ

ಮಂಗಳೂರು: ನಗರದ ರಥಬೀದಿ ವೆಂಕಟರಮಣ ದೇವಸ್ಥಾನ, ಆಚಾರ್ಯಮಠ ವಠಾರದಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿರುವ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ...