Friday, February 3, 2023

ಕಾಸರಗೋಡು: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇಗುಲದ ದೈವೀ ಸ್ವರೂಪಿ ಮೊಸಳೆ ಬಬಿಯಾ ದೈವೈಕ್ಯ…

ಕಾಸರಗೋಡು: ಇಲ್ಲಿನ ಕುಂಬಳೆ ಸಮೀಪದ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಕ್ಷೇತ್ರ ಪಾಲಕನಂತಿದ್ದ ದೈವೀ ಸ್ವರೂಪಿ ಮೊಸಳೆ ʼಬಬಿಯಾ ದೈವೈಕ್ಯವಾಗಿದೆ. ಬಬಿಯಾ ತನ್ನ ದೀರ್ಘ ಬದುಕಿಗೆ ವಿದಾಯ ಹೇಳಿದೆ.


ಈ ಕ್ಷೇತ್ರ ಕೆರೆ ನೀರಿನ ಮಧ್ಯೆ ಇದ್ದು ಕೆರೆಯಲ್ಲಿ ವಾಸವಾಗಿದ್ದ ಬಬಿಯಾ ದೇವರ ಮೊಸಳೆ ಎಂದೇ ಪ್ರಸಿದ್ಧಿ ಪಡೆದಿತ್ತು.

ಬಬಿಯಾಕ್ಕೆ 80ವರ್ಷ ವಯಸ್ಸಾಗಿತ್ತು. 1946ರಲ್ಲಿ ಈ ದೇವಾಲಯ ಪ್ರವೇಶಿಸಿದ್ದ ಈ ಮೊಸಳೆಯ ಐತಿಹ್ಯದ ಹಿನ್ನೆಲೆಯಲ್ಲಿ ನಾವು ಅದರ ವಯಸ್ಸನ್ನು ಅಂದಾಜಿಸಬಹುದು ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುತ್ತಿದ್ದ ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ.

ಕೆಲ ವರ್ಷದ ಹಿಂದೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.


ಹಲವಾರು ದೇವಸ್ಥಾನಗಳಲ್ಲಿ ದೇವರ ಆನೆ, ಬಸವ ಇತ್ಯಾದಿ ಪ್ರಾಣಿಗಳಿಗಳಿರುತ್ತದೆ. ಆದರೆ ಈ ದೇವಾಲದ ಕೆರೆಯ ನಡುವಿನಲ್ಲಿ ನೆಲೆಸಿರುವ ಅನಂತಪದ್ಮನಾಭನಿಗೆ ಮೊಸಳೆ-ಬಬಿಯಾ ಕಾವಲು ಕಾಯುವ ಕೆಲಸ’ ಮಾಡುತ್ತದೆ ಎನ್ನುವ ನಂಬಿಕೆ ಇತ್ತು.

ವರ್ಷದ ಎಲ್ಲಾ ದಿನವೂ ಶುದ್ಧ ನೀರಿನಿಂದ ತುಂಬಿರುವ ಈ ಕೆರೆಯಲ್ಲಿ ಈ ಮೊಸಳೆಯೂ ಕೂಡ ವಾಸವಾಗಿತ್ತು. ದೇವರ ನೈವೇದ್ಯವೇ ಇದಕ್ಕೆ ನಿತ್ಯ ಆಹಾರ.

ಬಬಿಯಾ ಈ ಕೆರೆಯಿಂದ ದೇವಾಲಯದಲ್ಲಿರುವ ದೊಡ್ಡ ಕೆರೆಗೆ ಮನುಷ್ಯರು ನಡೆದಾಡುವ ದಾರಿಯಲ್ಲೇ ಸಾಗುತ್ತಾ ಸ್ವಚ್ಚಂದವಾಗಿ ಜೀವನ ನಡೆಸುತ್ತಿತ್ತು.

ಹಾಗೆಂದು ಇದುವರೆಗೂ ಯಾರಿಗೂ ನೋವನ್ನುಂಟು ಮಾಡಿದ ಉದಾಹರಣೆಗಳಿಲ್ಲ. ಇದೀಗ ಬಬಿಯಾ ಅಗಲಿರೋದು ಭಕ್ತರಲ್ಲಿ ತೀವ್ರ ಬೇಸರ ಮೂಡಿಸಿದೆ.

LEAVE A REPLY

Please enter your comment!
Please enter your name here

Hot Topics

ದಕ್ಷಿಣ ಕನ್ನಡದ ನೂತನ ಎಸ್‌ಪಿಯಾಗಿ ಡಾ. ವಿಕ್ರಮ್ ಅಮ್ಟೆ ಅಧಿಕಾರ ಸ್ವೀಕಾರ..!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ವಿಕ್ರಮ್ ಅಮ್ಟೆ ಅಧಿಕಾರ ಸ್ವೀಕರಿಸಿದರು.ರಾಜ್ಯ ಸರಕಾರ ದ.ಕ. ಜಿಲ್ಲಾ ಎಸ್ಪಿಯಾಗಿದ್ದ ಸೋನಾವಾನೆ ಋಷಿಕೇಶ್ ಭಗವಾನ್ ಅವರನ್ನು ಗುಪ್ತಚರ ಎಸ್ಪಿಯಾಗಿ ವರ್ಗಾಯಿಸಿತ್ತು. ಗುಪ್ತಚರ ಎಸ್ಪಿಯಾಗಿದ್ದ...

ಫೆ 5ರಿಂದ ಮರೋಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ..!

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮರೋಡಿ ಗ್ರಾಮದ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಾನದಲ್ಲಿ  ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಯು ಫೆ 5 ರಿಂದ 9 ರವರೆಗೆ ವಿವಿಧ ವೈದಿಕ,...

ಬೆಂಗಳೂರು : ಹೆಂಡ್ತಿಯ ಶೀಲದ ಶಂಕೆ – ಡಂಬಲ್ಸ್​ನಿಂದ ಹೊಡೆದು ಬಡಿದು ಪತ್ನಿಯ ಹತ್ಯೆ..!

ಬೆಂಗಳೂರು: ಪತ್ನಿಯ ಶೀಲದ ಮೇಲೆ ಶಂಕೆ ಮಾಡಿದ ಗಂಡ ತನ್ನ ಪತ್ನಿಯನ್ನು ಡಂಬಲ್ಸ್‌ನಿಂದ ಹೊಡೆದು ಬಡಿದು ಬೀಕರವಾಗಿ ಹತ್ಯೆಗೈದ ಘಟನೆ ನಗರದ ರಾಮಮೂರ್ತಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೊಲೆ ಬಳಿಕ ಪತಿಯೇ ಪೊಲೀಸರಿಗೆ...