Connect with us

NATIONAL

VIDEO : ಕ್ರಿಕೆಟ್ ಆಡುತ್ತಲೇ ಮೈದಾನದಲ್ಲಿ ಸಾವನ್ನಪ್ಪಿದ ಆಟಗಾರ

Published

on

ನೋಯ್ಡಾದ ಥಾನಾ ಎಕ್ಸ್​ಪ್ರೇಸ್​ವೇ ಸೆಕ್ಟರ್-135 ಪ್ರದೇಶದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಡುತ್ತಿರುವಾಗಲೇ ಆಟಗಾರ ಓರ್ವರು ಸಾವನ್ನಪ್ಪಿದ ಘಟನೆ ನೋಯ್ಡಾದ ಥಾನಾ ಎಕ್ಸ್​ಪ್ರೇಸ್​ವೇ ಸೆಕ್ಟರ್-135 ಪ್ರದೇಶದಲ್ಲಿ ನಡೆದಿದೆ.ಈ ಟೂರ್ನಿಯಲ್ಲಿ ಉತ್ತರಾಖಂಡ ಮೂಲದ ವಿಕಾಸ್ ನೇಗಿ ಕಣಕ್ಕಿಳಿದಿದ್ದರು.

ಬ್ಯಾಟಿಂಗ್ ಮಾಡುತ್ತಿದ್ದಾಗ ವಿಕಾಸ್ ನೇಗಿ ರನ್ ಹೊಡೆದಿದ್ದು, ಚೆಂಡು ಬೌಂಡರಿ ಲೈನ್ ದಾಟಿತ್ತು. ಹೀಗಾಗಿ ಕ್ರೀಸ್​ನ ಮಧ್ಯ ಭಾಗದಿಂದ ಮತ್ತೆ ನಾನ್ ಸ್ಟ್ರೈಕ್ ನತ್ತ ಮರಳಲು ಮುಂದಾಗಿದ್ದರು. ಆದರೆ ದಿಢೀರ್ ಕುಸಿತಕ್ಕೊಳಗಾದ ವಿಕಾಸ ನೇಗಿ ಪಿಚ್ ಮೇಲೆ ಬಿದ್ದಿದ್ದಾರೆ.ತಕ್ಷಣವೇ ಎದುರಾಳಿ ತಂಡದ ವಿಕೆಟ್ ಕೀಪರ್ ಹಾಗೂ ಸಹ ಆಟಗಾರ ವಿಕಾಸ್ ನೇಗಿ ಬಳಿ ಓಡಿ ಬಂದಿದ್ದಾರೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲ್ಲೇ ವಿಕಾಸ್ ನೇಗಿ ಮೃತಪಟ್ಟಿದ್ದಾರೆ ವೈದ್ಯರು ತಿಳಿಸಿದ್ದಾರೆ.ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದು, ಈ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

LATEST NEWS

ಅತ್ತೆ – ಅಳಿಯ ಲವ್; ಹೆಂಡತಿಯನ್ನೇ ತ್ಯಾಗ ಮಾಡಿದ ಪತಿ! ಏನಿದು ಕಥೆ?

Published

on

ಮಂಗಳೂರು / ಬಿಹಾರ : ಯುವತಿ – ಯುವಕರು ಪ್ರೀತಿಯಲ್ಲಿ ಬೀಳುವುದು ಸಾಮಾನ್ಯ. ಅವರ ಪ್ರೀತಿಗೆ ಮನೆಯವರು ಒಪ್ಪಿ ಮದುವೆ ಮಾಡಿಸುವುದಿದೆ. ಕೆಲವೊಮ್ಮೆ ಒಪ್ಪಿಗೆ ಸಿಗದೇ ಹೋಗಬಹುದು. ಆದ್ರೆ, ಇಲ್ಲಿ ಎಲ್ಲವೂ ವಿಭಿನ್ನ. ಯಾಕೆಂದ್ರೆ ಇಲ್ಲಿ ಪ್ರೀತಿಗೆ ಬಿದ್ದಿದ್ದು ಬೇರೆ ಯಾರೂ ಅಲ್ಲ ಅತ್ತೆ ಹಾಗೂ ಅಳಿಯ. ಈ ಮದುವೆ ಮಾಡಿಸಿದ್ದು ಮಾವ! ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಂಡತಿಯನ್ನು ತ್ಯಾಗ ಮಾಡಿದ ಗಂಡ :

ಈ ಘಟನೆ ನಡೆದಿರುವುದು ಬಿಹಾರದ ಬಂಕಾದಲ್ಲಿ. ತನ್ನ ಹೆಂಡತಿಯ ತಾಯಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಅಳಿಯನನ್ನು ಮಾವ ಮತ್ತು ಗ್ರಾಮಸ್ಥರು ಸೇರಿ ಮದುವೆ ಮಾಡಿಸಿದ್ದಾರೆ. 55 ವರ್ಷದ ದಿಲೇಶ್ವರ್ ದರ್ವೆ ಅವರ ಪತ್ನಿ ಅವರ ಅಳಿಯ ಸಿಕಂದರ್ ಯಾದವ್​​ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು.

ಇತ್ತೀಚಿಗಷ್ಟೇ ಇವರಿಬ್ಬರ ಏಕಾಂತದ ಸಮಯದಲ್ಲಿ ರೆಡ್​​ ಹ್ಯಾಂಡ್​​ ಆಗಿ ಸಿಕ್ಕಿ ಬಿದ್ದಿದ್ದಾರೆ. ಇವರಿಬ್ಬರ ಪ್ರೇಮ ಕಥೆ ಊರೆಲ್ಲಾ ಸುದ್ದಿಯಾಗುತ್ತಿದ್ದಂತೆ ಗ್ರಾಮಸ್ಥರು ಒಟ್ಟಾಗಿ ಸೇರಿ ಅಳಿಯನೊಂದಿಗೆ ಅತ್ತೆಗೆ ಮದುವೆ ಮಾಡಿಸಿದ್ದಾರೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ಅತ್ತೆ – ಅಳಿಯ :

ಸಿಕಂದರ್ ಯಾದವ್ ಪತ್ನಿಯನ್ನು ಕಳೆದುಕೊಂಡಿದ್ದ.​​ ಕೆಲ ತಿಂಗಳುಗಳಿಂದ ಅತ್ತೆಯ ಮನೆಯಲ್ಲಿ ವಾಸಿಸಲು ಆರಂಭಿಸಿದ್ದ. ಈ ಅವಧಿಯಲ್ಲಿ ಅತ್ತೆ ಮತ್ತು ಅಳಿಯ ಪರಸ್ಪರ ಹತ್ತಿರವಾಗಿದ್ದಾರೆ. ಈ ವೇಳೆ ಅತ್ತೆಯ ಪತಿಗೆ ಅನುಮಾನ ಬಂದಿದೆ. ಈ ಬಗ್ಗೆ ಆತ ತನಿಖೆ ನಡೆಸಿದ್ದು, ಇವರಿಬ್ಬರ ಅಕ್ರಮ ಸಂಬಂಧ ಬಯಲಾಗಿದೆ. ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ಬಗ್ಗೆ ದಿಲೇಶ್ವರ್ ಪಂಚಾಯಿತಿಗೆ ಮಾಹಿತಿ ನೀಡಿದ್ದರು. ಇದಲ್ಲದೇ, ಸಿಕಂದರ್ ಯಾದವ್ ತನ್ನ ಅತ್ತೆಯ ಮೇಲಿನ ಪ್ರೀತಿಯನ್ನು ಪಂಚಾಯತ್ ಮತ್ತು ಗ್ರಾಮಸ್ಥರ ಮುಂದೆ ಬಹಿರಂಗವಾಗಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ : 70 ರ ವೃದ್ಧನಿಗೆ ಸಂಗಾತಿ ಬೇಕಾಗಿದ್ದಾಳೆ; ಆತ ಜಾಹೀರಾತಿಗಾಗಿ ಮಾಡುತ್ತಿರೋ ಖರ್ಚೆಷ್ಟು ಗೊತ್ತಾ!?

ದಿಲೇಶ್ವರ್ ಮತ್ತು ಗ್ರಾಮಸ್ಥರ ಒಪ್ಪಿಗೆಯೊಂದಿಗೆ, ಸಿಕಂದರ್ ಮತ್ತು ಅತ್ತೆಯ ವಿವಾಹ ಮಾಡಿಸಲಾಗಿದೆ. ಸದ್ಯ ಇವರಿಬ್ಬರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Continue Reading

LATEST NEWS

70 ರ ವೃದ್ಧನಿಗೆ ಸಂಗಾತಿ ಬೇಕಾಗಿದ್ದಾಳೆ; ಆತ ಜಾಹೀರಾತಿಗಾಗಿ ಮಾಡುತ್ತಿರೋ ಖರ್ಚೆಷ್ಟು ಗೊತ್ತಾ!?

Published

on

ಇತ್ತೀಚೆಗೆ ಯುವಕರು ಮದುವೆಯಾಗಲು ಯುವತಿಯರು ಸಿಗುತ್ತಿಲ್ಲ ಎಂದು ಗೋಳಾಡುವುದನ್ನು ಕಾಣುತ್ತೇವೆ ಹುಡುಗಿಯರು ಸಿಗುತ್ತಿಲ್ಲವೆಂದು ನಾನಾ ರೀತಿಯ ಸರ್ಕಸ್ ಮಾಡುತ್ತಾರೆ. ಇತ್ತೀಚೆಗೆ ಆಟೋ ಮೂಲಕ ಪ್ರಚಾರ, ವೀಡಿಯೋ ಮೂಲಕ ಪ್ರಚಾರ ಹೀಗೆ ನಾನಾ ರೀತಿಯಲ್ಲಿ ‘ವಧು ಬೇಕಾಗಿದ್ದಾಳೆ’ ಎಂದು ಜಾಹೀರಾತು ನೀಡುತ್ತಾರೆ. ಅದೇನೋ ಯುವಕರು ಬಿಡಿ…ಆದರೆ, ಇಲ್ಲಿ 70 ರ ಹರೆಯದ ವೃದ್ಧನೂ ಜಾಹೀರಾತು ಕೊಟ್ಟಿದ್ದಾರೆ. ಆಶ್ಚರ್ಯವಾದರೂ ಇದು ಸತ್ಯ!

ಜಾಹೀರಾತಿಗಾಗಿ ಮಾಡುತ್ತಿರೋ ಖರ್ಚೆಷ್ಟು?

ವಯಸಾಗುತ್ತಿದ್ದಂತೆ ಸಂಗಾತಿಯ ಆಸರೆ ಬೇಕಾಗುತ್ತದೆ. ಒಂಟಿಯಾಗಿರುವುದು ಕಷ್ಟ ಎಂದೆನಿಸುತ್ತದೆ. ಈಗ ಈ ಅಜ್ಜನಿಗೂ ಮದುವೆಯಾಗಲು ಮನಸ್ಸಾಗಿದೆ. ಸಂಗಾತಿಯ ಸಂಗಡ ಬೇಕೆನಿಸಿ ಆತ ಗೆಳತಿಯ ಅರಸುತ್ತಿದ್ದಾರೆ. ಆತನ ವಯಸ್ಸು 70 ವರ್ಷ…ತನಗೆ ಜೊತೆಗಾರ್ತಿ ಬೇಕೆಂಬ ಹಂಬಲದಲ್ಲಿ ಜಾಹೀರಾತು ನೀಡುತ್ತಿದ್ದಾರೆ.

ಜಾಹೀರಾತಿಗಾಗಿ ಆತ ಖರ್ಚು ಮಾಡುತ್ತಿರುವುದು ಎಷ್ಟು ಗೊತ್ತಾ!? 30 ಸಾವಿರ ರೂಪಾಯಿ. ಆತ ವಾರಕ್ಕೆ ಇಷ್ಟು ಖರ್ಚು ಮಾಡುತ್ತಿದ್ದಾರೆ. ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬರುತ್ತಿದೆಯಂತೆ.

ಆಕೆ ಕರೆದಲ್ಲಿ ಹೋಗಲು ಸಿದ್ಧ!

ಅಂದಹಾಗೆ ವೃದ್ಧನ ಹೆಸರು ಗಿಲ್ಬರ್ಟ್. ಆತ ಅಮೆರಿಕಾದ ಟೆಕ್ಸಾಸ್ ನ ಸ್ವೀಟ್ ವಾಟರ್ ಸಿಟಿಯಲ್ಲಿ ವಾಸವಿದ್ದಾನೆ. 20 ಅಡಿ ಬಿಲ್ ಬೋರ್ಡ್ ಹಾಕಿಸಿ ಪ್ರತಿವಾರ $400 ನೀಡುತ್ತಿದ್ದಾನೆ. ಒಂಟಿಯಾಗಿರುವ ತನಗೆ ಸಂಗಾತಿ ಹುಡುಕುತ್ತಿರುವುದಾಗಿ ಆತ ಜಾಹೀರಾತು ಮೂಲಕ ತಿಳಿಸಿದ್ದಾನೆ. ಜೊತೆಗೆ ಆತ. ಆಕೆ ಕರೆದ ಕಡೆ ರಿಲೊಕೇಟ್ ಆಗಲು ಸಹ ಸಿದ್ಧನಿದ್ದಂತೆ. ಆಕೆಗೆ ಇಲ್ಲಿ ಇರಲು ಇಷ್ಟವಿಲ್ಲದಿದ್ದರೆ, ಎಲ್ಲಿ ಬೇಕಾದರೂ ರಿ ಲೊಕೇಟ್ ಆಗಲು ಸಿದ್ಧ ಎಂದು ಬರೆದುಕೊಂಡಿದ್ದಾರೆ.

ನಾನು ಬಿಲ್‌ಬೋರ್ಡ್‌ ಜಾಹೀರಾತು ಹಾಕಿಸಿದ್ದು ಕಂಡು ನೂರಾರು ಮಂದಿ ಕರೆ ಮಾಡುತ್ತಿದ್ದಾರೆ. ಆದರೆ ಅದರಲ್ಲಿ ಬಹುತೇಕರು ಹಣ ಮಾತ್ರ ಕೇಳುತ್ತಿದ್ದಾರೆ. ನಾನು ಜಾಹೀರಾತು ನೀಡಿದ್ದು ಕಂಡು ಅವರು ನಾನು ಶ್ರೀಮಂತ ಎಂದುಕೊಂಡಿದ್ದಾರೆ. ಹೀಗಾಗಿ ನನಗೆ ಬರುವ ಕರೆಗಳನ್ನು ಪರಿಶೀಲಿಸಲು ನಾನು ನನ್ನ ಸ್ನೇಹಿತರಿಗೆ ವರ್ಗಾಯಿಸುತ್ತೇನೆ ಅವರು ವಿಚಾರಣೆ ನಡೆಸುತ್ತಾರೆ ಎಂದು ಗಿಲ್ಬರ್ಟ್ ಹೇಳಿಕೊಂಡಿದ್ದಾರೆ.

ನನಗೆ ಸರಿಯಾದ ವ್ಯಕ್ತಿ ಸಿಕ್ಕರೆ ನಾನು ಎಲ್ಲಿಗೆ ಬೇಕಾದರು ಪ್ರಯಾಣಿಸುತ್ತೇನೆ. ನಾನು ಸರಿಯಾದ ವ್ಯಕ್ತಿಯನ್ನು ಭೇಟಿಯಾದರೆ ಅವರ ಕಣ್ಣುಗಳನ್ನು ನೋಡಲು ಮತ್ತು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ನಾನು ಬಯಸುತ್ತೇನೆ. ಯಾರನ್ನಾದರೂ ಭೇಟಿಯಾಗಲು ಯುರೋಪಿಗೆ ಬೇಕಾದರು ನಾನು ಹೋಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ನಿಲ್ದಾಣದಲ್ಲಿ ರೈಲು ಇಳಿಯುವಾಗ ಬಿದ್ದು ಮೃ*ತಪಟ್ಟರೆ ಅದಕ್ಕೆ ರೈಲ್ವೆ ಇಲಾಖೆಯೇ ಹೊಣೆ ಎಂದ ಹೈಕೋರ್ಟ್; ಏನಿದು ಪ್ರಕರಣ? ಆದೇಶದಲ್ಲಿ ಏನಿದೆ?

ಹಲವರಿಂದ ಕರೆ !

ಗಿಲ್ಬರ್ಟ್ 2015 ರಿಂದ ಒಂಟಿಯಾಗಿ ಬದುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇತ್ತ ಜಾಹೀರಾತು ನೋಡಿ ಕರೆ ಮಾಡುವವರು ಮೊದಲಿಗೆ ಹಣ ಮತ್ತು ಆಸ್ತಿ ಕುರಿತು ವಿಚಾರಣೆ ನಡೆಸುತ್ತಿದ್ದಾರಂತೆ. ಅಲ್ಲದೆ ಆಸ್ತಿಯನ್ನ ತಮ್ಮ ಹೆಸರಿಗೆ ವರ್ಗಾಯಿಸಿದರೆ ಮಾತ್ರ ಆತನ ಜೊತೆ ಇರಲು ಬಯಸಿರುವುದಾಗಿಯೂ ಹೇಳಿದ್ದಾರಂತೆ. ಆದರೆ ತಾನು ಆಸ್ತಿ, ಹಣದ ಹಿಂದೆ ಬಿದ್ದು ಈ ರೀತಿ ಜಾಹೀರಾತು ನೀಡಿಲ್ಲ, ಕೊನೆಯ ದಿನಗಳಲ್ಲಿ ನನ್ನ ಜೊತೆ ಇರುವವರು ಬೇಕಾಗಿದ್ದಾರೆ. ಅಂತವರು ಸಿಗುವವರೆಗೆ ಹುಡುಕುತ್ತೇವೆ ಎಂದಿದ್ದಾರೆ.

ಅಲ್ಲದೆ ಜಾಹೀರಾತು ನೋಡಿ ಆ ಮೂಲಕ ಸಂಪರ್ಕಿಸುವವರು ಹೆಚ್ಚಿನವರು ಕುಟುಂಬ, ಮದುವೆಯಾಗಿ ಮಕ್ಕಳು ಇದ್ದವರು ಆಗಿದ್ದಾರಂತೆ. ಅವರಲ್ಲಿ ಕೆಲವರು ಹಣ ನೀಡಿದರೆ ಅವರ ಜೊತೆ ಮನೆಯಲ್ಲಿ ಬಿಟ್ಟುಕೊಳ್ಳುವುದಾಗಿಯೂ ಆಫರ್ ನೀಡಿದ್ದರಂತೆ. ಇದನ್ನು ತಿರಸ್ಕರಿಸಿರುವುದಾಗಿ ಗಿಲ್ಬರ್ಟ್ ತಿಳಿಸಿದ್ದಾರೆ.

ನನ್ನ ಬಳಿ ಯಾವ ಆಸ್ತಿ ಇಲ್ಲ ಎಂದಿರುವ ಗಿಲ್ಬರ್ಟ್, ವಯಸ್ಸಿನಲ್ಲಿ ದುಡಿದ ಹಣ, ಒಂದು ಮನೆ ಇದೆ, ಹಣ ಮಾಡುವ ವಯಸ್ಸು ಸಹ ನನಗಿಲ್ಲ. ನಾನು ಶ್ರೀಮಂತನಲ್ಲ. ಜಾಹೀರಾತು ನೀಡಿದ್ದು ನೋಡಿ ಎಲ್ಲರು ನಾನು ಶ್ರೀಮಂತ ಕರೆ ಮಾಡುತ್ತಾರೆ. ನನ್ನ ಬಳಿ ಹಣವಿಲ್ಲವೆಂದಾಗ ಕರೆ ಕಟ್ ಮಾಡುತ್ತಿದ್ದಾರೆ ಎಂದು ಗಿಲ್ಬರ್ಟ್ ಅಳಲು ತೋಡಿಕೊಂಡಿದ್ದಾರೆ.

Continue Reading

LATEST NEWS

ಕೈಗಳನ್ನು ತೋರಿಸಿ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಾಳಂತೆ ಈ ಮಹಿಳೆ..! ಅಷ್ಟಕ್ಕೂ ಯಾರು ಈಕೆ?

Published

on

ಎಲ್ಲರಿಗೂ ಒಂದು ಆಸೆ ಇರುತ್ತೆ. ಯಾವುದೇ ಒತ್ತಡದ ಕೆಲಸ ಇಲ್ಲದೆ ಆರಾಮದ ಕೆಲಸ ಸಿಗಬೇಕು. ಕುಳಿತಲ್ಲೇ ಹಣ ಗಳಿಸಬೇಕು ಅನ್ನುವ ಆಸೆ. ಆದರೆ ಅದೆಲ್ಲಾ ವಾಸ್ತವದಲ್ಲಿ ಕಷ್ಟನೇ ಸರಿ. ಆದ್ರೆ ಇಲ್ಲೊಂದು ಮಹಿಳೆ ಕೇವಲ ತನ್ನ ಕೈ ಬೆರಳಗಳನ್ನು ತೋರಿಸಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರಂತೆ. ಹೌದು, ಅಮೆರಿಕಾದಲ್ಲಿರುವ 37 ವರ್ಷದ ಈ ಮಹಿಳೆ ಕೇವಲ ಕೈ ಬೆರಳುಗಳನ್ನು ತೋರಿಸಿ ವರ್ಷಕ್ಕೆ 25ಲಕ್ಷ ರೂ. ಗಳಿಸುತ್ತಾರಂತೆ.

alexandra

 

ಈ ಮಹಿಳೆಯ ಹೆಸರು ಅಲೆಕ್ಸಾಂಡ್ರಾ ಬೆರೊಕಲ್. ಇವರು ಅಮೆರಕಾದ ನ್ಯಾಯಾರ್ಕ್‌ನಲ್ಲಿ ವಾಸವಾಗಿದ್ದಾರೆ. ಅಷ್ಟಕ್ಕೂ ಈ ಮಹಿಳೆ ವೃತ್ತಿಯಲ್ಲಿ ‘ಹ್ಯಾಂಡ ಮಾಡೆಲ್’ ಆಗಿದ್ದಾರೆ. ಹಾಗಾಗಿ ತನ್ನ ಮುಖ ಸೌಂದರ್ಯ ತೋರಿಸದೆ ಬರೀಕೈ ಗಳಿಂದಲೇ ಸಂಪಾದನೆ ಮಾಡುತ್ತಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿರುವ ಈ ಮಹಿಳೆಯ ಹೆಸರು ಅಲೆಕ್ಸಾಂಡ್ರಾ ಬೆರೊಕಲ್. ಇವರು ಪ್ರತಿಷ್ಠಿತ ಕಂಪೆನಿಗಳ ಆ್ಯಡ್‌ಗಳಲ್ಲಿ ತಮ್ಮ ಕೈ ಚಳಕ ತೋರಿಸುತ್ತಾರೆ. ಉಗುರಿಗೆ ಹಾಕುವ ನೇಯಿಲ್ ಫಾಲಿಶ್, ಕಾಫಿ ಯನ್ನು ಪಕ್‌ಗೆ ಸುರಿಯುವುದು, ಹಿಟ್ಟನ್ನು ಬೆರೆಸುವವುದು, ಪರ್ಫ್ಯೂಮ್‌ಗಳನ್ನು ತನ್ನ ಮಾದಕ ಕೈ ಬೆರಳುಗಳಿಂದ ಹಿಡಿದು ಹೀಗೆ ಅನೇಕ ಜಾಹಿರಾತುಗಳ ಶೂಟ್‌ನಲ್ಲಿ ಭಾಗವಹಿಸುತ್ತಾರೆ.

add2

 

ಅಲೆಕ್ಸಾಂಡ್ರಾ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಸ್ನೇಹಿತರ ಜೊತೆ ಹಂಚಿಕೊಂಡಾಗ ಎಲ್ಲರೂ ಒಮ್ಮೆ ಅಚ್ಚರಿಗೊಳಗಾಗಿದ್ದರಂತೆ. ಕೈ ತೋರಿಸಿದಕ್ಕೆ ಲಕ್ಷ ಗಟ್ಟಲೆ ಹಣ ಕೊಡುತ್ತಾರೆ ಎಂದರೆ ನಂಬಲು ಸಾದ್ಯವಿಲ್ಲ ಎಂದು ಹೇಳಿದ್ದರಂತೆ. 2019 ರಲ್ಲಿ ಮಾಡಲಿಂಗ್ ಆರಂಭಿಸಿದ್ದು YSL, ಮೈಕ್ರೋಸಾಫ್ಟ್, ಬ್ರಾಂಡನ್ ಬ್ಲಾಕ್‌ವುಡ್, ಕಿಸ್ ನೈಲ್ಸ್, ಸೆರೆನಾ ವಿಲಿಯಮ್ಸ್ ಜ್ಯುವೆಲರಿಯಂತಹ ಬ್ರಾಂಡ್‌ಗಳಿಂಗೆ ಹ್ಯಾಂಡ್ ಮಾಡಲಿಂಗ್ ಮಾಡುತ್ತಿದ್ದಾರೆ.

ಮುಂದೆ ಓದಿ..;ನೇ*ಣಿಗೆ ಶರಣಾದ ಯುವ ನಟಿ..! ಸಾ*ವಿಗೂ ಮುನ್ನ ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೇನು..!

ವಾರ್ಷಿಕ ಆದಾಯ 25 ಲಕ್ಷ ರೂ…!

add

ಇವರು ಈ ಮಾಡಲಿಂಗ್ ಕ್ಷೇತ್ರಕ್ಕೆ ಕೇವಲ 10 ನಿಮಿಷಗಳಲ್ಲಿ ಆಯ್ಕೆ ಅಗಿದ್ದಾರಂತೆ. ಅವರ ಕೈಗಳ ಆಕಾರ, ಬಣ್ಣ, ನಯವಾದ ಉಗುರುಗಳಿಂದಾಗಿ ಈ ಕೆಲಸವನ್ನು ಪಡೆದುಕೊಂಡಿದ್ದಾರಂತೆ. ಅವರ ಕೈ ಗಳು ಪುಟ್ಟದಾಗಿದ್ದು ಇದು ಅವರ ಕೆಲಸಕ್ಕೆ ಸಹಾಯವಾಗಿದೆಯಂತೆ. ಐಟಮ್‌ಗಳನ್ನು ಕೈಯಲ್ಲಿ ಹಿಡಿದಾಗ ಬ್ರ್ಯಾಂಡ್‌ಗಳು ದೊಡ್ಡದಾಗಿ ಕಾಣುತ್ತದೆ ಎಂದು ಹೇಳುತ್ತಾರೆ ಬೆರೊಕಲ್. ಇನ್ನು ಮನೆಯಲ್ಲಿ ಕೆಲಸಗಳನ್ನು ಮಾಡುವಾಗ ಕೈಗೆ ಗ್ಲೌಸ್‌ಗಳನ್ನು ಧರಿಸುತ್ತಾರೆಂತೆ. ಕೈ ತೊಳೆದ ಕೂಡಲೇ ಲೋಷನ್‌ಗಳಿಂದ ಮಸಾಜ್ ಮಾಡ್ತಾರಂತೆ. ಇನ್ನು ಈ ಕೆಲಸಕ್ಕೆ ಇವರು ಪಡೆಯುವ ಸಂಭಾವನೆ ಬರೋಬ್ಬರಿ 25 ಲಕ್ಷ ರೂ. ಹೌದು ವಾರ್ಷಿಕವಾಗಿ 25 ಲಕ್ಷ ಪಡೆದರೆ ಮಾಸಿಕವಾಗಿ 2 ಲಕ್ಷ ರೂ. ಸಂಪಾದನೆ ಮಾಡುತ್ತಾರಂತೆ.

 

 

Continue Reading

LATEST NEWS

Trending