ಕಾಸರಗೋಡು: ಹೊಳೆಯಲ್ಲಿ ಸ್ನಾನಕ್ಕಿಳಿದ ದಂಪತಿ ಹಾಗೂ ಬಾಲಕ ಸಹಿತ ಮೂವರು ಮುಳುಗಿ ಮೃತಪಟ್ಟ ಘಟನೆ ಏರಿಂಜಿಪ್ಪುಯ ಹೊಳೆಯ ತೋನಿಕಡವ್‌ನಲ್ಲಿ ನಿನ್ನೆ ಸಂಜೆ ನಡೆದಿದೆ.
ಕುಂಡಂಗುಯಿ ಗದ್ದೆಮೂಲೆ ನಿವಾಸಿ ನಿತಿನ್ (38), ಅವರ ಪತ್ನಿ ಕರ್ನಾಟಕ ನಿವಾಸಿ ದೀಕ್ಷಾ (30), ಅವರ ಸಂಬಂಧಿ ಮನೀಶ್ (16) ಮೃತಪಟ್ಟಿದ್ದಾರೆ.
ಮೃತಪಟ್ಟ ನಿತಿನ್ ಕೆಲವು ದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದರು. ಕುಟುಂಬದ 9 ಮಂದಿ ಹೊಳೆಯನ್ನು ನೋಡಲು ಆಗಮಿಸಿದ್ದರು. ನಿತಿನ್ ಹೊಳೆಯಲ್ಲಿ ಸ್ನಾನಕಕ್ಕಿಳಿದಿದ್ದರು.
ದೀಕ್ಷಾ ಕಾಲು ಜಾರಿ ಹೊಳೆಗೆ ಬಿದ್ದರು. ಆಕೆಯನ್ನು ರಕ್ಷಿಸಲು ಪತಿ ನಿತಿನ್ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಇದನ್ನು ಕಂಡ ಬಾಲಕ ಮನೀಶ್ ಹೊಳೆಗೆ ಹಾರಿ ರಕ್ಷಿಸಲು ಪ್ರಯತ್ನಿಸಿದ.
ಈ ಸಂದರ್ಭ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಊರಿನವರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಂಜೆ ಮೃತದೇಹವನ್ನು ಹೊಳೆಯಿಂದ ಮೇಲಕ್ಕೆತ್ತಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.