Monday, January 24, 2022

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿ ಶವ 

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿ ಶವ ..!

ತೆಲಂಗಾಣ: ಬಾಯ್​ಫ್ರೆಂಡ್​ ಮದುವೆಗೆ ಒಪ್ಪದಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪತಂಚೆರುವು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪತಂಚೆರವು ವಲಯದ ಲಕ್ದರಮ್​ ಗ್ರಾಮದ 21 ವರ್ಷದ ನಿವಾಸಿ ಶ್ರಾವಣಿ  ಮೃತ ದುರ್ದೈವಿ. ಅದೇ ಗ್ರಾಮದ ವೆಂಕಟರಾಮಿರೆಡ್ಡಿ ಅಲಿಯಾಸ್​ ವಿಕ್ಕಿ ಎಂಬುವನ ಪ್ರೀತಿಯ ಬಲೆಯಲ್ಲಿ ಶ್ರಾವಣಿ ಸಿಲುಕಿದ್ದಳು.

ಶ್ರಾವಣಿಯ ಅಂಕಲ್ ರಾಜಶೇಖರ್​ ರೆಡ್ಡಿ​ ಮದುವೆ ಬಗ್ಗೆ ವಿಕ್ಕಿ ಜತೆ ಮಾತನಾಡಿದ್ದರು. ಆದರೆ, ಆಕೆಯನ್ನು ಮದುವೆಯಾಗಲು ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ನಿರಾಕರಿಸಿದ್ದ.

ಹಾಗಾದರೆ ಇನ್ನೆಂದೂ ಶ್ರಾವಣಿಯನ್ನು ಹಿಂಬಾಲಿಸಬಾರದು ಎಂದು ವಿಕ್ಕಿಗೆ ರಾಜಶೇಖರ್​ ರೆಡ್ಡಿ ಬುದ್ಧಿ ಹೇಳಿ ಬಂದಿದ್ದ. ಹೀಗಿರುವಾಗ ರಾಜಶೇಖರ್​ ರೆಡ್ಡಿ ಕಳೆದ ವರ್ಷ ಮೃತಪಟ್ಟಿದ್ದಾರೆ

ಇದಾದ ಬೆನ್ನಲ್ಲೇ ವಿಕ್ಕಿ, ಶ್ರಾವಣಿಯನ್ನು ಹಿಂಬಾಲಿಸಲು ಆರಂಭಿಸುತ್ತಾನೆ ಮತ್ತು ಇಷ್ಟಪಡುತ್ತಿರುವುದಾಗಿ ಹೇಳುತ್ತಾನೆ. ಶ್ರಾವಣಿ ಸಹ ಪ್ರೀತಿಸುತ್ತಿರುತ್ತಾಳೆ.

ಈ ವಿಚಾರ ಶ್ರಾವಣಿ ತಾಯಿ ವಿಜಯಲಕ್ಷ್ಮಿ ಗಮನಕ್ಕೆ ಬರುತ್ತದೆ. ನಂತರ ತನ್ನ ಮಗಳೊಂದಿಗೆ ಮಾತನಾಡದಂತೆ ವಿಕ್ಕಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ.

ಇದರ ನಡುವೆ ವಿಜಯಲಕ್ಷ್ಮಿ ಅವರ ಹಿರಿಯ ಸಹೋದರ ಮರಣ ಹೊಂದಿದಾಗ ಅಂತ್ಯಸಂಸ್ಕಾರಕ್ಕೆಂದು ಇಡೀ ಕುಟುಂಬ ಊರಿಗೆ ತೆರಳುತ್ತಾರೆ. ಭಾನುವಾರ ಮಧ್ಯಾಹ್ನವೇ ಅಂತ್ಯಸಂಸ್ಕಾರದ ನಡುವೆಯೇ ಶ್ರಾವಣಿ ಮನೆಗೆ ಮರಳುತ್ತಾಳೆ.

ಇತ್ತ ಪಾಲಕರು ಸಹ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗಿದಾಗ ನೇಣು ಬಿಗಿದ ಸ್ಥಿತಿಯಲ್ಲಿರುವ ಶ್ರಾವಣಿಯನ್ನು ನೋಡುತ್ತಿದ್ದಂತೆಯೇ ಪಾಲಕರ ಆಕ್ರಂದನ ಮುಗಿಲು ಮುಟ್ಟುತ್ತದೆ. ಇದಾದ ಬಳಿಕ ಮಗಳಿಗೆ ಪ್ರೀತಿಯ ಹೆಸರಲ್ಲಿ ವಿಕ್ಕಿ ಮೋಸ ಮಾಡಿದ್ದಾನೆ. ಆಕೆಯ ಆತ್ಮಹತ್ಯೆಗೆ ಇದೇ ಕಾರಣವೆಂದು ದೂರು ನೀಡುತ್ತಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದರು. ಅದಕ್ಕೂ ಮುನ್ನ ಶ್ರಾವಣಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪತಂಚೆರುವು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

Hot Topics

ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿ ಸುನೀಲ್‌ ಕುಮಾರ್‌-ಉಡುಪಿಗೆ ಅಂಗಾರ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್‌ ಕುಮಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ಜಿಲ್ಲೆಗಳ...

“ಬಿಜೆಪಿಗರಿಗೆ ವಿಶ್ವಗುರು ನರೇಂದ್ರ ಮೋದಿ ಒಬ್ಬರೇ”

ಮಂಗಳೂರು: ಬಿಜೆಪಿಗರಿಗೆ ಇಡೀ ಪ್ರಪಂಚದಲ್ಲಿ ಏಕೈಕ ಗುರು ವಿಶ್ವಗುರು ಎನ್ನುವ ನರೇಂದ್ರ ಮೋದಿ ಬಿಟ್ಟು ಬೇರೆ ಯಾವ ಗುರುಗಳಿಗೂ ಗೌರವ ಕೊಡದಿದ್ದುದನ್ನು ನೋಡಿದ್ದೇವೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್...

ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1ಕೆ.ಜಿ, 300ಗ್ರಾಂ ಚಿನ್ನ ವಶಕ್ಕೆ

ದೇವನಹಳ್ಳಿ: ದುಬೈನಿಂದ ಬೆಂಗಳೂರಿಗೆ ಬಂದಿಳಿದ ಇಬ್ಬರು ಪ್ರಯಾಣಿಕರು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ನಗರದ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಮುಂಬೈಗೆ ಬಂದು ನಂತರ ಮುಂಬೈನಿಂದ ಬೆಂಗಳೂರಿಗೆ...