Home ಪ್ರಮುಖ ಸುದ್ದಿ ಆತ್ಮಹತ್ಯೆಗೆ ಯತ್ನಿಸಿದ ಕೊರೊನಾ ಸೋಂಕಿತ: ಮನವೊಲಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು..

ಆತ್ಮಹತ್ಯೆಗೆ ಯತ್ನಿಸಿದ ಕೊರೊನಾ ಸೋಂಕಿತ: ಮನವೊಲಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು..

ಆತ್ಮಹತ್ಯೆಗೆ ಯತ್ನಿಸಿದ ಕೊರೊನಾ ಸೋಂಕಿತ: ಮನವೊಲಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು..

ಮಂಗಳೂರು: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರು ನಗರದಲ್ಲಿ ನಿನ್ನೆ (ಜೂನ್ 29) ನಡೆದಿದೆ.

ಉತ್ತರಾಖಂಡ್ ರಾಜ್ಯದ ಕೂಲಿ ಕಾರ್ಮಿಕನೊಬ್ಬ ನಗರದ ಹಂಪನಕಟ್ಟೆಯ ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಹಲವು ದಿನಗಳಿಂದ ಕೆಲಸ ಮಾಡುತ್ತಿದ್ದ.

ಈತನಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈತನ ಗಂಟಲು ದ್ರವ ಮಾದರಿ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ವಿಷಯ ತಿಳಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಂಕಿತನನ್ನು ಕರೆದೊಯ್ಯಲು ಆಗಮಿಸಿದ್ದರು.

ಸೋಂಕಿತನನ್ನು ಆ್ಯಂಬುಲೆನ್ಸ್ ಗೆ ಹತ್ತಿಸುವ ವೇಳೆಯಲ್ಲಿ ಆತ ತಪ್ಪಿಸಿಕೊಂಡಿದ್ದಾನೆ. ಬಳಿಕ ಸೋಂಕಿತನು ನಗರದ ಟವರ್ ಕ್ಲಾಕ್ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

ಈ ವೇಳೆ ಬಂದರು ಪೊಲೀಸರು ಆತನ ಮನವೊಲಿಸಿ ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

RECENT NEWS

9 ವರ್ಷಗಳ ಅನಂತಪದ್ಮನಾಭ ಸ್ವಾಮಿ ದೇಗುಲ ವಿವಾದ ಇತ್ಯರ್ಥ ಮಾಡಿದ ಸುಪ್ರೀಂ ಕೋರ್ಟ್..!

9 ವರ್ಷಗಳ ಅನಂತಪದ್ಮನಾಭ ಸ್ವಾಮಿ ದೇಗುಲ ವಿವಾದ ಇತ್ಯರ್ಥ ಮಾಡಿದ ಸುಪ್ರೀಂ ಕೋರ್ಟ್..! ನವದೆಹಲಿ : ಕೇರಳದ ತಿರುವನಂತಪುರದಲ್ಲಿರುವ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ಮತ್ತು ಪೂಜೆ ನಡೆಸುವ ಅಧಿಕಾರವನ್ನು ರಾಜಮನೆತನಕ್ಕೆ ವಹಿಸಿ...

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..!

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..! ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ...

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..!

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..! ಬೆಂಗಳೂರು : ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ  ನಾಳೆ ಮಂಗಳವಾರ  ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್...

ಉಡುಪಿ ಜಿಲ್ಲೆಗೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ – ರಘುಪತಿ ಭಟ್

ಉಡುಪಿ : ಉಡುಪಿ ಜಿಲ್ಲೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ ಅಂತ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಜನಜೀವನ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಮತ್ತೆ ಲಾಕ್ಡೌನ್ ಮಾಡಿದರೆ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ....
error: Content is protected !!