Home ಕರ್ನಾಟಕ ವಾರ್ತೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಉಲ್ಲಂಘಿಸಿದ್ರಾ...!?

ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಉಲ್ಲಂಘಿಸಿದ್ರಾ…!?

ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಉಲ್ಲಂಘಿಸಿದ್ರಾ…!?

ಮಂಗಳೂರು: ಕೋವಿಡ್ 19 ಮಹಾಮಾರಿ ವಿರುದ್ದ ಸಮರ ಸಾರಿರುವ ದಕ್ಷಿಣ ಕನ್ನಡ ಜಿಲ್ಲೆ ಜನರು ಜನತಾ ಕರ್ಫ್ಯೂವನ್ನು ಬೆಂಬಲಿಸಿ ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸುತ್ತಿದ್ದಾರೆ.

ಮಂಗಳೂರಿನಲ್ಲಿ ಲಾಕ್‍ಡೌನ್‍ನ ಮೂರನೇ ದಿನವಾದ ಇಂದೂ ಕೂಡ ಜಿಲ್ಲಾಡಳಿತ ನೀಡಿದ ಕರೆಗೆ ಓಗೊಟ್ಟು ಮನೆಯಿಂದ ಹೊರ ಬಾರದೆ ವೈರಸ್ ಸೋಂಕು ಹರಡದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದಾರೆ.

ದಿನನಿತ್ಯದ ವಸ್ತುಗಳ ಖರೀದಿಗೂ ಜಿಲ್ಲಾಡಳಿತ ನಿಬಂಧ ಹೇರಿದೆ. ನಗರದ ಪ್ರಮುಖ ವಾಣಿಜ್ಯ ಕೇಂದ್ರ ಸೆಂಟ್ರಲ್ ಮಾರ್ಕೆಟ್ ಪ್ರದೇಶವನ್ನು ಬ್ಯಾರಿಕೇಡ್‍ಗಳನ್ನು ಇಟ್ಟು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ.

ಆದರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಸಿಬಂದಿಗಳೇ ತಮ್ಮ ಇಲಾಖೆ ಮಾಡಿದ ಆದೇಶವನ್ನು ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ.

ಈ ಭಾಗದಲ್ಲಿ ಕೆಲ ಅಂಗಡಿಗಳು ಕಾನೂನು ಮೀರಿ ಅಂಗಡಿ ತೆರೆಯಿಸಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದಿದೆ. ಇದಕ್ಕೆ ಪೊಲೀಸರೇ ಕುಮ್ಮಕ್ಕು ನೀಡುತ್ತಿದ್ದಂತೆ ಕಾಣುತ್ತಿದೆ. ನಗರದ ಮಾರ್ಕೆಟ್ ರಸ್ತೆಯ ಸೂಪರರ ಬಜಾರನ್ನು ತೆರೆಯಿಸಿ ತಮಗೆ ಹಾಗೂ ತಮ್ಮವರಿಗಾಗಿ ಬೇಕಾದ ವಸ್ತುಗಳನ್ನು ತಗೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.

ಈ ಮೂಲಕ ತಮಗೊಂದು- ಜನರಿಗೊಂದು ನ್ಯಾಯ ಎಂಬಂತೆ ತೋರಿಸಿಕೊಟ್ಟಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ಕೇಳಿಬಂದಿದೆ.

video..

- Advertisment -

RECENT NEWS

ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ಜೂ 13 ರಿಂದ ಪ್ರಾರ್ಥನೆಗೆ ಅವಕಾಶ

ಚರ್ಚ್ ಗಳಲ್ಲಿ ನಡೆಯುತ್ತಿದೆ ಭರದ ಸಿದ್ದತೆ ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದಲ್ಲಿ ಜೂ 13ರಿಂದ ಸರಕಾರದ ನಿಯಮಗಳನ್ನು ಪಾಲಿಸಿ ಚರ್ಚ್ ಗಳಲ್ಲಿ ಪ್ರಾರ್ಥನೆಗಳನ್ನು ಆರಂಭಿಸಲಾಗುವುದು ಎಂದು ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ತಿಳಿಸಿದ್ದಾರೆ. ಈ ಕುರಿತು...

ಜೂನ್ 8 ರಿಂದ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ….!!

 ಶೀತ, ಕೆಮ್ಮು ಇದ್ದವರಿಗೆ ನಮಾಝ್ ಗೆ ಪ್ರವೇಶ ನಿರಾಕರಣೆ ಮಂಗಳೂರು : ರಾಜ್ಯ ಸರಕಾರ ಜೂನ್‌ 8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿರುವ ಹಿನ್ನಲೆ ಜೂನ್ 8 ರಿಂದ ಮಸೀದಿಗಳಲ್ಲಿ...

ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಭಾಗ್ಯ ಇಲ್ಲ

20 ರಿಂದ 30 ದಿನಗಳ ನಂತರ ಪರಿಸ್ಥಿತಿ ನೋಡಿ ಅವಕಾಶ ಉಡುಪಿ: ರಾಜ್ಯ ಸರಕಾರ ಈಗಾಗಲೇ ಜೂನ್ 8ರ ನಂತರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಅದರಂತೆ ಈಗಾಗಲೇ ರಾಜ್ಯದ ಮುಜರಾಯಿ ಇಲಾಖೆ...

ಕೃಷ್ಣನಗರಿಯಲ್ಲಿ ನಿಲ್ಲದ ಕೊರೊನಾ ಪ್ರವಾಹ: ಇಂದು ಮತ್ತೆ 121 ಮಂದಿಗೆ ಪಾಸಿಟಿವ್..!

ಉಡುಪಿಗೆ ಕಂಟಕವಾದ ಮಹಾರಾಷ್ಟ್ರ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆ..! ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಹೆಮ್ಮಾರಿ ಕೊರೊನಾ ಪ್ರವಾಹ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ದಿನೇ ದಿನೇ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 121...