Connect with us

    LATEST NEWS

    ಚಾಲಕನಿಲ್ಲದೆ 1ಕಿ.ಮೀ ದೂರದಷ್ಟು ಸಾಗಿದ ಕಂಟೈನರ್…!

    Published

    on

    ಜಾರ್ಖಂಡ್​: ಕಂಟೈನರೊಂದು ಚಾಲಕನಿಲ್ಲದೇ ಬರೋಬ್ಬರಿ ಒಂದು ಕಿಲೋ ಮೀಟರ್ ಚಲಿಸಿದ ಘಟನೆ ಜಾರ್ಖಂಡ್​ನ ಲೋರ್ಡಗಾದ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 143 – ಎನಲ್ಲಿ ನಡೆದಿದೆ.


    ಬರೋಬ್ಬರಿ ಒಂದು ಕಿಲೋ ಮೀಟರ್​ ವರೆಗೆ ಓಡಿದ ಕಂಟೈನರ್, ಮಧ್ಯೆ ಸಿಕ್ಕ ಮರಗಳು, ವಿದ್ಯುತ್ ಕಂಬ, ಅಂಗಡಿಗಳನ್ನು ಜಖಂಗೊಳಿಸುತ್ತ ಹೋಗಿತ್ತು.


    ಕೊನೆಗೆ ಕಂಟೈನರ್ ತನ್ನಷ್ಟಕ್ಕೆ ನಿಧಾನವಾಗಿ ಚಲಿಸಲು ಶುರು ಮಾಡಿದ ಮೇಲೆ ಸ್ಥಳೀಯರು ನಿಲ್ಲಿಸಿದ್ದಾರೆ.

    ಇನ್ನು ಈ ದೃಶ್ಯವನ್ನ ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    LATEST NEWS

    ಪುತ್ತೂರು: ಚಡ್ಡಿ ಗ್ಯಾಂಗ್ ನಿಂದ ದರೋಡೆ ನಡೆದಿದೆ ಎಂದು ಕಥೆ ಕಟ್ಟಿದ ಮಹಿಳೆ !! ಆಮೇಲೇನಾಯ್ತು?

    Published

    on

    ಪುತ್ತೂರು: “ಚಡ್ಡಿ ಗ್ಯಾಂಗ್‌’ ದರೋಡೆಕೋರರು ಮಂಗಳವಾರ ರಾತ್ರಿ ನaನ್ನ ಮನೆಗೆ ಬಂದು ತಲವಾರು ತೋರಿಸಿ ನಗದು ನೀಡುವಂತೆ ಬೆದರಿಕೆ ಒಡ್ಡಿದ್ದು, ಈ ವೇಳೆ ನಾನು ಕಿಟಕಿಯ ಮೂಲಕ ತಪ್ಪಿಸಿಕೊಂಡಿರುವೆ” ಎಂಬ ಫೋಟೋವೊಂದನ್ನು ಮಹಿಳೆ ವೈರಲ್‌ ಮಾಡಿದ್ದ ಪರಿಣಾಮ ಕೆಯ್ಯೂರು ಗ್ರಾಮದೆಲ್ಲೆಡೆ ಆತಂಕ ಮನೆ ಮಾಡಿ ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ.

    ವಿಚಾರಣೆಯ ಸಂದರ್ಭ ಮಹಿಳೆಯ ಕಟ್ಟುಕಥೆ ಬೆಳಕಿಗೆ ಬಂದಿದೆ. ಚಡ್ಡಿ ಗ್ಯಾಂಗ್‌ನ ಕಥೆ ಕಟ್ಟಿದ್ದ ಮಹಿಳೆ ಕೇರಳ ಮೂಲದಿಂದ ಬಂದು ನೆಲೆಸಿರುವ ಮಾರ್ಗರೇಟ್‌. ಈ ರೀತಿ ಸುಳ್ಳು ಕಥೆ ಹೆಣೆದದ್ದು ಏಕೆ ಎನ್ನುವ ವಿಚಾರ ಇನ್ನೂ ಬಹಿರಂಗವಾಗಿಲ್ಲ. ಪುತ್ತೂರು ಗ್ರಾಮಾಂತರ ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.

    ಕಟ್ಟು ಕಥೆ :

    ಸರ್ಕಲ್‌ ಇನ್ಸ್‌ಪೆಕ್ಟರ್‌ ರವಿ ಬಿ.ಎಸ್‌. ಮನೆಮಂದಿಯ ವಿಚಾರಣೆ ನಡೆಸಿದ್ದಾರೆ. ಮಹಿಳೆಯ ಮೊಬೈಲ್‌ ಫೋನ್‌ ಪರಿಶೀಲಿಸಿದ ವೇಳೆ ಇದು ಕಟ್ಟು ಕಥೆ ಎನ್ನುವ ಅಂಶ ಬೆಳಕಿಗೆ ಬಂದಿತ್ತು. ಮಹಿಳೆ ವೈರಲ್‌ ಮಾಡಿದ ಫೋಟೋಗಳು 2 ವರ್ಷಗಳ ಹಿಂದೆ ಕೇರಳದ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಫೋಟೋ ಆಗಿದ್ದು, ಕೊಟ್ಟಾಯಂನಲ್ಲಿ ನಡೆದಿದ್ದ ವೀಡಿಯೋ ಶೂಟಿಂಗ್‌ ಸಂಬಂಧಿಸಿದ ಫೋಟೋ ಎನ್ನುವ ಅಂಶ ತನಿಖೆಯ ಸಂದರ್ಭ ಬಯಲಿಗೆ ಬಂದಿದೆ. ಪರಿಶೀಲನೆ ಸಂದರ್ಭ ದಲ್ಲಿ ಡಿವೈಎಸ್‌ಪಿ ಅರುಣ್‌ ನಾಗೇಗೌಡ, ಸಂಪ್ಯ ಠಾಣಾ ತನಿಖಾ ವಿಭಾಗದ ಎಸ್‌ಐ ಸುಷ್ಮಾ ಭಂಡಾರಿ, ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಶರತ್‌ ಕುಮಾರ್‌ ಮಾಡಾವು ಮೊದಲಾದವರಿದ್ದರು.

    ಮಹಿಳೆಯ ಮೊಬೈಲ್‌ ಪರಿಶೀಲನೆ ಸಂದರ್ಭದಲ್ಲಿ ಆಕೆ ಕ್ರೈಂ ಸಂಬಂಧಿತ ವೀಡಿಯೋಗಳನ್ನು ಅತೀ ಹೆಚ್ಚಾಗಿ ನೋಡುತ್ತಿರುವುದು ಗೊತ್ತಾಗಿದೆ. ಚಡ್ಡಿ ಗ್ಯಾಂಗ್‌ ಕಥೆ ಎಂದು ನಂಬಿಸಿ ಹರಿಯಬಿಟ್ಟ ಫೋಟೋಗಳು ಕೇರಳದ ಕಾಡು ಜನಾಂಗದ ಕಥೆಯ ವೀಡಿಯೋದಿಂಂದ ತೆಗೆದ ಸ್ಕ್ರೀನ್‌ ಶಾಟ್‌ ಆಗಿದೆ. ಈ ಫೋಟೋವನ್ನು ಮೊದಲಿಗೆ ಬಾಡಿಗೆ ಮನೆಯ ಮಾಲಕನಿಗೆ ಕಳುಹಿಸಿ ‘ಮನೆಗೆ ದರೋಡೆಕೋರರು ಬಂದಿದ್ದಾರೆ’ ಎಂದು ಆಕೆ ಹೇಳಿದ್ದರಳು.

    ಮನೆ ಮಾಲಕನಿಗೆ ಮಹಿಳೆಯ ಮೇಲೆ ಮೂಡಿತ್ತು ಅನುಮಾನ :

    ಮಹಿಳೆ ಕಳುಹಿಸಿದ ಫೋಟೋ ನೋಡಿ ಮನೆ ಮಾಲಕ ಬಾತೀಷ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾರ್ಗರೇಟ್‌ ತೋರಿಸಿದ ಫೋಟೋದ ಮೇಲೆ ಬಾತೀಷ್‌ಗೂ ಸಂಶಯ ಮೂಡಿತ್ತು. ಹಿಂದೊಮ್ಮೆ ಮಾರ್ಗರೇಟ್‌ ತನಗೆ ಹಾವು ಕಚ್ಚಿದೆ ಎಂದು ಮಾಲಕನ ಬಳಿ ಸುಳ್ಳು ಹೇಳಿದ್ದರು. ಈ ಕಾರಣಕ್ಕಾಗಿ ಮಹಿಳೆ ಹೆಣೆದ ಚಡ್ಡಿ ಗ್ಯಾಂಗ್‌ ಕಥೆಯನ್ನು ಮಾಲಕ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸುಳ್ಳು ಕಥೆ ಎಲ್ಲೆಡೆ ಪ್ರಚಾರ ಪಡೆದು ಇಡೀ ಗ್ರಾಮದಲ್ಲಿ ಆತಂಕ ಮೂಡಿದ ಕಾರಣ ಬಾಡಿಗೆ ಮನೆಯನ್ನು ತೊರೆಯುವಂತೆ ಮನೆಮಂದಿಗೆ ಮಾಲಕ ಸೂಚಿಸಿದ್ದಾರೆ.

    ಮಹಿಳೆಯ ಹಿನ್ನಲೆ :

    ಕೇರಳದಿಂದ ಬಂದಿದ್ದ ಮಹಿಳೆ ಕಳೆದ 40 ದಿನಗಳಿಂದ ತನ್ನ ಪತಿ ಸೈಂಟ್‌ ಜಾರ್ಜ್‌ ಹಾಗೂ ಮಗುವಿನೊಂದಿಗೆ ಕೆಯ್ಯೂರು ಗ್ರಾಮದ ಸಣಂಗಳದ ಬಾತೀಷ ಅವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ಇದ್ದಾರೆ. ಜಾರ್ಜ್‌ ಅವರು ರಬ್ಬರ್‌ ಟ್ಯಾಪಿಂಗ್‌ ಹಾಗೂ ರಬ್ಬರ್‌ ಹಾಲು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.

    ಇದನ್ನೂ ಓದಿ : ಚಡ್ಡಿ ಗ್ಯಾಂಗ್ ಮೇಲೆ ಪೊಲೀಸ್ ಫೈರಿಂಗ್..!

    ಚಡ್ಡಿಗ್ಯಾಂಗ್ ದರೋಡೆ ಆರೋಪ ಪೂರ್ತಿ ಕಟ್ಟುಕಥೆಯಾಗಿದ್ದು, ಮಹಿಳೆ ಹಂಚಿಕೊಂಡ ಫೋಟೋಗಳು ಕೊಟ್ಟಾಯಂನಲ್ಲಿ ನಡೆದ ಒಂದು ವೀಡಿಯೋ ಸ್ಟೋರಿಯ ಫೋಟೋಗಳಾಗಿವೆ. ಕೆಯ್ಯೂರು ಸಣಂಗಳಕ್ಕೆ ಚಡ್ಡಿ ಗ್ಯಾಂಗ್‌ನ ದರೋಡೆಕೋರರು ಬಂದಿಲ್ಲ ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ರವಿ ಬಿ.ಎಸ್‌. ತಿಳಿಸಿದ್ದಾರೆ.

    “ಕೆಯ್ಯೂರು ಗ್ರಾಮಕ್ಕೆ ಯಾವುದೇ ಚಡ್ಡಿ ಗ್ಯಾಂಗ್‌ನ ದರೋಡೆಕೋರರು ಬಂದಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯ ಇಲ್ಲ. ಪ್ರಕರಣದ ಸತ್ಯಾಸತ್ಯತೆಯನ್ನು ಪೊಲೀಸ್‌ ಇಲಾಖೆ ಭೇದಿಸಿ ಜನರ ಭಯ ದೂರಗೊಳಿಸಿದೆ” ಎಂದು ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಶರತ್‌ ಕುಮಾರ್‌ ಮಾಡಾವು ತಿಳಿಸಿದ್ದಾರೆ. ಸಧ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನ9ಇಕೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ರಾಷ್ಟ್ರ ಮಟ್ಟದ ಫಾರ್ಮುಲಾ ಫೆಸ್ಟ್ ನಲ್ಲಿ ಸಾಧನೆ ಮೆರೆದ ಶ್ರೀ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು

    Published

    on

    ಮಂಗಳೂರು : ಶ್ರೀ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಫಾರ್ಮುಲಾ ಫೆಸ್ಟ್ ನಲ್ಲಿ ಭಾಗವಹಿಸಿ ಪ್ರತಿಭಾ ಪ್ರದರ್ಶನ ನೀಡಿದರು.

    20 ರಾಜ್ಯಗಳಲ್ಲಿರುವ 120 ಶಾಖೆಯಲ್ಲಿ ಏಕಕಾಲಕ್ಕೆ 10,000 ವಿದ್ಯಾರ್ಥಿಗಳು ನೂರು ದಿನ ವಿಶೇಷ ತರಬೇತಿ ಪಡೆದು, 600 ಸೂತ್ರಗಳನ್ನು ಹೇಳುವುದರ ಮುಖಾಂತರ ಮೂರನೇ ಬಾರಿಗೆ ಇಲ್ಲಿನ ವಿದ್ಯಾರ್ಥಿಗಳು ಐತಿಹಾಸಿಕ ದಾಖಲೆ ಸೃಷ್ಠಿಸಿದ್ದಾರೆ.

    ಇದನ್ನೂ ಓದಿ : ಕಾರ್ಕಳ: ಮಗುವಿನಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಮನನೊಂದು ತಾಯಿ ಆತ್ಮಹತ್ಯೆ

    ಅದರಲ್ಲಿ ವಿಶೇಷವಾಗಿ ಮಂಗಳೂರು ನಗರದಲ್ಲಿರುವ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ  118 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮವಾದ ಸಾಧನೆ ಮಾಡಿದ್ದಾರೆ. ಸಾಧನೆಗೆ ಪಾಲಕರ ಪ್ರೋತ್ಸಾಹ,  ಶಿಕ್ಷಕರ ನಿರಂತರ ತರಬೇತಿ ಮುಖ್ಯವಾಗಿದೆ ಎಂದು ಶಾಲೆಯ ವ್ಯವಸ್ಥಾಪಕ ಕೆ. ಸುನಿಲ್ ಕುಮಾರ್ ಸಂತಸ ವ್ಯಕ್ತ ಪಡಿಸಿದ್ದಾರೆ. ಈ ಫಾರ್ಮುಲಾ ಫೆಸ್ಟ್ ನಲ್ಲಿ ಭಾಗಿಯಾದ ಎಲ್ಲಾ ಮಕ್ಕಳ ಪ್ರತಿಭೆ ಪ್ರಜ್ವಲಿಸುವಂತಾಗಲಿ ಎಂದು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಹಾರೈಸಿದೆ.

    Continue Reading

    LATEST NEWS

    ಕುಡಿದ ಮತ್ತಲ್ಲಿ ಡಾಕ್ಟರ್ ಅವಾಂತರ – ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ವೈದ್ಯ

    Published

    on

    ಬೆಂಗಳೂರು: ಕುಡಿದ ಮತ್ತಲ್ಲಿ ಡಾಕ್ಟರ್ ಅವಾಂತರವೊಂದು ಮಾಡಿ ಸುದ್ದಿಯಾಗಿದ್ದಾರೆ. ವೈದ್ಯರು ಹಾಗು ನರ್ಸ್ ಸೇರಿ ಆಸ್ಪತ್ರೆಗೆ ಬಂದಿದ್ದ ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

    ಯುವತಿಯೊಬ್ಬಳು ತೀವ್ರ ಜ್ವರದಿಂದ ಆಸ್ಪತ್ರೆಗೆ ಹೋಗಿದ್ದಳು ಎನ್ನಲಾಗಿದೆ. ಈ ವೇಳೆ ಡಾ.ಪ್ರದೀಪ್ ಹಾಗೂ ನರ್ಸ್ ಮಹೇಂದ್ರ ಕುಡಿದ ನಶೆಯಲ್ಲಿದ್ದರು. ಈ ವೇಳೆ ಯುವತಿಗೆ ಮಹೇಂದ್ರ ಇಂಜೆಕ್ಷನ್‌ ನೀಡಿದ್ದಾನೆ ಎಂದು ಹೇಳಲಾಗಿದೆ.

    ನಂತರ ಡಾ.ಪ್ರದೀಪ್‌ನನ್ನು ಕರೆದು ಚಿಕಿತ್ಸೆ ಕೊಡುವಂತೆ ಹೇಳಿದ್ದಾನೆ. ಡಾ.ಪ್ರದೀಪ್ ಇಂಜೆಕ್ಷನ್ ಹಿಡಿದು ಯುವತಿಯ ಮೈಕೈಗೆ 4-5 ಬಾರಿ ಇಂಜೆಕ್ಷನ್ ಚುಚ್ಚಿದ್ದಾನೆ. ಹಾಗು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ದೂರಿದ್ದಾಳೆ. ಈ ವೇಳೆ ಯುವತಿಯ ಪೋಷಕರು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

    Continue Reading

    LATEST NEWS

    Trending