Connect with us

DAKSHINA KANNADA

ಪುತ್ತೂರಲ್ಲಿ ‘ಕೈ’ ಕಾರ್ಯಕರ್ತರ ಗೂಂಡಾಗಿರಿ…

Published

on

ಅನುದಾನ ತಂದಿರುವ ಲೆಕ್ಕದ ವಿಚಾರದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೈ ಹಾಗೂ ಬಿಜೆಪಿ‌ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ. ಕೈ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ದಾಂದಲೆ ನಡೆಸಿದ್ದಾರೆ.

Rowdi lister

ಏನಿದು ಅನುದಾನದ ಗಲಾಟೆ…?

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಡ್ಡು ಹೊಡೆದ ಅರುಣ್ ಪುತ್ತಿಲ ಕಾರಣದಿಂದ ಪುತ್ತೂರು ಕಾಂಗ್ರೆಸ್ ಪಾಲಾಗಿತ್ತು. ರಾಜ್ಯದೆಲ್ಲೆಡೆ ಗೆದ್ದು ಬೀಗಿದ ಕಾಂಗ್ರೆಸ್ ಪಕ್ಷವೇ ರಾಜ್ಯದ ಅಧಿಕಾರ ಹಿಡಿದಿತ್ತು. ಇನ್ನು ಬಿಜೆಪಿ ಪ್ರಾಭಲ್ಯದ ಪುತ್ತೂರಿನಲ್ಲಿ ಕೈ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆದ್ದು ಭೀಗಿದ್ದರು.ಇತ್ತೀಚೆಗೆ ಪುತ್ತೂರು ಕ್ಷೇತ್ರಕ್ಕೆ ಶಾಸಕ ಅಶೋಕ್ ಕುಮಾರ್ ರೈ 1400 ಕೋಟಿ ತಂದಿರೋದಾಗಿ ಹೇಳಿಕೆ ನೀಡಿದ್ದರು. ಆದ್ರೆ ಇದನ್ನ ಪ್ರಶ್ನೆ ಮಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅನುದಾನದ ಲೆಕ್ಕ ಕೊಡಿ ಅಂದಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಅಶೋಕ ರೈ ಸಂಸದರ ಒಂದು ಲಕ್ಷ ಕೋಟಿ ಅನುದಾನದ ಲೆಕ್ಕ ಕೊಡಿ ಅಂದಿದ್ದರು. “ನನ್ನ ಅನುದಾನದ ಲೆಕ್ಕ ನೀಡುವೆ ಆದರೆ ಸಂಸದರು ಲಕ್ಷ ಕೋಟಿ ಎಲ್ಲಿ ಹಾಕಿದ್ದಾರೆ ಅದರ ಲೆಕ್ಕ ಕೊಡಿ”ಅಂತ ಸವಾಲು ಹಾಕಿದ್ದರು.

ಈಗ ನಡೆದಿರೋ ಘಟನೆ ಏನು ?

ಬಿಜೆಪಿ ಭದ್ರ ಕೋಟೆಯಾಗಿದ್ದ ಪುತ್ತೂರು ಪುತ್ತಿಲ ಕಾರಣದಿಂದ ಬಿಜೆಪಿ ಕೈ ತಪ್ಪಿ ಹೋಗಿದೆ. ಇದನ್ನ ಅರಗಿಸಿಕೊಳ್ಳಲು ವರ್ಷವಾಗ್ತಾ ಬಂದ್ರೂ ಬಿಜೆಪಿ ಕಾರ್ಯಕರ್ತರಿಗೆ ಸಾದ್ಯವಾಗಿಲ್ಲ. ಮತ್ತೊಂದೆಡೆ ಪುತ್ತಿಲ ಪರಿವಾರದ ನಡುವಿನ ಸಂಘರ್ಷ ಕಾರ್ಯಕರ್ತರ ಬಾಯಿ ಮುಚ್ಚಿಸಿತ್ತು. ಇದೀಗ ಪುತ್ತಿಲ ಪರಿವಾರ ಪಕ್ಷದೊಂದಿಗೆ ವಿಲೀನವಾಗಿದ್ದೇ ತಡ ಕಾರ್ಯಕರ್ತರು ಫೀಲ್ಡ್ ಗೆ ಇಳಿದಿದ್ದಾರೆ. ಶಾಸಕರೇ ಅನುದಾನದ ಲೆಕ್ಕ ಕೊಡಿ ಅಂತ ಫ್ಲೆಕ್ಸ್ ಹಾಕಿ ಸಾಮಾಜಿಕ ಜಾಲತಾಣದಲ್ಲೂ ಪ್ರಶ್ನೆ ಮಾಡಿದ್ದಾರೆ. ಇದು ಕೈ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ. ಹೀಗಾಗಿ ತಕ್ಕ ಉತ್ತರ ನೀಡಲು ಮಾಡಬಾರದ್ದು ಮಾಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದೇನು ..?

ಬಿಜೆಪಿ ಕಾರ್ಯಕರ್ತರ ಶಾಸಕರೇ ಲೆಕ್ಕ ಕೊಡಿ ಅಭಿಯಾನಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಟಕ್ಕರ್ ನೀಡಿದ್ದಾರೆ. ಅನುದಾನದ ಲೆಕ್ಕದ ಬ್ಯಾನರ್ ಹಿಡಿದು ಬಿಜೆಪಿ ಕಾರ್ಯಕರ್ತನ ಮನೆ ಮುಂದೆ ಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ಬಿಜೆಪಿಯ ಸಾಮಾಜಿಕ ಜಾಲತಾಣದ ಹ್ಯಾಂಡ್ಲರ್ ಆಗಿದ್ದ ಜಯಾನಂದ ಎಂಬವರ ಮನೆ‌ಮುಂದೆ ಈ ಡ್ರಾಮಾ ಮಾಡಿದ್ದಾರೆ. ಈ ಮೂಲಕ ಕಛೇರಿ ಹಾಗೂ ಬೀದಿಯಲ್ಲಿರಬೇಕಾದ ರಾಜಕೀಯ ವಿಚಾರವನ್ನ ಕೈ ಕಾರ್ಯಕರ್ತರು ಮನೆ ಬಾಗಿಲಿಗೆ ತಂದಿದ್ದಾರೆ. ಬಿಜೆಪಿ ಕಛೇರಿ ಮುಂದೆ ಮಾಡಬೇಕಾದ ಪ್ರತಿಭಟನೆಯನ್ನು ಸಾಮಾನ್ಯ ಸೋಷಿಯಲ್ ಮೀಡಿಯಾ ಹ್ಯಾಂಡ್ಲರ್ ಮನೆ‌ ಮುಂದೆ ಮಾಡಿದ್ದಾರೆ. ಶಾಸಕರು ನಿಜವಾಗಿ ಅನುದಾನ ತಂದಿದ್ರೆ ಅದನ್ನ ಹೇಳಲು ಸಾಕಷ್ಟು ಜಾಗ ಇದ್ರೂ ಪ್ರಶ್ನೆ ಮಾಡಿದ ಸಾಮಾನ್ಯ ಕಾರ್ಯಕರ್ತನ ಮನೆಗೆ ಬ್ಯಾಂಡ್ ಸೆಟ್ ಜೊತೆ ಬಂದು ಗಲಾಟೆ ಮಾಡಿದ್ದಾರೆ. ಮನೆಗೆ ಕಲ್ಲೆಸೆದು ದಾಂದಲೆ ನಡೆಸಿದ್ದಾರೆ ಅಂತ ಬಿಜೆಪಿಗರು ಪೊಲೀಸರಿಗೆ ದೂರೂ ಕೂಡಾ ನೀಡಿದ್ದಾರೆ.  ಬ್ಯಾನರ್ ಹಿಡಿದು ಬಂದ ರೌಡೀ ಶಿಟರ್ ಪ್ರಜ್ವಲ್ ರೈ  ಎಲ್ಲದಕ್ಕೆ ಕಾರಣ ಅನ್ನೋದೆ ಅನ್ನೋದೆ ಈಗ ಇರುವ ಆರೋಪ

ಅನುದಾನ ಜನರ‌ ತೆರಿಗೆ ಹಣ…

ಯಾವುದೇ ಪಕ್ಷವಾಗಲಿ,ಯಾವುದೇ ಸರ್ಕಾರವಾಗಲಿ, ಅಭಿವೃದ್ಧಿಗೆ ಖರ್ಚು ಮಾಡುವ ಹಣ ಅಭ್ಯರ್ಥಿಯನ್ನು ಆರಿಸಿ ಕಳುಹಿಸಿದ ಜನರ ತೆರಿಗೆ ಹಣ. ಹೀಗಿರುವಾಗ ಲೆಕ್ಕ ಕೇಳುವವರು , ಲೆಕ್ಕ ತೋರಿಸುವವರಿಗೆ ಸಂವಿಧಾನದಲ್ಲಿ ಸಾಕಷ್ಟು ಅವಾಕಾಶ ಇದೆ. ಆದ್ರೆ ಈ ರೀತಿಯ ಬೆಳವಣಿಗೆ ನಿಜಕ್ಕೂ ಜಾಗೃತ ಸಮಾಜ ತಲೆ ತಗ್ಗಿಸುವಂತಹದ್ದಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಅನ್ನೋದನ್ನ ಮರೆತವರಿಂದಷ್ಟೇ ಇಂತಹ ಕೆಲಸ ಮಾಡಲು ಸಾದ್ಯ.

Click to comment

Leave a Reply

Your email address will not be published. Required fields are marked *

DAKSHINA KANNADA

ನಿರ್ಮಾಣ ಹಂತದ ಸೇತುವೆ ಕುಸಿದು 7 ಮಂದಿಗೆ ಗಾಯ

Published

on

ವಿಟ್ಲ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಪರಿಣಾಮ 7 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಪುಣಚ ಗ್ರಾಮದ ಬರೆಂಜ-ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಪಿಪ್ಪಾಡಿ ಎಂಬಲ್ಲಿ ನಡೆದಿದೆ.

ಈ ಸೇತುವೆಯ ಕೊನೆಯ ಕ್ಷಣದ ಸ್ಲ್ಯಾಬ್ ನಿರ್ಮಾಣಕ್ಕಾಗಿ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಕಾಂಕ್ರಿಟ್ ಕಾಮಗಾರಿ ಸೇತುವೆ ತಳಭಾಗದಿಂದ ತಾತ್ಕಾಲಿಕವಾಗಿ ಅಳವಡಿಸಿದ್ದ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಜಾರಿದ್ದರಿಂದ ಕಬ್ಬಿಣದ ರಾಡ್, ಕಾಂಕ್ರಿಟ್ ಮಿಕ್ಸ್ ಎಲ್ಲವೂ ಕುಸಿದು ಬಿದ್ದಿದೆ.

ಸೇತುವೆ ಸಾಮಾಗ್ರಿಯ ನಡುವಿನಲ್ಲಿ ಓರ್ವ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು, ಆರು ಮಂದಿ ಗಾಯಗೊಂಡವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸ್ಥಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಒರ್ವ ವ್ಯಕ್ತಿಯನ್ನು ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.

Continue Reading

DAKSHINA KANNADA

ಮಂಗಳೂರಿನ ಮೊದಲ ಬಸ್ ಇದೇ ನೋಡಿ…!

Published

on

ಹಿಂದಿನ ಕಾಲದಲ್ಲಿ ಮಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ಮಾಡಬೇಕಿದ್ದರೆ ಒಂದಾ ಎತ್ತಿನಗಾಡಿ ಇಲ್ಲದಿದ್ದರೆ ಕುದುರೆಗಾಡಿಯಲ್ಲಿ ಹೋಗಬೇಕಿತ್ತು. ಇದೂ ಎರಡೂ ಇಲ್ಲದಿದ್ದರೆ ನಡೆದುಕೊಂಡೇ ಹೋಗಬೇಕಿತ್ತು. ಆ ಸಮಯದಲ್ಲಿ ಮಂಗಳೂರಿಗೆ ಮೊದಲ ಬಸ್ಸಿನ ಪರಿಚಯ ಆಗ್ತದೆ. ಅದು ಯಾವಾ ಬಸ್. ಎಲ್ಲೆಲ್ಲ ತಿರ್ಗಾಡುತ್ತಾ ಇತ್ತು. ನೋಡೋಣ ಬನ್ನಿ.

1914ರಲ್ಲಿ ಕೆನರಾ ಪಬ್ಲಿಕ್ ಕನ್ವೆಯನ್ಸ್ ಕಂಪೆನಿ (ಸಿಪಿಸಿ) ಇವರು ಮೊದಲ ಖಾಸಗಿ ಬಸ್ ಸಂಚಾರವನ್ನು ಪ್ರಾರಂಭ ಮಾಡ್ತಾರೆ. 1914 ಮಾರ್ಚ್‌ 23 ತಾರೀಕಿನಂದು ಮಂಗಳೂರಿನಿಂದ ಬಂಟ್ವಾಳಕ್ಕೆ ಮೊದಲ ಸಿಪಿಸಿ ಬಸ್ ಹೊರಡ್ತದೆ. ಪ್ರತಿದಿನ ಕೂಡ 2 ಟ್ರಿಪ್ ಇರ್ತಾ ಇತ್ತು. ಒಂದು ಸಲಕ್ಕೆ 22 ಜನರನ್ನು ಮಾತ್ರ ಕರೆದುಕೊಂಡು ಹೋಗುವ ಸಾಮಾರ್ಥ್ಯ ಈ ಬಸ್ಸಿಗೆ ಇತ್ತಂತೆ.

ವಿಶೇಷವೆಂದರೆ ಈ ಬಸ್ ಅನ್ನು ಜರ್ಮನ್‌ನಿಂದ ಮಂಗಳೂರಿಗೆ ಶಿಪ್‌ನಲ್ಲಿ ತಂದದ್ದು. ಆ ಕಾಲದಲ್ಲಿ ಅದಕ್ಕೆ 2500 ರೂಪಾಯಿ ಮಾತ್ರ ಖರ್ಚಾಗಿತ್ತು. ತದನಂತರ 1916ರಲ್ಲಿ ಹಿಂದೂ ಟ್ರಾಸಿಸ್ಟ್ ಎನ್ನುವ ಹೊಸ ಸಾರಿಗೆ ಸಂಸ್ಥೆ ಆರಂಭವಾಯಿತು. 1917ರಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಬಸ್ ಸಂಚಾರ ಪ್ರಾರಂಭವಾಯಿತು. ಇದಾದ ಮೇಲೆ ಒಂದೊಂದೆ ಬಸ್ಸಿನ ಸಂಖ್ಯೆ ಎಚ್ಚಾಗುತ್ತಾ ಬಂತು.

ದುರ್ಗಾಪರಮೇಶ್ವರಿ ಮೋಟಾರ್ ಸರ್ವೀಸ್, ಶಂಕರ್ ವಿಠಲ್, ಮಂಜುನಾಥ್ ಟ್ರಾನ್ಸ್‌ಪೋರ್ಟ್‌, ಶೆಟ್ಟಿ ಮೋಟಾರ್ಸ್, ಹನುಮಾನ್ ಟ್ರಾನ್ಸ್‌ಪೋರ್ಟ್‌, ಬಲ್ಲಾಳ್ ಮೋಟಾರ್ಸ್ ಹೀಗೆ ಹಲವು ಬಗೆಯ ಖಾಸಗಿ ಸಂಸ್ಥೆಗಳು ಶುರುವಾಯಿತು. ಆ ಸಮಯದಲ್ಲಿ ಮಂಗಳೂರಿನಿಂದ ಉಡುಪಿಗೆ ಬಸ್ಸ್‌ನಲ್ಲಿ ಹೋಗಬೇಕಿದ್ದರೆ ಸಾಧಾರಣ 5 ಗಂಟೆ ಬೇಕಿತ್ತು.

ಇವತ್ತಿನ ನಮ್ಮ ಮಂಗಳೂರಿನಲ್ಲಿ ಬಸ್ ವ್ಯವಸ್ಥೆ ಎನ್ನುವಂತದ್ದು ಭಾರೀ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದ್ರೆ ಅದರ ಹಿಂದೆ ಇಷ್ಟೆಲ್ಲಾ ಇಂಟ್ರೆಸ್ಟಿಂಗ್ ಸಂಗತಿಗಳು ಇವೆ.

Continue Reading

DAKSHINA KANNADA

ನೀರು ಕುಡಿಯುವ ನೆಪದಲ್ಲಿ ದರೋಡೆಗೆ ಯತ್ನ..!!

Published

on

ಪಡುಬಿದ್ರೆ: ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದ ಕೂಲಿ ಕಾರ್ಮಿಕರೊಬ್ಬ ಮನೆಗೆ ಬಂದು ಮನೆಯೊಡತಿಯ ಮಾಂಗಲ್ಯ ದೋಚಲು ಮುಂದಾಗಿರುವ ಘಟನೆ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.

ಎಲ್ಲರೂ ಗ್ರಾಮದ ದಳಂತ್ರ ಕೆರೆ ಸಮೀಪದ ಕೃಷ್ಣರಾಜ ಹೆಗಡೆ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಕೃಷ್ಣ ರಾಜ್‌ ಅವರ ಪತ್ನಿ ಸುನೀತಿ ಹೆಗಡೆ ಅವರ ಮಾಂಗಲ್ಯ ಎಳೆಯಲು ಪ್ರಯತ್ನಿಸಿದ್ದಾನೆ. ಪಾಲಡ್ಕ ನಿವಾಸಿ ಶರತ್ ಎಂಬಾತ ಈ ಹಿಂದೆ ಈ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಅದೇ ಪರಿಚಯದಲ್ಲಿ ಮನೆಗೆ ಬಂದು ಮನೆಯ ಯಜಮಾನಿಯಲ್ಲಿ ನೀರು ಕೇಳಿದ್ದಾನೆ.

ನೀರು ತರಲು ಒಳ ಹೋದಾಗ ಸುನೀತಿ ಹೆಗಡೆಯವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಬಳಿಕ ಅಡುಗೆ ಮನೆಯಿಂದ ಸ್ನಾನದ ಮನೆಯವರೆಗೂ ಅವರನ್ನು ಎಳೆದೊಯ್ದು ಬಾತ್ ಟವಲ್‌ನಿಂದ ಉಸಿರುಗಟ್ಟಿಸಿದ್ದಾನೆ . ಇದೇ ವೇಳೆ ಅವರ ಕತ್ತಿನಲ್ಲಿದ್ದ ಬಂಗಾರದ ಕರಿಮಣಿ ಕಸಿಯಲು ಮುಂದಾಗಿದ್ದ. ಈ ವೇಳೆ ಪತ್ನಿಯ ಬೊಬ್ಬೆ ಕೇಳಿ ಹೊರಗಡೆ ಇದ್ದ ಕೃಷ್ಣರಾಜ ಹೆಗಡೆಯವರು ಓಡಿ ಬಂದಿದ್ದಾರೆ. ಈ ಸಮಯದಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಡೆದು 12 ಗಂಟೆಯಲ್ಲಿ ಪೊಲೀಸರು ಮುದರಂಗಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Continue Reading

LATEST NEWS

Trending