Connect with us

LATEST NEWS

ಬಿಜೆಪಿ ಸರ್ಕಾರದ ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ಕಾಂಗ್ರೆಸ್ ನಿಂದ ಅಭಿನಂದನೆ..!

Published

on

ಉಡುಪಿ :  ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಾತ ಶತ್ರು ಕೋಟ ಶ್ರೀನಿವಾಸ ಪೂಜಾರಿಗೆ ಸ್ವಂತ ಪಕ್ಷ ಮಾತ್ರವಲ್ಲ, ವಿರೋಧ ಪಕ್ಷಗಳಲ್ಲೂ ಅಭಿಮಾನಿಗಳಿದ್ದಾರೆ ಅನ್ನೋದಕ್ಕೆ ಈ ಫೊಟೋ ಸಾಕ್ಷಿ.

ಕುಂದಾಪುರ ತಾಲೂಕಿನ ಶೇಡಿಮನೆಯಲ್ಲಿ ಕಾಂಗ್ರೇಸ್ ಕಾರ್ಯಕರ್ತನೊಬ್ಬ ಕೋಟ ಶ್ರೀನಿವಾಸ ಪೂಜಾರಿಗೆ ಶುಭಾಶಯ ಕೋರಿ ಬ್ಯಾನರ್ ಹಾಕಿದ್ದಾನೆ.

ಅದರಲ್ಲೂ ಉದ್ದೇಶಪೂರ್ವಕವಾಗಿ ಕಾಂಗ್ರೇಸ್ ಕಾರ್ಯಕರ್ತ ಎಂದು ಈ ಬ್ಯಾನರ್ ನಲ್ಲಿ ನಮೂಧಿಸಲಾಗಿದೆ. ಸದ್ಯ ಈ ಫೊಟೋ ಸಾಮಾಜಿಕ ಜಾಳತಾಣಗಳಲ್ಲಿ ವೈರಲ್ ಆಗುತ್ತಿದೆ.

ಎಷ್ಟೇ ಕಚ್ಚಾಡಿದರೂ ರಾಜಕೀಯ ನಾಯಕರೆಲ್ಲಾ ಮುಖಾಮುಖಿಯಾದರೆ ಉಭಯ ಕುಶಲೋಪರಿ ಮಾತನಾಡಿಕೊಂಡು ಖುಷಿ ಪಡೋದನ್ನು ನೋಡಿದ್ದೇವೆ, ಆದರೆ ಕಾರ್ಯಕರ್ತರು ಮಾತ್ರ ಕಚ್ಚಾಡಿಕೊಂಡೇ ಇರ್ತಾರೆ.

ಪ್ರಸಕ್ತ ರಾಜಕಾರಣದಲ್ಲಿ ಇಂತಹ ವಿದ್ಯಮಾನಗಳು ಅಪರೂಪ ಎನ್ನಬಹುದು.

ಕೋಟ ಶ್ರೀನಿವಾಸರ ವಿಚಾರದಲ್ಲಿ ಮಾತ್ರ ಹಾಗಲ್ಲ, ಅನ್ಯ ಪಕ್ಷಗಳ ಕಾರ್ಯಕರ್ತರೂ ಬಹಿರಂಗವಾಗಿ ಅಭಿಮಾನ ತೋರಿಸುತ್ತಿರುವುದು ಎಲ್ಲರ ಗಮನಸೆಳೆದಿರುವುದು ಮಾತ್ರ ಅಷ್ಟೇ ಸತ್ಯ.

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಚುನಾವಣಾ ಆಯೋಗಕ್ಕೆ ದೂರು

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಪ್ರಕರಣ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

LATEST NEWS

ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

Published

on

ಚಿತ್ರದುರ್ಗ : ಮತ ಕೇಂದ್ರದಲ್ಲಿ ಚುನಾವಣಾ ಕರ್ತವ್ಯ ನಿರತ ಶಿಕ್ಷಕಿಯೊಬ್ಬರು ಕುಸಿದು ಬಿದ್ದು ಸಾ*ವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ. ಚಳ್ಳಕೆರೆ ನಗರದ ವಿಠಲನಗರದ ನಿವಾಸಿ ಯಶೋದಮ್ಮ ( 55) ಅವರು ಮೃ*ತ ಶಿಕ್ಷಕಿ.


ಯಶೋದಮ್ಮ ಹೊಟ್ಲೆಪನಹಳ್ಳಿ 202 ಮತ ಕೇಂದ್ರದಲ್ಲಿ ಚುನಾವಣಾ ಕರ್ತವ್ಯ ನಿರತರಾಗಿದ್ದರು. ಈ ಸಂದರ್ಭ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತರುವ ವೇಳೆ ದಾರಿ‌ಮಧ್ಯದಲ್ಲಿ ಸಾ*ವನಪ್ಪಿದ್ದಾರೆ. ಮೃ*ತ ಶಿಕ್ಷಕಿ ಯಶೋಧ ಅವರು ಬೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಚುನಾವಣಾ ಕರ್ತವ್ಯ ನಿಮಿತ್ತ ಯಶೋದಮ್ಮ ಹೊಟ್ಲೆಪನಹಳ್ಳಿ ಮತಗಟ್ಟೆಗೆ ಬಂದಿದ್ದರು. ಸಹಾಯಕ ಪೋಲಿಂಗ್‌ ರಿಟರ್ನಿಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮತದಾನ ಆರಂಭವಾದಾಗ ಆರೋಗ್ಯವಾಗಿದ್ದ ಯಶೋದಮ್ಮ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ರಿಟರ್ನಿಂಗ್ ಆಫೀಸರ್ ಗಮನಕ್ಕೆ ತಂದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಸ್ಪತ್ರೆ ತಲುಪುವ ಮೊದಲೇ ಯಶೋದಮ್ಮ ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಇವಿಎಂನಲ್ಲಿ ಪ್ರಧಾನಿ ಮೋದಿ ಚಿತ್ರ ಕಾಣದೆ ಕಂಗಾಲಾದ ಮಹಿಳೆ; ಅಧಿಕಾರಿಗಳೊಂದಿಗೆ ಜಗಳ!

ಘಟನೆಯ ಮಾಹಿತಿ ಪಡೆದ ಶಾಸಕ ಟಿ.ರಘುಮೂರ್ತಿ ಹಾಗೂ ಚುನಾವಣಾ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮೃ*ತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Continue Reading

FILM

ಮತ್ತೆ ಬಾಯ್‌ ಫ್ರೆಂಡ್ ಬದಲಾಯಿಸಿದ ಶೃತಿ ಹಾಸನ್..!

Published

on

ಮಂಗಳೂರು : ಪ್ರೀತಿ ಎಂಬ ಎರಡಕ್ಷರವನ್ನ ಬಣ್ಣದ ಲೋಕದಲ್ಲಿರುವ ಅನೇಕರು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಹೀಗಾಗಿಯೇ ದಿನಕ್ಕೊಂದು ಸಂಬಂಧ ಇಲ್ಲಿ ಬದಲಾಗುತ್ತೆ. ಲವ್ ಬೆನ್ನಲ್ಲಿಯೇ ಬ್ರೇಕ್‌ಪ್ ಆಗುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಶ್ರುತಿ ಹಾಸನ್ ಮತ್ತು ಶಾಂತನು ಹಜಾರಿಕಾ.

ಹೌದು, ನಿಮಗೆ ಗೊತ್ತಿರಲಿ.. ಮೂರ್ನಾಲ್ಕು ವರ್ಷಗಳ ಹಿಂದೆ, ಕಮಲ ಹಾಸನ್ ಅವರ ಮುದ್ದಿನ ಮಗಳು ಶ್ರುತಿ ಹಾಸನ್, ಬ್ರಿಟಿಷ್ ನಟ ಮೈಕಲ್ ಕೋರ್ಸೆಲ್ ಜೊತೆ ಪ್ರೇಮದ ಖಾತೆ ತೆರೆದಿದ್ದರು. ಜೊತೆ ಜೊತೆಯಲ್ಲಿ ಇಬ್ಬರು ಅನೇಕ ಕಡೆ ಕಾಣಿಸಿಕೊಂಡಿದ್ದರು. ಆದರೆ ಆ ನಂತರ ಏನಾಯಿತೋ ಗೊತ್ತಿಲ್ಲ. ಸಂಬಂಧ ಮುರಿದು ಬಿತ್ತು.

ಎರಡನೇ ಬಾಯ್‌ಫ್ರೆಂಡ್‌:

ಮೈಕಲ್ ಕೋರ್ಸೆಲ್ ಅವರಿಂದ ದೂರವಾದ ನಂತರ ಶ್ರುತಿ ಹಾಸನ್ ಬದುಕಿನಲ್ಲಿ ಬಂದ ವ್ಯಕ್ತಿ ಶಾಂತನು ಹಜಾರಿಕಾ. ಶಾಂತನು ಜೊತೆ ಎರಡು ವರ್ಷ ಪ್ರೇಮದ ತಪಸ್ಸು ಮಾಡಿದ್ದ ಶ್ರುತಿ ಹಾಸನ್ ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು. ತನ್ನ ಮೇಲೆ ಶಾಂತನುಗೆ ಇರುವ ಕಾಳಜಿ ಪ್ರೀತಿಯನ್ನೂ ಮೆಚ್ಚಿ ಮಾತನಾಡಿದ್ದರು. ಇನ್ನು ಎರಡು ವರ್ಷದ ಹಿಂದೆ ಅಂದರೆ 2022ರ ಸಮಯದಲ್ಲಿ ತಮ್ಮ ಮದುವೆ ಆಗಿದೆ ಎಂಬ ವಿಚಾರವನ್ನ ಕದ್ದು ಶಾಂತನು ಹೇಳಿದ್ದರು.

ಮದುವೆ ಆದ ನಂತರದಿಂದ ನಮ್ಮ ಸಂಬಂಧ ಇನ್ನು ಗಟ್ಟಿಯಾಗಿದೆ ಹಾಗೂ ಉತ್ತಮವಾಗಿದೆ. ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸಲು ನಮ್ಮ ಮದುವೆ ನಮಗೆ ದಾರಿ ಮಾಡಿಕೊಟ್ಟಿದೆ. ಮುಂದೆಯೂ ಹೀಗೆ ಸಂತೋಷದಿಂದ ದಿನಗಳನ್ನು ಕಳೆಯಲು ತೀರ್ಮಾನಿಸಿದ್ದೇವೆ ಎಂದಿದ್ದರು.

ಇದನ್ನೂ ಓದಿ  “ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?

ಆದರೆ ಈಗ ಶ್ರುತಿ ಹಾಸನ್ ಮತ್ತು ಶಾಂತನು ನಡುವೆ ಇದ್ದ ಪ್ರೇಮ ಸೇತುವೆ ಮುರಿದು ಬಿದ್ದಿದೆ ಅನ್ನುವ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಶ್ರುತಿ ಹಾಸನ್ ಸಾಮಾಜಿಕ ಜಾಲತಾಣದಲ್ಲಿ ಶಾಂತನು ಜೊತೆ ಫೋಟೋಗಳೆಲ್ಲ ಮಾಯವಾಗಿವೆ. ಶಾಂತನು ಅವರನ್ನ ಶ್ರುತಿ ಹಾಸನ್ ಅನ್ ಫ್ರೆಂಡ್ ಮಾಡಿದ್ದಾರೆ. ಒಟ್ಟಿನಲ್ಲಿ

ಸದ್ಯಕ್ಕೆ ಶ್ರುತಿ ಹಾಸನ್ ಮತ್ತು ಶಾಂತನು ನಡುವೆ ಮೊಳಕೆಯೊಡೆದಿದ್ದ ಪ್ರೀತಿ ಈಗ ಕಮರಿಹೋಗಿದೆ ಅನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಹರಿದಾಡುತ್ತಿರುವ ಈ ಸುದ್ದಿಯ ಬಗ್ಗೆ ಶ್ರುತಿ ಹಾಸನ್ ಸ್ಪಷ್ಟೀಕರಣ ಕೊಡ್ತಾರಾ ಅನ್ನುವುದನ್ನ ಕಾದು ನೋಡಬೇಕಿದೆ.

Continue Reading

LATEST NEWS

Trending