ಮಂಡ್ಯ : ಗಣರಾಜ್ಯೋತ್ಸವ ದಿನಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ನಟಿ ರಚಿತಾ ರಾಮ್ (Rachita Ram)ವಿರುದ್ಧ ದೂರು ದಾಖಲಾಗಿದೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಜಿಲ್ಲಾ ಹಾಗೂ ಮದ್ದೂರು ತಾಲೂಕು ಘಟಕ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದೆ.
ಇತ್ತೀಚೆಗೆ ‘ಕ್ರಾಂತಿ’ ಸಿನೆಮಾ ಪ್ರಚಾರ ಸಮಾರಂಭದಲ್ಲಿ ನಟಿ ರಚಿತಾ ರಾಮ್, ‘ಕ್ರಾಂತಿ ಚಿತ್ರವು ಜನವರಿ 26ಕ್ಕೆ ಬಿಡುಗಡೆಯಾಗಲಿದೆ.
ಅಂದು ಗಣರಾಜ್ಯೋತ್ಸವ ಮರೆತು ANNOUNCEMENT ಕ್ರಾಂತಿಯೋತ್ಸವ ಆಚರಿಸಿ’ ಎಂದು ಕರೆ ನೀಡುವ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ.
ಆದ್ದರಿಂದ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ದೇಶದಿಂದ ಗಡಿಪಾರು ಮಾಡಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ನಿಯೋಗದಲ್ಲಿ ಪರಿಷತ್ ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ, ಗೌರವ ಮಾರ್ಗದರ್ಶಕ ಎಂ.ಸಿ.ಬಸವರಾಜು, ಮದ್ದೂರು ತಾಲೂಕು ಅಧ್ಯಕ್ಷ ಡಿ.ಸಿ.ಮಹೇಂದ್ರ, ಉಪಾಧ್ಯಕ್ಷ ಎಂ.ಸಿ.ಶಿವರಾಜು ಉಪಸ್ಥಿತರಿದ್ದರು.