Connect with us

    BANTWAL

    ಬಂಟ್ವಾಳ: ಫೇಸ್‌ಬುಕ್‌ನಲ್ಲಿ ಕೋಮು ಪ್ರಚೋದಿತ ಬರಹ- ದೂರು ದಾಖಲಿಸಿದ PFI

    Published

    on

    ಬಂಟ್ವಾಳ: ಸಾಲೆತ್ತೂರಿನಲ್ಲಿ ನಡೆದ ಕೊರಗಜ್ಜನ ಅಪಮಾನ ಪ್ರಕರಣ ಉಲ್ಲೇಖಿಸಿ ಫೇಸ್‌ಬುಕ್‌ನಲ್ಲಿ ಕೋಮು ಗಲಭೆಗೆ ಪ್ರಚೋದಿಸಿದ ಬರೆದ ಬರಹದ ಬಗ್ಗೆ ಯುವಕನೋರ್ವನ ವಿರುದ್ಧ ಪಿಎಫ್‌ಐ ವಿಟ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ.


    ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ವಿಷ್ಣು ಪ್ರಸಾದ್ ನಿಡ್ಡಾಜೆ ಎಂಬಾತನು ವಿಟ್ಲದ ಸಾಲೆತ್ತೂರ್ ಎಂಬಲ್ಲಿ ನಡೆದ ಘಟನೆಯನ್ನು ಉಲ್ಲೆಖಿಸುತ್ತಾ,

    ಗೋದ್ರಾ ಷಡ್ಯಂತ್ರದ ನಂತರ ನಡೆದ ಗುಜರಾತ್ ಗಲಭೆ ಮಂಗಳೂರಿನಲ್ಲಿ ನಡೆಸಬೇಕು ಆಗಷ್ಟೇ ಮುಸ್ಲಿಮರು ಸುಮ್ಮನಾಗುತ್ತಾರೆ.

    ಗುಜರಾತ್ ಗಲಭೆ ಯಾವಾಗ ಹೇಗೆ ನಡೆಯಿತೆಂದು ಮುಸ್ಲಿಮರು ಯೋಚಿಸುದು ಒಳಿತು ಎಂದು ಹಾಗು ಕೋಮುದ್ವೆಷ ಹರಡುವ ಸಂದೇಶ ನೀಡಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಗಲಭೆಗೆ ನಡೆಸಲು ಕುಮ್ಮಕ್ಕು ನೀಡಿರುತ್ತಾನೆ.

    ಆದುದರಿಂದ ಆರೋಪಿಯನ್ನು ಕಾನೂನಿನ ಪ್ರಕಾರ ಅತಿ ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ವತಿಯಿಂದ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


    ಈ ಸಂದರ್ಭ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಜಿಲ್ಲಾ ಸಮಿತಿ ಸದಸ್ಯರಾದ ಅಝೀಝ್ ಕಡಂಬು, ಡಿವಿಷನ್ ಸಮಿತಿ ಸದಸ್ಯರಾದ ಮಹಮ್ಮದ್.ಎಮ್. ಸಾಲೆತ್ತೂರ್, ರಹೀಮ್ ಕಂಬಳಬೆಟ್ಟು, ಕಡಂಬು ಘಟಕ ಕಾರ್ಯದರ್ಶಿ ಶಹೀದ್ ಮತ್ತು ಸತ್ತಾರ್ ಕಡಂಬು ಉಪಸ್ಥಿತರಿದ್ದರು.

    BANTWAL

    ಬಂಟ್ವಾಳ: ವೇಷ ಹಾಕಲು ಇದೆ ಎಂದು ಮನೆಯಿಂದ ತೆರಳಿದ ವ್ಯಕ್ತಿ ನಾಪತ್ತೆ

    Published

    on

    ಬಂಟ್ವಾಳ: ವೇಷ ಹಾಕಲು ಇದೆ ಎಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿಟ್ಲ ಕಸಬಾ ಗ್ರಾಮದ ಪಳಿಕೆ ಅಣ್ಣಮೂಲೆ ನಿವಾಸಿ ಸುಂದರ ನಾಯ್ಕ್‌ (55) ನಾಪತ್ತೆಯಾದವರು.ಸುಂದರ ನಾಯ್ಕ್‌ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಸರಾ ಹಬ್ಬದ ಪ್ರಯುಕ್ತ ವೇಷ ಹಾಕುತ್ತಿದ್ದರು. ಅದೇ ರೀತಿ ಅ.1 ರಂದು ಬೆಳಿಗ್ಗೆ ಪತ್ನಿಯಲ್ಲಿ ,ನಾಳೆ ನಾನು ದಸರಾ ಹಬ್ಬದ ವೇಷ ಹಾಕಲು ಇದೆ ನಾನು ವಿಟ್ಲ ಠಾಣೆಗೆ ಹೋಗಿ ಅನುಮತಿ ಪಡೆಯಲು ಇದೆಯಂದು ಹೇಳಿದ್ದರು. ಸುಂದರ ನಾಯ್ಕ ಅವರ ಪತ್ನಿ ಸಂಜೆ ಮನೆಗೆ ಬಂದಾಗ ಪತಿ ಇರಲಿಲ್ಲ.

    ದಸರಾ ಹಬ್ಬ ಇರುವುದರಿಂದ ಹಬ್ಬದಲ್ಲಿ ವೇಷ ಹಾಕಿ ಹಬ್ಬ ಮುಗಿದ ನಂತರ ಮನೆಗೆ ಬರಬಹುದೆಂದು ಭಾವಿಸಿದ್ದು ಆದರೆ ಈವರೆಗೂ ಗಂಡ ಮನೆಗೆ ಬಾರದೇ ಇರುವುದರಿಂದ ಸಂಭಂದಿಕರಲ್ಲಿ, ನೆರೆಕರೆಯವರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿದ್ದಾರೆ ಎಂದು ಪತ್ನಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    Continue Reading

    BANTWAL

    ಬಂಟ್ವಾಳ : ರೈಲ್ವೇ ಹಳಿ ಬದಿ ರುಂ*ಡ – ಮುಂ*ಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃ*ತದೇಹ ಪ*ತ್ತೆ

    Published

    on

    ಬಂಟ್ವಾಳ: ರೈಲು ಡಿಕ್ಕಿಯಾಗಿ ಸಾ*ವನ್ನಪ್ಪಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಬಿಸಿರೋಡಿನ ರೈಲ್ವೇ ಹಳಿಯಲ್ಲಿ ಪ*ತ್ತೆಯಾಗಿದೆ. ಬಂಟ್ವಾಳ ಕಾಮಾಜೆ ನಿವಾಸಿ ಕರುಣಾಕರ (35) ಸಾ*ವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ.


    ಕಳೆದ 2 ವರ್ಷಗಳ ಹಿಂದೆಯಷ್ಟೇ ಇವರಿಗೆ ಮದುವೆಯಾಗಿದ್ದು, ಒಂದು ವರ್ಷದ ಹೆಣ್ಣು ಮಗುವಿದೆ.

    ಸುಮಾರು 11 ಗಂಟೆಯ ವೇಳೆ ಬಿಜಾಪುರದಿಂದ ಮಂಗಳೂರಿಗೆ ಆಗಮಿಸುವ ರೈಲು ಡಿ*ಕ್ಕಿಯಾಗಿದೆ. ಬಿಸಿರೋಡಿನ ರೈಲ್ವೇ ಸ್ಟೇಷನ್‌ನ ಸಮೀಪದಲ್ಲಿ ಕುತ್ತಿಗೆ ಹಾಗೂ ದೇಹ ಎರಡು ಮಾರ್ಪಾಡು ಆಗಿರುವ ಸ್ಥಿತಿಯಲ್ಲಿ ಮೃ*ತದೇಹ ಪತ್ತೆಯಾಗಿದೆ. ಸಾ*ವಿನ ಕಾರಣ ಇನ್ನೂ ನಿಗೂಢವಾಗಿದ್ದು ನಿಖರ ಮಾಹಿತಿ ಲಭ್ಯಯವಾಗಿಲ್ಲ.

    ಕಾಮಾಜೆಯಿಂದ ಬಿಸಿರೋಡಿಗೆ ಕೆಲಸಕ್ಕೆ ಹೋಗುವ ವೇಳೆ ಇದೇ ರೈಲ್ವೇ ಹಳಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎಂಬ ವಿಚಾರವನ್ನು ಕುಟುಂಬಿಕರು ತಿಳಿಸಿದ್ದಾರೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸ್ ಹಾಗೂ ರೈಲ್ವೇ ಇಲಾಖೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    BANTWAL

    ಚಾಲಕನಿಗೆ ಮೂರ್ಛೆ ರೋಗ..! ಕಂಬಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್‌ : ವಿದ್ಯಾರ್ಥಿಗಳು ಪಾರು

    Published

    on

    ಬಂಟ್ವಾಳ : ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ, ಬಸ್ ಚಾಲಕನಿಗೆ ಮೂರ್ಛೆ ರೋಗ ಕಾಣಿಸಿಕೊಂಡು ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪೊಳಲಿ ಸಮೀಪದ ಬಡಕಬೈಲಿನಲ್ಲಿ ಇಂದು (ಅ.14) ಬೆಳಿಗ್ಗೆ ನಡೆದಿದೆ.


    ಬಡಕಬೈಲು ಸೈಂಟ್ ಡೊಮಿನಿಕ್ ಆಂಗ್ಲ ಮಾಧ್ಯಮ ಶಾಲೆಯ ಬಸ್ ಚಾಲಕ ಅಡ್ಡೂರು ನಿವಾಸಿ ಸುರೇಶ್ ಎಂಬುವವರಿಗೆ ಮೂರ್ಛೆ ರೋಗ ಬಾಧಿಸಿದ ಪರಿಣಾಮ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದಿದೆ.

     

    ಇದನ್ನೂ ಓದಿ : ಸಂಪಾಜೆ : ಕಾರು ನಿಯಂತ್ರಣ ತಪ್ಪಿ ತೋಟಕ್ಕೆ ಪಲ್ಟಿ

     

    ಘಟನೆಯಲ್ಲಿ ಯಾವುದೇ ಅಪಾಯವಿಲ್ಲದೆ ಚಾಲಕ ಸಹಿತ ವಿದ್ಯಾರ್ಥಿಗಳು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending