Sunday, December 4, 2022

ಮಲಗಿದ್ದ ಹಸುಗೂಸನ್ನು ಹೊತ್ತೊಯ್ದು ನೀರಿನ ಟ್ಯಾಂಕ್‌ಗೆ ಹಾಕಿ ಕೋತಿಗಳಿಂದ ಮರ್ಡರ್‌

ನವದೆಹಲಿ: ಮಲಗಿದ್ದ 2 ತಿಂಗಳ ಮಗುವನ್ನು ಕೋತಿಗಳ ಗುಂಪೊಂದು ಎತ್ತಿಕೊಂಡು ಹೋಗಿ ನೀರಿನ ಟ್ಯಾಂಕ್​ನಲ್ಲಿ ಹಾಕಿದ ಪರಿಣಾಮ ಮಗು ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ ಮನಕಲಕುವ ಘಟನೆ ದೆಹಲಿ-ಉತ್ತರಪ್ರದೇಶದ ಗಡಿ ಪ್ರದೇಶದ ಭಾಗ್‌ಪತ್‌ನಲ್ಲಿ ಭಾನುವಾರ ನಡೆದಿದೆ.


ದೆಹಲಿಯ ಭಾಗ್‌ಪತ್‌ನಲ್ಲಿ 2 ತಿಂಗಳ ಮಗು ಮನೆಯ ಟೆರೇಸ್‌ನಲ್ಲಿರುವ ಕೋಣೆಯಲ್ಲಿ ತನ್ನ ಅಜ್ಜಿಯ ಪಕ್ಕದಲ್ಲಿ ಮಲಗಿತ್ತು. ಗಾಳಿ ಬರಲೆಂದು ಅಜ್ಜಿ ಬಾಗಿಲು ತೆರೆದು, ಮೊಮ್ಮಗುವಿನೊಂದಿಗೆ ರೂಮಿನಲ್ಲಿ ಮಲಗಿದ್ದರು. ಆಗ ರೂಮಿನೊಳಗೆ ಬಂದ ಕೋತಿಗಳು ಹಸುಗೂಸನ್ನು ಎತ್ತಿಕೊಂಡು ಟೆರೇಸ್​ನ ಹೊರಭಾಗದಲ್ಲಿದ್ದ ನೀರಿನ ಟ್ಯಾಂಕ್​ನೊಳಗೆ ಹಾಕಿದೆ.

ನಿದ್ರೆಗೆ ಜಾರಿದ್ದ ಅಜ್ಜಿಗೆ ಇದು ಗೊತ್ತಿರಲಿಲ್ಲ. ನಿದ್ರೆಯಿಂದ ಎದ್ದಾಗ ಮೊಮ್ಮಗು ಕಾಣೆಯಾಗಿರುವುದನ್ನು ಕಂಡು ಅಜ್ಜಿ ಜೋರಾಗಿ ಕೂಗಿದರು. ಮೇಲೆ ಓಡಿ ಬಂದ ಮನೆಯವರು ಆ ಮಗು ಕಾಣದಿರುವುದನ್ನು ನೋಡಿ ಆತಂಕದಿಂದ ಸುತ್ತಲೂ ಹುಡುಕಾಡತೊಡಗಿದರು.

2 ತಿಂಗಳ ಮಗುವಾಗಿದ್ದರಿಂದ ಬೇರೆಲ್ಲೂ ಓಡಿಹೋಗಲು ಸಾಧ್ಯವಿಲ್ಲ ಎಂಬುದಂತೂ ಖಚಿತವಾಗಿತ್ತು. ಎಲ್ಲ ಕಡೆ ಹುಡುಕಾಡಿದ ನಂತರ ಟೆರೇಸ್​ನ ನೀರಿನ ತೊಟ್ಟಿಯಲ್ಲಿ ಮಗು ತೇಲುತ್ತಿರುವುದು ಪತ್ತೆಯಾಗಿದೆ.
ಈ ಏರಿಯಾದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೂ ಮೊದಲು ಕೂಡ ಸಾಕಷ್ಟು ಬಾರಿ ಕೋತಿಗಳು ಮನೆಯೊಳಗೆ ನುಗ್ಗಿ ದಾಂಧಲೆ ಮಾಡಿದ್ದವು. ಮನೆಯೊಳಗಿನ ವಸ್ತುಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಬಿಸಾಡುತ್ತಿದ್ದವು.

ಹಾಗೇ, ಹಿಂದೊಮ್ಮೆ ಮಗುವನ್ನು ತೆಗೆದುಕೊಂಡು ಹೋಗಲು ಕೂಡ ಪ್ರಯತ್ನಿಸಿದ್ದವು. ಆಗ ಎಚ್ಚೆತ್ತ ಪೋಷಕರು ಮಗುವನ್ನು ಕಾಪಾಡಿಕೊಂಡಿದ್ದರು. ಆದರೆ, ಈ ಬಾರಿ ಅಜ್ಜಿ ನಿದ್ರೆ ಮಾಡುತ್ತಿದ್ದಾಗ ಕೋತಿಗಳು ಮಗುವನ್ನು ಎತ್ತಿಕೊಂಡು ಹೋಗಿವೆ.

LEAVE A REPLY

Please enter your comment!
Please enter your name here

Hot Topics