Connect with us

DAKSHINA KANNADA

ಸಿಎಂ ಒಬ್ಬರ ಮನೆಗೆ ಮಾತ್ರ ಹೋಗಿರುವುದು ತಾರತಮ್ಯ-ಸಿಎಂ ಪರಿಹಾರ ನಿಧಿ ಕೊಡುವುದು ಕಿಸೆಯಿಂದಲ್ಲ: ಖಾದರ್

Published

on

ಮಂಗಳೂರು: ಮುಖ್ಯಮಂತ್ರಿ ಪರಿಹಾರ ನೀಡುವುದು ತನ್ನ ಕಿಸೆಯಿಂದಲ್ಲ, ಜನರ ತೆರಿಗೆ ಹಣದಿಂದ. ಸತ್ತ ಮೂವರೂ ಅಮಾಯಕರು. ಆದರೆ ಸಿಎಂ ಒಬ್ಬರ ಮನೆಗೆ ಮಾತ್ರ ಹೋಗಿ ತಾರತಮ್ಯ ಎಸಗಿದ್ದಾರೆ. ತಾರತಮ್ಯ ಮಾಡಿ ಸಿಎಂ ಸ್ಥಾನಕ್ಕೆ ಕಪ್ಪುಚುಕ್ಕೆ ಇಟ್ಟಿದ್ದಾರೆ ಎಂದು ವಿರೋಧಪಕ್ಷದ ಉಪನಾಯಕ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ಯೆಯಾದ ಪ್ರವೀಣ್ ಅವರ ಮನೆಗೆ ಸಿಎಂ ನಿನ್ನೆ ಭೇಟಿ ಕೊಟ್ಟು ಪರಿಹಾರ ಧನ ನೀಡಿರುವ ಕುರಿತು ಮಾತನಾಡಿ ‘ಹತ್ಯೆಯಾದ ಮೂರು ಯುವಕರು ಕೂಡಾ ಅಮಾಯಕರೇ.

ಆದರೆ ಸಿಎಂ ಕೇವಲ ನಿನ್ನೆ ಪ್ರವೀಣ್ ಅವರ ಕುಟುಂಬಕ್ಕೆ ಮಾತ್ರ ಹೋಗಿ ಪರಿಹಾರ ನೀಡಿರುವುದು ನಾಚಿಕೇಡಿನ ವಿಷಯ.

ಸ್ವತಃ ಸಿಎಂ ಪಕ್ಷಪಾತದ ತೀರ್ಮಾನ ಮಾಡಿದರೆ ತನಿಖೆ ಮಾಡೋ ಪೊಲೀಸರು ನ್ಯಾಯಯುತವಾಗಿ ಕೆಲಸ ಮಾಡಲು ಸಾಧ್ಯ ಆಗ್ತದಾ?

ಉ.ಪ್ರ ಮಾದರಿ ಮಾಡಲು ಇದು ಉತ್ತರಪ್ರದೇಶ ಅಲ್ಲ. ಉತ್ತರಪ್ರದೇಶ ಮಾದರಿ ಮಾಡಬೇಕಾದರೆ ಬೊಮ್ಮಾಯಿ ಮಾಡೆಲ್ ಫೈಲ್ಯೂರ್ ಅಂತ ಅಲ್ವಾ. ಮತಾಂಧ ಶಕ್ತಿಗಳಿಗೆ ಹೆದರಿ ತಾರತಮ್ಯ ಮಾಡಿದ್ದಾರೆ. ಸರ್ಕಾರ ಯಾರ ಕಂಟ್ರೋಲ್ ನಲ್ಲಿದೆ? ಎಂದು ಪ್ರಶ್ನಿಸಿದರು.

ಕಳೆದ ಹತ್ತು ದಿನಗಳಿಂದ ನಮ್ಮ ಜಿಲ್ಲೆಯಲ್ಲಿ ಮೂರು ಯುವಕರು ಹತ್ಯೆಗೀಡಾಗಿದ್ದಾರೆ. ಸಮಾಜ ಘಾತುಕರು ಕೋಮುವಾದಿಗಳಿಂದ ಹತ್ಯೆ ಆಗಿದ್ದಾರೆ. ಸಮಾಜದ ಶಕ್ತಿಯಿಂದ ಕೊಲ್ಲಲ್ಪಟ್ಟ ಮೂರು ಕೊಲೆಯನ್ನೂ ಕೂಡಾ ಖಂಡಿಸುತ್ತೇವೆ.

ಸರಣಿ ಕೊಲೆಯಿಂದ ದಕ್ಷಿಣ ಕನ್ನಡಕ್ಕೆ ಕೆಟ್ಟ ಹೆಸರು, ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಕೂಡಾ ಕೆಟ್ಟ ಹೆಸರು. ಧರ್ಮದ ಬಗ್ಗೆ ದ್ವೇಷ ಉಂಟಾಗುವ ಹೇಳಿಕೆ ನೀಡಬೇಡಿ, ಆಲೋಚನೆ ಮಾಡಿ ಮಾತಾಡಿ. ರಾಜ್ಯದ ಸಿಎಂ ಈ ರೀತಿಯ ಘಟನೆ ಆದಾಗ ಒಂದು ಕಡೆ ಮಾತಾಡುವುದು.

ಒಬ್ಬರಿಗೆ ಪರಿಹಾರ ಇನ್ನೊಬ್ಬರಿಲ್ಲ , ಇದು ಯಾವ ರೀತಿ ಸರ್ಕಾರ? ಪ್ರತಿಯೊಂದು ತಾಯಿ ಮಗನನ್ನು ಕಳೆದುಕೊಂಡ ನೋವಾಗುತ್ತೆ. ಪ್ರವೀಣ್ ಹಾಗೂ ಫಾಝೀಲ್ ತಾಯಿ ಒಂದೇ ರೀತಿ ಅಲ್ವಾ’ ಎಂದು ಸರ್ಕಾರವನ್ಉ ಅಲ್ಲಗಳೆದರು.

ನೀವು ಯಾರ್ಯಾರ ಕಂಟ್ರೋಲ್ ನಲ್ಲಿ ಇದ್ರೆ ಯಾರಿಗೆ ನ್ಯಾಯ ಕೊಡಲು ಸಾಧ್ಯ. ಎಲ್ಲರಿಗೂ ನ್ಯಾಯ ಕೊಡವ ಕೆಲಸ ಆಗಬೇಕು. ಮೂರು ಘಟನೆ ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖೆ ನಡೆಸಿ ನೈಜ ಆರೋಪಿಗಳು ಯಾರೇ ಇರಲಿ, ಸಂಘಟನೆ ಇರಲಿ ಪೊಲೀಸ್ ಇಲಾಖೆ ಮಟ್ಟ ಹಾಕಬೇಕು.

ರಾಜಕೀಯಕ್ಕಾಗಿ ನಿರಪರಾಧಿಗಳಿಗೆ ತೊಂದರೆ ಆಗಬಾರದು. ಪರೋಕ್ಷವಾಗಿ ಸರಕಾರ ಕುಮ್ಮಕು ನೀಡಿದವರನ್ನು ಪತ್ತೆ ಹಚ್ಚಬೇಕು. ಗುಪ್ತಚರ ಇಲಾಖೆಯ ಸಹಕಾರ ಪಡೆದು ಸರ್ಕಾರ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಬೇಕು.

ಸಮಾಜ ಶಾಂತಿ ನೆಲೆಸಲು ಎಲ್ಲರು ಸಹಕಾರ ನೀಡಬೇಕು. ಜಿಲ್ಲೆಯ ರಾಜ್ಯದ ಹೊರಗಿ‌ನ ನಾಯಕರು ಶಾಂತಿ ಸಹಕರಿಸುವಂತ ಹೇಳಿಕೆ ನೀಡಿ.

ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಅನ್ನೋದು ಸಾವನ್ನಪ್ಪಿದವರ ಮನೆಯವರ ಮನವಿ. ಆದ್ರೆ ಮುಖ್ಯಮಂತ್ರಿಗಳಿಗೆ ಯಾವ ನೋವು ಇಲ್ಲ. ಮುಖ್ಯಮಂತ್ರಿ ದಿಟ್ಟತನದಿಂದ ನ್ಯಾಯಯುತವಾಗಿ ಕೆಲಸ ಮಾಡದಿದ್ದಾಗ ಪೊಲೀಸ್ ಇಲಾಖೆ ಕೂಡಾ ಕೆಲಸ ಮಾಡಲು ಆಗಲ್ಲ.

ಮುಖ್ಯಮಂತ್ರಿ ಗೃಹ ಸಚಿವರು ಸ್ಥಳಕ್ಕೆ ಬಂದಾಗ ಎಲ್ಲ ಸರಿ ಆಗುತ್ತೆ ಅಂತಾರೆ. ಆದ್ರೆ ಇಲ್ಲಿ ಸ್ಪೆಷಲ್. ಅವರು ಬಂದಾಗಲೇ ಕೊಲೆ ಆಗುತ್ತೆ’ ಎಂದು ಕಿಡಿಕಾರಿದರು.

ಇನ್ನು ಮೊದಲ ಘಟನೆ ಆದಾಗ ಸಮರ್ಪಕ ನಿಲುವು ತೆಗೆದುಕೊಂಡಿದರೆ ಸರಿ ಆಗುತ್ತಿತ್ತು. ಒಬ್ಬರಿಗೆ ಪರಿಹಾರ ಇನ್ನೊಬ್ಬರಿಗೆ ಇಲ್ಲ. ನೀವೇನು ಕಿಸೆಯಿಂದ ಕೊಡುವುದೇ.

ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದು ನ್ಯಾಯ. ತಾವು ಕೊಡದಿದರೆ ಜನರೇ ಸಂಗ್ರಹ ಮಾಡಿಕೊಡಬೇಕಾ? ಪರಿಹಾರ ಕೊಡದಿದ್ದರೆ ಮನೆಯವರಿಗೆ ನಷ್ಟ ಇಲ್ಲ. ಬೇರೆ ರೀತಿಯಲ್ಲಿ ಸಿಗಬಹುದು. ಆದ್ರೆ ಮುಖ್ಯಮಂತ್ರಿ ಘನತೆಗೆ ಕಪ್ಪು ಚುಕ್ಕಿ’ ಎಂದು ಸರ್ಕಾರವನ್ನು ಅವಮಾನಿಸಿದರು.

Click to comment

Leave a Reply

Your email address will not be published. Required fields are marked *

DAKSHINA KANNADA

ದೊಡ್ಡವರ ಜಗಳದಲ್ಲಿ ಇಹಲೋಕ ತಜ್ಯಿಸಿದ 3 ರ ಕಂದಮ್ಮ…

Published

on

ಮಂಗಳೂರು (ಬೆಳಗಾವಿ): ಅದು ಎರಡು ಕುಟುಂಬಗಳ ನಡುವೆ ನಡೆದಿರೋ ಜಗಳ . ಆದ್ರೆ ಆ ಜಗಳಕ್ಕೆ ಏನೂ ಅರಿಯದ ಮೂರು ವರ್ಷದ ಪುಟ್ಟ ಮಗು ಬಲಿಯಾಗಿದೆ. ಪಾಪಿಯೊಬ್ಬ ಮಗುವಿನ ಎದೆಗೆ ಕಾಲಿಟ್ಟು ಮಗುವಿನ ಉಸಿರು ನಿಲ್ಲಿಸಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಎಂಬ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ದೊಡ್ಡವರ ಜಗಳದಲ್ಲಿ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಎಂಬ ಮೂರು ವರ್ಷದ ಮಗು ಹತವಾಗಿದೆ. ಜೋತಿಭಾ ತುಕಾರಾಮ ಬಾಬಬರ ಎಂಬಾತ ಮಗುವಿನ ಜೀವಕ್ಕೆ ಕುತ್ತು ತಂದ ಆರೋಪಿಯಾಗಿದ್ದಾನೆ.
ಹಣಕಾಸಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಜಗಳ ತಾರಕ್ಕೇರಿದಾಗ ಸಿಟ್ಟಿನಲ್ಲಿ ಜೋತಿಬಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ನಿಂತಿದ್ದಾನೆ. ಈ ವೇಳೆ ಮಗುವನ್ನು ಆತನ ಕಾಲಿನ ಅಡಿಯಿಂದ ತೆಗೆಯಲು ಮಗುವಿನ ತಾಯಿ ಯತ್ನಿಸಿದ್ದಾಳೆ . ಆ ವೇಳಗೆ ಇನ್ನಷ್ಟು ಗಟ್ಟಿಯಾಗಿ ಕಾಲಿನಿಂದ ಮಗುವಿನ ಎದೆಗೆ ಕಾಲಿನಿಂದ ಒತ್ತಿದ ಕಾರಣ ಮಗು ಉಸಿರು ನಿಲ್ಲಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Continue Reading

DAKSHINA KANNADA

ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!

Published

on

ನ್ಯೂಯಾರ್ಕ್‌ : ಅಮೇರಿಕಾದಲ್ಲಿ ನಡೆದ ಕಾರು ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಹಿಳೆಯರು ಇಹಲೋಕ ತ್ಯಜಿಸಿದ್ದಾರೆ. ಕೌಂಟಿಯ ಹೆದ್ದಾರಿಯ ಸೇತುವೆಯೊಂದರ ಮೇಲೆ ವೇಗವಾಗಿ ಕಾರು ಚಲಾಯಿಸಿದ ಕಾರಣ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಕಾರು ಪ್ರಯಾಣಿಸುತ್ತಿದ್ದು, ಎಲ್ಲಾ ಲೇನ್‌ಗಳನ್ನು ದಾಟಿ, ಹಂಪ್‌ ಮೇಲೆ ವೇಗವಾಗಿ ಏರಿತ್ತು. ಈ ಕಾರಣದಿಂದ ಕನಿಷ್ಟ 20 ಅಡಿಗಳಷ್ಟು ಮೇಲಕ್ಕೆ ಹಾರಿ ಸೇತುವೆಯ ಮುಂದೆ ಇದ್ದ ಮರಗಳಿಗೆ ಕಾರು ಅಪ್ಪಳಿಸಿದೆ. ಗುಜಾರಾತ್ ಮೂಲದ ಮೂವರು ಮಹಿಳೆಯರು ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಗುಜರಾತ್‌ನ ಆನಂದ್ ಜಿಲ್ಲೆಯ ರೇಖಾಬೆನ್‌ ಪಟೇಲ್ , ಸಂಗೀತಾಬೆನ್ ಪಟೇಲ್ ಹಾಗೂ ಮನೀಶಾಬೆನ್ ಪಟೇಲ್‌ ಅವರು ಇಹಲೋಕ ತ್ಯಜಿಸಿದವರಾಗಿದ್ದಾರೆ.

 

ಕಾರು ನಿಗದಿಪಡಿಸಿದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿತ್ತು ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪಘಾತದ ಪ್ರಮಾಣ ಎಷ್ಟಿತ್ತು ಮತ್ತು ಕಾರು ಎಷ್ಟು ಎತ್ತರಕ್ಕೆ ಹಾರಿತ್ತು ಅನ್ನೋದಿಕ್ಕೆ ಮರದ ಮೇಲಿರುವ ಕಾರಿನ ಅವಶೇಷಗಳು ಸಾಕ್ಷಿ ಎಂದು ಅವರು ಹೇಳಿದ್ದಾರೆ. ಮರದ ಮೇಲೆ ಬಿದ್ದ ಕಾರು ಛಿದ್ರಗೊಂಡು ಕಾರಿನ ಅವಶೇಷಗಳು ಚೆಲ್ಲಾಪಿಲ್ಲಿಯಾಗಿತ್ತು.


ದಕ್ಷಿಣ ಕೆರೊಲಿನಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡಗಳು, ಪೊಲೀಸರು ಆಗಮಿಸಿದ್ದಾರೆ. ಅಪಘಾತದಲ್ಲಿ ಓರ್ವ ಬದುಕಿ ಉಳಿದಿದ್ದು, ಆತನ ಸ್ಥಿತಿ ಗಂಭೀರವಾಗಿದ್ದು ಈಗಲೇ ಏನೂ ಹೇಳಲು ಆಗದ ಪರಿಸ್ಥಿತಿಯಲ್ಲಿದ್ದಾನೆ. ವಾಹನ ಅಪಘಾತವಾದ ತಕ್ಷಣ ಅದರಲ್ಲಿದ್ದ ತಾಂತ್ರಿಕ ವ್ಯವಸ್ಥೆಯ ಕಾರಣ ತಕ್ಷಣ ಕುಟುಂಬ ಸದಸ್ಯರಿಗೆ ಅಲರ್ಟ್‌ ಮೆಸೆಜ್ ರವಾನೆಯಾಗಿತ್ತು. ಹೀಗಾಗಿ ತಕ್ಷಣ ಕುಟುಂಬಸ್ಥರು ಕೂಡಾ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ.

Continue Reading

DAKSHINA KANNADA

ದೆಹಲಿಯ ರಾಣಾ ಪ್ರತಾಪ್ ನಗರದ ಜಿನ ಬಸದಿ 24ತೀರ್ಥಂಕರ ಪಂಚ ಕಲ್ಯಾಣ; ಮೂಡುಬಿದಿರೆ ಸ್ವಾಮೀಜಿ ಭಾಗಿ

Published

on

ನವದೆಹಲಿ : ದೆಹಲಿಯ ರಾಣಾ ಪ್ರತಾಪ್ ನಗರ ದ ಜಿನ ಬಸದಿ 24ತೀರ್ಥಂಕರ ಪಂಚ ಕಲ್ಯಾಣವು ರಾಷ್ಟ್ರ ಸಂತ 108 ಉಪಾಧ್ಯಾಯ ಗುಪ್ತಿ ಸಾಗರ ಮುನಿ ರಾಜ್ ಮಾರ್ಗದರ್ಶನ ಪಾವನ ಸಾನ್ನಿಧ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಗೌರವ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿತು.

3 ಅಡಿ ಎತ್ತರ ದ ಪಂಚಲೋಹದ ಇಪ್ಪತ್ತನಾಲ್ಕು ತೀರ್ಥಂಕರ ಹಾಗೂ ವಿವಿಧ ಜಿನ ಬಿಂಬಗಳ ಸ್ಥಾಪನೆ ಬೆಳಿಗ್ಗೆ 7.30 ರಿಂದ 9.00ರ ವರೆಗೆ ಮೋಕ್ಷ ಕಲ್ಯಾಣ ಪೂಜೆ, ದೆಹಲಿ ವಿಶ್ವವಿದ್ಯಾಲಯ ಸ್ಪೋರ್ಟ್ಸ್ ಕ್ಲಬ್ ಸಭಾಂಗಣ ಹಾಗೂ ಮೆರವಣಿಗೆ ಮೂಲಕ ಮೂರ್ತಿ 3 ಕಿ.ಮೀ ದೂರದ ಬಸದಿಗೆ ತೆರಳಿ ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1 ಗಂಟೆ ವರೆಗೂ ಮೂರ್ತಿ ಸ್ಥಾಪನೆ ದೆಹಲಿ ರಾಣಾ ಪತ್ ನಗರ ಬಸದಿಯಲ್ಲಿ ಜರುಗಿತು.


ಬಳಿಕ ಧಾರ್ಮಿಕ ಸಭೆಯಲ್ಲಿ ಧರ್ಮೋಪದೇಶ ನೀಡಿದ ಮೂಡುಬಿದಿರೆ ಸ್ವಾಮೀಜಿ, ಜಿನ ಬಿಂಬ ಸ್ಥಾಪನೆಯಿಂದ ಆತ್ಮ ಕಲ್ಯಾಣ ಹಾಗೂ ಪರ ಕಲ್ಯಾಣವಾಗುವುದು ಜನ ಸಂಸ್ಕೃತಿ ಸಂಸ್ಕಾರ ಧರ್ಮದಿಂದ ಸಾಧ್ಯ ಎಂದು ನುಡಿದರು. ಈ ಸಂದರ್ಭ ಸುಂದರ ಜಿನಾಲಯ ಸ್ಥಾಪನೆಗೆ ಕಾರಣರಾದ ದಾನಿಗಳನ್ನು ಗೌರವಿಸಲಾಯಿತು.


ರಾಷ್ಟ್ರ ಸಂತ 108 ಗುಪ್ತಿ ಸಾಗರ ಮುನಿ ರಾಜ್ ಮೂಡು ಬಿದಿರೆ ಶ್ರೀಗಳವರಿಗೆ ಶಾಸ್ತ್ರ ಸ್ಮರಣಿಕೆ ನೀಡಿದರು. ಬಳಿಕ ದೆಹಲಿ ಗ್ರೀನ್ ಪಾರ್ಕ್ ಬಸದಿಯಲ್ಲಿ ಉಪಸ್ಥಿತರಿದ್ದ 108 ರಾಷ್ಟ್ರ ಸಂತ ಆಚಾರ್ಯ ಪ್ರಾಗ್ಯ ಸಾಗರ ಮುನಿಮಹಾರಾಜ್, ಮೂಡುಬಿದಿರೆ ಶ್ರೀಗಳಿಗೆ ಗೌರವಾನ್ವಿತ ಪ್ರಧಾನಮಂತ್ರಿಗಳಿಂದ ಭಗವಾನ್ ಮಹಾವೀರ ಜನ್ಮ ಕಲ್ಯಾಣದಂದು ನಿರ್ವಾಣ ವರ್ಷ 2550ರ ಅಂಗವಾಗಿ ಬಿಡುಗಡೆಗೊಳಿಸಿದ ರೂ. 100 ರ ನಾಣ್ಯ ಹಾಗೂ ಅಂಚೆ ಇಲಾಖೆ ಬಿಡುಗಡೆಗೊಳಿಸಿದ ಪಾವಪುರಿ ಸಿದ್ದ ಕ್ಷೇತ್ರ ಫಸ್ಟ್ ಡೇ ಕವರ್ ನೀಡಿ ಹರಸಿ ಆಶೀರ್ವಾದ ಮಾಡಿದರು.

ಇದನ್ನೂ ಓದಿ : ಖ್ಯಾತ ಕಿರುತೆರೆ ನಟ ಗುರುಚರಣ್ ಸಿಂಗ್ ನಾಪತ್ತೆ!

ಈ ಸಂದರ್ಭ ಮೂಡುಬಿದಿರೆ ಸ್ವಾಮೀಜಿ ಈ ವರ್ಷ ಪೂರ್ತಿ ಆಚಾರ್ಯ ಶಾಂತಿ ಸಾಗರ ಆಚಾರ್ಯ ಶತಾಬ್ದಿ ವರ್ಷ ಹಾಗೂ ಭಗವಾನ್ ಮಹಾವೀರ ಸ್ವಾಮಿ ನಿರ್ವಾಣ ಕಲ್ಯಾಣ ವಿವಿಧೆಡೆ ಆಚರಿಸಲು ಸಂಕಲ್ಪ ಮಾಡಿದರು.

Continue Reading

LATEST NEWS

Trending