ಮಂಗಳೂರು: ಬಿಲ್ಲವರ ಕುಲಕಸುಬಾದ ಶೇಂದಿಯನ್ನು ಸರಕಾರ ನಿಷೇಧ ಮಾಡಿರುವುದು ಮಾಡಿರುವುದು ಸರಿಯಲ್ಲ. ಈಡಿಗ ಬಿಲ್ಲವ ಸಮುದಾಯದ ಆರ್ಥಿಕತೆಗೆ ಹೊಡೆತ ನೀಡಲು ಇದನ್ನು ನಿಲ್ಲಿಸಿದ್ದೀರಾ? ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಂಗಳೂರು ಮತ್ತು ಉಡುಪಿ ಜಿಲ್ಲೆ ಹೊರತುಪಡಿಸಿ 29 ಜಿಲ್ಲೆಗಳಲ್ಲಿ ನಮ್ಮ ಕುಲ ಕಸುಬನ್ನು ಬಂದ್ ಮಾಡಿದ್ದಾರೆ.
ಉಳಿದ ಎಲ್ಲಾ ಸಮುದಾದವರು ಅವರ ಕುಲಕಸುಬನ್ನು ಮಾಡುತ್ತಿದ್ದಾರೆ. ಆದರೆ ಸರಕಾರ ನಮ್ಮ ಸಮುದಾಯದ ಕುಲಕಸಬನ್ನು ಸರಕಾರ ನಿಲ್ಲಿಸಿದ್ದು ಏಕೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಹಾಗೂ ನಮ್ಮ ಸಮುದಾಯದ ಸಚಿವ ಸುನಿಲ್ ಕುಮಾರ್ ಅವರು ಈಡಿಗ ಸಮುದಾಯದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು 500 ಕೋಟಿ, ನಿಗಮ ಮಂಡಳಿಯನ್ನೇ ಘೋಷಣೆ ಮಾಡಿ ಎಂದು ಕೇಳಿಲ್ಲ.
ಆದರೆ ಸಿಎಂ ಹಾಗೂ ಸಚಿವರು ಷಡ್ಯಂತ್ರ ಮಾಡಿಕೊಂಡು 5ಕೋಟಿ ಅನುದಾನ ಕೊಡ್ತೇವೆ, ಪುನೀತ್ ರಾಜ್‌ಕುಮಾರ್ ದಿನವನ್ನು ಸ್ಪೂರ್ತಿ ದಿನವನ್ನಾಗಿ ಘೋಷಣೆ ಮಾಡುತ್ತೇವೆ. ಅಂತ ಹೇಳಿದ್ರು. ಸಿಎಂಗೆ ತಾಕತ್ತಿದ್ರೆ ಈ ನಿಗಮ ಮಂಡಳಿ ಬಗ್ಗೆ ಏನು ಸ್ಪಷ್ಟನೆ ಕೊಡ್ತೀರಾ ಕೊಡಿ.
ನಾನು ಮಂಗಳೂರಿನಲ್ಲಿ ಪ್ರತೀ ಬಿಲ್ಲವರ ಮನೆಗೆ ಭೇಟಿ ನೀಡುತ್ತಿದ್ದೇನೆ. ಸಮುದಾಯವನ್ನು ಜಾಗ್ರತೆ ಮಾಡಿ ಮುಂಬರುವ ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಮಂಗಳೂರಿನಲ್ಲಿ 8 ವಿಧಾನಸಭಾ ಕ್ಷೇತ್ರವಿದೆ.
70 80 ಸಾವಿರ ಓಟು ಬಿಲ್ಲವ ಸಮುದಾಯದವರದ್ದೇ ಇದೆ.
ಒಂದಂತೂ ನಿಜ. 2023ರ ಚುನಾವಣೆಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಕೂಡಾ ಈಡಿಗ ಸಮುದಾಯದವರು ಆಗಲಿದ್ದಾರೆ.
ಈಗಲೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ನಮಗೆ ಹಕ್ಕಿದೆ. ಆದರೆ ಇವತ್ತು ಸಚಿವರಾಗಿರುವ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಸಮಾಜಕ್ಕೆ ಏನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳಿಗೆ ದಮ್ ಇದ್ರೆ ನಿಗಮ ಮಂಡಳಿ ಕೂಡಲೇ ರಚನೆ ಮಾಡಿ ಎಂದರು. ನಮ್ಮ ನಾಯಕರು ಪಕ್ಷದಲ್ಲಿ ಇದ್ದರೂ ಏನೂ ಮಾಡುತ್ತಿಲ್ಲ. ಮುಂದಿನ ಚುನಾವಣೆ ಸಂದರ್ಭದಲ್ಲಿ ದಕ್ಷಿಣಕನ್ನಡ , ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಸಮಾಜವನ್ನು ಜಾಗೃತಿ ಮೂಡಿಸಲಿದ್ದೇವೆ. ಬಿಲ್ಲವ ಸಮಾಜದಲ್ಲಿ ಅತೀ ಹೆಚ್ಚಿನ ಮತಗಳಿವೆ.
ಆದರೆ ನಮ್ಮನ್ನು ಕಡೆಗಣಿಸುವುದು ನಿಮಗೆ ಮಾರಕವಾಗಲಿದೆ. 5 ಲಕ್ಷ 35 ಸಾವಿರ ಮತಗಳು ಎಂಪಿ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದಲ್ಲಿ ಇದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲು ಅವರೂ ನಮ್ಮ ಸಮಾಜಕ್ಕೆ ಏನೂ ಮಾಡಿಲ್ಲ.
ಮುಖ್ಯಮಂತ್ರಿ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಸರಕಾರಿ ಖಾಯಂ ಉದ್ಯೋಗ ಮಾಡಿಕೊಡಲಿ. ವಿಧಾನ ಸಭೆಯ ಅಂಗಣದೊಳಗೆ ನಾರಾಯಣ ಗುರುಗಳ ಮೂರ್ತಿ ಮಾಡಿ ಎಂದು ಆಗ್ರಹಿಸಿದರು.
ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹಾಗೂ ಬಿಲ್ಲವ ಸಮುದಾಯವನ್ನು ಜಾಗೃತಿಗೊಳಿಸಲು 15 ದಿನಗಳೊಳಗೆ ನಾನು ಪಾದಯಾತ್ರೆಯನ್ನು ಮಾಡಲಿದ್ದೇನೆ ಎಂದರು.