Connect with us

DAKSHINA KANNADA

ಅಮಾಯಕರಿಬ್ಬರ ಜೀವ ಬಲಿ ಪಡೆದ ಅಳಪೆ ಪಡ್ಪು ಅಪಾಯಕಾರಿ ಹೊಂಡ ಮುಚ್ಚಿ : ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಿ..!

Published

on

ಮಳೆಗಾಲ ಬಂತೆಂದರೆ ಹಲವು ಜೀವಗಳ ಬಲಿಯಾಗುತ್ತಿವೆ. ಅದರಲ್ಲೂ ಕೆಲವು ಕಡೆಗಳಲ್ಲಿ ಕೃತಕ ಹೊಂಡಗಳು ನಿರ್ಮಾಣವಾಗಿ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿ.

ಮಂಗಳೂರು : ಮಳೆಗಾಲ ಬಂತೆಂದರೆ ಹಲವು ಜೀವಗಳ ಬಲಿಯಾಗುತ್ತಿವೆ. ಅದರಲ್ಲೂ ಕೆಲವು ಕಡೆಗಳಲ್ಲಿ ಕೃತಕ ಹೊಂಡಗಳು ನಿರ್ಮಾಣವಾಗಿ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿ.

ಕೆಂಪು ಕಲ್ಲಿನ ಕ್ವಾರಿಗಳು, ಬಂಡೆ ಸ್ಪೋಟಕಗಳು, ಮಣ್ಣು ಅಗೆದ ಹೊಂಡಗಳನ್ನು ಮುಚ್ಚದೇ ಇರುವ ಕಾರಣ ಇಂತಹ ಹೊಂಡಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಪುಟ್ಟ ಮಕ್ಕಳು, ಯುವಜನತೆ ಬಿದ್ದು ಸಾವನ್ನಪ್ಪುವ ದುರಂತ ಘಟನೆಗಳು ನಡೆಯುತ್ತಿದೆ.

ಕಂಕನಾಡಿ ಸಮೀಪದ ಅಳಪೆ ಪಡ್ಪು ಎಂಬಲ್ಲಿ ರೈಲ್ವೇ ಇಲಾಖೆಗೆ ಸೇರಿದ ಜಾಗದಲ್ಲಿ ಕೆರೆಯಂತಿರುವ ದೊಡ್ಡ ಹೊಂಡವೊಂದಿದ್ದು, ಇಲ್ಲಿ ನೆರೆ ನೀರು ನಿಂತು ಅಪಾಯಕಾರಿಯಾಗಿದೆ.

ಆದರೆ ಸ್ಥಳೀಯರು ರೈಲ್ವೇ ಇಲಾಖೆಗೆ ಇದನ್ನು ಮುಚ್ಚುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರೂ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರನ್ನೂ ಆಕ್ರೋಶಕ್ಕೆಡೆ ಮಾಡಿದೆ.

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಿಂದ ಸುರತ್ಕಲ್‌ನತ್ತ ಸಾಗುವ ದಾರಿ ಮಧ್ಯೆ ಸಿಗುವ ಎಕ್ಕೂರು ಅಳಪೆ ಪಡ್ಪು ಎಂಬ ಜಾಗದ ರೈಲು ಹಳಿಗಳ ಪಕ್ಕದಲ್ಲೇ ನಾಲ್ಕು ವರ್ಷಗಳ ಹಿಂದೆ ಸುಮಾರು ಒಂದು ಎಕ್ಕರೆ ವಿಸ್ತಾರಕ್ಕೆ ಮಣ್ಣು ತೆಗೆದು ಭಾರೀ ಹೊಂಡ ನಿರ್ಮಾಣವಾಗಿದೆ.

ಇದೇ ಹೊಂಡ ಇದೀಗ ಹದಿಹರೆಯದ ಇಬ್ಬರು ಯುವಕರ ಜೀವವನ್ನು ಬಲಿ ಪಡೆದಿದೆ. ಆಕಸ್ಮಿಕವಾಗಿ ಈ ಹೊಂಡಕ್ಕೆ ಬಿದ್ದ ಪಡೀಲ್ ಅಳಪೆ ಪಡ್ಪು ರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಎಚ್‌ಬಿ ಕಾಲನಿ ನಿವಾಸಿ ವೀಕ್ಷಿತ್ (28) ಸಾವನ್ನಪ್ಪಿದ್ದರು. ಮನೆಯ ಆಧಾರಸ್ತಂಭವಾಗಿದ್ದ ಇಬ್ಬರನ್ನೂ ಹೊಂಡ ಬಲಿ ಪಡೆದುಕೊಂಡಿದೆ. ರೈಲ್ವೇ ಇಲಾಖೆ ಅಂದೇ ಎಚ್ಚೆತ್ತುಕೊಂಡು ಇದನ್ನು ಮುಚ್ಚಿದ್ದರೆ ಇಂದು ಈ ದುರಂತ ನಡೆಯುತ್ತಿರಲಿಲ್ಲ.

20 ಅಡಿ ಆಳವಿರುವ ಈ ಹೊಂಡ ಯುವಕರನ್ನು ಸೆಳೆಯುತ್ತಿದೆ. ಇದರಲ್ಲಿ ಈಜಾಡಲು ಅಕ್ಕಪಕ್ಕದ ಊರಿನವರೂ ಕೂಡಾ ಬರುತ್ತಾರೆ.

ಈ ಪರಿಸರದಲ್ಲಿ ಯುವಕರು ಕ್ರಿಕೆಟ್‌ ಆಟವಾಡುತ್ತಿರುತ್ತಾರೆ. ಹಲವು ಮನೆಗಳೂ ಕೂಡಾ ಈ ಪರಿಸರದಲ್ಲಿದೆ.

ಇದಕ್ಕೆ ಹೋಗಲು ಕಚ್ಚಾ ರಸ್ತೆಯೂ ಇದೆ. ಇಲ್ಲಿಗೆ ಬರುವವರಿಗೆ ಸ್ಥಳೀಯರು ಎಚ್ಚರಿಕೆ ನೀಡುತ್ತಿದ್ದರೂ ಅಪಾಯ ತಂದುಕೊಳ್ಳುತ್ತಿದ್ದಾರೆ. ಹೊಂಡದಿಂದ ನೀರು ಹೊರಗೆ ಹೋಗುವ ವ್ಯವಸ್ಥೆ ರೈಲ್ವೇ ಇಲಾಖೆ ಮಾಡಬೇಕಾಗಿದೆ.

ಗುಂಡಿ ಅಪಾಯಕಾರಿಯಾಗಿದ್ದು, ಇಲ್ಲಿ ರೈಲ್ವೇ ಇಲಾಖೆ ಯಾವುದೇ ಮುನ್ನೆಚ್ಚರಿಕಾ ಫಲಕಗಳನ್ನು ಕೂಡಾ ಅಳವಡಿಸಿಲ್ಲ. ಇದಕ್ಕೆ ತಡೆಬೇಲಿ ಅಳವಡಿಸಿ ಎಚ್ಚರಿಕೆ ನೀಡುವ ಕೆಲಸವನ್ನಾದರೂ ಇಲಾಖೆ ಮಾಡಬೇಕಾಗಿದೆ.

ಇನ್ನಾದರೂ ರೈಲ್ವೇ ಇಲಾಖೆ ಹೊಂಡ ಮುಚ್ಚಲು ಕ್ರಮ ವಹಿಸಬೇಕು. ಇದಕ್ಕೆ ಸೂಕ್ತ ತಡೆಬೇಲಿ ಅಳವಡಿಸಬೇಕು.

ಮೃತಪಟ್ಟ ವರುಣ್‌ ಮತ್ತು ವೀಕ್ಷಿತ್‌ ಕುಟುಂಬಕ್ಕೆ ರೈಲ್ವೇ ಇಲಾಖೆ, ಸರಕಾರದ ವತಿಯಿಂದ ಆರ್ಥಿಕ ನೆರವು ನೀಡಿ ಅವರ ಮನೆಮಂದಿ ಬದುಕಿಗೆ ನೆರವಾಗಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

DAKSHINA KANNADA

ಮಂಗಳೂರು : ‘ಮಹೇಶ್’ ಬಸ್ ಮಾಲೀಕ ಆತ್ಮಹತ್ಯೆ..!

Published

on

ಮಂಗಳೂರು: ಮಂಗಳೂರಿನ ಖಾಸಗಿ ಬಸ್ ನ ಮಾಲೀಕರೊಬ್ಬರು ತಾವು ಇರುವ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತರನ್ನು ಮಹೇಶ್ ಬಸ್ ಮಾಲೀಕ  ಪ್ರಕಾಶ್ ಶೇಖ ಎಂದು ಗುರುತಿಸಲಾಗಿದೆ. ಅವರು ಕದ್ರಿ ಕಂಬಳ ಸಮೀಪ ಇರುವ ಅಪಾರ್ಟ್ ಮೆಂಟ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಹೇಶ್ ಹೆಸರಿನಲ್ಲಿ ಹಲವಾರು ಸಿಟಿ ಬಸ್ ಗಳು ದಿನನಿತ್ಯ ಸಂಚರಿಸುತ್ತಿದ್ದು, ಜನಮನ್ನಣೆ ಪಡೆದಿದೆ.

ಬಸ್ ಉದ್ಯಮದ ಬಗ್ಗೆ ಭಾರೀ ಪ್ರೀತಿ ಇಟ್ಟುಕೊಂಡಿದ್ದ ಪ್ರಕಾಶ್ ಯಾಕಾಗಿ ಸಾವಿಗೆ ಶರಣಾಗಿದ್ದಾರೆ ಎನ್ನುವುದು ಆಪ್ತ ಬಳಗಕ್ಕೆ ಶಾಕ್ ನೀಡಿದೆ.  ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಮೇಯರ್‌ ಫೋನ್‌ ಇನ್‌ : ಮಂಗಳೂರು ನಗರದ 8 ಕಡೆ ಬಸ್ ಬೇ ನಿರ್ಮಾಣ- ಸುಧೀರ್ ಶೆಟ್ಟಿ

Published

on

ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 53 ಪ್ರದೇಶಗಳಲ್ಲಿ ಬಸ್ಸು ತಂಗುದಾಣ ನಿರ್ಮಿಸಲು ಮಂಗಳೂರು ಪೊಲೀಸ್ ಕಮಿಷನರ್‌ ಪ್ರಸ್ತಾವನೆ ಸಲ್ಲಿಸಿದ್ದು, ಪ್ರಸ್ತುತ 8 ಪ್ರದೇಶಗಳಲ್ಲಿ ಬಸ್‌ ಬೇ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.

ಮೇಯರ್ ಕಚೇರಿಯಲ್ಲಿ ಶನಿವಾರ ನಡೆದ ಮೇಯರ್ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಮೊದಲ ಹಂತದಲ್ಲಿ ನಾಗರಿಕರಿಂದ ಹೆಚ್ಚು ಬೇಡಿಕೆ ಇರುವ ಬಿಜೈ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಸಮೀಪ, ಲೇಡಿಹಿಲ್‌, ಕಂಕನಾಡಿ ಜಂಕ್ಷನ್‌, ಬಂಟ್ಸ್ ಹಾಸ್ಟೇಲ್ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಬಸ್ ಬೇ ನಿರ್ಮಿಸಲಾಗುವುದು.

ಬಳಿಕ ಹಂತ ಹಂತವಾಗಿ ಉಳಿದೆಡೆ ಬಸ್ ಬೇ ನಿರ್ಮಿಸಲಾಗುವುದು ಎಂದರು. ನಗರದಲ್ಲಿ 53 ಬಸ್ಸು ತಂಗುದಾಣಕ್ಕೆ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದರೂ ಅಧಿಕಾರಿಗಳುಮಾತ್ರ ಕಡತದಲ್ಲೇ ಬಾಕಿ ಇರಿಸಿದ್ದು, ಮನಪಾ ಆಡಳಿತದ ಸಭೆಗೆ ಹಾಜರುಪಡಿಸದಿರುವುದು ಗಮನಕ್ಕೆ ಬಂತು.

ಕೂಡಲೇ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಪ್ರಸ್ತಾವನೆಯನ್ನು ಮುಂದಿನ ಸಭೆಗೆ ಹಾಜರುಪಡಿಸುವಂತೆ ಸೂಚನೆ ನೀಡಿದರು.

ಬೀದಿ ಬದಿ ವ್ಯಾಪಾರಸ್ಥರು ನಗರದ ಅನೇಕ ಕಡೆಗಳಲ್ಲಿ ರಸ್ತೆ ಹಾಗೂ ಫುಟ್ಪಾತ್‌ ಅತಿಕ್ರಮಣ ನಡೆಸಿದ್ದಾರೆ.

ಅಗಲಗೊಂಡರಸ್ತೆಯಲ್ಲಿ ವಾಹನಗಳನ್ನು ಪಾರ್ಕ್‌ ಮಾಡಲಾಗುತ್ತಿದೆ.

ಈ ಬಗ್ಗೆ ಪಾಲಿಕೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

Continue Reading

bengaluru

ಬೆಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುವ ಕಂಬಳಕ್ಕೆ ಡೇಟ್ ಫಿಕ್ಸ್-ಅಶೋಕ್ ಕುಮಾರ್ ರೈ

Published

on

ಮಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಥಮ ಬಾರಿಗೆ ಹೊನಲು ಬೆಳಕಿನ ಕರಾವಳಿಯ ಜಾನಪದ ಕ್ರೀಡೆ ಕಂಬಳ ನ. 25 ಮತ್ತು 26ರಂದು  ನಡೆಯಲಿದೆ ಎಂದು ಬೆಂಗಳೂರು ಕಂಬಳ ಸಮಿತಿಯ ಸಂಘಟಕ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ ಸೇರಿದಂತೆ ರಜನಿಕಾಂತ್, ಐಶ್ವರ್ಯ ರೈ ಸೇರಿದಂತೆ ಸಿನಿಮಾ ಕ್ಷೇತ್ರದ ನಟ ನಟಿಯರು ಭಾಗವಹಿಸಲಿದ್ದಾರೆ.

ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯುವ ಈ ಕಂಬಳ ಕೂಟದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು 130 ಜೊತೆ ಕೋಣಗಳು ಅದರ ಮಾಲಕರು ಭಾಗವಹಿಸಲಿದ್ದಾರೆ ಎಂದರು.

ಇದರ ಜೊತೆ 125 ಸ್ಟಾಲ್ ಗಳಲ್ಲಿ ಕರಾವಳಿಯ ತಿಂಡಿ ತಿನಿಸುಗಳು ಗ್ರಾಹಕರಿಗೆ ದೊರೆಯಲಿದೆ.

ಸುಮಾರು 7 ರಿಂದ 8 ಲಕ್ಷ ಜನರು ಇದನ್ನು ವೀಕ್ಷಿಸುವ ನಿರೀಕ್ಷೆ ಇದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಡುಪಿ, ದಕ್ಷಿಣ ಕನ್ನಡ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಂಬಳ ಸಮಿತಿ ಪದಾಧಿಕಾರಿಗಳಾದ ರೋಹಿತ್ ಹೆಗ್ಡೆ, ಬಾರ್ಕೂರು ಶಾಂತರಾಮ ಶೆಟ್ಟಿ, ಲೋಕೇಶ್ ಶೆಟ್ಟಿ, ಚಂದ್ರಹಾಸ ಸನಿಲ್, ಮುರಳಂಧರ ರೈ, ವಿಜಯಕುಮಾರ್ ಜೈನ್ ಉಪಸ್ಥಿತರಿದ್ದರು.

Continue Reading

LATEST NEWS

Trending