Connect with us

DAKSHINA KANNADA

ಹಿಂದೂ ಮುಖಂಡರ ಮೇಲೆ ಪ್ರಕರಣ ದಾಖಲು – ಶಾಸಕ ಸುನೀಲ್ ಕುಮಾರ್ ಖಂಡನೆ..! 

Published

on

ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರ ಕ್ರಮ ಖಂಡನೀಯ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.

ಕಾರ್ಕಳ :ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರ ಕ್ರಮ ಖಂಡನೀಯ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.

ಘಟನೆ ನಡೆದು ವಾರ ಕಳೆದರೂ ಕ್ರಮ ಜರಗಿಸಲು ಸಾದ್ಯವಾಗದ ಕಾಂಗ್ರೆಸ್ ಗೆ ಹಿಂದೂ ಸಂಘಟನೆ ಮುಖಂಡರ ಮೇಲೆ ಇಪ್ಪತ್ತನಾಲ್ಕು ಗಂಟೆಯೊಳಗೆ ಪ್ರಕರಣ ದಾಖಲಿಸುವ ಉತ್ಸಾಹ ಬಂದಿದೆ.

ಇದು ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿಯ ಪರಮಾವಧಿ ನಡವಳಿಕೆ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಾಂಗ್ರೆಸ್ ಹಾಗೂ ಪೊಲೀಸರ ವಿರುದ್ದ ಕಿಡಿಕಾರಿದ್ದಾರೆ.

ವೀಡಿಯೊ ಪ್ರಕರಣ ನಡೆದು ಒಂದು ವಾರ ಕಳೆದಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮವಹಿಸಲು ಕಾಂಗ್ರೆಸ್ ಆಡಳಿತಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಇದೀಗ ಪ್ರತಿಭಟನೆ ನಡೆಸಿ ಪ್ರಚೋದನಾರಿ ಭಾಷಣ ಮಾಡಿದರೆಂದು ಸಂಘಟನೆಗಳ ಮುಖಂಡರ ಮೇಲೆಯೆ ಪ್ರಕರಣ ದಾಖಲಿಸಿದ್ದಾರೆ.

ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಹಿಂದೂಗಳ ಮೇಲೆ ಯಾಕಿಷ್ಟು ದ್ವೇಷ ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಸಂಘಟನೆ ಮೇಲೆ ಕಾಂಗ್ರೆಸ್ ಆರಂಭದಿಂದಲೂ ದಬ್ಬಾಳಿ, ದಮನ ನೀತಿ ಅನುಸರಿಸುತ್ತಲೆ ಬಂದಿದೆ. ಆದರೆ ಹಿಂದೂ ಸಂಘಟನೆ ಇದೆಲ್ಲವನ್ನು ಎದುರಿಸುತ್ತಲೆ ಬಂದಿದೆ.

ದಮನಿಸಿದಷ್ಟು ಮತ್ತೆ ಸಂಘಟಿತರಾಗುವುದು ಹಿಂದೂ ಸಂಘಟನೆಯ ವಿಶೇಷ.

ಒಂದು ವರ್ಗವನ್ನು ಓಲೈಸಲು ಕಾಂಗ್ರೆಸ್ ಹಿಂದೂ ನಾಯಕರ ವಿರುದ್ದ ಪ್ರಕರಣ ದಾಖಲಿಸಿ ಹಿಂದೂ ನಾಯಕರ ಆತ್ಮಸ್ಥೈರ್ಯ ಕುಗ್ಹಿಸಲು ಪ್ರಯತ್ನಿಸುತ್ತಿದೆ.

ಕಾಂಗ್ರೆಸ್ ಹಿಂದೂ ವಿರೋಧಿ ನೀತಿಯನ್ನು ತಿದ್ದಿಕೊಳ್ಳದೆ ಇದ್ದರೆ ಅದಕ್ಕೆ ತಕ್ಕ ಉತ್ತರವನ್ನು ನೀಡಲು ಹಿಂದೂ ಕಾರ್ಯಕರ್ತರು ಸಿದ್ದರಿದ್ದಾರೆ ಎನ್ನುವುದನ್ನು ಕಾಂಗ್ರೆಸ್ ಇನ್ನಾದರೂ ಅರಿತು. ಹಿಂದೂ ವಿರೋಧಿ ದ್ವೇಷದ ರಾಜಕಾರಣವನ್ನು ನಿಲ್ಲಿಸಲಿ ಎಂದು ಅವರು ಎಚ್ಚರಿಸಿದ್ದಾರೆ.

1 Comment

1 Comment

  1. ARUN

    05/08/2023 at 10:12 AM

    FIRST YOU TEACH THEM HOW TO SPEAK IN PUBLIC-ALLY, IF U HAVE MIKE IN FRONT OF YOU ITS NOT MEAN YOU CAN SPEAK ANYTHING , TRY TO STOP PROVOCATIVE SPEECHES, ALL HAVE RIGHT TO PROTEST BUT IN LEGAL MEANER, WHY YOU PEOPLE NOT PROTESTED FOR VITLA RAPE CASE , NOW IN MULKY NEW VIDEO CASE … TRY TO CONCERNED ALL RELIGION EQUAL ALL MAKE MISTAKE , IF ANY ONE DO PROTEST TO PUNISH WITH REGARDS ALL RELIGION AND CAST

Leave a Reply

Your email address will not be published. Required fields are marked *

DAKSHINA KANNADA

ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ‘ಬಿಗ್‌ ಬಾಸ್’ ರೂಪೇಶ್ ಶೆಟ್ಟಿ

Published

on

ಮಂಗಳೂರು : ಬಿಗ್‌ಬಾಸ್ ಮುಖೇನ ರಾಜ್ಯದಲ್ಲಿ ಹೆಸರು ಪಡೆದಿರುವ ಕರಾವಳಿಯಲ್ಲಿ ಸ್ಟಾರ್ ರೂಪೇಶ್ ಶೆಟ್ಟಿ. ತುಳುನಾಡಿನ ಹುಲಿವೇಷ ಕುಣಿತವನ್ನು ಬಿಗ್‌ಬಾಸ್ ನಲ್ಲಿ ಪರಿಚಯಿಸಿದ್ದು ಅಲ್ಲದೆ ವೇಷದಾರಿಗಳ ಜೊತೆ ಹೆಜ್ಜೆ ಕೂಡಾ ಹಾಕಿದ್ದಾರೆ.  ಅಲ್ಲದೇ ರೂಪೇಶ್ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ವಿನ್ನರ್ ಕೂಡ ಹೌದು. ತುಳು ಸಿನಿಮಾದಲ್ಲಿ ಮಿಂಚಿದ್ದ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ಬಳಿಕ ಕನ್ನಡ ಚಿತ್ರರಂಗದಲ್ಲೂ ಅವಕಾಶ ಸಿಕ್ಕಿತ್ತು. ಇದೀಗ ತಮಿಳು ಚಿತ್ರರಂಗಕ್ಕೂ ರೂಪೇಶ್ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.

ಅಮೃತ ಸಾರಥಿ ಎಂಬುವವರು ನಿರ್ದೇಶನ ಮಾಡುತ್ತಿರುವ ತಮಿಳು ಚಿತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ. ಯೋಗಿ ಬಾಬು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಪ್ರಮೋದ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. ‘ಸನ್ನಿಧಾನಂ PO’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ರೂಪೇಶ್ ಶೆಟ್ಟಿ, “ನನ್ನ ಮೊದಲ ತಮಿಳು ಚಿತ್ರ ಸನ್ನಿಧಾನಮ್ PO ಇದರ ಶೂಟಿಂಗ್ ನಿಮ್ಮೆಲ್ಲರ ಆಶೀರ್ವಾದದಿಂದ ಭರದಿಂದ ಸಾಗುತ್ತಿದೆ. ಯೋಗಿ ಬಾಬು ಅವರ ಜತೆ ನಟಿಸುವುದೇ ನನ್ನ ಪಾಲಿನ ಅದೃಷ್ಟ. ನನ್ನ ಸಿನಿ ಪಯಣ ಈ ರೀತಿಯಾಗಿ ಸಾಗಲು ನೀವೇ ಮೊದಲ ಕಾರಣ. ನಿಮ್ಮ ಪ್ರೀತಿ ಪ್ರೋತ್ಸಾಹ ಎಂದೂ ಹೀಗೆ ಇರಲಿ. ದೇವರಿಗೆ ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.

2023ರ ನವೆಂಬರ್ ತಿಂಗಳಲ್ಲಿ ಸಿನಿಮಾ ಘೋಷಿಸಲಾಗಿದೆ. ಈ ಚಿತ್ರದ ಮೂರನೇ ಹಂತದ ಶೂಟಿಂಗ್ ಈಗ ನಡೆಯುತ್ತಿದೆ. ಈ ಸಿನಿಮಾ ರಿಲೀಸ್ ದಿನಾಂಕವನ್ನು ರೂಪೇಶ್ ಶೆಟ್ಟಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ರೂಪೇಶ್ ಶೆಟ್ಟಿ ಅವರು ತುಳು ಸಿನಿಮಾಗಳಿಂದ ಬಣ್ಣದ ಬದುಕು ಆರಂಭಿಸಿದರು. 2015ರಲ್ಲಿ ರಿಲೀಸ್ ಆದ ‘ಐಸ್​ ಕ್ರೀಮ್’ ಹೆಸರಿನ ತುಳು ಚಿತ್ರದ ಮೂಲಕ ಅವರು ಹೀರೋ ಆದರು. 2023ರಲ್ಲಿ ಅವರ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ರಿಲೀಸ್ ಆಯಿತು. ಅವರು ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ ವಿನ್ನರ್ ಆಗಿದ್ದಾರೆ.

Continue Reading

DAKSHINA KANNADA

ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಇದರ 31ನೇ ನೂತನ ಎಲ್ಯಾರ್ ಪದವು ಶಾಖೆ ಶುಭಾರಂಭ

Published

on

ಮಂಗಳೂರು : ಸಹಕಾರಿ ಕ್ಷೇತ್ರದ ಅಗ್ರಗಣ್ಯ ಸಹಕಾರಿ ಸಂಘ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮತ್ತು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಮಂಗಳೂರು ಪಡೀಲ್‍ನ ಆತ್ಮಶಕ್ತಿ ಸೌಧದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಇದರ 31ನೇ ನೂತನ ಎಲ್ಯಾರ್ ಪದವು ಶಾಖೆ ಹೋಲಿಕ್ರಾಸ್ ಚರ್ಚ್ ನ ಬಳಿಯಿರುವ ಶರೂನ್ ಸ್ಟ್ರಕ್ಟರ್ ನ ಮೊದಲನೇ ಮಹಡಿಯಲ್ಲಿ ಬುಧವಾರ ಶುಭಾರಂಭಗೊಂಡಿತು.

ಸಾಮಾಜಿಕ ಕಳಕಳಿ ಶ್ಲಾಘನೀಯ : ಯು.ಟಿ.ಖಾದರ್

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ,  ಶ್ರೀಮಂತ ವರ್ಗದವರಿಗೆ ನಗರಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡುತ್ತದೆ. ಆದರೆ, ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳ ಸ್ಥಾಪನೆಗೆ ಆದ್ಯತೆ ನೀಡಿದ್ದು, ಇದೀಗ ಎಲ್ಯಾರ್ ಪದವಿನಂತಹ ಹಿಂದುಳಿದ ಪ್ರದೇಶದಲ್ಲಿ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನೂತನ ಶಾಖೆಯನ್ನು ಆರಂಭಿಸುವ ಮೂಲಕ ಸಹಕಾರಿ ಕ್ಷೇತ್ರದ ನಿಜವಾದ ಧ್ಯೇಯ ಉದ್ಧೇಶವನ್ನು ಈ ಸಂಘ ಮಾಡಿ ತೋರಿಸಿದೆ. ಮೂರು ಗ್ರಾಮಗಳ ಸಮ್ಮಿಲನದ ಈ ಪ್ರದೇಶ ವಾಣಿಜ್ಯವಾಗಿ ಅಭಿವೃದ್ಧಿ ಹೊಂದಿಲ್ಲ. ಇಂತಹ ಪ್ರದೇಶದಲ್ಲಿ ಜನರಿಗೆ ಸಹಕಾರಿ ಸೇವೆಯನ್ನು ನೀಡುವ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದ್ದು, ಈ ಪ್ರದೇಶದ ಜನರ ಆರ್ಥಿಕ ಕಾರ್ಯಕ್ಕೆ ಬೆಂಬಲ ನೀಡುವ ಮೂಲಕ ಉತ್ತಮ ಗ್ರಾಹಕ ಸೇವೆಯೊಂದಿಗೆ ಪ್ರದೇಶದ ಅಭಿವೃದ್ಧಿಗೂ ಕೊಡುಗೆ ನೀಡಲಿ ಎಂದರು.’

ಲಾಭದಾಯಕವಾಗಿ ನಡೆಯುತ್ತಿರುವ ಸಂಸ್ಥೆ : ಚಿತ್ತರಂಜನ್ ಬೋಳಾರ್

ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ ಮಾತನಾಡಿ, ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಎರಡನೇ ಶಾಖೆ ಆರಂಭಗೊಂಡಿದ್ದು, ಉಳ್ಳಾಲದ ಮಾಡೂರಿನಲ್ಲಿ ಅಂದಿನಿಂದ ಇಂದಿನವರೆಗೆ ಯು.ಟಿ.ಖಾದರ್ ಅವರು ಸಂಘದ ಶಾಖೆಯನ್ನು ಉದ್ಘಾಟಿಸಿದ್ದು ಲಾಭದಾಯಕವಾಗಿ ನಡೆಯುತ್ತಿದೆ. ಸಂಘ ಯಶಸ್ವಿಯಾಗಿ ಇಷ್ಟು ಶಾಖೆಗಳು ಆರಂಭಗೊಳ್ಳಲು ಮತ್ತು ಹತ್ತನೇ ವರ್ಷದಲ್ಲಿ ಸ್ವಂತ ಪ್ರಧಾನ ಕಚೇರಿ ನಿರ್ಮಾಣಕ್ಕೆ ಮುಖ್ಯ ಕಾರಣ ಸಂಘದ ಗ್ರಾಹಕರು, ಸದಸ್ಯರು ಮತ್ತು ಸಂಘದ ಆಡಳಿತ ಮಂಡಳಿಯೊಂದಿಗೆ ಸಿಬಂದಿ ವರ್ಗ ಕಾರಣವಾಗಿದ್ದಾರೆ ಎಂದರು.

ಭದ್ರತಾಕೋಶ ಉದ್ಘಾಟನೆ : 

ಎಲ್ಯಾರ್ ಪದವು ಹೊಲಿ ಕ್ರಾಸ್ ಚರ್ಚ್‌ನ ಧರ್ಮಗುರು ಎಫ್.ಆರ್.ಜಾನ್ ಡಿ’ಸೋಜ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುತ್ತಾರು ಶ್ರೀ ಪಂಜದಾಯ ಬಂಟ ದೈವಗಳ ಆದಿ ಕೊರಗತನಿಯ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ದೆಬ್ಬೇಲಿ ಮಹಾಬಲ ಹೆಗ್ಡೆ ಮಾಗಣ್ತಡಿ ಭದ್ರತಾಕೋಶ ಉದ್ಘಾಟಿಸಿದರು.

ಕೊಣಾಜೆ ಬೆಳ್ಮ ಸಿಎಸ್‍ಐ ಬೆತಾನೀಯ ಚರ್ಚ್‌ನ ಧರ್ಮಗುರು ರೆ| ವಿನಯಲಾಲ್ ಬಂಗೇರ ನಿರಖು ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಕೊಣಾಜೆ ಗ್ರಾ. ಪಂ. ಅಧ್ಯಕ್ಷೆ ಗೀತಾ ದಾಮೋದರ ಗಣಕೀಕೃತ ಬ್ಯಾಂಕಿಂಗ್‍ಗೆ ಚಾಲನೆ ನೀಡಿದರು. ಅಂಬ್ಲಮೊಗರು ಗ್ರಾ. ಪಂ. ಎಸ್.ಮಹಮ್ಮದ್ ಇಕ್ಬಾಲ್ ಇ ಮುದ್ರಾಂಕ ಸೇವೆಗೆ ಚಾಲನೆ ನೀಡಿದರು.

ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ರವೀಂದ್ರ ಬಂಗೇರ ಆವರ್ತನ ಠೇವಣಿಗೆ ಚಾಲನೆ ನೀಡಿದರು. ಶ್ರೀ ಆದಿಮಾಯೆ ರಾಮ ದತ್ತಾಂಜನೇಯ ಭಜನಾ ಮಂದಿರದ ಅಧ್ಯಕ್ಷ ಚಂದ್ರಹಾಸ್ ನಾಯ್ಕ ಉಳಿತಾಯ ಖಾತೆಗೆ ಚಾಲನೆ ನೀಡಿದರು.

ಇದನ್ನೂ ಓದಿ : ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು

ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರು, ಎಲ್ಯಾರ್ ಪದವು ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಎಡ್‍ಲೈನ್ ಐಮನ್, ಕಟ್ಟಡದ ಮಾಲಕ ರೆನೋಲ್ಡ್ ಜಿ ಅಮ್ಮಣ್ಣ .ಪಜೀರ್ ಗೋಶಾಲೆಯ ಟ್ರಸ್ಟಿ ಶಿವಪ್ರಸಾದ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿರ್ದೇಶಕರಾದ ಪಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಚಂದ್ರಹಾಸ ಮರೋಳಿ, ಗೋಪಾಲ್ ಎಂ. ಸಲಹೆಗಾರರಾದ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯವಿಜಯ್ ಸ್ವಾಗತಿಸಿದರು. ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು. ಸಿಬ್ಬಂದಿ ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

”ಕೊರೊನಾ ಸಂದರ್ಭದಲ್ಲಿ 10 ಕೋಟಿ ಇದ್ದ ಚಿನ್ನಾಭರಣ ಸಾಲ ಒಮ್ಮೆಲೇ 90 ಕೋಟಿ ರೂ.ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಸಂಘ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದೆ. ನೂತನ ಶಾಖೆಯಿಂದ ಬೇರೆ ಬ್ಯಾಂಕ್‍ಗಳಿಗೆ ಡಿಪಾಸಿಟ್ ಮಾಡಲು ಆರ್ ಟಇ ಜಿ ಎಸ್ ಸೌಲಭ್ಯ, ಇ ಮುದ್ರಾಂಕ, ಆರೋಗ್ಯ ವಿಮೆ, ಸಾಲ ವಿಮಾ ಭದ್ರತೆ ಸೇರಿದಂತೆ ವಿವಿಧ ಬ್ಯಾಂಕಿಂಗ್ ಸವಲತ್ತುಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು.”

ಸಹಕಾರ ರತ್ನ ಚಿತ್ತರಂಜನ್ ಬೋಳಾರ, ಅಧ್ಯಕ್ಷರು, ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಮಂಗಳೂರು

Continue Reading

BELTHANGADY

ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು

Published

on

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು(59 ವ) ಅವರು ಹೃದಯಾಘಾತದಿಂದ ಮೇ.1ರಂದು ರಾತ್ರಿ ನಿಧನರಾಗಿದ್ದಾರೆ.

gangadhar

ಮುಂದೆ ಓದಿ..;ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ

ಕೋಟದಲ್ಲಿ ಮೇ.1ರಂದು ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಕುಕ್ಕಿತ್ತಾಯನ ವೇಷ ಹಾಕಿದ್ದರು. ಮೇಳದ ಬಳಿಕ ಚೌಕಿಯಲ್ಲಿ ಬಣ್ಣ ತೆಗೆಯುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

gangadhar

ನಾರಾಯಣ ಮಯ್ಯು ಹಾಗೂ ಲಕ್ಷ್ಮೀ ದಂಪತಿ ಪುತ್ರನಾಗಿದ್ದು 1964ರಲ್ಲಿ ಪುತ್ತೂರಿನ ಸೇಡಿಯಾಪಿನಲ್ಲಿ ಜನಿಸಿದರು. ತನ್ನ 18 ನೇ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ಬಣ್ಣ ಹಚ್ಚಲು ಆರಂಭಿಸಿದ ಇವರು ಸ್ತ್ರೀ ವೇಷ, ರಾಜ ವೇಷ, ಪುಂಡು ವೇಷಗಳಲ್ಲಿ ನಿಸ್ಸೀಮರಾಗಿದ್ದರು. ಇನ್ನು ಮಾಲಿನಿ, ಚಿತ್ರಾಂಗದೆ, ಮೋಹಿನಿ, ದಾಕ್ಷಾಯಿನಿ, ಪ್ರಮೀಳೆ, ಶ್ರೀ ದೇವಿ, ಸೀತೆ, ದೇವೆಂದ್ರ, ದುಶ್ಯಾಸನ ಮೊದಲಾದ ಪಾತ್ರಗಳ ಅಭಿನಯದಲ್ಲಿಯೂ ಸೈ ಎನಿಸಿಕೊಂಡಿದ್ದರು. ಮೃತರು  ಆರೋಗ್ಯ ಸಹಾಯಕಿಯಾಗಿರುವ ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Continue Reading

LATEST NEWS

Trending