Wednesday, October 20, 2021

ವಿಶ್ವದ ಸಾಹಸಿ ಪೈಲಟ್ ಇನ್ನಿಲ್ಲ:ಶಬ್ದಕ್ಕಿಂತ ವೇಗವಾಗಿ ವಿಮಾನ ಹಾರಿಸಿದ್ದ ಚಕ್‌ ಯೇಗರ್‌ ನಿಧನ..!

ವಿಶ್ವದ ಸಾಹಸಿ ಪೈಲಟ್ ಇನ್ನಿಲ್ಲ:ಶಬ್ದಕ್ಕಿಂತ ವೇಗವಾಗಿ ವಿಮಾನ ಹಾರಿಸಿದ್ದ ಚಕ್‌ ಯೇಗರ್‌ ನಿಧನ..!

ನ್ಯೂಯಾರ್ಕ್ : ಶಬ್ದಕ್ಕಿಂತ ವೇಗವಾಗಿ ವಿಮಾನ ಚಲಾಯಿಸಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದ ಅಮೆರಿಕದ ವಾಯುಪಡೆ ಅಧಿಕಾರಿ ಚಕ್‌ ಯೇಗರ್‌ ನಿಧನರಾಗಿದ್ದಾರೆ.

ಅವರಿಗೆ 97 ವರ್ಷ ವಯಸ್ಸಾಗಿತ್ತು. ಟೆಸ್ಟ್ ಪೈಲಟ್‌ ಆಗಿದ್ದ ಅವರು ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದರು. ಅವರ ಪತ್ನಿ ವಿಕ್ಟೋರಿಯಾ ಯೇಗರ್‌ ಅವರು ಟ್ವೀಟ್‌ನಲ್ಲಿ ಪತಿಯ ಸಾವಿನ ವಿಷಯ ಖಚಿತಪಡಿಸಿದ್ದಾರೆ.

ಆದರೆ ಅವರು ಸಾವಿನ ಕಾರಣವನ್ನು ಉಲ್ಲೇಖಿಸಿಲ್ಲ. ‘ಅಮೆರಿಕದ ಮಹಾನ್‌ ಪೈಲಟ್‌, ಶಕ್ತಿ, ಸಾಹಸ ಮತ್ತು ದೇಶಪ್ರೇಮದ ಪರಂಪರೆಗಾಗಿ ಅವರು ಎಂದೆಂದೂ ನೆನಪಿನಲ್ಲಿ ಉಳಿಯುತ್ತಾರೆ’ ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

1947ರಲ್ಲಿ ಬೆಲ್‌ x-1 ಸಂಶೋಧನಾ ವಿಮಾನವನ್ನು ಅವರು ಶಬ್ದಕ್ಕಿಂತಲೂ ವೇಗವಾಗಿ ಚಲಾಯಿಸಿದ್ದರು.

ಅಮೆರಿಕದ ಬಾಹ್ಯಾಕಾಶ ಯೋಜನೆಗೆ ನೆರವಾಗಿದ್ದರು. ಎರಡನೇ ಮಹಾಯುದ್ಧದಲ್ಲಿ ಅಮೆರಿಕ ಧುಮುಕುವ ಮೂರು ತಿಂಗಳು ಮೊದಲು, ಅಂದರೆ 1941ರ ಸೆಪ್ಟೆಂಬರ್‌ನಲ್ಲಿ ಯೇಗರ್‌ ವಾಯುಪಡೆಗೆ ಸೇರಿದ್ದರು.

ಏರ್‌ಕ್ರಾಫ್ಟ್‌ ಮೆಕ್ಯಾನಿಕ್‌ ಆಗಿದ್ದ ಅವರು ನಂತರ ಪೈಲಟ್‌ ತರಬೇತಿಯನ್ನು ಪಡೆದಿದ್ದರು. 1975ರಲ್ಲಿ ವಾಯುಪಡೆ ಸೇವೆಯಿಂದ ನಿವೃತ್ತರಾಗಿದ್ದರು.

ಚಕ್‌ ಯೇಗರ್‌ ಅವರ ಯಶೋಗಾಥೆಯನ್ನು ಆಧರಿಸಿ ‘ದಿ ರೈಟ್‌ ಸ್ಟಫ್‌’ ಎಂಬ ಕೃತಿ ಹೊರಬಂದಿತ್ತು. 1983ರಲ್ಲಿ ಇದೇ ಹೆಸರಿನಲ್ಲಿ ಚಲನಚಿತ್ರ ಬಿಡುಗಡೆಯಾಗಿದೆ. ಇದು ಅವರ ಸಾಧನೆ ಜನಜನಿತವಾಗಲು ನೆರವಾಯಿತು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...