ಬ್ರಿಕ್ಸ್ ಶೃಂಗಸಭೆಯ ವೇದಿಕೆ ಹಂಚಿಕೊಳ್ಳಲಿರುವ ಚೀನಾ ಅಧ್ಯಕ್ಷ- ಭಾರತ ಪ್ರಧಾನಿ ಮೋದಿ
ದೆಹಲಿ: ಹಲವಾರು ತಿಂಗಳುಗಳಿಂದ ಭಾರತ ಮತ್ತು ಚೀನಾ ಗಡಿಯಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಉದ್ಭವಿಸುತ್ತಿವೆ. ಎರಡೂ ದೇಶಗಳ ಸೈನಿಕರ ನಡುವೆ ಘರ್ಷಣೆ ಉಂಟಾಗಿ ಭಾರತದ 20 ಹಾಗೂ ಚೀನಾದ 40ಕ್ಕೂ ಯೋಧರು ಹುತಾತ್ಮರಾಗಿದ್ದಾರೆ.
ಮೋದಿ ಮತ್ತು ಕ್ಸಿ ಜಿನ್ ಪಿಂಗ್ ನವೆಂಬರ್ 10ರಂದು ಶಾಂಗೈ ಕೋಅಪರೇಷನ್ ಆರ್ಗನೈಸೇಷನ್ ಆಯೋಜಿಸಿದ್ದ ವರ್ಚುವಲ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.
ಇದೀಗ 12ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಎರಡು ದೇಶಗಳ ನಡುವೆ ಗಡಿ ಉದ್ವಿಗ್ನತೆ ಇರುವ ಹಿನ್ನೆಲೆಯಲ್ಲಿ ಉಭಯ ನಾಯಕರು ಮತ್ತೆ ಮತ್ತೆ ವೇದಿಕೆ ಹಂಚಿಕೊಳ್ಳುತ್ತಿರುವುದು ಮಹತ್ವದ ವಿಷಯವಾಗಿದೆ.