LATEST NEWS
‘CFI ಅಂದ್ರೆ ಕ್ರಿಮಿನಲ್ ಫ್ರಂಟ್ ಆಫ್ ಇಸ್ಲಾಂ, PFI ಅಂದ್ರೆ ಪಾಯಿಸನ್ ಫ್ರಂಟ್ ಆಫ್ ಇಸ್ಲಾಂ: ಹಿಂಜಾವೇ
ಮಂಗಳೂರು: ಸಿಎಫ್ಐ ಎಂದರೆ ಕ್ರಿಮಿನಲ್ ಫ್ರಂಟ್ ಆಫ್ ಇಸ್ಲಾಂ. ಪಿಎಫ್ಐ ಅಂದರೆ ಪಾಯಿಸನ್ ಪ್ರಂಟ್ ಆಪ್ ಇಸ್ಲಾಂ. ಎಸ್ಡಿಪಿಐ ಅಂದ್ರೆ ಸೂಡೋ ಡೆಮೆಕ್ರೆಟಿಕ್ ಪಾರ್ಟಿ ಆಫ್ ಇಸ್ಲಾಂ.
ಕೆಎಫ್ಡಿ ಎಂದರೆ ಕರ್ನಾಟಕ ಫಾರಿನ್ ಡಿಸ್ಟ್ರಕ್ಷನ್ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ.
ಈ ಬಗ್ಗೆ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಡುಪಿಯಲ್ಲಿ ಹುಟ್ಟಿದ ಹಿಜಾಬ್ ಜ್ವಾಲೆ ಕರ್ನಾಟಕದ ಉದ್ದಗಲಕ್ಕೂ ಹಬ್ಬಿದೆ.
ಕೆಎಫ್ಡಿ ಸಂಘಟನೆ ಕೇರಳವನ್ನು ಇಸ್ಲಾಂಮೀಕರಣದತ್ತ ಕೊಂಡೊಯ್ಯುತ್ತಿದೆ ಎಂದು ಮಾಜಿ ಸಿಎಂ ಅಚ್ಯುತಾನಂದನ್ ಈ ಹಿಂದೆಯೇ ಹೇಳಿದ್ದರು. ಇದೀಗ ಅದರ ಮಿತ್ರ ಸಂಘಟನೆಗಳು ಕರಾವಳಿಯನ್ನು ಮತ್ತೊಂದು ಕಾಶ್ಮೀರವನ್ನಾಗಿಸುವ ಹುನ್ನಾರ ನಡೆಸಿವೆ ಎಂದು ಹೇಳಿದ ಅವರು.
ತಾಲಿಬಾನಿ, ಐಸಿಸ್ ಮಾನಸಿಕತೆಯನ್ನು ಕೆಎಫ್ಡಿ, ಪಿಎಫ್ಐ, ಸಿಎಫ್ಐ ಸಂಘಟನೆಗಳು ಹೊಂದಿದೆ. ಹಿಜಾಬ್ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರನ್ನು ವಂಚಿಸಿ, ಬುರ್ಖಾಧಡಿ ನಾಲ್ಕು ಗೋಡೆ ಮಧ್ಯೆ ಕೊಳೆಯುವಂತೆ ಮಾಡುವ ಐಸಿಸ್ ಮಾನಸಿಕತೆ ಈ ಸಂಘಟನೆಗಳಲ್ಲಿದೆ.
ಇದು ಶಿಕ್ಷಣ ವ್ಯವಸ್ಥೆಯನ್ನು ಧ್ವಂಸಗೊಳಿಸುವ ಹುನ್ನಾರ. ಹಿಂದೂ-ಮುಸ್ಲಿಂ ಎಂಬ ಬೇಧಭಾವವಿಲ್ಲದೇ ಮಕ್ಕಳು ಅಧ್ಯಯನ ಮಾಡುವ ಕಾಲಘಟ್ಟದಲ್ಲಿ ಮತಾಂಧತೆಯ ವಿಷ ತುಂಬುವ ಕೆಲಸವನ್ನು ಈ ಸಂಘಟನೆಗಳು ನಡೆಸುತ್ತಿದೆ.
ಇದು ಕರ್ನಾಟಕವನ್ನು ಪ್ರಕ್ಷುಬ್ಧ ವಾಗಿಸುವ ಹುನ್ನಾರ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಿಶೋರ್ ಕುಮಾರ್ ಹಾಗೂ ಅಮಿತ್ ಇದ್ದರು.
FILM
ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಉಡುಪಿ: ಇಂದು ಬೆಳಂಬೆಳಗ್ಗೆ ರಾಜಕೀಯ ನಾಯಕರು, ಜನಸಾಮಾನ್ಯರು ಮತಗಟ್ಟೆಗೆ ಬಂದು ಮತ ಚಲಾಯಿಸಿದರೆ ಉಡುಪಿಯ ಮತಗಟ್ಟೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತದಾನ ಮಾಡಿದ್ದಾರೆ.
ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 197 ಕ್ಕೆ ಆಗಮಿಸಿ ಮತ ಚಲಾಯಿಸಿದರು. ರಕ್ಷಿತ್ ಶೆಟ್ಟಿ ಮನೆಯ ಮುಂಭಾಗದಲ್ಲೇ ಇರುವ ಮತಗಟ್ಟೆಗೆ ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದರು. ರಕ್ಷಿತ್ ಶೆಟ್ಟಿ ಈ ಸಂದರ್ಭದಲ್ಲಿ ಸೆಲೆಬ್ರೆಟಿಯನ್ನು ಕಂಡ ಇತರ ಮತದಾರರು ಹರ್ಷಚಿತ್ತರಾಗಿ ಸೆಲ್ಫೆ ಕ್ಲಿಕಿಸಲು ಮುಂದಾದ ಘಟನೆ ನಡೆಯಿತು.
DAKSHINA KANNADA
ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು
ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.
LATEST NEWS
ಅಯೋಧ್ಯೆಯ ಅಂಗಳದಲ್ಲಿ ಶೂಟಿಂಗ್ ಮಾಡಿದ ಮೊಟ್ಟ ಮೊದಲ ಕನ್ನಡ ಸೀರಿಯಲ್ ಇದು?
ಮಹಿಳೆಯರಿಗೆ ಸೀರಿಯಲ್ ನೋಡುವುದಂದರೆ ಒಂತಾರ ಹುಚ್ಚು. ಮನೆಯಲ್ಲೇ ಇರುವ ಮಹಿಳೆಯರು ಕೆಲವೊಮ್ಮೆ ಬೆಳಗ್ಗೆಯಿಂದ ಸಂಜೆಯವರೆಗೆ ಟಿವಿಯಲ್ಲಿ ಸೀರಿಯಲ್ ನೋಡುತ್ತಾ ಇರುತ್ತಾರೆ. ಸೀರಿಯಲ್ ನೋಡೊದು ಮಾತ್ರ ಅಲ್ಲ ಅದರ ಬಗ್ಗೆ ಸಂವಾದ ಕೂಡ ಮನೆಯವರಲ್ಲಿ ಮಾಡುತ್ತಾ ಇರುತ್ತಾರೆ.
ಈ ನಡುವೆ ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ದೇಶದ ಜನರು ತುಂಬಾ ಸಂತೋಷದಲ್ಲಿದ್ದಾರೆ. ಅದೆಷ್ಟೋ ಜನ ಹಿಂದೂಗಳ ಕನಸು ನನಸಾದ ಕ್ಷಣ ಎಂದು ಹೇಳಬಹುದು. ಒಮ್ಮೆಯಾದ್ರೂ ಅಯೋಧ್ಯೆಗೆ ಹೋಗಿಬರಬೇಕು ಅಂತಾ ಪ್ಲಾನ್ ಅಂತೂ ಮಾಡ್ತಾ ಇರೋದು ಕಂಡಿತ. ಕೆಲವರು ಹೋಗಿ ಬಂದಿದ್ದಾರೆ ಕೂಡ ಆದರೆ ಇನ್ನು ಕೆಲವರು ಇನ್ನು ಹೋಗಬೇಕು. ಇದುವರೆಗೆ ಅಯೋಧ್ಯೆ ರಾಮಮಂದಿರದಲ್ಲಿ ಯಾವೂದೇ ರೀತಿದ ಫಿಲ್ಮ್ ಶೂಟಿಂಗ್, ಸೀರಿಯಲ್, ಕಿರುಚಿತ್ರ ಯಾವೂದು ಶೂಟಿಂಗ್ ಆಗಲಿಲ್ಲ. ಆದರೇ ಇದೇ ಮೊದಲ ಬಾರಿಗೇ ಕನ್ನಡ ಸೀರಿಯಲ್ ಇಂಡಸ್ಟ್ರಿಯಲ್ಲಿ ಕನ್ಯಾದಾನ ಸೀರಿಯಲ್ ಹೊಸ ದಾಖಲೆ ಬರೆದಿದೆ.
ಉದಯ ಟಿವಿಯಲ್ಲಿ ಪ್ರಸಾರವಾಗೋ ಕನ್ಯಾದಾನ ಧಾರಾವಾಹಿ ಈಗ ಹೊಸ ದಾಖಲೆ ಬರೆದಿದ್ದಾರೆ. ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಸೀರಿಯಲ್ ಎಂಬ ಹೆಗ್ಗಳಿಕೆಗೆ ಕನ್ಯಾದಾನ ಧಾರಾವಾಹಿ ಪಾತ್ರವಾಗಿದೆ.
ಜನವರಿ 22ರಂದು ಅಂದ್ರೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಇಲ್ಲಿಯವೆರೆಗೂ ಯಾವುದೇ ಸಿನಿಮಾವಾಗ್ಲಿ, ಅಥವಾ ಸೀರಿಯಲ್ ಆಗ್ಲಿ ಶೂಟ್ ಮಾಡಿರಲಿಲ್ಲ. ಆದ್ರೆ, ಕನ್ಯಾದಾನ ಧಾರವಾಹಿ ತಂಡ ಫಸ್ಟ್ಟೈಮ್ ಅಯೋಧ್ಯೆಗೆ ಹೋಗಿ ಚಿತ್ರೀಕರಣ ಮಾಡಿದೆ.
ಈ ಸೀರಿಯಲ್ನಲ್ಲಿ ಬಹುತೇಕ ಪಾತ್ರಗಳು ಒಂದಲ್ಲ ಒಂದು ಸಮಸ್ಯೆ ಎದುರಿಸ್ತಿವೆ. ಹಾಗಾಗಿ ರಾಮನ ದರ್ಶನ ಪಡೆದು ಆ ಕಷ್ಟಗಳಿಂದ ಹೊರಬರಬೇಕು ಎಂದು ನಿರ್ಧರಿಸಿ, ರಾಮಮಂದಿರಕ್ಕೆ ಹೋಗಿ ಬಾಲರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯೆಯಲ್ಲಿ ಶೂಟಿಂಗ್ ಮಾಡಿರೋ ಬಗ್ಗೆ ಸೀರಿಯಲ್ ತಂಡ ಸಂತಸ ಹಂಚಿಕೊಂಡಿದೆ.