Connect with us

KADABA

ಕಡಬದಲ್ಲಿ ಅಪ್ರಾಪ್ತೆಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ಬಂಧನಕ್ಕೆ ಒತ್ತಾಯ

Published

on

ಕಡಬ: ಕೋಡಿಂಬಾಳ ಎಂಬಲ್ಲಿ ಬಾಲಕಿ ಬಲಾತ್ಕಾರಕ್ಕೆ ಯತ್ನಿಸಿದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣದ ಆರೋಪಿ ಜಾನ್ ಎಂಬಾತನನ್ನು ಬಂಧಿಸಲು ಹಾಗೂ ಆತನ ಮತ್ತು ಹಲ್ಲೆ ನಡೆಸಿದ ಆತನ ಪತ್ನಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಹಾಗೂ ಮಕ್ಕಳ ಇಲಾಖೆ ಅಸಡ್ಡೆ ಮಾಡುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ.


ಬಾಲಕಿಗೆ ಹಾಗೂ ವೃದ್ಧ ಅಜ್ಜಿಗೆ ಆರೋಪಿ ಜಾನ್ ಎಂಬಾತ ಹಲ್ಲೆ ನಡೆಸಿ, ಕಿರುಕುಳ ನೀಡುತ್ತಿರುವ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಎಸ್. ಪಿ ಅವರಿಗೂ ಬಾಲಕಿ ದೂರನ್ನು ನೀಡಿದ್ದಳು.

ಹಲ್ಲೆಯಿಂದಾಗಿ ಬಾಲಕಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಳು. ಆರೋಪಿಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಸೇರಿದಂತೆ ವಿವಿಧ ಅಪರಾಧ ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಾಗಿತ್ತು.

ಇದೀಗ ಪ್ರಕರಣ ನಡೆದು ಹದಿನೈದು ದಿನಗಳು ಕಳೆದರೂ ಆರೋಪಿಯ ಬಂಧನವಾಗಲಿ, ಕಾನೂನು ಕ್ರಮ ಕೈಗೊಳ್ಳುವುದಾಗಲಿ ನಡೆಯುತ್ತಿಲ್ಲ, ಆರೋಪಿ ಬಂಧನವಾಗದ ಕಾರಣ ಸಂತ್ರಸ್ತ ಬಾಲಕಿ ಹಾಗೂ ಅಜ್ಜಿಯು ಭಯದಿಂದಲೇ ಜೀವನ ಸಾಗಿಸುವಂತಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ.

DAKSHINA KANNADA

ಕಡಬ ತಾಲೂಕು ಪಂಚಾಯತ್ ಕಚೇರಿಗೆ ಲೋಕಾಯುಕ್ತ ದಾಳಿ!

Published

on

ಕಡಬ : ಕೊಡಗು ಜಿಲ್ಲೆಯ ಲೋಕಾಯುಕ್ತ ಪೊಲೀಸರು ಕಡಬದಲ್ಲಿ ದಾಳಿ ನಡೆಸಿ ಆಶ್ಚರ್ಯ ಮೂಡಿಸಿದ್ದಾರೆ. ಕಡಬ ತಾಲೂಕು ಪಂಚಾಯತ್ ಇಒ ಬಿ.ವಿ ಜಯಣ್ಣ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಕಡಬ ತಾಲೂಕು ಪಂಚಾಯತ್ ಇಒ ಆಗಿ ಜಯಣ್ಣ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದರು.

ಇದಕ್ಕೂ ಮೊದಲು ಸೋಮವಾರ ಪೇಟೆ ತಾಲೂಕ ಪಂಚಾಯತ್ ನಲ್ಲಿ ಅವರು ಇಒ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿರುವಾಗಲೇ ಇವರ ವಿರುದ್ಧ ಅಕ್ರಮ ಆಸ್ತಿಗಳಿಕೆಯ ದೂರು ದಾಖಲಾಗಿದ್ದು, ಆ ವಿಚಾರದ ತನಿಖೆಗೆ ಇಂದು ಕಡಬದಲ್ಲಿ ವಿಚಾರಣೆ ನಡೆಸಿದ್ದಾರೆ.
ಸೋಮವಾರಪೇಟೆಯ ಮನೆ, ಕಡಬದ ಕಚೇರಿ ಹಾಗೂ ಕಡಬದಲ್ಲೇ ಇರುವ ಜಯಣ್ಣ ಅವರ ಬಾಡಿಗೆ ಮನೆ ಮೇಲೆ ಏಕ ಕಾಲಕ್ಕೆ ದಾಳಿ ಮಾಡಲಾಗಿದೆ.

ಕೊಡಗು ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಇನ್ಸ್ ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ ಜಯಣ್ಣ ಅವರ ವಿಚಾರಣೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

KADABA : ಆ್ಯಸಿಡ್ ದಾಳಿ ಪ್ರಕರಣ; ಸಹಕರಿಸಿದ ಇಬ್ಬರು ವಶಕ್ಕೆ

Published

on

ಕಡಬ : ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ಕಡಬಕ್ಕೆ ಕರೆತಂದಿದ್ದಾರೆ.

ಮಾರ್ಚ್ 5 ರಂದು ಕಡಬದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ಕೇರಳ ಮೂಲದ ಅಬೀನ್  ಎಂಬ ಎಂಬಿಎ ವಿದ್ಯಾರ್ಥಿ ಆಸಿಡ್ ಎರಚಿ ಬಂಧಿತನಾಗಿದ್ದ. ಆರೋಪಿಗೆ ಅಸಿಡ್ ಎಲ್ಲಿಂದ ಸಿಕ್ಕಿತು ಅನ್ನೋ ವಿಚಾರವಾಗಿ ತನಿಖೆ ನಡೆಸಿದ ಪೊಲೀಸರು ಕೇರಳದ ಎರ್ನಾಕುಲಂ ಹಾಗೂ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದರು.

ಪೊಲೀಸರು ವಶಕ್ಕೆ ಪಡೆದಿರುವವರಲ್ಲಿ ಒಬ್ಬಾತ ಆ್ಯಸಿಡ್ ಪೂರೈಕೆ ಮಾಡಿದ್ದರೆ, ಮತ್ತೋರ್ವ ವ್ಯಕ್ತಿ ಆರೋಪಿಗೆ ಸಮವಸ್ತ್ರ ಹೊಲಿದು ಕೊಟ್ಟಿದ್ದಾನೆ ಎನ್ನಲಾಗಿದೆ. ಇಬ್ಬರನ್ನೂ ಕಡಬಕ್ಕೆ ಕರೆ ತರಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

WATCH VIDEO : ಕಡಬ ಆ್ಯಸಿಡ್ ದಾಳಿ ಪ್ರಕರಣ- ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯನ್ನು ವಿದ್ಯಾರ್ಥಿಗಳೇ ಹೆಡೆಮುರಿಕಟ್ಟಿದ್ದು ಹೇಗೆ ಗೊತ್ತಾ!?

Published

on

ಕಡಬ: ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆ್ಯಸಿಡ್ ಎರಚಿದ ಆರೋಪಿ ಅಭೀನ್‌ನನ್ನು ವಿದ್ಯಾರ್ಥಿಗಳು ಹಿಡಿದ ದೃಶ್ಯ ಇದೀಗ ಲಭ್ಯವಾಗಿದೆ.

ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಅಭೀನ್‌ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಕಾಲೇಜು ವಿದ್ಯಾರ್ಥಿಗಳು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ವಿದ್ಯಾರ್ಥಿಗಳು ಆರೋಪಿಯನ್ನು ಹಿಡಿದು ಕರೆದುಕೊಂಡು ಹೋಗತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿ ಅಭೀನ್‌ನನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಆತನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಆತನ ಉದ್ದೇಶ ಹಾಗೂ ಆತ ಎಲ್ಲಿಂದ ಆ್ಯಸಿಡ್ ಖರೀದಿ ಮಾಡಿದ್ದ ಹಾಗೂ ಕಡಬಕ್ಕೆ ಹೇಗೆ ಬಂದು ತಲುಪಿದ ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೊದಲಿಗೆ ಕಡಬದಲ್ಲೇ ಆ್ಯಸಿಡ್ ಖರೀದಿಸಿದ್ದಾಗಿ ಹೇಳಿಕೆ ನೀಡಿದ್ದು, ಬಳಿಕ ತೀವೃ ವಿಚಾರಣೆ ವೇಳೆ ಕೊಯಂಬುತ್ತೂರಲ್ಲಿ ಖರೀದಿಸುರುವುದಾಗಿ ಹೇಳಿದ್ದಾನೆ. ಹೀಗಾಗಿ ಮಹಜರು ನಡೆಸಲು ಆರೋಪಿಯನ್ನು ಕಡಬ ಪೊಲೀಸರು ಕೊಯಂಬುತ್ತೂರಿಗೆ ಕರೆದೊಯ್ಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

WATCH VIDEO : ಕಡಬ ಆ್ಯಸಿಡ್ ದಾಳಿ ಪ್ರಕರಣ; ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯನ್ನು ವಿದ್ಯಾರ್ಥಿಗಳೇ ಹೆಡೆಮುರಿಕಟ್ಟಿದ್ದು ಹೇಗೆ ಗೊತ್ತಾ!?

 

Continue Reading

LATEST NEWS

Trending