Monday, July 4, 2022

ಬಂಟ್ವಾಳ: ನಿಯಂತ್ರಣ ತಪ್ಪಿ ಹೊಟೇಲ್‌ಗೆ ನುಗ್ಗಿದ ಕಾರು-ಓರ್ವ ಗಂಭೀರ

ಬಂಟ್ವಾಳ: ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ಹೊಟೇಲ್‌ಗೆ ನುಗ್ಗಿ ಕಂದಕಕ್ಕೆ ಉರುಳಿದ ಘಟನೆ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಾರ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.


ನಿನ್ನೆ ರಾತ್ರಿ ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆ ಸಾಗುತ್ತಿದ್ದ ಸಾಗುತ್ತಿದ್ದ ಇಂಡಿಕೋ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹೊಟೇಲ್ ಒಳಗೆ ನುಗ್ಗಿದೆ.

ಈ ವೇಳೆ ಹೊಟೇಲ್‌ನಲ್ಲಿದ್ದ ಮಾಲಕ ರಿಯಾಝ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.


ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಘಟನೆಯಲ್ಲಿ ಮೂವರು ಹೊಟೇಲ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

LEAVE A REPLY

Please enter your comment!
Please enter your name here

Hot Topics

ಅಕ್ರಮ ಗೋಸಾಗಾಟ ತಡೆಯಲು ಖಡಕ್‌ ಖಾಕಿಗೆ ಖಡಕ್‌ ಸೂಚನೆ ಕೊಟ್ಟ ಶಾಸಕ ಕಾಮತ್‌

ಮಂಗಳೂರು: ನಗರದಲ್ಲಿ ಅಕ್ರಮ ಗೋಸಾಗಾಟ ಹಾಗೂ ಗೋವಧೆ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್‌ ಕಾಮತ್ ಸೂಚನೆ ನೀಡಿದ್ದಾರೆ.ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾದರೂ ಅಕ್ರಮವಾಗಿ ಗೋಹತ್ಯೆ...

ಕುವೈಟ್‌-ಮಂಗಳೂರು ಪ್ರಯಾಣಿಕನ ಜೊತೆ ಸಿಬ್ಬಂದಿ ಉದ್ಧಟತನ: ಕ್ಷಮೆ ಕೇಳಿದ ಏರ್‌ಇಂಡಿಯಾ

ಮಂಗಳೂರು: ಕುವೈಟ್‌ನಿಂದ ಮಂಗಳೂರಿಗೆ ಹೊರಡುವ ವೇಳೆ ಕುವೈಟ್‌ನ ಏರ್‌ಇಂಡಿಯಾ ಕೌಂಟರ್‌ನ ವ್ಯವಸ್ಥಾಪಕ ಉದ್ಧಟತನದ ವರ್ತನೆ ಬಗ್ಗೆ ದೂರಿದ ಮಂಗಳೂರಿಗರೊಬ್ಬರಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆ ಕ್ಷಮೆ ಕೋರಿದ ಘಟನೆ ನಿನ್ನೆ ನಡೆದಿದೆ.ಕುವೈತ್‌ನ ಅನಿವಾಸಿ ಭಾರತೀಯ,...

ಮರವಂತೆಯಲ್ಲಿ ಸಮುದ್ರಪಾಲಾದ ಕಾರು: ಓರ್ವ ಸ್ಪಾಟ್ ಡೆತ್-ಓರ್ವ ನಾಪತ್ತೆ

ಕುಂದಾಪುರ: ಚಲಿಸುತ್ತಿದ್ದ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರ ಪಾಲಾಗಿ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿ ಇಬ್ಬರು ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದಂತಹ ದಾರುಣ ಘಟನೆ ಉಡುಪಿ...