Thursday, March 23, 2023

ಸೌದಿ ಅರೇಬಿಯಾದಲ್ಲಿ ಕಾರು ಅಪಘಾತ : ಜೈಲು ಪಾಲಾದ ಭಾರತೀಯನ ಬಿಡುಗಡೆಗೆ 2 ಕೋಟಿ ರೂ ಪಾವತಿಸಿದ ಸೌದಿ ಪ್ರಜೆ..!

ಕಾರು ಅಪಘಾತ ಪ್ರಕರಣದಲ್ಲಿ ನಾಲ್ವರು ಸೌದಿ ಪ್ರಜೆಗಳು ಸಾವನ್ನಪ್ಪಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಭಾರತೀಯ ಪ್ರಜೆಯನ್ನು ಬಿಡುಗಡೆ ಮಾಡಲು ಸೌದಿ ಅರೇಬಿಯಾದ ವ್ಯಕ್ತಿಯೊಬ್ಬರು 2 ಕೋಟಿ ರೂಪಾಯಿ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.

ಜೆದ್ದಾ : ಕಾರು ಅಪಘಾತ ಪ್ರಕರಣದಲ್ಲಿ ನಾಲ್ವರು ಸೌದಿ ಪ್ರಜೆಗಳು ಸಾವನ್ನಪ್ಪಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಭಾರತೀಯ ಪ್ರಜೆಯನ್ನು ಬಿಡುಗಡೆ ಮಾಡಲು ಸೌದಿ ಅರೇಬಿಯಾದ ವ್ಯಕ್ತಿಯೊಬ್ಬರು 2 ಕೋಟಿ ರೂಪಾಯಿ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.

ಭಾರತದ 2 ಕೋಟಿ ರೂಪಾಯಿಯನ್ನು ನೀಡಿ ಭಾರತೀಯ ಚಾಲಕನನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆ.

ಐವತ್ತೆಂಟು ವರ್ಷದ ಅವದೇಶ್ ಸಾಗರ್ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯಾಗಿದ್ದಾರೆ.

ಅವದೇಶ್ ಅವರು ಉತ್ತರಪ್ರದೇಶದ ಜಾನ್‌ಪುರದ ಮೂಲದವರಾಗಿದ್ದು ಕಾರು ಅಪಘಾತ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.

ಸೌದಿ ಪ್ರಜೆಯ ಉದಾರ ಮನಸ್ಸಿನಿಂದ ಮೂರು ವರ್ಷಗಳ ನಂತರ ಅವದೇಶ್ ಹೊರಗಿನ ಪ್ರಪಂಚವನ್ನು ನೋಡುತಿದ್ದಾರೆ.

ಜೈಲಿನಿಂದ ಹೊರಬಂದ ನಂತರ ಅವದೇಶ್ ತನ್ನ ಬಿಡುಗಡೆಗೆ ಸಹಾಯ ಮಾಡಿದ ದೇವರಿಗೆ ಹಾಗೂ ಎಲ್ಲರಿಗೂ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ.

ಹಾದಿ ಹಮೂದ್ ಖೈತಾನಿ ಎಂಬ ಸೌದಿ ವ್ಯಕ್ತಿ ಅವರ ಬಿಡುಗಡೆಗೆ ಶ್ರಮಿಸಿದ್ದಾರೆ.

ಅವದೇಶ್ ಅವರ ವಾಹನವು ಮಾರ್ಚ್ 13, 2020 ರಂದು ಅಪಘಾತಕ್ಕೀಡಾಯಿತು. ಅವದೇಶ್ ಕುಮಾರ್ ಚಲಾಯಿಸುತ್ತಿದ್ದ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 4 ಸೌದಿ ಪ್ರಜೆಗಳು ಸಾವನ್ನಪ್ಪಿದ್ದರು.

ಮೂವರು ಮಹಿಳೆಯರು ಮತ್ತು ಒಬ್ಬ ವಿಕಲಚೇತನ ವ್ಯಕ್ತಿ ಸಾವನ್ನಪ್ಪಿದ್ದರು.

ಶಿಕ್ಷೆಗೊಳಗಾದ ಅವದೇಶ್‌ನನ್ನು ರಿಯಾದ್‌ನ ತೈಫ್ ರಸ್ತೆಯಲ್ಲಿರುವ ಅಲ್ ಕುವೈಯಾ ವಿಲೇಜ್ ಜೈಲಿಗೆ ವರ್ಗಾಯಿಸಲಾಯಿತು.

ನಂತರ ನ್ಯಾಯಾಲಯವು 945,0000 ರಿಯಾಲ್‌ಗಳನ್ನು (ಸುಮಾರು 2 ಕೋಟಿ ರೂಪಾಯಿ) ದಯಾ ಅಥವಾ ರಕ್ತದ ಹಣವಾಗಿ ಪಾವತಿಸಲು ಆದೇಶಿಸಿತು.

ಆದರೆ ಅಷ್ಟು ಹಣ ಕೊಡುವ ಸಾಮರ್ಥ್ಯ ಅವದೇಶ್ ಅವರಿಗಿರಲಿಲ್ಲ.

ಶಿಕ್ಷೆಯನ್ನು ತಾನೇ ಅನುಭವಿಸಲು ನಿರ್ಧರಿಸಿದರು. ನಂತರ ಪ್ರಕರಣದ ವಿಷಯ ತಿಳಿದ ಹಾದಿ ಹಮೂದ್ ಖೈತಾನಿ ಅವದೇಶ್ ಅವರನ್ನು ಬಿಡಿಸಲು ಪ್ರಯತ್ನಗಳನ್ನು ಆರಂಭಿಸಿ ಅವದೇಶ್ ಗೆ ಮುಕ್ತಿ ಸಿಗುವಂತೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ..!

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆವರು ಜಿನೈಕ್ಯರಾಗಿದ್ದಾರೆ.ಹಾಸನ : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ...

ಉಡುಪಿ : ಕಳವಾದ 74 ಲಕ್ಷ ರೂಪಾಯಿ ಸೊತ್ತುಗಳು ಮರಳಿ ಮಾಲಕರಿಗೆ ಹಸ್ತಾಂತರಿಸಿದ ಪೊಲೀಸರು.!

ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ,ದರೋಡೆ ಮತ್ತಿತರ ಕಾರಣಗಳಿಂದ ಸುತ್ತುಗಳನ್ನು ಕಳೆದುಕೊಂಡವರಿಗೆ ಅವರ ಚಿನ್ನಾಭರಣ ಸೊತ್ತು ಮತ್ತು ನಗದನ್ನು ಹಸ್ತಾಂತರಿಸಲಾಯಿತು.ಉಡುಪಿ : ಉಡುಪಿ ಜಿಲ್ಲೆಯ ವಿವಿಧ ಪೊಲೀಸ್...

ಓಮನ್‌ನಲ್ಲಿ ಹೃದಯಾಘಾತದಿಂದ ಅನಿವಾಸಿ ಭಾರತೀಯ ಮಹಿಳೆ ಮೃತ್ಯು..!

ಓಮನ್‌ ನಲ್ಲಿ ಭಾರತೀಯ ಮೂಲದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೇರಳ ಕೊಟ್ಟಾಯಂನ ಮಹಿಳೆ ಸೈಮಾ ಬಾಲಕೃಷ್ಣ ಮೃತ ಮಹಿಳೆಯಾಗಿದ್ದಾಳೆ.ಓಮನ್ : ಓಮನ್‌ ನಲ್ಲಿ ಭಾರತೀಯ ಮೂಲದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕೇರಳ ಕೊಟ್ಟಾಯಂನ...