Friday, August 19, 2022

ಹಿಂದೂ ದೇವಾಲಯದಲ್ಲಿ ಬುದ್ಧನ ಮೂರ್ತಿ ಪತ್ತೆ: ಪೂಜೆಗೆ ತಡೆ ನೀಡಿದ ಮದ್ರಾಸ್‌ ಹೈಕೋರ್ಟ್‌

ನವದೆಹಲಿ: ತಮಿಳುನಾಡಿನ ಹಿಂದೂ ದೇವಾಲಯವೊಂದರಲ್ಲಿ ಬುದ್ದನ ಮೂರ್ತಿ ಪತ್ತೆಯಾದ ಹಿನ್ನೆಲೆ ದೇಗುಲವನ್ನು ತಮಿಳುನಾಡು ಪುರಾತತ್ವ ಇಲಾಖೆಗೆ ವಶಕ್ಕೆ ಪಡೆಯುವಂತೆ ಹಾಗೂ ಯಾವುದೇ ಹಿಂದೂ ಪೂಜೆಗಳಿಗೆ ಅವಕಾಶ ಇಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ನಿರ್ದೇಶನ ನೀಡಿದೆ.


ತಮಿಳುನಾಡಿನ ಸೇಲಂನ ತಲೈವೆಟ್ಟಿ ಮುನಿಯಪ್ಪನ್‌ ದೇಗುಲದಲ್ಲಿ ಬುದ್ಧನ ಮೂರ್ತಿ ಇದೆ. ಹೀಗಾಗಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನಿಯಂತ್ರಣದಲ್ಲಿರುವ ವಿವಾದಿತ ಭೂಮಿ ಮತ್ತು ದೇಗುಲದ ಆವರಣವನ್ನು ಬೌದ್ಧವಿಹಾರವಾಗಿ ಮರುಸ್ಥಾಪಿಸಬೇಕೆಂದು ಕೋರಿ ಬೌದ್ಧ ಟ್ರಸ್ಟ್‌ ಮದ್ರಾಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಪುರಾತತ್ವ ಇಲಾಖೆಯಿಂದ ವರದಿ ಕೇಳಿದೆ. ಈ ಬಗ್ಗೆ ಪುರಾತತ್ವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರು ಸಲ್ಲಿಸಿದ ವರದಿ ಆಧರಿಸಿ ದೇಗುಲದೊಳಗೆ ಶಿಲ್ಪ ಬುದ್ಧನದ್ದು ಎಂದು ನ್ಯಾಯಾಲಯ ನಿರ್ಧರಿಸಿದೆ.

ಸದ್ಯ ಈ ದೇಗುಲಕ್ಕೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಬುದ್ಧನ ಮೂರ್ತಿಗೆ ಯಾವುದೇ ಹಿಂದೂ ಪೂಜೆ ಅಥವಾ ಧಾರ್ಮಿಕ ವಿಧಿವಿಧಾನ ಕೈಗೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಲಾಠಿ ಹಿಡಿದ ಕೈಯಲ್ಲಿ ಪೊರಕೆ ಹಿಡಿದು ಕಲ್ಲಡ್ಕ ಬಸ್ಟ್ಯಾಂಡ್ ಕ್ಲೀನ್: ಮೆಲ್ಕಾರ್ ಟ್ರಾಫಿಕ್ ಪೊಲೀಸರ ಸಮಾಜಮುಖಿ ಕಾರ್ಯ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ‌ ಧೂಳು ಕೆಸರಿನಿಂದ ಕೂಡಿದ್ದ ಬಸ್ ನಿಲ್ದಾಣವನ್ನು ಪ್ರತಿ ವಾರಕ್ಕೊಮ್ಮೆ ಪೊಲೀಸರ ತಂಡ ನೀರು ಹಾಕಿ ತೊಳೆಯುವ ಅದ್ಭುತ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆಯುತ್ತಿದೆ.ಕಲ್ಲಡ್ಕದ ಪೇಟೆಯಲ್ಲಿರುವ ಬಸ್ ನಿಲ್ದಾಣ...

ಫಾಝಿಲ್ ಕೊಲೆ ಪ್ರಕರಣ: ಆರೋಪಿ ಹರ್ಷಿತ್‌ಗೆ 14 ದಿನ ನ್ಯಾಯಾಂಗ ಬಂಧನ

ಮಂಗಳೂರು: ನಗರ ಹೊರವಲಯದ ಸುರತ್ಕಲ್‌ ಮಂಗಳಪೇಟೆ ನಿವಾಸಿ ಫಾಝಿಲ್ ಕೊಲೆ ಪ್ರಕರಣದಲ್ಲಿ ಬುಧವಾರ ಬಂಧಿಸಲಾಗಿದ್ದ ಆರೋಪಿ ಹರ್ಷಿತ್‌ಗೆ ಜೆಎಂಎಫ್ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿ ಹರ್ಷಿತ್ ಮೇಲೆ ಫಾಝಿಲ್ ಅವರ...

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದನ್ನು ಖಂಡಿಸಿ ಆ.26 ರಂದು ಮಡಿಕೇರಿ ಎಸ್‌ಪಿ ಕಚೇರಿಗೆ ಮುತ್ತಿಗೆ

ಬೆಂಗಳೂರು: ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಮಡಿಕೇರಿ ಭೇಟಿ ವೇಳೆ ಮೊಟ್ಟೆ ಎಸೆದ ಪ್ರಕರಣವನ್ನು ಕಾಂಗ್ರೆಸ್‌ ಖಂಡಿಸಿದ್ದು, ಆ.26 ರಂದು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್‌ ಕಾರ್ಯಕರ್ತರು ನಿರ್ಧರಿಸಿದ್ದಾರೆ.ಈ...