ದುಬೈ: ಅನಿವಾಸಿ ಕನ್ನಡಿಗರ ಒಕ್ಕೂಟ ಯುಎಇ ಇದರ ಆಶ್ರಯದಲ್ಲಿ ಬೃಹತ್ ಯಶಸ್ವಿ ರಕ್ತದಾನ ಶಿಬಿರವು ದುಬೈನ ಲತೀಫಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆಯಿತು.
ಶಿಬಿರದಲ್ಲಿ ಒಟ್ಟು 113 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಈ ವೇಳೆ ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಅನಿವಾಸಿ ಕನ್ನಡಿಗರ ಒಕ್ಕೂಟ ಇದರ ಅಧ್ಯಕ್ಷರಾದ ಶಂಸುದ್ದೀನ್ ಉಡುಪಿ, (AKO) ಸಮಿತಿ ಸದಸ್ಯರಾದ ವಾಸಿಂ ಹೊನ್ನಾಳ, ಶಾಫಿ ಬಜ್ಪೆ , ಅಲಿ ನೀರ್‌ಮಾರ್ಗ, ಬದ್ರು ಸುಳ್ಯ , ಉಪಸ್ಥಿತರಿದ್ದರು.
ಶಿಬಿರದ ಉಸ್ತುವಾರಿಗಳಾಗಿ ಕೆ.ಕೆ.ಜಬ್ಬಾರ್ ಕಲ್ಲಡ್ಕ, ರಿಯಾಝ್ ಜೋಕಟ್ಟೆ ವಹಿಸಿದರು. ನಿಸಾರ್ ಆಲಡ್ಕರವರು ಸ್ವಾಗತಿಸಿ ವಂದಿಸಿದರು