Connect with us

DAKSHINA KANNADA

ಜಗದೀಶ್ ಅಧಿಕಾರಿಗೆ ಬಿಲ್ಲವ ಸಮುದಾಯ ಬಹಿಷ್ಕಾರ; ಸಮಾರಂಭ ಆಹ್ವಾನಕ್ಕೆ ನಿಷೇಧ : ಮೂಲ್ಕಿ ಬಿಲ್ಲವ ಸಂಘ ನಿರ್ಧಾರ..

Published

on

ಜಗದೀಶ್ ಅಧಿಕಾರಿಗೆ ಬಿಲ್ಲವ ಸಮುದಾಯ ಬಹಿಷ್ಕಾರ; ಸಮಾರಂಭ ಆಹ್ವಾನಕ್ಕೆ ನಿಷೇಧ : ಮೂಲ್ಕಿ ಬಿಲ್ಲವ ಸಂಘ ನಿರ್ಧಾರ..!

“Billava community boycott for Jagdish ; Mulki Billava Sangha decision to ban inviting to ceremony “..!

ಮಂಗಳೂರು :ಬಿಲ್ಲವ ಆರಾಧ್ಯ ಶಕ್ತಿಗಳಾದ ಕೋಟಿ ಚೆನ್ನಯ ಹಾಗೂ ಬಿಲ್ಲವ ಸಮುದಾಯದ ನಾಯಕರುಗಳನ್ನು ತುಚ್ಛವಾಗಿ ನಿಂದಿಸಿರುವ  ಮೂಡಬಿದಿರೆಯ ಜಗದೀಶ್ ಅಧಿಕಾರಿಯನ್ನು ಪ್ರತಿಯೊಬ್ಬ ಬಿಲ್ಲವ ಸಮುದಾಯದವರು ಹಾಗೂ ಬಿಲ್ಲವ ಸಂಘಟನೆಗಳು ಯಾವುದೇ ವಯಕ್ತಿಕ ಹಾಗೂ ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಇನ್ನು ಮುಂದೆ ಆಹ್ವಾನ ನೀಡದಿರಲು ನಿರ್ಧರಿಸಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಮಹತ್ವದ ನಿರ್ಣಯವನ್ನು ಕೈಗೊಂಡಿದೆ ಎಂದು ಬಿಲ್ಲವ ಸಮಾಜ ಸೇವಾ ಸಂಘ ( ರಿ) ಮೂಲ್ಕಿ.ಅಧ್ಯಕ್ಷ ರಮೇಶ್ ಅಮೀನ್ ಹೇಳಿದ್ದಾರೆ.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಭಾನುವಾರ ಸಂಘದ ಅಧ್ಯಕ್ಷರಾದ ರಮೇಶ್ ಅಮೀನ್ ಕೊಕ್ಕರಕಲ್  ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಬಿಲ್ಲವ ಸಮುದಾಯ ಸಹಿತ ತುಳುನಾಡಿನ ಸರ್ವಧರ್ಮದವರು ಸಹ ಆರಾಧ್ಯ ದೈವ-ದೇವರುಗಳಾಗಿ ನಂಬಿಕೊಂಡು ಬಂದಿರುವ ಕೋಟಿ ಚೆನ್ನಯ ಅವಳಿ ವೀರರಿಗೆ ಸಮಸ್ತ ಜನರು ಗರಡಿಯ ಇನ್ನಿತರ ದೈವ ಸಾನ್ನಿಧ್ಯದ ಮೂಲಕ ವಿಶೇಷ ಸ್ಥಾನಮಾನವನ್ನು ನೀಡಿರುವುದನ್ನು

ತನ್ನ ಹೀನ ಬುದ್ದಿಯಿಂದ ಜಗದೀಶ್ ಅಧಿಕಾರಿ ಸಾರ್ವಜನಿಕವಾಗಿ ಹೇಳಿರುವುದರ ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಅವರ ಮನಸ್ಥಿತಿಯನ್ನು ಅರಿತು ಅವರು ಕೇಳಿರುವ ಕ್ಷಮೆಯು ಆಧಾರ ರಹಿತವಾಗಿ ಕೇವಲ ಕಾಲ್ಪನಿಕವಾಗಿದೆ.

ಮನಸ್ಸಿನಲ್ಲಿ ದುಷ್ಟ ಬುದ್ದಿಯನ್ನಿಟ್ಟುಕೊಂಡು ಯಾರದೋ ಒತ್ತಡಕ್ಕೆ ಮಣಿದು ಕ್ಷಮೆ ಕೇಳಿದ್ದರೂ ಸಹ ಬಿಲ್ಲವ ಸಮಾಜ ಅವರನ್ನು ಕ್ಷಮಿಸೋಲ್ಲ ಎಂದು ನಿರ್ಧರಿಸಲಾಗಿದೆ.

ಸಭೆಯಲ್ಲಿ ನಿರ್ಧರಿಸಿದಂತೆ ಜಗದೀಶ್ ಅಧಿಕಾರಿಯನ್ನು ಮೂಲ್ಕಿಯ ಬಿಲ್ಲವ ಸಮಾಜದವರು ತಮ್ಮ ವಯಕ್ತಿಕ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂಬ ನಿರ್ಣಯಕ್ಕೆ ಗೌರವ ನೀಡಬೇಕು, ಇಂತಹ ಸಮಾಜ ವಿಘಟಿಸುವ ವ್ಯಕ್ತಿಯು ಬಿಲ್ಲವ ಸಮಾಜವನ್ನು ಒಡೆದು ಆಳುವ ನೀತಿಯ ವಿರುದ್ಧವಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ವಿಶ್ವದಲ್ಲಿರುವ ಎಲ್ಲಾ ಬಿಲ್ಲವ ಸಂಘಟನೆಗಳು ಸಹ ಜಗದೀಶ್ ಅಧಿಕಾರಿಯನ್ನು ಸಾರ್ವಜನಿಕರ ಕಾರ್ಯಕ್ರಮದಲ್ಲಿ ಆಹ್ವಾನಿಸದೇ ತಿರಸ್ಕರಿಸಬೇಕು ಎಂದು ಬಿಲ್ಲವ ಸಂಘಗಳ ಒಕ್ಕೂಟವಾದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಮನವಿ ಮಾಡುವುದು ಎಂದು ನಿರ್ಣಯಿಸಿಕೊಂಡಿದೆ.

ರಾಜಕೀಯವಾಗಿ ಇಂತಹ ವ್ಯಕ್ತಿಗಳು ಸಮಾಜದಲ್ಲಿ ತಪ್ಪು ಸಂದೇಶವನ್ನು ನೀಡುವ ಹಾಗೂ ತನ್ನ ಬೇಜವಬ್ದಾರಿಯ ಉದ್ಧಟತನ ತೋರಿರುವುದರಿಂದ ಇವರನ್ನು ಕೂಡಲೆ ರಾಜಕೀಯ ಪಕ್ಷದಿಂದ ಶಾಶ್ವತವಾಗಿ ನಿವೃತ್ತಿಗೊಳಿಸಬೇಕು ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹಾಗೂ ಜಿಲ್ಲಾಧ್ಯಕ್ಷ ಸುದರ್ಶನ್ ಅವರಲ್ಲಿ ಮನವಿ ಮಾಡಿ ಹಕ್ಕೊತ್ತಾಯ ನಡೆಸುವುದೆಂದು ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳಾದ ರಾಘು ಸುವರ್ಣ ಕೊಳಚಿಕಂಬಳ, ಯದೀಶ್ ಅಮೀನ್ ಕೊಕ್ಕರ್‌ಕಲ್, ಡಾ.ಹರಿಶ್ಚಂದ್ರ ಪಿ. ಸಾಲಿಯಾನ್, ಮೂಲ್ಕಿ ನಗರ ಪಂಚಾಯತ್‌ನ ಉಪಾಧ್ಯಕ್ಷ ಸತೀಶ್ ಅಂಚನ್ ಬಾಳೆಹಿತ್ಲು, ಬಿರುವೆರ್ ಕುಡ್ಲದ ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಶ್ರೀ ನಾರಾಯಣಗುರು ಸೇವಾದಳದ ಪರವಾಗಿ ಉಮೇಶ್ ಮಾನಂಪಾಡಿ, ಶ್ರೀ ನಾರಾಯಣಗುರು ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಸರೋಜಿನಿ ಸುವರ್ಣ, ಸಾಮಾಜಿಕ ಚಿಂತಕ ದಿನೇಶ್ ಬಪ್ಪನಾಡು ಮತ್ತಿತರ ಸಂಘದ ಸದಸ್ಯರು ಉಪಸ್ಥಿತರಿದ್ದು ಚರ್ಚಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಬಡುಗುಹಿತ್ಲು ನಿರ್ಣಯವನ್ನು ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ

Published

on

ಮಂಗಳೂರು: ಸಂಗೀತ, ಭರತನಾಟ್ಯದ ಮಾದರಿಯಲ್ಲಿ ಯಕ್ಷಗಾನಕ್ಕೂ ನಿರ್ದಿಷ್ಟ ಚೌಕಟ್ಟಿನಲ್ಲಿ ಪಠ್ಯ ರಚಿಸಿ ಪರೀಕ್ಷೆಗಳನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಮಂಗಳೂರಿನ ಪ್ರೆಸ್ ಕ್ಲಬ್‌ ವತಿಯಿಂದ ನಡೆದ ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯಕ್ಷಗಾನದಲ್ಲಿ ಪ್ರತಿಯೊಬ್ಬ ಗುರು ತಮ್ಮದೇ ಆದ ಶೈಲಿಯಲ್ಲಿ ನಾಟ್ಯವನ್ನು ಕಲಿಸುತ್ತಾರೆ. ಯಕ್ಷಗಾನ ಕಲಿಕೆಗೆ ಒಂದು ಚೌಕಟ್ಟು ರೂಪಿಸುವ ಮೂಲಕ ಏಕರೂಪತೆ ತರಬೇಕಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷ ಶಿಕ್ಷಣ ಯೋಜನೆಯು ಪಠ್ಯ ರೂಪಿಸಿದ್ದು, ಫೌಂಡೇಶನ್‌ನ ಶಿಕ್ಷಕರು ಇದರ ಪ್ರಕಾರವೇ ನಾಟ್ಯ ಕಲಿಸುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆಂದೇ ಒಂದು ಸೀಲೆಬಸ್ ಮಾಡಿ  ಅದರ ಮುಖೇನ ಯಕ್ಷಗಾನ ನಾಟ್ಯ ಕಲಿಯುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

 

Continue Reading

DAKSHINA KANNADA

ಅಡ್ಯಾರ್ ಬೊಂಡ ಪ್ಯಾಕ್ಟರಿ ಎಳನೀರು ಪ್ರಕರಣ- ಆರೋಗ್ಯ ಇಲಾಖೆಯ ಕೈ ಸೇರಿದ ಪ್ರಯೋಗಾಲಯ ಪರೀಕ್ಷಾ ವರದಿ ಬಹಿರಂಗ..!

Published

on

ಮಂಗಳೂರು : ಇತ್ತೀಚೆಗೆ ಅಡ್ಯಾರ್ ನಲ್ಲಿರುವ ಬೊಂಡಾ ಪ್ಯಾಕ್ಟರಿಯಲ್ಲಿ ಎಳ ನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯೋಗಾಲಯ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈ ಸೇರಿದ್ದು, ಸಹಜವಾಗಿತ್ತು ಎಳನೀರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಗರದ ಹೊರವಲಯದ ಅಡ್ಯಾರಿನ ಬೊಂಡ ಫ್ಯಾಕ್ಟರಿಯಲ್ಲಿ ಎಪ್ರಿಲ್ 9ರಂದು ಖರೀದಿಸಿದ ಎಳನೀರು ಕುಡಿದವರಲ್ಲಿ 138 ಜನರು ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡಿದ್ದರು. ಈ ಪ್ರಕರಣ ಗಮನಕ್ಕೆ ಬಂದ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹಾಗೂ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಫ್ಯಾಕ್ಟರಿಯನ್ನು ಬಂದ್ ಮಾಡಿಸಿ ಎಳನೀರು ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.ಘಟನೆ ನಡೆದ ಎರಡು ದಿನಗಳ ನಂತರ ಇದು ಗಮನಕ್ಕೆ ಬಂದಿದ್ದು, ಆ ದಿನ ಫ್ಯಾಕ್ಟರಿಯಲ್ಲಿ ಸಂಗ್ರಹಿಸಿದ್ದ ಎಳನೀರನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯ ಪರೀಕ್ಷೆಯ ವರದಿ ಎಪ್ರಿಲ್ 22ರಂದು ಆರೋಗ್ಯ ಇಲಾಖೆಯ ಕೈ ಸೇರಿದೆ.

ಅಸ್ವಸ್ಥಗೊಂಡವರ ಮಲ ಮತ್ತು ರಕ್ತದ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಪ್ರಕಾರ ಕೆಲವರ ದೇಹದಲ್ಲಿ ಇಕೊಲೈ ಬ್ಯಾಕ್ಟಿರಿಯಾ ಇರುವುದು ಪತ್ತೆಯಾಗಿದೆ. ಮನುಷ್ಯನ ಕರುಳಿನಲ್ಲಿ ಈ ಬ್ಯಾಕ್ಟಿರಿಯಾ ಇರುತ್ತದೆ. ಆದರೆ ಅವುಗಳ ಪ್ರಮಾಣ ಹೆಚ್ಚಾದರೆ, ಕೆಲವೊಮ್ಮೆ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದರು.ಅಡ್ಯಾರಿನಲ್ಲಿರುವ ಎಳನೀರು ಗಂಜಿಯಿಂದ ಐಸ್‌ಕ್ರೀಮ್ ತಯಾರಿಸುವ ಘಟಕ, ಕಾರ್‌ಸ್ಪೀಟ್ ಮತ್ತು ಕದ್ರಿಯಲ್ಲಿರುವ ಎಳನೀರು ಮಳಿಗೆಗಳನ್ನು ಬಂದ್ ಮಾಡಿಸಲಾಗಿದೆ. ಈಗಲೂ ಅವು ಬಂದ್ ಆಗಿಯೇ ಇವೆ.

ಫ್ಯಾಕ್ಟರಿಯವರು ಸ್ವಯಂ ಪ್ರೇರಿತರಾಗಿ ಎಳನೀರು ನೀಡುವುದನ್ನು ನಿಲ್ಲಿಸಿದ್ದಾರೆ. ಅಡ್ಯಾರ್‌ನಲ್ಲಿ ಪಲ್ಟಿಂಗ್‌ ಘಟಕಗಳು ಮಾತ್ರ ಕಾರ್ಯಾಚರಿಸುತ್ತಿವೆ. ಗ್ರಾಹಕರಿಗೆ ಆಹಾರ ನೀಡುವಾಗ ನಿಯಮ ಪಾಲನೆ, ಶುಚಿತ್ವಕ್ಕೆ ಸಂಬಂಧಿಸಿ ಕೆಲವು ಅಂಶಗಳ ಕಟ್ಟುನಿಟ್ಟು ಪಾಲನೆಗೆ ಆಹಾರ ಸುರಕ್ಷಾ ಅಫಿದಾವಿತನ್ನು ಫ್ಯಾಕ್ಟರಿಯಿಂದ ಪಡೆಯಲು ಆಹಾರಸುರಕ್ಷಾ ಅಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.

Continue Reading

DAKSHINA KANNADA

ವೈರಲ್ ವಿಡಿಯೋ: ಕಲ್ಲಂಗಡಿ ಚಿಕನ್ ಬಿರಿಯಾನಿ ತಿಂದಿದ್ದೀರಾ?

Published

on

ಮಂಗಳೂರು(ವೈರಲ್ ವಿಡಿಯೋ): ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬಹುಜನರ ಬೇಡಿಕೆಯ ಖಾದ್ಯವಾದ ಬಿರಿಯಾನಿ ಹಲವು ಮಾದರಿಗಳಲ್ಲಿ ಸಿಗುತ್ತದೆ. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ತಿನ್ನಲು ಜನರಂತೂ ದೂರ ಸರಿಯುದೇ ಇಲ್ಲ. ಆದರೆ ಈಗ ಬಿರಿಯಾನಿ ಹೊಸ ಹೊಸ ಮಾದರಿಯಲ್ಲಿ ತುಂಬಾ ವೈರಟಿ ಆಗಿ ಸಿಗುತ್ತಾ ಇದೆ. ಬಾರ್ಬಿ ಬಿರಿಯಾನಿ ವೈರಲ್ ಆದ ಬಳಿಕ ಇದೀಗ ಇನ್ನೊಂದು ಹೊಸ ಬಿರಿಯಾನಿ ವೈರಲ್ ಆಗ್ತಾ ಇದೆ.

ಕಲ್ಲಂಗಡಿ ಚಿಕನ್ ಬಿರಿಯಾನಿ

ಹೌದು, ಈ ಬಿರಿಯಾನಿಯ ಹೆಸರು ಕಲ್ಲಂಗಡಿ ಚಿಕನ್ ಬಿರಿಯಾನಿ. ಇದು ವಿಚಿತ್ರವಾದರೂ ಸತ್ಯ. ಕಲ್ಲಂಗಡಿ ಹಾಕಿ ಮಾಡಿರುವ ಈ ಚಿಕನ್ ಬಿರಿಯಾನಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಾ ಇದೆ. ಇನ್ಸ್ಟಾಗ್ರಾಮ್‌ನ villagefoodchannel_official ಪೇಜ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಈ ವಿಚಿತ್ರ ಬಿರಿಯಾನಿ ವೈರಲ್ ಆಗಿದೆ.

ಕಲ್ಲಂಗಡಿ ಬಿಕನ್ ಬಿರಿಯಾನಿ ತಯಾರಿಸುವ ವಿಧಾನ

ಮೊದಲಿಗೆ ಇಬ್ಬರು ಕಲ್ಲಂಗಡಿ ಹಣ್ಣನ್ನು ತುಂಡು ಮಾಡುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಬಳಿಕ ಹಣ್ಣಿನ ತುಂಡುಗಳನ್ನು ದೊಡ್ಡ ಪಾತ್ರೆಗೆ ಹಾಕಿ ಅದರಲ್ಲಿ ಗುದ್ದಿ ರಸವನ್ನು ತೆಗೆಯುತ್ತಾರೆ. ಬಳಿಕ ಮತ್ತೊಂದು ಪಾತ್ರೆಯಲ್ಲಿ ಚಿಕನ್ ಬಿರಿಯಾನಿ ತಯಾರಿಸಲು ಪ್ರಾರಂಭಿಸುತ್ತಾರೆ.

ದೊಡ್ಡ ಪಾತ್ರೆಯನ್ನು ಇಟ್ಟು ಅದಕ್ಕೆ ಎಣ್ಣೆ, ನೀರುಳ್ಳಿ, ಬೆಳ್ಳುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮಸಾಲೆಗಳು, ಗರಂ ಮಸಾಲೆ ಹಾಕಿ ಮಸಾಲೆ ತಯಾರಿಸುತ್ತಾರೆ. ಬಳಿಕ ಅದಕ್ಕೆ ಶುಚಿಗೊಳಿಸಿದ ಕೋಳಿ ತುಂಡುಗಳನ್ನು ಹಾಕಿ ಮಿಕ್ಸ್ ಮಾಡಿ ಬೇಯಿಸುತ್ತಾರೆ.

ಕೋಳಿ ಮಾಂಸ ಬೆಂದ ನಂತರ ಅದಕ್ಕೆ ಪ್ರಮುಖ ಅಂಶವಾದ ಕಲ್ಲಂಗಡಿ ಹಣ್ಣಿನ ರಸವನ್ನು ಸೇರಿಸುತ್ತಾರೆ. ನಂತರ ಅದಕ್ಕೆ ಬಾಸುಮತಿ ಅಕ್ಕಿ ಹಾಕಿ ಮತ್ತೆ ಬೇಯಿಸುತ್ತಾರೆ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಮೇಲಿಗೆ ಹಾಕಿ ಮುಚ್ಚಿಡುತ್ತಾರೆ. ಈ ರೀತಿ ಮಾಡಿದಾಗ ಕಲ್ಲಂಗಡಿ ಚಿಕನ್ ಬಿರಿಯಾನಿ ತಯಾರಾಗುತ್ತದೆ.

ಈ ವಿಡಿಯೋ ಬಾರಿ ವೈರಲ್ ಆಗಿದ್ದು, ಇದುವರೆಗೆ ಆರು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಹಾಗೆಯೇ 21 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕಲ್ಲಂಗಡಿ ಚಿಕನ್ ಬಿರಿಯಾನಿಯ ಈ ವಿಶಿಷ್ಟ ಸಂಯೋಜನೆಯನ್ನು ವೀಕ್ಷಿಸಿದ ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿದ್ದಾರೆ.

Continue Reading

LATEST NEWS

Trending